ಭಾರತೀಯ ಗ್ರಾಹಕರಿಗೆ ಅಮೆಜಾನ್‌ ಪೇ ಲೇಟರ್‌ ಸೇವೆ ಪರಿಚಯಿಸಿದ ಅಮೆಜಾನ್‌!

|

ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಈಗಾಗಲೇ ನೇರ ನಗದು ಪಾವತಿಗಾಗಿ ಅಮೆಜಾನ್‌ ಪೇ ಅನ್ನು ಲಾಂಚ್‌ ಮಾಡಿರೋದು ನಿಮಗೆಲ್ಲಾ ಗೊತ್ತೇ ಇದೆ. ಇದೀಗ ಅಮೆಜಾನ್‌ ಭಾರತದಲ್ಲಿ ತನ್ನ ಗ್ರಾಹಕರಿಗಾಗಿ ಅಮೆಜಾನ್ ಪೇ ಲೇಟರ್ ಎಂಬ ಕ್ರೆಡಿಟ್ ಸೇವೆಯನ್ನು ಪ್ರಾರಂಭಿಸಿದೆ. ಈ ಸೇವೆಯು ಅಮೆಜಾನ್ ಪೇ EMI ಮರುಬ್ರಾಂಡ್ ಆಗಿದ್ದು, ವಿಶೇಷವಾಗಿ ಪಟ್ಟಿ ಮಾಡಲಾದ ಯಾವುದೇ ಪ್ರಾಡಕ್ಟ್‌ಗಳಿಗೆ ತ್ವರಿತವಾಗಿ ಸಾಲ ನಿಡುವ ಅವಕಾಶವನ್ನ ನೀಡಿದೆ. ಇನ್ನು ಈ ಅಮೆಜಾನ್‌ ಪೇ ಲೇಟರ್‌ ಗ್ರಾಹಕರಿಗೆ EMI ಆಧಾರದಲ್ಲಿ ಸಾಲ ನೀಡಲಿದ್ದು, ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಮರುಪಾವತಿ ಮಾಡುವ ಅವಕಾಶವನ್ನ ನೀಡಲಿದೆ.

ಹೌದು

ಹೌದು, ಇ-ಕಾಮರ್ಸ್‌ ದೈತ್ಯ ಅಮೆಜಾನ್ ತನ್ನ ಗ್ರಾಹಕರಿಗೆ EMI ಆಧಾರದಲ್ಲಿ ಸಾಲ ನೀಡುವುದಕ್ಕಾಗಿ ಅಮೆಜಾನ್‌ ಪೇ ಲೇಟರ್‌ ಸೇವೆಯನ್ನ ಪರಿಚಯಿಸಿದೆ. ಈ ಸೇವೆಯಲ್ಲಿ ಗ್ರಾಹಕರು ಅಮೆಜಾನ್‌ನಲ್ಲಿ ಪಟ್ಟಿ ಮಾಡಲಾದ ಕೆಲವು ಪ್ರಾಡಕ್ಟ್‌ಗಳನ್ನ ಖರೀದಿಸುವಾಗ ಸಾಲ ಪಡೆಯುವ ಅವಕಾಶವನ್ನ ನೀಡಲಾಗಿದೆ. ಅಲ್ಲದೆ ಈ ಸಾಲಕ್ಕೆ ಹೆಚ್ಚುವರಿ ಶುಲ್ಕವನ್ನ ವಿಧಿಸದೆ ಮಾಸಿಕ ಕಂತುಗಳ ರೂಪದಲ್ಲಿ 12 ತಿಂಗಳವರೆಗೆ ಪಾವತಿಸುವ ಆಯ್ಕೆಯನ್ನ ಪಡೆಯಬಹುದಾಗಿದೆ. ಅಷ್ಟಕ್ಕೂ ಅಮೆಜಾನ್‌ ಪೇ ಲೇಟರ್‌ ಸೇವೆಯ ವಿಶೇಷತೆಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಅಮೆಜಾನ್

ಸದ್ಯ ಅಮೆಜಾನ್ ಪೇ ಲೇಟರ್ ಸೇವೆಯನ್ನ ಪರಿಚಯಿಸುವ ಮೂಲಕ ಭಾರತೀಯ ಗ್ರಾಹಕರು ತಮ್ಮ ಖರೀದಿ ಸಾಮರ್ಥ್ಯವನ್ನ ಇನ್ನಷ್ಟು ಹೆಚ್ಚಿಸಿಕೊಳ್ಳುವುದಕ್ಕೆ ಅವಕಾಶವನ್ನ ನೀಡಿದೆ. ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ ತಮ್ಮ ಬಜೆಟ್‌ ಅನ್ನು ಮೀರಿ ಇನ್ನಷ್ಟು ಸುಲಭವಾಗಿ ಖರೀದಿಸಲು ಅಮೆಜಾನ್‌ ಪೇ ಲೇಟರ್‌ ಸೇವೆ ಅವಕಾಶ ನೀಡುತ್ತದೆ. ಇನ್ನು ಹೆಸರೇ ಸೂಚಿಸುವಂತೆ ಪೇ ಲೇಟರ್‌ ಅಂದರೆ ತ್ವರಿತವಾಗಿ ಖರೀದಿಸುವುದು ನಿಧಾನವಾಗಿ ಹಣ ಪಾವತಿಸುವುದು ಎಂದರ್ಥ. ನೀವು ಆನ್‌ಲೈನ್‌ ಖರೀದಿಸುವಾಗ ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ಯಾವುದೇ ಉತ್ಪನ್ನಗಳನ್ನು ಖರೀದಿಸಲು ಗ್ರಾಹಕರಿಗೆ ಇದು ಅವಕಾಶ ನೀಡುತ್ತದೆ. ಅಲ್ಲದೆ, ಗ್ರಾಹಕರು ಪರ್ಯಾಯವಾಗಿ 12 ತಿಂಗಳವರೆಗೆ ಸುಲಭವಾದ ಇಎಂಐ ಆಯ್ಕೆಗಳನ್ನು ಆರಿಸಿಕೊಳ್ಳಬಹುದು.

ಅಮೆಜಾನ್

ಇದಲ್ಲದೆ ಅಮೆಜಾನ್ ಸಹ ತಿಂಗಳಿಗೆ ಒಂದೂವರೆ ರಿಂದ ಎರಡು ಪ್ರತಿಶತದಷ್ಟು ಬಡ್ಡಿದರವನ್ನು ಹೊಂದಿದೆ, ಆದರೂ ಅಮೆಜಾನ್ ಯಾವುದೇ ವೆಚ್ಚವಿಲ್ಲದ ಇಎಂಐ ಆಯ್ಕೆಗಳೊಂದಿಗೆ ವಿವಿಧ ಉತ್ಪನ್ನಗಳನ್ನು ಹೊಂದಿದೆ, ಅದು ಬಡ್ಡಿರಹಿತ ಪ್ರಯೋಜನಗಳನ್ನು ನೀಡಲಿದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ಪನ್ನಗಳಿಗೆ ಕ್ರೆಡಿಟ್ ನೀಡುವುದರ ಹೊರತಾಗಿ, ಅಮೆಜಾನ್ ಪೇ ಲೇಟರ್ ಅನ್ನು ವಿದ್ಯುತ್ ಅಥವಾ ನೀರಿನಂತಹ ಉಪಯುಕ್ತತೆಗಳ ಮಾಸಿಕ ಬಿಲ್‌ಗಳನ್ನು ಪಾವತಿಸಲು ಅಥವಾ ಮೊಬೈಲ್ ಬಿಲ್‌ಗಳು ಮತ್ತು ರೀಚಾರ್ಜ್‌ಗಳಿಗೆ ಸಹ ಬಳಸಬಹುದಾಗಿದೆ.

ಸಮಯದಲ್ಲಿ

ಲಾಕ್‌ಡೌನ್ ಸಮಯದಲ್ಲಿ ಗ್ರಾಹಕರು ತಮ್ಮ ದಿನಸಿ ಅಥವಾ ಇತರ ಅಗತ್ಯ ವಸ್ತುಗಳನ್ನು ಕ್ರೆಡಿಟ್‌ನಲ್ಲಿ ಖರೀದಿಸಲು ಈ ಸೇವೆಯನ್ನು ಬಳಸಬಹುದು. ಅಲ್ಲದೆ ಅಮೆಜಾನ್ ಪೇ ಲೇಟರ್ ಅನ್ನು ಅಮೆಜಾನ್‌ನಲ್ಲಿನ ಯಾವುದೇ ಉತ್ಪನ್ನಕ್ಕೆ ಬಳಸಬಹುದು, ಆದರೆ ಕೆಲವೇ ಕೆಲವು ಉತ್ಪನ್ನಗಳನ್ನ ಹೊರತುಪಡಿಸಿದೆ. ಇನ್ನು ಈಗಾಗಲೇ ಲಬ್ಯವಿದ್ದ ಅಮೆಜಾನ್ ಪೇ EMI ನಲ್ಲಿ ದೊಡ್ಡ ಮಟ್ಟದ ಖರೀದಿಗೆ ಮಾತ್ರ ಅದನ್ನು ಕಂತುಗಳಿಗೆ ಬಳಸಬಹುದಿತ್ತು, ಆದರೆ ಅಮೆಜಾನ್ ಪೇ ಲೇಟರ್‌ಗೆ ಅಪ್‌ಗ್ರೇಡ್ ಆವೃತ್ತಿ ಆಗಿದ್ದು ಇಲ್ಲಿ ಗ್ರಾಹಕರು ಸಣ್ಣ ಮಟ್ಟದ ಖರೀದಿಯಿಂದ ಹಿಡಿದು ದೊಡ್ಡ ಮಟ್ದ ಖರೀದಿಗೂ ಕೂಡ ಇದನ್ನ ಬಳಸಬಹುದಾಗಿದೆ.

ಇದರ

ಇದರ ವಿಶೇಷತೆ ಅಂದರೆ, ಅಮೆಜಾನ್ ತನ್ನ ಅಮೆಜಾನ್ ಪೇ ಇಎಂಐ ಸೇವೆಯನ್ನು 2018 ರಲ್ಲಿ ಗ್ರಾಹಕರಿಗೆ ರೂ. 8,000 ಗಳಿಗೆ ಸೀಮಿತಿ ಗೊಳಿಸಿತ್ತು. ಅಲ್ಲದೆ ಇದನ್ನು ಕನಿಷ್ಠ ವಹಿವಾಟು ಮೌಲ್ಯ 3,000ರೂ ಗೆ ಸೇವೆಯನ್ನ ನೀಡಿತ್ತು. ಅಮೆಜಾನ್ ಪೇ ಲೇಟರ್ ಮೂಲಕ 1 ಅಥವಾ ರೂ. 60,000, ರೂ ವರೆಗೆ ಆರಂಭಿಕ ಸಾಲ ಮಿತಿಯನ್ನ ನೀಡಲಾಗಿದೆ. ಸದ್ಯ ಈ ಹಿಂದೆ ಅಮೆಜಾನ್ ಪೇ ಇಎಂಐಗೆ ಸಾಲ ನೀಡುವ ಪಾಲುದಾರರಾಗಿದ್ದ ಡಿಜಿಟಲ್ ಸಾಲಗಾರ ಕ್ಯಾಪಿಟಲ್ ಫ್ಲೋಟ್ ಜೊತೆ ಅಮೆಜಾನ್ ತನ್ನ ಪಾಲುದಾರಿಕೆಯನ್ನು ಮುಂದುವರಿಸಿದೆ. ಹೆಚ್ಚುವರಿಯಾಗಿ, ಗ್ರಾಹಕರ ಸಾಲದ ಅವಶ್ಯಕತೆಗಳನ್ನು ಪೂರೈಸಲು ಕಂಪನಿಯು ಕರುರು ವೈಶ್ಯ ಬ್ಯಾಂಕ್ (ಕೆವಿಬಿ) ಜೊತೆ ಸಹ ಕೈ ಜೋಡಿಸಿದೆ.

ಅಮೆಜಾನ್

ಇನ್ನು ಈ ಸೇವೆ ಪಡೆಯಲು ಕೆಲವು ಅರ್ಹತೆಗಳನ್ನ ಸಹ ಗ್ರಾಹಕರು ಹೊಂದಿರಬೇಕಿದೆ. ಅಮೆಜಾನ್ ಪೇ, ವ್ಯಾಪಾರಿಗಳು ಮತ್ತು ಮಾರುಕಟ್ಟೆಯೊಂದಿಗಿನ ಒಪ್ಪಮದಗಳನ್ನ ಅನುಸರಿಸಿ ಈ ಸೇವೆಯನ್ನ ನೀಡಲಾಗುತ್ತದೆ. ಆತನಿಗೆ ಅಂತಿಮವಾಗಿ ಸಾಲವನ್ನು ನೀಡಬಹುದೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಇದು ಸಾಧ್ಯವಾಗಲಿದೆ. ಅಮೆಜಾನ್ ಪೇ ಲೇಟರ್‌ ನಲ್ಲಿ ನೋಂದಾಯಿಸಲು, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿರುವ ಅಮೆಜಾನ್ ಅಪ್ಲಿಕೇಶನ್‌ನಲ್ಲಿ ಮೀಸಲಾದ ನೋಂದಣಿ ಪುಟವನ್ನು ನೀವು ಭೇಟಿ ಮಾಡಬೇಕಾಗುತ್ತದೆ. ಅಮೆಜಾನ್ ಪೇ ಖಾತೆಗಳಿಗಾಗಿ ಸೇವೆಯನ್ನು ಸಕ್ರಿಯಗೊಳಿಸಲು ನೀವು ಕೆವೈಸಿ ಪ್ರಕ್ರಿಯೆಯನ್ನ ಪೂರ್ಣ ಗೊಳಿಸಬೇಕಿದೆ.

ಪೂರ್ಣಗೊಳಿಸುವಿಕೆಯ

ನಂತರ FAQ ಪುಟದ ಪ್ರಕಾರ, ಕಂಪನಿಯು KYC ಪೂರ್ಣಗೊಳಿಸುವಿಕೆಯ ಎರಡು ವಿಧಾನಗಳನ್ನು ಬೆಂಬಲಿಸುತ್ತದೆ - ಒಂದು ಅಮೆಜಾನ್‌ನಲ್ಲಿ ಅಸ್ತಿತ್ವದಲ್ಲಿರುವ KYC ಅನ್ನು ಬಳಸಬಹುದಾದ ಸ್ಥಳವಾಗಿದೆ, ಇನ್ನೊಂದು ಗ್ರಾಹಕರನ್ನು ಒಂದೆಡೆ ತರಲು OTP ಆಧಾರಿತ eKYC ಅನ್ನು ನಡೆಸಲಾಗುತ್ತದೆ. ಕೆವೈಸಿ ಚೆಕ್‌ಗಳಿಗೆ ಮತ್ತು ಸೇವೆಯನ್ನು ಪಡೆಯಲು ಪ್ಯಾನ್ ಸಂಖ್ಯೆ ಸಹ ಕಡ್ಡಾಯವಾಗಿದೆ. ಸೇವೆಗಾಗಿ ಕೆವೈಸಿ ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಅಮೆಜಾನ್ ಮೊಬೈಲ್ ಅಪ್ಲಿಕೇಶನ್ ಮತ್ತು ಅಮೆಜಾನ್.ಇನ್ ಸೈಟ್‌ನಲ್ಲಿ ಲಭ್ಯವಿರುವ ಅಮೆಜಾನ್ ಪೇ ಡ್ಯಾಶ್‌ಬೋರ್ಡ್‌ನಿಂದ ನಿಮ್ಮ ನೋಂದಣಿ ಸ್ಥಿತಿಯನ್ನು ನೀವು ವೀಕ್ಷಿಸಬಹುದು. ನಿಮ್ಮ ಭವಿಷ್ಯದ ಎಲ್ಲಾ ವ್ಯವಹಾರ ದಾಖಲೆಗಳನ್ನು ಡ್ಯಾಶ್‌ಬೋರ್ಡ್ ಒದಗಿಸುತ್ತದೆ.

Most Read Articles
Best Mobiles in India

English summary
Amazon Pay Later Service Launched in India With Aim to Provide Instant Credit.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more