ಸ್ಮಾರ್ಟ್‌ಟಿವಿ ಖರೀದಿಸುವವರಿಗೆ ಗುಡ್ ನ್ಯೂಸ್! ಅಮೆಜಾನ್‌ನಲ್ಲಿ ಟಿವಿಗಳ ಮೇಲೆ 60% ಡಿಸ್ಕೌಂಟ್!
ಸ್ಮಾರ್ಟ್‌ಟಿವಿ ಖರೀದಿಸಬೇಕು ಅಂದುಕೊಂಡವರಿಗೆ ಇ-ಕಾಮರ್ಸ್ ದೈತ್ಯ ಅಮೆಜಾನ್ ಗುಡ್‌ನ್ಯೂಸ್ ನೀಡಿದೆ. ಅಮೆಜಾನ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಬ್ಲಾಕ್‌ಬಸ್ಟರ್ ಟಿವಿ ಡೇಸ್ ಸೇಲ್ ಅನ್ನು ನಡೆಸುತ್ತಿದೆ. ಇದರ ಪ್ರಯುಕ್ತ ಜನಪ್ರಿಯ ಬ್ರ್ಯಾಂಡ್ ಸ್ಮಾರ್ಟ್‌ಟಿವಿಗಳ ಮೇಲೆ 60% ವರೆಗೆ ಡಿಸ್ಕೌಂಟ್ ಅನ್ನು ಘೋಷಿಸಿದೆ.
ಹೌದು, ಅಮೆಜಾನ್ ಬ್ಲಾಕ್‌ಬಸ್ಟರ್ ಟಿವಿ ಡೇಸ್ ಸೇಲ್ ಈಗ ಭಾರತದಲ್ಲಿ ಲೈವ್ ಆಗಿದೆ. ಇದು ಜೂನ್ 8 ರಿಂದ ಜೂನ್ 11 ರವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ನೀವು ಹಲವು ಆಕರ್ಷಕ ಸ್ಮಾರ್ಟ್‌ಟಿವಿಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಇವುಗಳಲ್ಲಿ TCL, Sony, Redmi, Samsung, OnePlus ಸ್ಮಾರ್ಟ್‌ಟಿವಿಗಳು ಕೂಡ ಸೇರಿವೆ. ಹಾಗಾದ್ರೆ ಅಮೆಜಾನ್ (amazon) ಸೇಲ್‌ನಲ್ಲಿ ಡಿಸ್ಕೌಂಟ್ ಪಡೆದುಕೊಂಡಿರುವ ಸ್ಮಾರ್ಟ್‌ಟಿವಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

TCL 40-ಇಂಚಿನ S6505 ಆಂಡ್ರಾಯ್ಡ್ ಸ್ಮಾರ್ಟ್ ಟಿವಿ
ಅಮೆಜಾನ್ ಬ್ಲಾಕ್‌ಬಸ್ಟರ್ ಟಿವಿ ಡೇಸ್ ಸೇಲ್‌ನಲ್ಲಿ TCL ಸಂಸ್ಥೆ ಕೂಡ ವಿಶೇಷ ಆಫರ್ ನೀಡುತ್ತದೆ. ಅದರಂತೆ TCL 40-ಇಂಚಿನ S6505 ಆಂಡ್ರಾಯ್ಡ್ ಸ್ಮಾರ್ಟ್ ಟಿವಿಯನ್ನು ನೀವು ಕೇವಲ 16,990 ರೂ.ಗೆ ಖರೀದಿಸಬಹುದಾಗಿದೆ. ಈ ಸ್ಮಾರ್ಟ್‌ಟಿವಿಯ ಸಾಮಾನ್ಯ ಬೆಲೆ 40,990 ರೂ. ಅನ್ನೊದು ಇಲ್ಲಿ ಇಂಟ್ರೆಸ್ಟಿಂಗ್ ವಿಚಾರವಾಗಿದೆ. ಈ ಟಿವಿಯು ಆಂಡ್ರಾಯ್ಡ್ TV 11 OSನಲ್ಲಿ ಕಾರ್ಯನಿರ್ವಹಿಸಲಿದೆ. ಇದು 64-ಬಿಟ್ ಕ್ವಾಡ್-ಕೋರ್ ಪ್ರೊಸೆಸರ್ ಹೊಂದಿದ್ದು, ಡಾಲ್ಬಿ ಆಡಿಯೊದಿಂದ ಟ್ಯೂನ್ ಮಾಡಲಾದ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಒಳಗೊಂಡಿದೆ.
ರೆಡ್ಮಿ HD ರೆಡಿ ಸ್ಮಾರ್ಟ್ LED TV 32 ಇಂಚು
ಅಮೆಜಾನ್‌ನಲ್ಲಿ ನೀವು ಡಿಸ್ಕೌಂಟ್‌ನಲ್ಲಿ ಖರೀದಿಸಬಹುದಾದ ಸ್ಮಾರ್ಟ್‌ಟಿವಿಗಳಲ್ಲಿ ಒಂದಾಗಿದೆ. ಈ ಸ್ಮಾರ್ಟ್‌ಟಿವಿಯ ಬೆಲೆ 24,999ರೂ. ಆಗಿದ್ದು, ಡಿಸ್ಕೌಂಟ್‌ನಲ್ಲಿ ಇದೀಗ 10,999ರೂ. ಬೆಲೆಗೆ ಲಭ್ಯವಿದೆ. ಇದರಲ್ಲಿ ಬ್ಯಾಂಕ್ ಆಫರ್‌ಗಳು ಕೂಡ ಸೇರಿವೆ. ಇನ್ನು ಈ ಸ್ಮಾರ್ಟ್‌ಟಿವಿ 32 ಇಂಚಿನ HD-ರೆಡಿ ಡಿಸ್‌ಪ್ಲೇ ಹೊಂದಿದೆ. ಇದು ಡಾಲ್ಬಿ ಆಡಿಯೊಗೆ ಬೆಂಬಲವನ್ನು ನೀಡಲಿದ್ದು, 20W ಸ್ಪೀಕರ್‌ಗಳು, IMDb ಜೊತೆಗೆ ಪ್ಯಾಚ್‌ವಾಲ್ 4 ಅನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಿ ವಿವಿಡ್ ಪಿಕ್ಚರ್ ಎಂಜಿನ್ ಫೀಚರ್ಸ್ ಅನ್ನು ಒಳಗೊಂಡಿದೆ.
LG UQ75 43-ಇಂಚಿನ 4K UHD ಸ್ಮಾರ್ಟ್ ಟಿವಿ
LG UQ75 43-ಇಂಚಿನ 4K UHD ಸ್ಮಾರ್ಟ್ ಟಿವಿ ಕೂಡ ಅಮೆಜಾನ್‌ನಲ್ಲಿ ಬಿಗ್ ಆಫರ್ ಪಡೆದುಕೊಂಡಿದೆ. ಆದರಿಂದ 49,990ರೂ.ಬೆಲೆಯ ಸ್ಮಾರ್ಟ್‌ಟಿವಿಯನ್ನು ನೀವು 30,490ರೂ.ಬೆಲೆಗೆ ಖರೀದಿಸಬಹುದಾಗಿದೆ. ಈ ಸ್ಮಾರ್ಟ್ ಟಿವಿಯು ಶಕ್ತಿಯುತ AI ThinQ ಸರಣಿಯ ಟಿವಿಯಾಗಿದ್ದು, α5 Gen5 AI ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 4K AI ಬ್ರೈಟ್‌ನೆಸ್, 4K ಅಪ್‌ಸ್ಕೇಲಿಂಗ್, AI ಸೌಂಡ್ ಅಥವಾ ವರ್ಚುವಲ್ ಸರೌಂಡ್ 5.1 ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ.
ಒನ್‌ಪ್ಲಸ್ 50 ಇಂಚಿನ Y1S ಪ್ರೊ
ಒನ್‌ಪ್ಲಸ್ 50 ಇಂಚಿನ Y1S ಪ್ರೊ ಸ್ಮಾರ್ಟ್‌ಟಿವಿ 45,999ರೂ. ಬೆಲೆಯನ್ನು ಹೊಂದಿದ್ದು, ಅಮೆಜಾನ್ ಬ್ಲಾಕ್‌ಬಸ್ಟರ್ ಟಿವಿ ಡೇಸ್ ಸೇಲ್‌ನಲ್ಲಿ 31,999ರೂ. ಬೆಲೆಯಲ್ಲಿ ಮಾರಾಟವಾಗ್ತಿದೆ. ಇದು ಗಾಮಾ ಎಂಜಿನ್, MEMC, ಆಂಡ್ರಾಯ್ಡ್ ಟಿವಿ 10 OS, ಡಾಲ್ಬಿ ಆಡಿಯೋ ಜೊತೆಗೆ 24W ಸ್ಪೀಕರ್‌ಗಳನ್ನು ಹೊಂದಿದೆ. ಜೊತೆಗೆ ಆಕ್ಸಿಜನ್ ಪ್ಲೇ 2.0 ಅನ್ನು ಹೊಂದಿದ್ದು, ಬೆಜೆಲ್-ಲೆಸ್ ಡಿಸ್‌ಪ್ಲೇಯೊಂದಿಗೆ ಪ್ರೀಮಿಯಂ ವಿನ್ಯಾಸವನ್ನು ಪಡೆದಿದೆ.

ಸೋನಿ ಬ್ರಾವಿಯಾ A80K
ಸೋನಿ ಕಂಪೆನಿಯ ಈ ಸ್ಮಾರ್ಟ್‌ಟಿವಿ ಅಮೆಜಾನ್ ಸೇಲ್‌ನಲ್ಲಿ 3,49,990ರೂ. ಗಳಿಗೆ ಬದಲಾಗಿ ಕೇವಲ 2,33,990ರೂ.ಗಳಿಗೆ ಸೇಲ್ ಆಗುತ್ತಿದೆ. ಇದು ಕಾಗ್ನಿಟಿವ್ ಪ್ರೊಸೆಸರ್ XR, XR OLED ಕಾಂಟ್ರಾಸ್ಟ್ ಪ್ರೊ ಮತ್ತು ಅಕೌಸ್ಟಿಕ್ ಸರ್ಫೇಸ್ ಆಡಿಯೊದಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದಲ್ಲದೆ ಆಂಡ್ರಾಯ್ಡ್ TV ಬ್ರಾವಿಯಾ ಕ್ಯಾಮ್, ಬ್ರಾವಿಯಾ ಕೋರ್, 3D ಸರೌಂಡ್ ಅಪ್‌ಸ್ಕೇಲಿಂಗ್ ಅನ್ನು ಒಳಗೊಂಡಿದೆ.
ಒನ್‌ಪ್ಲಸ್ TV U1S 65-ಇಂಚಿನ
ಒನ್‌ಪ್ಲಸ್ ಸಂಸ್ಥೆಯ ಈ ಸ್ಮಾರ್ಟ್‌ಟಿವಿ 69,999ರೂ. ಬದಲಿಗೆ ಅಮೆಜಾನ್ ಬ್ಲಾಕ್‌ಬಸ್ಟರ್ ಟಿವಿ ಡೇಸ್ ಸೇಲ್‌ನಲ್ಲಿ 59,999ರೂ.ಗಳಿಗೆ ಮಾರಾಟವಾಗ್ತಿದೆ. ಈ ಸ್ಮಾರ್ಟ್‌ಟಿವಿ 65 ಇಂಚಿನ 4K HDR10+ ಪ್ರಮಾಣೀಕೃತ ಡಿಸ್‌ಪ್ಲೇಯನ್ನು ಹೊಂದಿದೆ. ಇದು Dyunaudio, Android TV 10, OxygenPlay 2.0 ಫೀಚರ್ಸ್‌ಗಳನ್ನು ಒಳಗೊಂಡಿದೆ.


Click it and Unblock the Notifications








