Home
ಸುದ್ದಿಜಾಲ

ಅಮೆಜಾನ್ ‍ಪ್ರೈಮ್ ಡೇ ಸೇಲ್: ನೀವು ತಿಳಿಯಲೇ ಬೇಕಾದ ವಿಷಯಗಳು....!

By Srinidhi

ದೇಶಿಯ ಮಾರುಕಟ್ಟೆಯಲ್ಲಿ ಇ-ಕಾರ್ಮಸ್ ಕಂಪನಿಗಳ ನಡುವೆ ಭಾರೀ ಪ್ರಮಾಣದ ಸ್ಪರ್ಧೆಯನ್ನು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ದೊಡ್ಡ ಪ್ರಮಾಣದ ಸೇಲ್ ಗಳನ್ನು ಮತ್ತು ರಿಯಾಯತಿಗಳನ್ನು ಕಾಣಬಹುದಾಗಿದೆ. ಇದರಲ್ಲಿಯೂ ಫ್ಲಿಪ್ ಕಾರ್ಟ್ ಮತ್ತು ಅಮೆಜಾನ್ ನಡುವೆ ಹೆಚ್ಚಿನ ಪ್ರಮಾಣದ ಸ್ಪರ್ಧೆಯನ್ನು ನಿರೀಕ್ಷಿಸಬಹುದಾಗಿದ್ದು, ಇದೇ ಮಾದರಿಯಲ್ಲಿ ಅಮೆಜಾನ್ ತನ್ನ ಬಳಕೆದಾರರಿಗೆ ಇದೇ ತಿಂಗಳಿನಲ್ಲಿ ಬೊಂಬಾಟ್ ಸೇಲ್ ವೊಂದನ್ನು ಆಯೋಜಿಸಿದೆ.

ಅಮೆಜಾನ್ ‍ಪ್ರೈಮ್ ಡೇ ಸೇಲ್: ನೀವು ತಿಳಿಯಲೇ ಬೇಕಾದ ವಿಷಯಗಳು....!

ದೇಶದ ಮುಂಚೂಣಿಯಲ್ಲಿರುವ ಅಮೆರಿಕಾ ಮೂಲದ ವೆಬ್‌ಸೈಟ್ ಆಗಿರುವ ಅಮೆಜಾನ್ ತನ್ನ ಪ್ರೈಮ್ ಗ್ರಾಹಕರಿಗೆ ಜುಲೈ 16 ಹಾಗೂ 17ರಂದು ಭಾರಿ ದೊಡ್ಡ ಪ್ರಮಾಣದ ಸೇಲ್ ಅನ್ನು ಆಯೋಜಿಸಿದ್ದು ಬಳಕೆದಾರರಿಗೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ವಸ್ತುಗಳ ಮೇಲೆ ರಿಯಾಯಿತಿಯನ್ನು ನೀಡುತ್ತಿದೆ ಎನ್ನಲಾಗಿದೆ. ಅಮೆಜಾನ್ ಪ್ರೈಮ್ ಡೇ ಸೇಲ್ ಇದಾಗಿದ್ದು, ಕೇವಲ ಪ್ರೈಮ್ ಸದಸ್ಯರಿಗೆ ಮಾತ್ರವೇ ಸೇಲ್ ನಲ್ಲಿ ವಸ್ತುಗಳು ದೊರೆಯಲಿದೆ ಎನ್ನಲಾಗಿದೆ.

ಜುಲೈ 16ಕ್ಕೆ ಸೇಲ್ ಆರಂಭ:

ಜುಲೈ 16ಕ್ಕೆ ಸೇಲ್ ಆರಂಭ:

ಅಮೆಜಾನ್ ಆಯೋಜಿಸಿರುವ ಪ್ರೈಮ್ ಡೇ ಸೇಲ್ ಕೇಲವ 36 ಗಂಟೆಗಳ ಕಾಲ ಮಾತ್ರವೇ ನಡೆಯಲಿದೆ. ಜುಲೈ 16 ರಂದು ಮಧ್ಯಾಹ್ನ 13 ಗಂಟೆಗೆ ಆರಂಭವಾಗಲಿದೆ. ಈ ಸೇಲ್ ನಲ್ಲಿ ಅಮೆಜಾನ್ ಪ್ರೈಮ್ ಬಳಕೆದಾರರು ಮಾತ್ರವೇ ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಉಳಿದ ಸದಸ್ಯರಿಗೆ ಇಲ್ಲಿ ಖರೀದಿಸಲು ಅವಕಾಶವನ್ನು ಮಾಡಿಕೊಟ್ಟಿದೆ.

ರೂ.128ಕ್ಕೆ ಪ್ರೈಮ್ ಮೆಂಬರ್ ಶಿಪ್:

ರೂ.128ಕ್ಕೆ ಪ್ರೈಮ್ ಮೆಂಬರ್ ಶಿಪ್:

ಈ ಹಿನ್ನಲೆಯಲ್ಲಿ ತನ್ನ ಬಳಕೆದಾರರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ. ತಿಂಗಳಿಗೆ ರೂ.129ಕ್ಕೆ ರೂ.ಗಳಿಗೆ ಮೆಜಾನ್ ಪ್ರೈಮ್ ಮೆಂಬರ್‌ಶಿಪ್ ಪಡೆದುಕೊಳ್ಳುವ ಅನುಕೂಲವನ್ನು ಮಾಡಿಕೊಡಲಾಗಿದೆ. ಇದಲ್ಲದೇ ರೂ.999 ಪಾವತಿಸುವ ಮೂಲಕ ಒಂದು ವರ್ಷದ ಚಂದದಾರಿಕೆಯನ್ನು ಪಡೆದುಕೊಳ್ಳವ ಅವಕಾಶವು ಲಭ್ಯವಿದೆ. ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

200 ಹೊಸ ಬ್ರಾಂಡ್ ಗಳು:

200 ಹೊಸ ಬ್ರಾಂಡ್ ಗಳು:

ಅಮೆಜಾನ್ ಪ್ರೈಮ್ ಡೇ ಸೇಲ್ಸ್ ನಲ್ಲಿ ಖರೀದಿದಾರರಿಗೆ ಹೊಸದನ್ನುನೀಡುವ ಸಲುವಾಗಿ ಈ ಸೇಲ್ ನಲ್ಲಿ ಸುಮಾರು 200ಕ್ಕೂ ಹೆಚ್ಚು ಬ್ರಾಂಡ್‌ಗಳ ವಸ್ತುಗಳನ್ನು ಸೇಲ್ ಮಾಡಲು ಯೋಜನೆಯನ್ನು ರೂಪಿಸಿದೆ. ಈ ಹಿಂದೆ ಎಂದೂ ಕಂಡಿರದ ಮಾದರಿಯಲ್ಲಿ ಸೇಲ್ ಅನ್ನು ಆಯೋಜನೆ ಮಾಡಲಿದ ಎನ್ನುವ ಮಾತು ಕೇಳಿ ಬಂದಿದೆ.

ಪ್ರೈಮ್ ವೆಂಬರ್ ಶಿಪ್ ನಿಂದ ಲಾಭ:

ಪ್ರೈಮ್ ವೆಂಬರ್ ಶಿಪ್ ನಿಂದ ಲಾಭ:

ಅಮೆಜಾನ್ ಪ್ರೈಮ್ ವೆಂಬರ್ ಶಿಪ್ ಪಡೆದುಕೊಳ್ಳುವುದರಿಂದ ಪ್ರೈಮ್ ಡೇ ಸೇಲ್ಸ್ನಲ್ಲಿ ಹೆಚ್ಚಿನ ರಿಯಾಯಿತಿಯನ್ನು ಪಡೆದುಕೊಳ್ಳುವುದಲ್ಲದೇ, ಹೆಚ್ಚುವರಿ ಲಾಭಗಳು ಇದೆ. ಅಮೆಜಾನ್ ಪ್ರೈಮ್ ವಿಡಿಯೋ, ಅಮೆಜಾನ್ ಪ್ರೈಮ್ ಮ್ಯೂಸಿಕ್ ಸೇರಿದಂತೆ ತ್ವರಿತ ಡೆಲಿವರಿಯ ಸೇವೆ ಸೇರಿದಂತೆ ಇತ್ಯಾದಿ ಸೇವೆಗಳು ಲಭ್ಯವಾಗಲಿದೆ.

ಅಮೆಜಾನ್ ಆ್ಯಪ್

ಅಮೆಜಾನ್ ಆ್ಯಪ್

ಈ ಬಾರಿ ಸೇಲ್ ನಲ್ಲಿ ಬಳಕೆದಾರರಿಗೆ ಹೆಚ್ಚು ಲಾಭ ಮಾಡಿಕೊಡುವುದಲ್ಲದೇ, ತನ್ನ ಆಪ್ ಬಳಕೆಯನ್ನು ಉತ್ತಮ ಪಡಿಸಿಕೊಳ್ಳುವ ಸಲುವಾಗಿ, ಅಮೆಜಾನ್ ಆಪ್ ನಲ್ಲಿ ಸಾಕಷ್ಟು ಹೊಸ ಆಫರ್ ಗಳನ್ನು ಲಾಂಚ್ ಮಾಡಲಿದೆ. ಇದು ಕೇವಲ ಆಪ್ ಬಳಕೆದಾರರಿಗೆ ಮಾತ್ರವೇ ಲಬ್ಯವಿರಲಿದೆ. ಒಟ್ಟಿನಲ್ಲಿ ಹೆಚ್ಚಿನ ಲಾಭಕ್ಕೆ ಆಪ್ ಇನ್ ಸ್ಟಾಲ್ ಮಾಡಿಕೊಳ್ಳಿ.

Best Mobiles in India

English summary
Amazon 'Prime Day' 2018: The Best Deals So Far. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+