Home
ಸುದ್ದಿಜಾಲ

ಅಮೆಜಾನ್ ನಿಂದ ಮತ್ತೊಂದು ಗ್ರೇಟ್ ಸೇಲ್..! ಹೊಸದಾಗಿ 200 ವಸ್ತುಗಳು ಲಾಂಚ್..!

By Srinidhi

ದೇಶಿಯ ಇ ಕಾಮರ್ಸ್ ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿರುವ ಅಮೆರಿಕಾ ಮೂಲಕದ ಅಮೆಜಾನ್, ಮತ್ತೊಂದು ದೊಡ್ಡ ಸೇಲ್ ವೊಂದನ್ನು ಆಯೋಜಿಸಲು ಮುಂದಾಗಿದೆ. ಈಗಾಗಲೇ ಹಲವು ಯಶಸ್ಸು ಸೇಲ್ ಗಳನ್ನು ಆಯೋಜಿಸಿರುವ ಅಮೆಜಾನ್, ತನ್ನ ಸಮೀಪದ ಪ್ರತಿ ಸ್ಪರ್ಧಿ ಫ್ಲಿಪ್ ಕಾರ್ಟ್ ಅನ್ನು ಸೆಡ್ಡು ಹೊಡೆಯುವ ಸಲುವಾಗಿ ಸಾಕಷ್ಟು ದೊಡ್ಡ ಪ್ರಮಾಣದ ಸೇಲ್ ಆನ್ನು ಆಯೋಜಿಸಿದೆ.

ಅಮೆಜಾನ್ ನಿಂದ ಮತ್ತೊಂದು ಗ್ರೇಟ್ ಸೇಲ್..! ಹೊಸದಾಗಿ 200 ವಸ್ತುಗಳು ಲಾಂಚ್..!

ಈ ಬಾರಿ ಸೇಲ್ ನಲ್ಲಿ ಅಮೆಜಾನ್ ಹೊಸದೊಂದು ಪ್ರಯತ್ನವನ್ನು ಮಾಡಲು ಮುಂದಾಗಿದೆ. ಈ ಬಾರಿ ಆಯೋಜನೆ ಮಾಡಿರುವ ಸೇಲ್ ಕೇವಲ ತನ್ನ ಪ್ರೈಮ್ ಸದಸ್ಯತ್ವನ್ನು ಹೆಚ್ಚು ಮಾಡಿಕೊಳ್ಳುವ ಸಲುವಾಗಿ ಕೇವಲ ಅಮೆಜಾನ್ ಪ್ರೈಮ್ ಸದಸ್ಯರಿಗೆ ಮಾತ್ರವೇ ಈ ಸೇಲ್ ಆಯೋಜನೆಯಾಗಿದ್ದು, ಬೇರೆ ಸಾಮಾನ್ಯ ಗ್ರಾಹಕರು ಈ ಸೇಲ್ ನಲ್ಲಿ ಯಾವುದೇ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ. ಒಟ್ಟಿನಲ್ಲಿ ಪ್ರೈಮ್ ಸದಸ್ಯರಿಗೆ ಇದೊಂದು ದೊಡ್ಡ ಪ್ರಮಾಣದ ಲಾಭವಾಗಿದೆ.

ಪ್ರೈಮ್ ಡೇ ಸೇಲ್:

ಪ್ರೈಮ್ ಡೇ ಸೇಲ್:

ಜುಲೈ 15 ರಂದು ಅಮೆಜಾನ್ ಪ್ರೈಮ್ ಡೇ ಸೇಲ್ ಅನ್ನು ಆಯೋಜಿಸಲಾಗಿದ್ದು, ಜುಲೈ 16 ರಿಂದ ಆರಂಭಗೊಂಡು ಜುಲೈ 18ರ ವರಗೆ ಸೇಲ್ ನಡೆಯಲಿದ್ದು, ಪ್ರೈಮ್ ಸದಸ್ಯತ್ವವನ್ನು ಪಡೆದುಕೊಂಡಿರುವವರು ಈ ಸೇಲ್ ನಲ್ಲಿ ಅತೀ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಂಡಿರುವವರಿಗೆ ಹೆಚ್ಚಿನ ಲಾಭಗಳು ಇರಲಿದೆ.

ಆಫರ್ ಗಳು:

ಆಫರ್ ಗಳು:

ಅಮೆಜಾನ್ ಪ್ರೈಮ್ ಡೇ ಸೇಲ್ ನಲ್ಲಿ ಬಳಕೆದಾರರಿಗೆ 10 % ಕ್ಯಾಷ್ ಬ್ಯಾಕ್ ದೊರೆಯಲಿದೆ ಎನ್ನಲಾಗಿದ್ದು, ಇದರೊಂದಿಗೆ HDFC ಕಾರ್ಡುದಾರರಿಗೆ ಹೆಚ್ಚಿನ ಲಾಭವಿದ್ದು, EMI ಆಫರ್ ಗಳನ್ನು ಕಾಣಬಹುದಾಗಿದೆ. ಇದರೊಂದಿಗೆ ಅಮೆಜಾನ್ ಪೇ ವ್ಯವಹಾರದ ಮೇಲೆ ಸಾಕಷ್ಟು ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

200 ಹೊಸ ಪ್ರಾಡೆಕ್ಟ್ ಗಳು:

200 ಹೊಸ ಪ್ರಾಡೆಕ್ಟ್ ಗಳು:

ಇದಲ್ಲದೇ ಅಮೆಜಾನ್ ತನ್ನ ಸೇಲ್ ನಲ್ಲಿ ಪ್ರೈಮ್ ಬಳಕೆದಾರರಿಗೆ ಸಾಕಷ್ಟು ಲಾಭವಾಗಲಿದ್ದು, ಇದೇ ಮೊದಲ ಬಾರಿಗೆ ದೇಶದಲ್ಲಿ ಸುಮಾರು 200 ಹೊಸ ಪ್ರಾಡೆಕ್ಟ್ ಗಳನ್ನು ಲಾಂಚ್ ಮಾಡಲಿದೆ ಎಂದು ತಿಳಿಸಲಾಗಿದೆ. ಇದರಿಂದಾಗಿ ಮೊದಲ ಬಾರಿಗೆ ಸಾಕಷ್ಟು ಹೊಸ ವಸ್ತುಗಳನ್ನು ಖರೀದಿಸುವ ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ.

ಸ್ಪರ್ಧೆ ಸಹ ಇದೆ:

ಸ್ಪರ್ಧೆ ಸಹ ಇದೆ:

ಇದೇ ಸಂದರ್ಭದಲ್ಲಿ ಅಮೆಜಾನ್ ಆಪ್ ಮೂಲಕ ಖರೀದಿಯನ್ನು ಮಾಡುವವರಿಗೆ ಸ್ಪರ್ಧೆಯೊಂದನ್ನು ಆಯೋಜಿಸಿದ್ದು, ಇದರಲ್ಲಿ ಬಳಕೆದಾರರಿಗೆ ಒನ್ ಪ್ಲಸ್ 6 ಸ್ಮಾರ್ಟ್ ಪೋನ್ ಅನ್ನು ಗೆಲ್ಲುವಂತಹ ಅವಕಾಶವನ್ನು ಮಾಡಿಕೊಡಲಾಗಿದೆ. ಇದರಿಂದಾಗಿ ಹೆಚ್ಚಿನ ಮಂದಿ ಆಪ್ ಮೂಲಕವೇ ಖರೀದಿ ಮಾಡಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ.

ಪ್ರೈಮ್ ವಿಡಿಯೋಗಳು:

ಪ್ರೈಮ್ ವಿಡಿಯೋಗಳು:

ಇದಲ್ಲದೇ ಸೇಲ್ ಅಂಗವಾಗಿ ಬಳಕೆದಾರರಿಗೆ ಸಾಕಷ್ಟು ಮನರಂಜನೆಯನ್ನು ನೀಡುವ ಸಲುವಾಗಿ ಅಮೆಜಾನ್ ಪ್ರೈಮ್ ಗೆ ಸಾಕಷ್ಟು ಹೊಸ ಸಿನಿಮಾಗಳನ್ನು ಶೋಗಳನ್ನು ಆಡ್ ಮಾಡಲಾಗುತ್ತಿದೆ. ಇದರಿಂದಾಗಿ ಸೇಲ್ ನೊಂದಿಗೆ ಸಾಕಷ್ಟು ಎಂಟರ್ ಟೆನ್ ಮೆಂಟ್ ಸಹ ದೊರೆಯಲಿದೆ. ಇದರಿಂದಾಗಿ ಬಳಕೆದಾರರಿಗೆ ಸಾಕಷ್ಟು ಲಾಭವಾಗಲಿದೆ.

ಪ್ರೈಮ್ ಮ್ಯೂಸಿಕ್:

ಪ್ರೈಮ್ ಮ್ಯೂಸಿಕ್:

ಇದಲ್ಲದೇ ದೇಶದಲ್ಲಿ ಹೊಸದಾಗಿ ಲಾಂಚ್ ಮಾಡಲಾಗಿರುವ ಅಮೆಜಾನ್ ಪ್ರೈಮ್ ಮ್ಯೂಸಿಸ್ ಸೇವೆಯಲ್ಲಿಯೂ ಹೊಸ ಹೊಸ ಆಯ್ಕೆಯನ್ನು ಈ ಸೇಲ್ ಸಂದರ್ಭದಲ್ಲಿ ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ಬಳಕೆದಾರರು ಹೆಚ್ಚಿನ ಪ್ರಮಾಣದ ಆಡಿಯೋ ಸೇವೆಯನ್ನು ತನ್ನದಾಗಿಸಿಕೊಳ್ಳಬಹುದಾಗಿದೆ.

Best Mobiles in India

English summary
Amazon Prime Day 2018 India Sale Starts July 16. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+