Home
ಸುದ್ದಿಜಾಲ

ಕಡಿಮೆ ಬೆಲೆಯಲ್ಲಿ ಲ್ಯಾಪ್‌ಟಾಪ್‌ ಬೇಕಾ? ಅಮೆಜಾನ್‌ಗೆ ಇಂದೇ ಭೇಟಿ ನೀಡಿ!

ಕಡಿಮೆ ಬೆಲೆಯಲ್ಲಿ ಒಂದು ಅತ್ಯುತ್ತಮ ಲ್ಯಾಪ್‌ಟಾಪ್‌ ಅನ್ನು ಖರೀದಿಸಬೇಕೆಂದು ಕೊಂಡವರಿಗೆ ಅಮೆಜಾನ್‌ ಗುಡ್‌ ನ್ಯೂಸ್‌ ನೀಡಿದೆ. ಅಮೆಜಾನ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಲೆನೊವೊ ಲ್ಯಾಪ್‌ಟಾಪ್‌ಗಳನ್ನು ಬಜೆಟ್‌ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ವರ್ಷದ ಅಂತ್ಯದಲ್ಲಿ ನಡೆಯುತ್ತಿರುವ ಈ ಸೇಲ್‌ನಲ್ಲಿ ಅತ್ಯುತ್ತಮ ಲ್ಯಾಪ್‌ಟಾಪ್‌ಗಳನ್ನು ನೀವು ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಲ್ಯಾಪ್‌ಟಾಪ್‌ಗಳು ಪವರ್‌ಫುಲ್‌ ಬ್ಯಾಟರಿ ಹಾಗೂ ಅತ್ಯುತ್ತಮ ಕಾರ್ಯದಕ್ಷತೆಯನ್ನು ಸಹ ನೀಡಲಿವೆ.

ಅಮೆಜಾನ್‌ನಲ್ಲಿ

ಹೌದು, ಅಮೆಜಾನ್‌ನಲ್ಲಿ ನೀವು ಲೆನೊವೊ ಲ್ಯಾಪ್‌ಟಾಪ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ಈ ಲ್ಯಾಪ್‌ಟಾಪ್‌ಗಳ ಮೇಲೆ ಅಮೆಜಾನ್‌ 50% ವರೆಗೆ ಡಿಸ್ಕೌಂಟ್‌ ನೀಡುತ್ತಿದೆ. ಇದಲ್ಲದೆ ಈ ಲ್ಯಾಪ್‌ಟಾಪ್‌ಗಳ ಮೇಲೆ ಬ್ಯಾಂಕ್‌ ಮತ್ತು ಕ್ಯಾಶ್‌ಬ್ಯಾಕ್‌ ಆಫರ್‌ ಕೂಡ ಲಭ್ಯವಾಗಲಿದೆ. ಇನ್ನು ಲೆನೊವೊ ಲ್ಯಾಪ್‌ಟಾಪ್‌ಗಳು ಹೆಚ್ಚಿನ ಕಾಲ ಬಾಳಿಕೆ ಬರುವಂತೆ ವಿನ್ಯಾಸಗೊಳಿಸಲಾಗಿದೆ. ಹಾಗಾದ್ರೆ ಕಡಿಮೆ ಬೆಲೆಯಲ್ಲಿ ನೀವು ಖರೀದಿಸಬಹುದಾದ ಲ್ಯಾಪ್‌ಟಾಪ್‌ಗಳ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಲೆನೊವೊ ಐಡಿಯಾಪ್ಯಾಡ್‌ 3

ಲೆನೊವೊ ಐಡಿಯಾಪ್ಯಾಡ್‌ 3

ಲೆನೊವೊ ಐಡಿಯಾಪ್ಯಾಡ್‌ 3 ಲ್ಯಾಪ್‌ಟಾಪ್‌ 15.6 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ ಇಂಟೆಲ್ ಕೋರ್ i3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 8GB RAM ಮತ್ತು 512GB ಇನ್‌ಬಿಲ್ಟ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇನ್ನು ಲ್ಯಾಪ್‌ಟಾಪ್‌ ಪ್ಲಾಟಿನಂ ಗ್ರೇ ಬಣ್ಣದ ಆಯ್ಕೆಯಲ್ಲಿ ದೊರೆಯಲಿದ್ದು, ಸ್ಲಿಮ್ ಮತ್ತು ಹಗುರವಾದ ವಿನ್ಯಾಸದಲ್ಲಿ ದೊರೆಯಲಿದೆ. ಪ್ರಸ್ತುತ ಅಮೆಜಾನ್‌ನಲ್ಲಿ ಈ ಲ್ಯಾಪ್‌ಟಾಪ್‌ 37% ಡಿಸ್ಕೌಂಟ್‌ ಪಡೆದುಕೊಂಡಿದ್ದು, 37,919 ರೂ.ಬೆಲೆಯಲ್ಲಿ ದೊರೆಯಲಿದೆ.

ಲೆನೊವೊ ಐಡಿಯಾಪ್ಯಾಡ್‌ ಸ್ಲಿಮ್‌ 3

ಲೆನೊವೊ ಐಡಿಯಾಪ್ಯಾಡ್‌ ಸ್ಲಿಮ್‌ 3

ಲೆನೊವೊ ಐಡಿಯಾಪ್ಯಾಡ್‌ ಸ್ಲಿಮ್‌ 3 15.6 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಈ ಲ್ಯಾಪ್‌ಟಾಪ್‌ ಥಿನ್‌ ಆಂಡ್‌ ಲೈಟ್‌ವ್ಹೇಟ್‌ ಆಗಿದೆ. ಇನ್ನು ಲ್ಯಾಪ್‌ಟಾಪ್‌ ಇಂಟೆಲ್ ಸೆಲೆರಾನ್ N4020 4 ನೇ ಜನರಲ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ವಿಂಡೋಸ್‌ 11 ಆಪರೇಟಿಂಗ್ ಸಿಸ್ಟಂನಲ್ಲಿ ರನ್‌ ಆಗಲಿದೆ. ಈ ಲ್ಯಾಪ್‌ಟಾಪ್ ಅನ್ನು ವೈಫೈ ಮತ್ತು ಬ್ಲೂಟೂತ್ ಎರಡರಲ್ಲೂ ಸುಲಭವಾಗಿ ಸಂಪರ್ಕಿಸಬಹುದು. ಪ್ರಸ್ತುತ ಈ ಲ್ಯಾಪ್‌ಟಾಪ್‌ ಅಮೆಜಾನ್‌ನಲ್ಲಿ 26,478 ರೂ. ಬೆಲೆಯಲ್ಲಿ ದೊರೆಯಲಿದೆ.

ಲೆನೊವೊ ಐಡಿಯಾಪ್ಯಾಡ್‌ ಸ್ಲಿಮ್‌ 1

ಲೆನೊವೊ ಐಡಿಯಾಪ್ಯಾಡ್‌ ಸ್ಲಿಮ್‌ 1

ಲೆನೊವೊ ಐಡಿಯಾಪ್ಯಾಡ್‌ ಸ್ಲಿಮ್‌ 1 ಅಮೆಜಾನ್‌ನಲ್ಲಿ 41% ಡಿಸ್ಕೌಂಟ್‌ ಪಡೆದುಕೊಂಡಿದೆ. ಇದರಿಂದ ಈ ಲ್ಯಾಪ್‌ಟಾಪ್‌ ಅನ್ನು ನೀವು ಕೇವಲ 32,258 ರೂ.ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಲ್ಯಾಪ್‌ಟಾಪ್‌ ಗೇಮಿಂಗ್ ಲ್ಯಾಪ್‌ಟಾಪ್ ಆಗಿದ್ದು, ಗೇಮರುಗಳಿಗೆ ಸೂಕ್ತವಾದ ಡಿವೈಸ್‌ ಆಗಿದೆ. ಇದು 15.6 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, 1920x1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ವಿಂಡೋಸ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 512GB ಇನ್‌ಬಿಲ್ಟ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಈ ಲ್ಯಾಪ್‌ಟಾಪ್‌ ಅನ್ನು ಅತಿ ಕಡಿಮೆ ಬೆಲೆಯಲ್ಲಿ ಖರೀದಿಸುವುದಕ್ಕೆ ಸೂಕ್ತವಾದ ಸಮಯವಾಗಿದೆ.

ಲೆನೊವೊ V15

ಲೆನೊವೊ V15

ಲೆನೊವೊ V15 ಲ್ಯಾಪ್‌ಟಾಪ್‌ ಅಮೆಜಾನ್‌ನಲ್ಲಿ 19,490 ರೂ.ಬೆಲೆಯಲ್ಲಿ ಮಾರಾಟವಾಗ್ತಿದೆ. ಈ ಲ್ಯಾಪ್‌ಟಾಪ್‌ 15.6 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 220 ನಿಟ್ಸ್ ಬ್ರೈಟ್‌ನೆಸ್‌ ನೀಡಲಿದೆ. ಇದು ಆಂಟಿಗ್ಲೇರ್ ಥಿನ್ ಮತ್ತು ಲೈಟ್ ಲ್ಯಾಪ್‌ಟಾಪ್ ಆಗಿದೆ. ಈ ಲ್ಯಾಪ್‌ಟಾಪ್‌ ಇಂಟೆಲ್ ಸೆಲೆರಾನ್ N4020 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 256GB ಇನ್‌ಬಿಲ್ಟ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ.

Best Mobiles in India

English summary
Amazon offering Lenovo laptops at a slashed price in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+