Home
ಸುದ್ದಿಜಾಲ

ಪ್ರೈಮ್ ಡೇ ಸೇಲ್ 2025: ಇತ್ತೀಚಿನ ಫೋನ್‌ಗಳ ಮೇಲೆ ಭರ್ಜರಿ ಕೊಡುಗೆಗಳು!

ಶನಿವಾರ (ಜುಲೈ 12) ಮಧ್ಯರಾತ್ರಿಯಿಂದ ಪ್ರಾರಂಭವಾದ 'ಅಮೆಜಾನ್ ಪ್ರೈಮ್ ಡೇ ಸೇಲ್ 2025' ಮೂರು ದಿನಗಳ ವಿಶೇಷ ಮಾರಾಟವನ್ನು ಒಳಗೊಂಡಿದೆ. ಇಂದು (ಜುಲೈ 14) ಕೊನೆಗೊಳ್ಳುತ್ತಿರುವ ಈ ಸೇಲ್‌ನಲ್ಲಿ, ಹಲವಾರು ಜನಪ್ರಿಯ ಸ್ಮಾರ್ಟ್‌ಫೋನ್‌ಗಳನ್ನು ರಿಯಾಯಿತಿ ದರದಲ್ಲಿ ಖರೀದಿಸುವ ಅವಕಾಶ ದೊರಕುತ್ತಿದೆ. ಈ ಸೇಲ್‌ನಲ್ಲಿ ಹೊಸ ಫೋನ್ ಖರೀದಿಸುವ ಮೂಲಕ, ಗ್ರಾಹಕರು ಹೊಸ ವೈಶಿಷ್ಟ್ಯಗಳು, ಉತ್ತಮ ಕಾರ್ಯಕ್ಷಮತೆ ಮತ್ತು ದೀರ್ಘಕಾಲದ ಸಾಫ್ಟ್‌ವೇರ್ ಬೆಂಬಲವನ್ನು ಪಡೆಯಬಹುದು.

ಈ ವರ್ಷದ ಪ್ರೈಮ್ ಡೇ ಸೇಲ್‌ನಲ್ಲಿ, ಹಲವಾರು ಹೊಸ ಮತ್ತು ಇತ್ತೀಚೆಗೆ ಬಿಡುಗಡೆಯಾದ ಸ್ಮಾರ್ಟ್‌ಫೋನ್‌ಗಳು ಮೊದಲ ಬಾರಿಗೆ ಅಥವಾ ಕಡಿಮೆ ದರದಲ್ಲಿ ಲಭ್ಯವಿವೆ. ಉದಾಹರಣೆಗೆ, ಇತ್ತೀಚಿನ ಸ್ಯಾಮ್‌ಸಂಗ್ ಗ್ಯಾಲಕ್ಸಿ M36 5G ಮತ್ತು ಒನ್‌ಪ್ಲಸ್ ನಾರ್ಡ್ CE 5 ಫೋನ್‌ಗಳು ಮೊದಲ ಬಾರಿಗೆ ಮಾರಾಟಕ್ಕೆ ಬರುತ್ತಿವೆ. ಇದೇ ವೇಳೆ, iQOO ಝಡ್ 10 ಲೈಟ್ 5G ಮತ್ತು ರಿಯಲ್‌ಮಿ ನಾರ್ಜೊ 80 ಲೈಟ್ 5G, ಇತ್ತೀಚೆಗೆ ಬಿಡುಗಡೆ ಆಗಿದ್ದರೂ ಸಹ, ಈಗ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದೆ.

ಪ್ರೈಮ್ ಡೇ ಸೇಲ್ 2025: ಇತ್ತೀಚಿನ ಫೋನ್‌ಗಳ ಮೇಲೆ ಭರ್ಜರಿ ಕೊಡುಗೆಗಳು!

ಈ ಮಾರಾಟದ ಪ್ರಮುಖ ಆಕರ್ಷಣೆಯಾದ iQOO 13 (Ace Green color) ಫೋನ್ ಡಿಸೆಂಬರ್ 2024 ರಲ್ಲಿ ಬಿಡುಗಡೆಯಾಗಿದ್ದು, ಈಗ ರೂ. 52,999 ಕ್ಕೆ ಲಭ್ಯವಿದೆ (ಮೂಲ ಬೆಲೆ: ರೂ. 59,999). ಈ ಫೋನ್ ಬಿಡುಗಡೆಯಾಗಿ ಆರು ತಿಂಗಳುಗಳಾದರೂ ಸಹ, ಇದೀಗ ಕಡಿಮೆ ದರದಲ್ಲಿ ಖರೀದಿಸುವ ಮೂಲಕ ಶಕ್ತಿಶಾಲಿ ಹಾರ್ಡ್‌ವೇರ್‌ನ್ನು ಹೆಚ್ಚು ಲಾಭದಾಯಕವಾಗಿ ಬಳಸಿಕೊಳ್ಳುಬಹುದು. ಇನ್ನು ಇತರ ಆಯ್ಕೆಗಳಲ್ಲಿ ರಿಯಲ್‌ಮಿ, ಹಾನರ್, ಲಾವಾ ಮತ್ತು ಒನ್‌ಪ್ಲಸ್‌ನ ಹೊಸ ಮಾದರಿಗಳು ಸೇರಿವೆ.

ಈ ಕೆಳಗೆ 'ಅಮೆಜಾನ್ ಪ್ರೈಮ್ ಡೇ ಸೇಲ್ 2025' ನಲ್ಲಿ ಲಭ್ಯವಿರುವ ಕೆಲವು ಪ್ರಮುಖ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಮತ್ತು ಅವುಗಳ ಅಧಿಕೃತ ಬೆಲೆ ಹಾಗೂ ಮಾರಾಟದ ಬೆಲೆಯ ಬಗ್ಗೆ ವಿವರಿಸುತ್ತಿದ್ದೇವೆ.

  1. ಸ್ಯಾಮ್‌ಸಂಗ್ ಗ್ಯಾಲಕ್ಸಿ M36 5G - ಮೂಲ ಬೆಲೆ ರೂ. 17,499, ಮಾರಾಟದ ಬೆಲೆ: ರೂ. 16,499
  2. ಒನ್‌ಪ್ಲಸ್ ನಾರ್ಡ್ CE 5 - ಮೂಲ ಬೆಲೆ ರೂ. 24,999, ಮಾರಾಟದ ಬೆಲೆ: ರೂ. 22,999
  3. ರಿಯಲ್‌ಮಿ ನಾರ್ಜೊ 80 ಲೈಟ್ 5G - ಮೂಲ ಬೆಲೆ ರೂ. 11,499, ಮಾರಾಟದ ಬೆಲೆ: ರೂ. 10,499
  4. ಒನ್‌ಪ್ಲಸ್ ನಾರ್ಡ್ 5 - ಮೂಲ ಬೆಲೆ ರೂ. 31,999, ಮಾರಾಟದ ಬೆಲೆ: ರೂ. 29,999
  5. ಹಾನರ್ ಎಕ್ಸ್ 9ಸಿ - ಮೂಲ ಬೆಲೆ ರೂ. 27,999, ಮಾರಾಟದ ಬೆಲೆ: ರೂ. 19,999
  6. iQOO ಝಡ್ 10 ಲೈಟ್ 5G - ಮೂಲ ಬೆಲೆ ರೂ. 10,999, ಮಾರಾಟದ ಬೆಲೆ: ರೂ. 9,998
  7. iQOO 13 (Ace Green) - ಮೂಲ ಬೆಲೆ ರೂ. 59,999 , ಮಾರಾಟದ ಬೆಲೆ: ರೂ. 52,999

ಈ ಸೇಲ್‌ನಲ್ಲಿ ಖಾಸಗಿ ಬ್ಯಾಂಕ್‌ಗಳ ಜೊತೆಗಿನ ಪಾಲುದಾರಿಕೆಯಿಂದ ಹೆಚ್ಚುವರಿ ರಿಯಾಯಿತಿಗಳೂ ಲಭ್ಯವಿವೆ. ಖಾಸಾಗಿ ಬ್ಯಾಂಕ್‌ಗಳಾದ SBI ಮತ್ತು ICICI ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶೇಕಡಾ 10 ರಷ್ಟು ತಕ್ಷಣದ ರಿಯಾಯಿತಿಯನ್ನು ನೀಡಲಾಗುತ್ತಿದೆ. ಖರೀದಿಸುವ ಮೊದಲು, ನಿಮ್ಮ ಆಯ್ಕೆಯ ಫೋನ್‌ ಮೇಲೆ ಈ ರಿಯಾಯಿತಿಯು ಅನ್ವಯವಾಗುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ.ಈ ವಿಶೇಷ ಮಾರಾಟವು ಅಮೆಜಾನ್ ಪ್ರೈಮ್ ಸದಸ್ಯರಿಗೆ ಮಾತ್ರ ಲಭ್ಯವಿದ್ದು, ಡೀಲ್‌ಗಳನ್ನು ಪ್ರವೇಶಿಸಲು ಸಕ್ರಿಯ ಪ್ರೈಮ್ ಚಂದಾದಾರಿಕೆ ಅಗತ್ಯವಿದೆ.

ಒಟ್ಟಾರೆ ಸಾರಾಂಶವಾಗಿ ಹೇಳಬೇಕೆಂದರೆ, ನೀವು ಹೊಸ ಫೋನ್ ಹುಡುಕುತ್ತಿರುವಿರಾ ಅಥವಾ ನಿಮ್ಮ ಹಳೆಯ ಫೋನ್‌ಗೆ ಪರ್ಯಾಯವನ್ನು ನೋಡುವಂತಿದೆಯಾ ಎಂಬುದಾದರೂ, ಅಮೆಜಾನ್ ಪ್ರೈಮ್ ಡೇ ಸೇಲ್ 2025 ನವೀನ ಆಫರ್‌ಗಳೊಂದಿಗೆ ನಿಮಗೆ ಹೆಚ್ಚು ಮೌಲ್ಯ ನೀಡುವ ಅತ್ಯುತ್ತಮ ಸಮಯವಾಗಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
During the current Amazon Prime Day 2025 sale, customers using SBI and ICICI Bank credit cards are eligible for an immediate discount of 10 percent on their purchases.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+