Home
ಸುದ್ದಿಜಾಲ

ಜುಲೈ 16ರಿಂದ ಅಮೇಜಾನ್ ಪ್ರೈಮ್ ಡೇ..! ಬಂಪರ್ ಆಫರ್‌ಗಳ ಸುರಿಮಳೆ..!

By Gizbot Bureau

ಮಲ್ಟಿ ನ್ಯಾಷನಲ್ –ಕಾಮರ್ಸ್ ವೆಬ್ ಸೈಟ್ ಅಮೇಜಾನ್ ಪ್ರೈಮ್ ಡೇಯನ್ನು ಜುಲೈ 16,2018 ಕ್ಕೆ ಆಚರಿಸುತ್ತಿದೆ. ಹಾಗಾಗಿ ಈ ಸಂದರ್ಬದಲ್ಲಿ ಹಲವು ವಸ್ತುಗಳ ಮೇಲೆ ಬೆಲೆಯಲ್ಲಿ ಭಾರೀ ಇಳಿಕೆಯಾಗಲಿದ್ದು ಆಫರ್ ಗಳ ಸುರಿಮಳೆ ಸಿಗುವ ಸಾಧ್ಯತೆ ಇದೆ. ಇಲೆಕ್ಟ್ರಾನಿಕ್ಸ್, ಪುಸ್ತಕಗಳು ಮತ್ತು ಇತರೆ ವಸ್ತುಗಳ ಭರ್ಜರಿ ಡಿಸ್ಕೌಂಟ್ ಇರಲಿದೆ.

ಅಮೇಜಾನ್ ಪ್ರೈಮ್ ಡೇ 36 ತಾಸುಗಳವರೆಗೆ ವೆಬ್ ಸೈಟ್ ನಲ್ಲಿ ಇರಲಿದೆ. ಯುಎಸ್, ಯುಕೆ, ಸ್ಪೈನ್, ಮೆಕ್ಸಿಕೋ, ಜಪಾನ್, ಭಾರತ, ಇಟಲಿ, ಜರ್ಮನಿಸ ಫ್ರಾನ್ಸ್, ಚೈನಾ, ಕೆನಡಾ, ಬೆಲ್ಜಿಯಂ, ಆಸ್ಟ್ರಿಯಾ, ಸಿಂಗಾಪುರ, ನೆದರ್ ಲ್ಯಾಂಡ್, ಮತ್ತು ಲುಕ್ಸಮ್ ಬರ್ಗ್ ನಲ್ಲಿ ಇರಲಿದೆ. ಈ 36 ತಾಸುಗಳಲ್ಲಿ ಪ್ರೈಮ್ ಬಳಕೆದಾರರು ಅಂದರೆ ಪಾವತಿ ಮಾಡಿದ ಚಂದಾದಾರರು ಅಧ್ಬುತ ಬೆಲೆ ಮತ್ತು ರಿಯಾಯಿತಿಯನ್ನು ಗಿಟ್ಟಿಸಿಕೊಳ್ಳಬಹುದು.

ಜುಲೈ 16ರಿಂದ ಅಮೇಜಾನ್ ಪ್ರೈಮ್ ಡೇ..! ಬಂಪರ್ ಆಫರ್‌ಗಳ ಸುರಿಮಳೆ..!

ಅಮೇಜಾನ್ ಪ್ರೊಡಕ್ಟ್ ಗಳ ಮೇಲೆ ರಿಯಾಯಿತಿ

ಅಮೇಜಾನ್ ಗೆ ಸಂಬಂಧಿಸಿದ ಅಮೇಜಾನ್ ಬೇಸಿಕ್ ವಸ್ತುಗಳ ಮೇಲೆ ಹಲವು ರಿಯಾಯಿತಿಗಳು ಲಭ್ಯವಿರಲಿದೆ. ಅದರ ಜೊತೆಗೆ, ಕಿಂಡಲ್ ಇ ಬುಕ್ಸ್ ಓದುಗಾರರಿಗೆ, ಅಲೆಕ್ಸಾ ಸ್ಮಾರ್ಟ್ ಸ್ಪೀಕರ್ಸ್, ಅಮೇಜಾನ್ ಫೈಯರ್ ಟ್ಯಾಬ್ಲೆಟ್ಸ್ ಮತ್ತು ಇತರೆ ಮನೆಗೆ ಸಂಬಂಧಿಸಿದ ಗೆಜೆಟ್ಸ್ ಗಳ ಮೇಲೆ ಅಮೇಜಾನ್ ಈ ಬಾರೀ ರಿಯಾಯಿತಿಯನ್ನು ನೀಡುತ್ತಿದೆ.

ಅಮೇಜಾನ್ ಕೆಲವು ಹೊಸ ಚಂದಾದಾರಿಕೆಯ ಆಫರ್ ಗಳನ್ನು ಕೂಡ ಪ್ರಕಟಿಸಿದೆ.ಅದರಲ್ಲಿ ನಾಲ್ಕು ತಿಂಗಳ ಅಮೇಜಾನ್ ಮ್ಯೂಸಿಕ್ ಚಂದಾದಾರಿಕೆಯು ಕೇವಲ $0.99 (Rs 69)ನಲ್ಲಿ, ಮೂರು ತಿಂಗಳ ಕಿಂಡಲ್ ಅನ್ ಲಿಮಿಟೆಡ್ ಚಂದಾದಾರಿಕೆ $0.99 (Rs 69) ಮತ್ತು ಈಕೋ ಶೋ($229.9 to $129.9)ಗಳಲ್ಲಿ $100 ವರೆಗೆ ರಿಯಾಯಿತಿ ಸಿಗಲಿದೆ. ಇದೆಲ್ಲವೂ ಸದ್ಯ ಯುಎಸ್ ಗೆ ಸಂಬಂಧಿಸಿದ ಆಫರ್ ಗಳಾಗಿದ್ದು, ಭಾರತೀಯ ಆಫರ್ ಗಳನ್ನು ಇನ್ನು ಒಂದು ಅಥವಾ ಎರಡು ದಿನದಲ್ಲಿ ಕಂಪೆನಿ ಬಿಡುಗಡೆಗೊಳಿಸುವ ನಿರೀಕ್ಷೆ ಇದೆ.

ರೂಪಾಯಿ 129 ಕ್ಕೆ ಫ್ರೈಮ್ ಸದಸ್ಯತ್ವ

ಬಳಕೆದಾರರ ಅಗತ್ಯತೆಯನ್ನು ಗಮನದಲ್ಲಿ ಇಟ್ಟುಕೊಂಡು ಅಮೇಜಾನ್ ತಿಂಗಳ ಚಂದಾದಾರಿಕೆ ಪ್ಲಾನ್ ನ್ನು ಕೂಡ ಪರಿಚಯಿಸುತ್ತಿದೆ ಮತ್ತು ಅದರ ಬೆಲೆ 129 ರುಪಾಯಿಗಳಾಗಿದೆ. ಒಂದು ತಿಂಗಳವರೆಗೆ ಅಮೇಜಾನ್ ನ ಪ್ರೈಮ್ ಲಾಭಗಳನ್ನು ಸದಸ್ಯತ್ವ ಹೊಂದಿದವರು ಪಡೆದುಕೊಳ್ಳಬಹುದಾಗಿದೆ. ಈ ಚಂದಾದಾರಿಕೆಯ ಪ್ಲಾನ್ ಯಾರು ಆಗಾಗ ಖರೀದಿ ಮಾಡುವುದಿಲ್ಲವೋ ಅವರಿಗೆ ಅನುಕೂಲಕಾರಿ. ಒಂದು ವರ್ಷದ ಹೂಡಿಕೆಗೆ ಕೂಡ ಅಮೇಜಾನ್ ಅವಕಾಶ ನೀಡುತ್ತದೆ.

ಈಗ , ಅಮೇಜಾನ್ ಪ್ರೈಮ್ ಬಳಕೆದಾರರು ಸಾಕಷ್ಟು ಖುಷಿಯಾಗಬೇಕು ಎಂದು ಬಯಸಿದೆ ಮತ್ತು ಪ್ರೈಮ್ ಫ್ಲಾಟ್ ಫಾರ್ಮ್ ನಲ್ಲಿ ನಿರಂತರವಾಗಿ ಸಾಕಷ್ಟು ಇಂತಹ ರಿಯಾಯಿತಿ ದರದಂತಹ ಬೆನಿಫಿಟ್ ಗಳನ್ನು ನೀಡುತ್ತಲೇ ಇರುತ್ತಿದೆ. ಬಳಕೆದಾರರಿಗೆ ಅಮೇಜಾನ್ ಪ್ರೈಮ್ ಟ್ರಯಲ್ ರೂಮ್ ವೈಶಿಷ್ಟ್ಯವನ್ನು ಕರುಣಿಸಿದ್ದು, ಯುಎಸ್ ನ ನಲ್ಲಿ ಬಳಕೆದಾರರು ಖರೀದಿಸಿಗೂ ಮುನ್ನ ತಾವು ಖರೀದಿಸಬೇಕು ಎಂದುಕೊಳ್ಳವು ಬಟ್ಟೆ ಅಥವಾ ವಸ್ತುವನ್ನು ಟ್ರಯಲ್ ನೋಡುವುದಕ್ಕೂ ಕೂಡ ಅವಕಾಶವಿದೆ.ಅಮೇಜಾನ್ ಪ್ರತಿ ವರ್ಷ ನಡೆಸುವ ಈ ಹಬ್ಬದಲ್ಲಿ ಹೆಚ್ಚಿನ ವಸ್ತುಗಳ ಮೇಲೆ ಭಾರೀ ರಿಯಾಯಿತಿಯನ್ನು ಅಮೇಜಾನ್ ನೀಡುವ ಸಾಧ್ಯತೆ ಇದೆ. ಇನ್ನು ಒಂದೆರಡು ದಿನದಲ್ಲಿ ಯಾವ್ಯಾವ ವಸ್ತುಗಳ ಮೇಲೆ ಎಷ್ಟು ರಿಯಾಯಿತಿ ಸಿಗಲಿದೆ ಎಂಬ ಸಂಪೂರ್ಣ ಚಿತ್ರಣ ಲಭ್ಯವಾಗಲಿದೆ.

More from GizBot

Best Mobiles in India

English summary
Amazon Prime Day 2018 to happen on the 16th of July 2018. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+