Home
ಸುದ್ದಿಜಾಲ

Amazon Prime: ಭಾರತದಲ್ಲಿ ಲಾಂಚ್‌ ಆಯ್ತು ಅಮೆಜಾನ್‌ ಪ್ರೈಮ್‌ ಲೈಟ್‌ ಆವೃತ್ತಿ! ಅಬ್ಬಾ ಬೆಲೆ ಇಷ್ಟೇನಾ?

ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ಅಮೆಜಾನ್‌ ಪ್ರೈಮ್‌ ತನ್ನ ಬಳಕೆದಾರರಿಗೆ ಗುಡ್‌ನ್ಯೂಸ್‌ ನೀಡಿದೆ. ಅಮೆಜಾನ್‌ ಪ್ರೈಮ್‌ ಭಾರತದಲ್ಲಿ ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಳ ಮಾಡಿಕೊಳ್ಳುವ ನಿಟ್ಟಿನಲ್ಲಿ ಹೊಸ ಪ್ಲಾನ್‌ ಮಾಡಿದೆ. ಇದಕ್ಕಾಗಿ ಹೊಸದಾಗಿ ಅಮೆಜಾನ್‌ ಪ್ರೈಮ್‌ ಲೈಟ್‌ ಎನ್ನುವ ಅಗ್ಗದ ಬೆಲೆಯ ವಾರ್ಷಿಕ ಚಂದಾದಾರಿಕೆಯನ್ನು ಪರಿಚಯಿಸಿದೆ.

ಹೌದು, ಅಮೆಜಾನ್‌ ಪ್ರೈಮ್‌ ಹೊಸದಾಗಿ ಅಮೆಜಾನ್‌ ಪ್ರೈಮ್‌ ಲೈಟ್‌ ಪ್ಲಾನ್‌ ಅನ್ನು ಪರಿಚಯಿಸಿದೆ. ಇದರಿಂದ ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳವನ್ನು ಕಾಣಬಹುದು ಎನ್ನುವ ಉದ್ದೇಶವನ್ನು ಹೊಂದಿದೆ. ಇನ್ನು ಈ ಪ್ಲಾನ್‌ ಕೆಲವೇ ಸಂಖ್ಯೆಯ ಬಳಕೆದಾರರಿಗೆ ಸೀಮಿತವಾಗಿತ್ತು ಎನ್ನಲಾಗಿದ್ದು, ಇದೀಗ ಎಲ್ಲಾ ಬಳಕೆದಾರರಿಗೂ ಲಭ್ಯವಾಗಲಿದೆ. ಹಾಗಾದ್ರೆ ಅಮೆಜಾನ್‌ ಪ್ರೈಮ್‌ ಲೈಟ್‌ ಪ್ಲಾನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Amazon Prime: ಭಾರತದಲ್ಲಿ ಲಾಂಚ್‌ ಆಯ್ತು ಅಮೆಜಾನ್‌ ಪ್ರೈಮ್‌ ಲೈಟ್‌ ಆವೃತ್ತಿ!

ಭಾರತದಲ್ಲಿ ಅಮೆಜಾನ್‌ ಪ್ರೈಮ್‌ನ ಸಾಮಾನ್ಯ ವಾರ್ಷಿಕ ಚಂದಾದಾರಿಕೆ 1,499ರೂ.ಗಳಿಗೆ ಲಭ್ಯವಿದೆ. ಆದರೆ ಇದೀಗ ಎಂಟ್ರಿ ನೀಡಿರುವ ಹೊಸ ಅಮೆಜಾನ್‌ ಪ್ರೈಮ್‌ ಲೈಟ್‌ ಪ್ಲಾನ್‌ 999ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಅತಿ ಕಡಿಮೆ ಬೆಲೆಗೆ ವಾರ್ಷಿಕ ಚಂದಾದಾರಿಕೆ ಬಯಸೋರಿಗೆ ಇದು ಬೆಸ್ಟ್‌ ಎನಿಸಲಿದೆ. ಇನ್ನು ಅಮೆಜಾನ್‌ ಪ್ರೈಮ್ ಲೈಟ್ ಮತ್ತು ಅಮೆಜಾನ್ ಪ್ರೈಮ್ ಪ್ಲಾನ್‌ಗಳು ಎರಡೂ ಒಂದೇ ರೀತಿಯ ಪ್ರಯೋಜನಗಳನ್ನು ನೀಡಲಿವೆ. ಆದರೆ ಕೆಲವು ಬದಲಾವಣೆಗಳನ್ನು ಸಹ ಒಳಗೊಂಡಿದೆ.

ಅಮೆಜಾನ್‌ ಪ್ರೈಮ್‌ ಲೈಟ್‌ ಸದಸ್ಯರು ಅಮೆಜಾನ್‌ನಲ್ಲಿ ಯಾವುದೇ ಆರ್ಡರ್‌ಗಳನ್ನು ಒಂದು ಅಥವಾ ಎರಡು ದಿನಗಳಲ್ಲಿ ಯಾವುದೇ ತ್ವರಿತ ಶಿಪ್ಪಿಂಗ್ ಇಲ್ಲದೆ ಡೆಲಿವರಿ ಪಡೆದುಕೊಳ್ಳಬಹುದು. ಅಂದರೆ ಫ್ರಿ ಡೆಲಿವರಿಗಾಗಿ ಯಾವುದೇ ಕನಿಷ್ಠ ಖರೀದಿ ಮೊತ್ತದ ಅಗತ್ಯವಿಲ್ಲ ಎನ್ನಲಾಗಿದೆ. ಈ ಪ್ಲಾನ್‌ನ ಸದಸ್ಯರು ಅರ್ಹ ವಿಳಾಸಗಳಿಗೆ 'ನೋ-ರಶ್' ಶಿಪ್ಪಿಂಗ್‌ಗೆ ಅರ್ಹರಾಗಿದ್ದು, 25ರೂ.ಗಳ ಪೇಬ್ಯಾಕ್‌ ಸಿಗಲಿದೆ. ಜೊತೆಗೆ ಅಮೆಜಾನ್‌ನಲ್ಲಿ ಅಮೆಜಾನ್‌ ಪೇ ಐಸಿಐಸಿಐ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಮೂಲಕ ಮಾಡಿದ ಖರೀದಿಗಳಲ್ಲಿ 5% ಕ್ಯಾಶ್ ಬ್ಯಾಕ್ ದೊರೆಯಲಿದೆ.

ಇನ್ನು ಅಮೆಜಾನ್‌ ಮ್ಯೂಸಿಕ್‌ ಮತ್ತು ವೀಡಿಯೊ ಸ್ಟ್ರೀಮಿಂಗ್‌ಗೆ ಸಾಮಾನ್ಯ ಸದಸ್ಯರ ಮಾದರಿಯಲ್ಲಿಯೇ ಪ್ರವೇಶವಿರಲಿದೆ. ಆದರೆ ಪ್ರೈಮ್ ವೀಡಿಯೊ ಸ್ಟ್ರೀಮಿಂಗ್ ಗುಣಮಟ್ಟದಲ್ಲಿ ಕೆಲದ ಬದಲಾವಣೆಗಳನ್ನು ಕಾಣಬಹುದು. ಅಮೆಜಾನ್‌ ಪ್ರೈಮ್‌ ಲೈಟ್‌ ಸದಸ್ಯರು ಎರಡು ಡಿವೈಸ್‌ಗಳಲ್ಲಿ ಮಾತ್ರ HD ವೀಡಿಯೊ ಸ್ಟ್ರೀಮಿಂಗ್‌ ಮಾಡಬಹುದಾಗಿದೆ. ಆದರೆ ಸ್ಟ್ಯಾಂಡರ್ಡ್ ಪ್ರೈಮ್ ಚಂದಾದಾರರಿಗೆ ಏಕಕಾಲದಲ್ಲಿ ಆರು ಡಿವೈಸ್‌ಗಳಲ್ಲಿಯೂ ಸಹ 4K ವೀಕ್ಷಣೆ ಮಾಡುವುದಕ್ಕೆ ಅವಕಾಶವಿದೆ.

Amazon Prime: ಭಾರತದಲ್ಲಿ ಲಾಂಚ್‌ ಆಯ್ತು ಅಮೆಜಾನ್‌ ಪ್ರೈಮ್‌ ಲೈಟ್‌ ಆವೃತ್ತಿ!

ಅಮೆಜಾನ್‌ ಪ್ರೈಮ್‌ ಲೈಟ್‌ ಅನ್ನು ಖರೀದಿಸುವುದು ಹೇಗೆ?
ಅಮೆಜಾನ್‌ ಪ್ರೈಮ್‌ ಲೈಟ್‌ ಚಂದಾದಾರಿಕೆ ಪಡೆದುಕೊಳ್ಳುವ ಗ್ರಾಹಕರು 999ರೂ. ಪಾವತಿಸಬೇಕಾಗುತ್ತದೆ. ಇದು ವಾರ್ಷಿಕ ಅವಧಿಯ ಪ್ಲಾನ್‌ ಆಗಿದೆ. ಇನ್ನು ಈ ಪ್ಲಾನ್‌ಗೆ ಸೈನ್‌ ಅಪ್‌ ಆಗಲು ಅಮೆಜಾನ್‌ ಆ್ಯಪ್‌ ಅಥವಾ ಅಮೆಜಾನ್‌ ವೆಬ್‌ಸೈಟ್‌ಗೆ ಬೇಟಿ ನೀಡಬೇಕಾಗುತ್ತದೆ. ಒಮ್ಮೆ ಬೇಟಿ ನೀಡಿದ ನಂತರ ಅಗತ್ಯ ವಿವರಗಳನ್ನು ನಮೂದಿಸುವ ಮೂಲಕ ಅಮೆಜಾನ್‌ ಪ್ರೈಮ್‌ ಲೈಟ್‌ ಪ್ರಯೋಜನ ಪಡೆದುಕೊಳ್ಳಬಹುದು.

ಅಮೆಜಾನ್ ಪ್ರೈಮ್ ಸದಸ್ಯತ್ವದ ಪ್ರಯೋಜನಗಳು : ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಹೊಂದಿರುವ ಬಳಕೆದಾರರು ಪ್ರಧಾನ ಶಿಪ್ಪಿಂಗ್‌ಗೆ ಬೆಂಬಲವನ್ನು ಪಡೆಯುತ್ತಾರೆ. ಇದರಿಂದ ಇತರ ಬಳಕೆದಾರರಿಗಿಂತ ಅಮೆಜಾನ್ ಪ್ರೈಮ್‌ ಸದಸ್ಯರು ಹೆಚ್ಚು ತ್ವರಿತವಾಗಿ ವಿತರಣೆಯಾಗಿದೆ. ಜನರು ಪ್ರೈಮ್ ವಿಡಿಯೋ, ಪ್ರೈಮ್ ಮ್ಯೂಸಿಕ್, ಪ್ರೈಮ್ ಡೀಲ್‌ಗಳು, ಪ್ರೈಮ್ ರೀಡಿಂಗ್, ಪ್ರೈಮ್ ಗೇಮಿಂಗ್ ಮತ್ತು ಅಮೆಜಾನ್ ಫ್ಯಾಮಿಲಿಗೆ ಸಹ ಪ್ರವೇಶವನ್ನು ಪಡೆಯುತ್ತಾರೆ. ಸದ್ಯ ಅಮೆಜಾನ್‌ ಪ್ರೈಮ್‌ ಭಾರತದಲ್ಲಿ ಜನಪ್ರಿಯ ವೀಡಿಯೋ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ.

Best Mobiles in India

English summary
Amazon Prime: Amazon Prime Lite version launched in India: benefits details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+