ಅಮೇಜಾನ್ ಫ್ರೈಮ್ ಡೇ ಸೇಲ್‌ನಲ್ಲಿ ನಿಮ್ಮ ಖರೀದಿ ಉತ್ತಮವಾಗಲು 6 ಸಲಹೆಗಳು..!
ಭಾರತದಲ್ಲಿ ಅಮೇಜಾನ್ ನ ಫ್ರೈಮ್ ಡೇ ಸೇಲ್ ಇನ್ನೇನು ಕೆಲವೇ ದಿನದಲ್ಲಿ ಆರಂಭವಾಗುತ್ತಿದೆ. ಹೌದು ಜುಲೈ 16 ರಂದು ಮಧ್ಯಾಹ್ನ 12 ಘಂಟೆಯಿಂದ ಅಮೇಜಾನ್ ನ ಫ್ಲಾಗ್ ಶಿಪ್ ಗಳ ಮೇಲಿನ ರಿಯಾಯಿತಿ ಮಾರಾಟ ಜುಲೈ 17 ರ ಮಧ್ಯರಾತ್ರಿವರೆಗೆ ಅಂದರೆ ಒಟ್ಟು 36 ತಾಸುಗಳ ಕಾಲ ನಡೆಯಲಿದೆ.
ಸುಮಾರು 17 ದೇಶಗಳಲ್ಲಿ ಪ್ರೈಮ್ ಡೇ ಸೇಲ್ ನಡೆಯಲಿದ್ದು ಅಮೇಜಾನ್ ಸೇವೆ ಲಭ್ಯವಾಗಲಿದೆ. ಮೊದಲ ಎಡಿಷನ್ ನಲ್ಲಿ ಸುಮಾರು 34 ಎಕ್ಸ್ ಕ್ಲೂಸಿವ್ ಪ್ರೊಡಕ್ಟ್ ಗಳನ್ನು ಬಿಡುಗಡೆಗೊಳಿಸಲಾಗಿದ್ದು. ಎರಡನೇ ಬಾರಿಯ ಪ್ರೈಮ್ ಡೇ ಸೇಲ್ ನಲ್ಲಿ ಸುಮಾರು 200 ಎಕ್ಸ್ ಕ್ಲೂಸೀವ್ ಪ್ರೊಡಕ್ಟ್ ಗಳನ್ನು ಬಿಡುಗಡೆಗೊಳಿಸಲಾಗುತ್ತದೆ ಎಂದು ಕಂಪೆನಿ ತಿಳಿಸಿದೆ.

ಭಾರತದ ಪ್ರೈಮ್ ಸದಸ್ಯರು ಸುಮಾರು 200 ಎಕ್ಸ್ ಕ್ಲೂಸಿವ್ ವಸ್ತುಗಳ ಗಳನ್ನು ಸ್ವೀಕರಿಸಿ ಸಂತೋಷ ಪಡಬಹುದು ಮತ್ತು 1000 ಕ್ಕೂ ಅಧಿಕ ಡೀಲ್ ಗಳಿದ್ದು ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ ಎಂದು ಅಮೇಜಾನ್ ಇಂಡಿಯಾದ ಎಸ್.ವಿ.ಪಿ ಮತ್ತು ಕಂಟ್ರೀ ಮ್ಯಾನೇಜರ್ ಆಗಿರುವ ಅಮಿತ್ ಅಗರ್ ವಾಲ್ ತಿಳಿಸಿದ್ದಾರೆ.
ಅಮೇಜಾನ್ ಪ್ರೈಮ್ ಡೇ ಸೇಲ್ ಅನ್ನುವುದೊಂದು ದೊಡ್ಡ ಕಾರ್ಯಕ್ರಮವಾಗಿದ್ದು, ಇದರ ಬಗ್ಗೆ ಟ್ರ್ಯಾಕ್ ಇಟ್ಟುಕೊಳ್ಳುವುದು ಮತ್ತು ಉತ್ತಮ ಡೀಲ್ ಪಡೆಯುವುದು ಅಥವಾ ಬಾರ್ಗೈನ್ ಮಾಡುವುದು ಕೆಲವು ಸದಸ್ಯರಿಗೆ ಬಹಳ ಕಷ್ಟವಾಗಬಹುದು. ಒಂದು ವೇಳೆ ನೀವು ಕೂಡ ಪ್ರೋ ಆನ್ ಲೈನ್ ಶಾಪರ್ ಆಗಬೇಕು ಎಂಬ ಇಚ್ಛೆಯಿದ್ದರೆ ನಿಮಗೊಂದಿಷ್ಟು ಸರಳ ಸಲಹೆಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ. ಆ ಮೂಲಕ ನೀವು ಅಮೇಜಾನ್ ಪ್ರೈಮ್ ಡೇ ಸೇಲ್ ನಲ್ಲಿ ಉತ್ತಮ ರಿಯಾಯಿತಿಯನ್ನು ಪಡೆದುಕೊಳ್ಳಲು ನಿಮ್ಮ ನೆರವಿಗೆ ಬರುತ್ತದೆ.
* ಅಮೇಜಾನ್ ಪ್ರೈಮ್ ನ ಚಂದಾದಾರರಾಗಿ:
ನೀವು ಸೇಲ್ ನ್ನು ಆಕ್ಸಿಸ್ ಮಾಡಲು ನಿಮಗೆ ಪ್ರೈಮ್ ಸದಸ್ಯತ್ವ ಸಿಗುತ್ತದೆ. ಅಮೇಜಾನ್ ತಿಂಗಳಿಗೆ 129 ರುಪಾಯಿಯ ಅಮೇಜಾನ್ ಪ್ರೈಮ್ ಸದಸ್ಯತ್ವವನ್ನು ಬಿಡುಗಡೆಗೊಳಿಸಿದೆ. ಒಂದು ವರ್ಷಕ್ಕೆ ಪಾವತಿಸುವುದಕ್ಕೆ ನಿಮಗೆ ಇಷ್ಟವಿಲ್ಲದಿದ್ದರೆ ಕೇವಲ ಒಂದು ತಿಂಗಳಿಗಾಗಿ ಮಾತ್ರ ಈ ಸದಸ್ಯತ್ವವನ್ನು ಪಡೆದುಕೊಳ್ಳಿ. ಈ ಸದಸ್ಯತ್ವದಿಂದಾಗಿ ನಿಮಗೆ ವೀಡಿಯೋ, ಮ್ಯೂಸಿಕ್ ಮತ್ತು ಇನ್ನಿತರ ವಸ್ತುಗಳ ಮೇಲೆ ಆಕ್ಸಿಸ್ ಸಿಗಲಿದೆ.
* ಅಮೇಜಾನ್ ಮೊಬೈಲ್ ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಿ: ಅಮೇಜಾನ್.ಇನ್ ನ ಉಚಿತವಾದ ಮೊಬೈಲ್ ಆಪ್ ಆಂಡ್ರಾಯ್ಡ್ ಮತ್ತು ಐಓಎಸ್ ಎರಡೂ ಮೊಬೈಲ್ ಗಳಿಗೂ ಲಭ್ಯವಿದೆ. ಆಫರ್ ಗಳನ್ನು ಗಮನಿಸುತ್ತಾ ಇರಲು ಈ ಆಪ್ ಗಳು ಬಹಳ ಸಹಕಾರಿಯಾಗಿರುತ್ತದೆ ಮತ್ತು ಕೆಲವೊಮ್ಮೆ ಎಕ್ಸ್ಟ್ರಾ ಡೀಲ್ ಗಳೂ ಕೂಡ ಇದರಲ್ಲಿ ಇರುತ್ತದೆ. ಹಾಗಾಗಿ ಇದನ್ನು ನಿಮ್ಮ ಮೊಬೈಲ್ ಗೆ ಇನ್ಸ್ಟಾಲ್ ಮಾಡಿಕೊಳ್ಳುವುದನ್ನು ಮರೆಯಬೇಡಿ.
* ಡೆಸ್ಕ್ ಡಾಪ್ ಗೆ ಅಮೇಜಾನ್ ಅಸಿಸ್ಟೆಂಟ್ ನ್ನು ಇನ್ಸ್ಟಾಲ್ ಮಾಡಿ: ಒಂದು ವೇಳೆ ನೀವು ನಿಮ್ಮ ಡೆಸ್ಕ್ ಡಾಪ್ ಪಿಸಿಯಿಂದ ಅಮೇಜಾನ್ ವೆಬ್ ಸೈಟ್ ನ್ನು ನೋಡುತ್ತಿರುವಿರಾದರೆ, ಅಮೇಜಾನ್ ಅಸಿಸ್ಟೆಂಟ್ ನ್ನು ಇನ್ಸ್ಟಾಲ್ ಮಾಡಿಕೊಳ್ಳಿ ಮತ್ತು ಇತ್ತೀಚೆಗಿನ ಡೀಲ್ ಗಳ ನೋಟಿಫಿಕೇಷನ್ ಬರುವಂತೆ ಮಾಡಿಕೊಳ್ಳಿ.
* ಪ್ರೈಮ್ ನೌ ಆಪ್ ನ್ನು ಎರಡು ಗಂಟೆಯ ಒಳಗಿನ ಡೆಲಿವರಿಗಾಗಿ ಇನ್ಸ್ಟಾಲ್ ಮಾಡಿಕೊಳ್ಳಿ: ನಿಮ್ಮ ಖರೀದಿಯ ವಸ್ತುವನ್ನು ನೋಡಲು ನೀವು ಕಾತರರಾಗಿದ್ದು, ತುಂಬಾ ದಿನ ಕಾಯಲು ನಿಮಗೆ ಇಷ್ಟವಿಲ್ಲದೆ ಇದ್ದರೆ. ಪ್ರೈಮ್ ನೌ ಮೊಬೈಲ್ ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಿ ಮತ್ತು ಅದೇ ದಿನ ಕೇವಲ ಎರಡೇ ಗಂಟೆಯೊಳಗೆ ನೀವಿರುವ ಜಾಗಕ್ಕೆ ವಸ್ತುವನ್ನು ಡೆಲಿವರಿ ಪಡೆಯಿರಿ. ಆದರೆ ಇದು ಎಲ್ಲಾ ವಸ್ತುಗಳು ಮತ್ತು ಎಲ್ಲಾ ಡೀಲ್ ಗಳಿಗೂ ಅನ್ವಯಿಸುವುದಿಲ್ಲ ಎಂಬುದು ನಿಮ್ಮ ಗಮನದಲ್ಲಿ ಇರಲಿ.
* ವ್ಯವಹಾರವನ್ನು ಮೊದಲೇ ಗಮನಿಸಿಕೊಳ್ಳುತ್ತಿರಿ: ನಿಮಗೆ “Watch” ಎಂಬ ಒಂದು ಆಯ್ಕೆ ಇರುತ್ತದೆ. ಇದರ ಮೂಲಕ ಡೀಲ್ಸ್ ನೇರಪ್ರಸಾರಗೊಳ್ಳುವ ಮುನ್ನವೇ ಗಮನಿಸುವ ಅವಕಾಶವಿರುತ್ತದೆ.ಒಮ್ಮೆ ನೀವು ವಾಚ್ ಮಾಡಿದ್ದನ್ನು ಖರೀದಿಸುವ ಇಚ್ಛೆಯಿದ್ದಲ್ಲಿ ಅದು ಯಾವಾಗ ನೇರಪ್ರಸಾರವಾಗುತ್ತದೆ ಎಂಬುದನ್ನು ನೋಟಿಫೈ ಆಗುವಂತೆ ಮಾಡಿಕೊಳ್ಳಿ.
* ನಿರ್ಧಿಷ್ಟ ವಸ್ತುಗಳ ಮೇಲಿನ ಪ್ರೈಮ್ ಡೀಲ್ ಗಳನ್ನು ಪರೀಕ್ಷಿಸಿ: ನೀವು ಖರೀದಿಸಬೇಕು ಎಂದುಕೊಂಡಿರುವ ನಿರ್ಧಿಷ್ಟ ವಸ್ತುವಿನ ಪ್ರೈಮ್ ಡೇ ಡೀಲಿನ ಬ್ಯಾಡ್ಜ್ ಗಳನ್ನು ಗಮನಿಸಿ. ಯಾವುದೇ ನಿರ್ಧಿಷ್ಟ ವಸ್ತುವು ನಿಮಗೆ ಬೇಕಾಗಿದ್ದಲ್ಲಿ ಸುಮ್ಮನೆ ಎಲ್ಲಾ ವಸ್ತುಗಳನ್ನು ಬ್ರೌಸ್ ಮಾಡುವುದರಲ್ಲಿ ಅರ್ಧವಿಲ್ಲ. ಅದು ಸುಮ್ಮನೆ ನಿಮ್ಮ ಸಮಯವನ್ನು ಹಾಳು ಮಾಡುತ್ತದೆ ಅಷ್ಟೇ. ಹಾಗಾಗಿ ಯಾವ ವಸ್ತುವಿನ ಅಗತ್ಯವಿದೆಯೋ ಅದೇ ವಸ್ತುವಿನ ಡೀಲ್ ಪ್ರೈಮ್ ಡೇ ದಿನ ಎಷ್ಟಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಅಮೇಜಾನ್ ಕೂಡ ಪ್ರೇಮ್ ಡೇ ಸಂದರ್ಬದಲ್ಲಿ ನಿಮಗೆ ಮ್ಯೂಸಿಕ್, ಚಲನಚಿತ್ರಗಳಿಂದ ಮನೆರಂಜನೆ ನೀಡಲು ಬಯಸುತ್ತದೆ ಮತ್ತು ಆಶ್ಚರ್ಯಕರವಾದ ಉಡುಗೊರೆಗಳನ್ನು ಕೊಡಲು ಕೂಡ ಬಯಸುತ್ತಿದೆ.


Click it and Unblock the Notifications