Home
ಸುದ್ದಿಜಾಲ

ಅಮೆಜಾನ್ ಪ್ರೈಮ್ ಡೇ ಸೇಲ್: ಖರೀದಿಸುವಾಗ ನೆನಪಿನಲ್ಲಿರಲಿ ಈ 4 ಸಂಗತಿಗಳು..!

By Gizbot Bureau

ಅಮೇಜಾನ್ ಸಂಸ್ಥೆ ತನ್ನ ವಾರ್ಷಿಕ ಮಾರಾಟ ದಿನವನ್ನು ನಿನ್ನೆಯಿಂದ ಆರಂಭ ಮಾಡಿದೆ. ಈ ಮಾರಾಟದಲ್ಲಿ ಬಹಳಷ್ಟು ವಸ್ತುಗಳ ಮೇಲೆ ರಿಯಾಯಿತಿ ಮತ್ತು ಭರ್ಜರಿ ಆಫರ್ ಗಳನ್ನು ಅಮೇಜಾನ್ ಇಂಡಿಯಾ ವೆಬ್ ಸೈಟ್ ನೀಡುತ್ತಿದೆ. ಆದರೆ, ಈ ರಿಯಾಯಿತಿಯು ಕೇವಲ ಪ್ರೈಮ್ ಸದಸ್ಯರಿಗೆ ಮಾತ್ರ ಲಭ್ಯವಿರುತ್ತದೆ.

ಅಮೆಜಾನ್ ಪ್ರೈಮ್ ಡೇ ಸೇಲ್: ಖರೀದಿಸುವಾಗ ನೆನಪಿನಲ್ಲಿರಲಿ ಈ 4 ಸಂಗತಿಗಳು..!

ಯಾರಿಗೆ ಈ ವಿಚಾರ ತಿಳಿದಿಲ್ಲವೋ , ಅಂತವರು ಪ್ರೈಮ್ ಸದಸ್ಯತ್ವ ಪಡೆದುಕೊಳ್ಳಲು ಎರಡು ಆಯ್ಕೆಗಳಿಗೆ.ಒಂದು ಮಾಸಿಕ ಚಂದಾದಾರಿಕೆ ಅದಕ್ಕಾಗಿ ನೀವು 129 ರುಪಾಯಿ ಪಾವತಿ ಮಾಡಿ ಸದಸ್ಯರಾಗಬಹುದು ಅಥವಾ ವಾರ್ಷಿಕ ಚಂದಾದಾರಿಕೆ ಅದಕ್ಕಾಗಿ ನೀವು 999 ರುಪಾಯಿ ಪಾವತಿ ಮಾಡಬೇಕಾಗುತ್ತದೆ. ಇನ್ನು ಹೆಚ್ಚಿನ ರಿಯಾಯಿತಿ ಪಡೆದುಕೊಳ್ಳಲು ಇಚ್ಛಿಸುತ್ತೀರಾದರೆ ಕೆಲವು ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅವುಗಳ ಪಟ್ಟಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ.

ಅಮೆಜಾನ್ ಪೇ ಮೂಲಕ ಪಾವತಿಸಿ ಹೆಚ್ಚುವರಿ 300 ರುಪಾಯಿ ಕ್ಯಾಷ್ ಬ್ಯಾಕ್ ಪಡೆಯಿರಿ

ಅಮೆಜಾನ್ ಪೇ ಮೂಲಕ ಪಾವತಿಸಿ ಹೆಚ್ಚುವರಿ 300 ರುಪಾಯಿ ಕ್ಯಾಷ್ ಬ್ಯಾಕ್ ಪಡೆಯಿರಿ

ರುಪಾಯಿ ಸೇರಿಸಿಕೊಳ್ಳಿ ಮತ್ತು ನೀವು ಕೊಂಡುಕೊಳ್ಳುವ ವಸ್ತುವಿಗೆ ಅದರಿಂದಲೇ ಪಾವತಿ ಮಾಡಿ. ಆಗ ನಿಮಗೆ 10 ಶೇಕಡಾ ಅಂದರೆ 300 ರುಪಾಯಿವರೆಗೆ ಕ್ಯಾಷ್ ಬ್ಯಾಕ್ ಲಭ್ಯವಾಗಲಿದೆ. ಮೂರು ದಿನಗಳ ಒಳಗಾಗಿ ಅಮೆಜಾನ್ ಪೇ ಬ್ಯಾಲೆನ್ಸ್ ಗೆ ನಿಮಗೆ ಈ ಹಣವನ್ನು ಮರುಪಾವತಿ ಮಾಡಲಾಗುತ್ತದೆ.ಆದರೆ ನೀವು ನೆನಪಿನಲ್ಲಿ ಇಡಬೇಕಾದ ಅಂಶವೇನೆಂದರೆ ಅತೀ ಹೆಚ್ಚು ಅಂದರೆ ಯಾವುದೇ ಮೊತ್ತದ ವಸ್ತುಗಳೇ ಆಗಿದ್ದರೂ ನಿಮಗೆ 300 ರುಪಾಯಿವರೆಗಿನ ಕ್ಯಾಷ್ ಬ್ಯಾಕ್ ಮಾತ್ರ ಲಭ್ಯವಾಗುತ್ತದೆ. ಅನೇಕ ವಸ್ತುಗಳನ್ನು ಕೊಂಡುಕೊಡರೂ ಕೂಡ ಕ್ಯಾಷ್ ಬ್ಯಾಕ್ ಲಭ್ಯವಾಗುವುದು ಕೇವಲ 300 ರುಪಾಯಿ ಮಾತ್ರ. ಅಷ್ಟೇ ಅಲ್ಲ, ಇಷ್ಟು ಕ್ಯಾಷ್ ಬ್ಯಾಕ್ ಪಡೆಯಲು 1000 ರುಪಾಯಿ ಮೇಲಿನ ವಸ್ತುಗಳನ್ನೇ ಖರೀದಿಸಬೇಕಾಗುತ್ತದೆ.

ಹೆಚ್‌ಡಿಎಫ್‌ಸಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ, 50000 ಒಳಗಿನ ವಸ್ತುಗಳಿಗೆ 1750 ರುಪಾಯಿಯ ತ್ವರಿತ ರಿಯಾಯಿತಿ

ಹೆಚ್‌ಡಿಎಫ್‌ಸಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ, 50000 ಒಳಗಿನ ವಸ್ತುಗಳಿಗೆ 1750 ರುಪಾಯಿಯ ತ್ವರಿತ ರಿಯಾಯಿತಿ

ಒಂದು ವೇಳೆ ನಿಮ್ಮ ಬಳಿ ಹೆಚ್ ಡಿಎಫ್ ಸಿ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ (ಇಎಂಐ ಒಳಗೊಂಡಿರುತ್ತದೆ ) ಇದ್ದರೆ ಪ್ರೈಮ್ ಡೇ ಸೇಲ್ ನ ಖರೀದಿಯನ್ನು ಅದರಿಂದಲೇ ಮಾಡುವುದರಿಂದಾಗಿ ಹೆಚ್ಚುವರಿ ಶೇಕಡಾ 10 ರ ಕ್ಯಾಷ್ ಬ್ಯಾಕ್ ಪಡೆದುಕೊಳ್ಳಬಹುದು. ಒಂದು ವೇಳೆ ಖರೀದಿಯ ಬೆಲೆ 50,000 ಕ್ಕಿಂತ ಕಡಿಮೆ ಇದ್ದರೆ ಆಗ ನಿಮಗೆ 1,750 ರುಪಾಯಿಯ ಇನ್ಸ್ ಟೆಂಟ್ ರಿಯಾಯಿತಿ ಕೂಡ ಸಿಗುತ್ತದೆ. ಆದರೆ ಈ ಸೌಲಭ್ಯವನ್ನು ಪಡೆಯಲು ಕಡಿಮೆ ಎಂದರೆ 3000 ರುಪಾಯಿಯ ಖರೀದಿಯನ್ನು ಮಾಡಲೇಬೇಕು.

ಹೆಚ್‌ಡಿಎಫ್‌ಸಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ 50,000 ರೂ.ಗೂ ಅಧಿಕ ಖರೀದಿ ಮಾಡಿ, 10,000 ರುಪಾಯಿ ಉಳಿಸಿ:

ಹೆಚ್‌ಡಿಎಫ್‌ಸಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ 50,000 ರೂ.ಗೂ ಅಧಿಕ ಖರೀದಿ ಮಾಡಿ, 10,000 ರುಪಾಯಿ ಉಳಿಸಿ:

50,000 ಗಿಂತ ಹೆಚ್ಚಿನ ಬೆಲೆಯ ಖರೀದಿಯನ್ನು ಒಂದು ವೇಳೆ ನೀವು ಮಾಡಿದ್ದೇ ಆದಲ್ಲಿ ನಿಮಗೆ 10 ಶೇಕಡಾ ರಿಯಾಯಿತಿ ಲಭ್ಯವಾಗುತ್ತದೆ. ಅಂದರೆ ಸುಮಾರು 10,000 ರುಪಾಯಿ ವರೆಗೆ ಇದರಲ್ಲಿ ಉಳಿತಾಯ ಮಾಡಬಹುದು. ಅದರಲ್ಲಿ ಇನ್ ಸ್ಟೆಂಟ್ ಡಿಸ್ಕೌಂಟ್ 1,750 ರುಪಾಯಿ ಮತ್ತು ಉಳಿದ 8,250 ರುಪಾಯಿ ನಿಮಗೆ ಕ್ಯಾಷ್ ಬ್ಯಾಕ್ ರೂಪದಲ್ಲಿ ನಿಮಗೆ ಲಭ್ಯವಾಗಲಿದೆ.

ಅಮೆಜಾನ್ ಕೂಪನ್ಸ್:

ಅಮೆಜಾನ್ ಕೂಪನ್ಸ್:

ಅಮೆಜಾನ್ ಪ್ರೈಮ್ ಡೇ ನಲ್ಲಿ ಶಾಪಿಂಗ್ ಮಾಡುವಾಗ ನೀವು ಬಳಸಬಹುದಾದ ಸಾಕಷ್ಟು ಕೂಪನ್ ಗಳು ಲಭ್ಯವಿದೆ.ಕಲೆಕ್ಟ್ ಕೂಪನ್ ಬಟನ್ ಒತ್ತಿ ಅವುಗಳನ್ನು ಪಡೆದು ನಿಮ್ಮ ಖರೀದಿಯಲ್ಲಿ ಆ ಕೂಪನ್ ಗಳನ್ನು ಬಳಸಬಹುದಾಗಿದೆ. ಒಮ್ಮೆ ನೀವು ಕೂಪನ್ ಪಡೆದು ಚೆಕ್ ಔಟ್ ಆದ ಕೂಡಲೇ ಅಟೋಮೆಟಿಕಲಿ ನಿಮಗೆ ರಿಯಾಯಿತಿಯು ಲಭ್ಯವಾಗುತ್ತದೆ. ನೀವು ಕಲೆಕ್ಟ್ ಮಾಡಿದ ಕೂಪನ್ ನಿಮ್ಮ ಅಕೌಂಟ್ ನಲ್ಲಿ ಸೇವ್ ಆಗಿ ಇರುತ್ತದೆ ಮತ್ತು ನೀವು ಒಂದು ವೇಳೆ ಆ ಕೂಪನ್ ಗೆ ಸಂಬಂಧಿಸಿದ ವ್ಯಾಪಾರಸ್ಥರ ಯಾವುದೇ ವಸ್ತುವನ್ನು ಖರೀದಿಸಿದಾಗಲೂ ಆ ಕೂಪನ್ ನ ರಿಯಾಯಿತಿಯು ಅಟೋಮ್ಯಾಟಿಕ್ ಆಗಿ ಅಪ್ಲೈ ಆಗುತ್ತದೆ. ಅಮೆಜಾನ್ ಪ್ರೈಮ್ ಡೇ ಸೇಲ್ ಜುಲೈ 16 ಅಂದರೆ ನಿನ್ನೆ ಮಧ್ಯಾಹ್ನ 12 ಗಂಟೆಗೆ ಆರಂಭವಾಗಿದೆ ಮತ್ತು ಇಂದು ಮಧ್ಯರಾತ್ರಿವರೆಗೆ ಲಭ್ಯವಿರುತ್ತದೆ. ಗ್ರಾಹಕರು ಇದರ ಸದುಪಯೋಗ ಪಡೆಯಬಹುದು.

Best Mobiles in India

English summary
Amazon Prime Day sale: 4 things to keep in mind before you shop. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+