'ಪ್ರೈಮ್ ಡೇ' ಬೆಸ್ಟ್ ಡೀಲ್!..ಅತ್ಯಂತ ಕಡಿಮೆ ಬೆಲೆಗೆ 'ಒನ್‌ಪ್ಲಸ್ 6ಟಿ'!

|

ಭಾರತದ ಹೆಸರಾಂತ ಇ-ಕಾಮರ್ಸ್ ಮಾರುಕಟ್ಟೆ ಅಮೆಜಾನ್ ಆಯೋಜಿಸಿರುವ 2109ರ ಪ್ರೈಮ್ ಸೇಲ್ ಇಂದಿನಿಂದ ಆರಂಭವಾಗಿದೆ. ಸೋಮವಾರ ಮತ್ತು ಮಂಗಳವಾರ ನಡೆಯುವ ಈ ಎರಡು ದಿನಗಳ ವಿಶೇಷ ಆಫರ್ ಸೇಲ್ ನೂರಾರು ಬೆಸ್ಟ್ ಪ್ರೈಸ್ ಮತ್ತು ಡೀಲ್ಸ್ ಈ ಸಂದರ್ಭದಲ್ಲಿ ದೊರೆಯುತ್ತಿದ್ದು, ಅದರಲ್ಲಿ ಭಾರತೀಯರ ನೆಚ್ಚಿನ ಪ್ರೀಮಿಯಂ ಫೋನ್‌ಗಳಲ್ಲಿ ಒಂದಾದ 'ಒನ್‌ಪ್ಲಸ್ 6ಟಿ 'ಸ್ಮಾರ್ಟ್‌ಫೋನ್ ಖರೀದಿ ಮಾತ್ರ ಬೆಸ್ಟ್ ಬೈ ಎಂದು ಹೇಳಬಹುದು. ಏಕೆಂದರೆ, ಒನ್‌ಪ್ಲಸ್ 6ಟಿ ಫೋನ್ ಅನ್ನು ಇದೀಗ 24,299 ರೂ.ಗಳಿಗೆ ಖರೀದಿಸಬಹುದು.

'ಪ್ರೈಮ್ ಡೇ' ಬೆಸ್ಟ್ ಡೀಲ್!..ಅತ್ಯಂತ ಕಡಿಮೆ ಬೆಲೆಗೆ 'ಒನ್‌ಪ್ಲಸ್ 6ಟಿ'!

ಹೌದು, ಇದೇ ಮೊದಲ ಬಾರಿಗೆ 'ಒನ್‌ಪ್ಲಸ್ 6ಟಿ' ಸ್ಮಾರ್ಟ್‌ಫೋನ್ ಅತ್ಯಂತ ಕಡಿಮೆ ಬೆಲೆಗೆ ಮಾರಾಟಕ್ಕೆ ಬಂದಿದ್ದು, 6ಜಿಬಿ RAM ಮತ್ತು 128GB ಸಾಮರ್ಥ್ಯದ 'ಒನ್‌ಪ್ಲಸ್ 6ಟಿ' ಫೋನ್ ಬೆಲೆ ಕೇವಲ 26,999 ರೂಪಾಯಿಗಳಾಗಿವೆ. ಇನ್ನು ಈ ಪ್ರೈಮ್ ಡೇ ಸೇಲ್‌ನಲ್ಲಿ 8 ಜಿಬಿ RAM ಮತ್ತು 128 ಜಿಬಿ ಮೆಮೊರಿ ಸಾಮರ್ಥ್ಯದ ಫೋನ್ ಬೆಲೆ ಕೇವಲ 27,999 ರೂ.ಗಳಾಗಿದ್ದರೆ, 8 ಜಿಬಿ ಮತ್ತು 256 ಜಿಬಿ ಸಾಮರ್ಥ್ಯದ ಫೋನ್ 31,999 ರೂಪಾಯಿಗಳಿಗೆ ದೊರೆಯುತ್ತಿದೆ. ಇಷ್ಟು ಕಡಿಮೆ ಬೆಲೆಗಳ ಜೊತೆಗೆ ಎಚ್‌ಡಿಎಫ್‌ಸಿ ಗ್ರಾಹಕರಿಗೆ ಶೇ. 10 ಡಿಸ್ಕೌಂಟ್ಸ್ ನೀಡಲಾಗಿದೆ.

ಶೇ. 10 ರಷ್ಟು ಎಚ್‌ಡಿಎಫ್‌ಸಿ ಡಿಸ್ಕೌಂಟ್ಸ್ ಕೂಡ ದೊರೆಯುತ್ತಿರುವುದರಿಂದ 24,299 ರೂಪಾಯಿಗಳಿಗೆ ಒನ್‌ಪ್ಲಸ್ 6ಟಿ ಸ್ಮಾರ್ಟ್‌ಫೋನನ್ನು ಖರೀದಿಸಬಹುದು. ಹಾಗಾದರೆ, ಭಾರತದ ಪ್ರೀಮಿಯಂ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಸ್ಯಾಮ್‌ಸಂಗ್ ಹಾಗೂ ಆಪಲ್ ಕಂಪೆನಿಗಳನ್ನು ಮೀರಿಸಿ 'ಒನ್‌ಪ್ಲಸ್' ಕಂಪೆನಿ ನಂ.1 ಸ್ಥಾನಕ್ಕೆ ಏರಲು ಸಹಾಯ ಮಾಡಿದ ಒನ್‌ಪ್ಲಸ್ 6ಟಿ ಸ್ಮಾರ್ಟ್‌ಫೋನ್ ಹೇಗಿದೆ?, 'ಒನ್‌ಪ್ಲಸ್ 6ಟಿ' ಸ್ಮಾರ್ಟ್‌ಫೋನ್ ವಿಶೇಷತೆಗಳೇನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಡ್ಯಾಶ್‌ ಚಾರ್ಜಿಂಗ್

ಡ್ಯಾಶ್‌ ಚಾರ್ಜಿಂಗ್

ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಹಿಂದಿನ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳಿಗಿಂತ ಉತ್ತಮ ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಕಂಪನಿಯ ಟ್ರಾಕ್‌ ರೆಕಾರ್ಡ್‌ನ್ನು ಗಮನಿಸಿದರೆ, ಒನ್‌ಪ್ಲಸ್‌ ಡಿವೈಸ್‌ಗಳು ಉತ್ತಮ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಈ ಬಾರಿಯ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚು ಸಮಯ ಬಳಸಲು ಭರವಸೆ ನೀಡುತ್ತದೆ. ಇದಕ್ಕೆಲ್ಲಕ್ಕಿಂತ ಹೆಚ್ಚಾಗಿ ಜನಪ್ರಿಯ ಡ್ಯಾಶ್ ಚಾರ್ಜ್‌ರ್‌ನ ಮುಂದುವರೆದ ಆವೃತ್ತಿಯನ್ನು ಒನ್‌ಪ್ಲಸ್‌ 6Tಯಲ್ಲಿ ತರಲಾಗಿದೆ. ಹೊಸ OnePlus 6T ಸ್ಮಾರ್ಟ್‌ಫೋನ್‌ನ್ನು ಕಂಪನಿಯ ಸುಧಾರಿತ ಡ್ಯಾಶ್ ಚಾರ್ಜಿಂಗ್ ತಂತ್ರಜ್ಞಾನದ ಮೂಲಕ ಬೆಂಬಲಿಸಲಾಗುತ್ತದೆ. ಇದರ ಅರ್ಥ ನಿಮಗೆ ಅಗತ್ಯವಿದ್ದ ಸಮಯದಲ್ಲಿ ಆದಷ್ಟು ಬೇಗ ಸ್ಮಾರ್ಟ್‌ಫೋನ್‌ನ್ನು ಚಾರ್ಜ್‌ ಮಾಡಬಹುದಾಗಿದೆ.

3700 mAh ಬ್ಯಾಟರಿ ಸಾಮರ್ಥ್ಯ

3700 mAh ಬ್ಯಾಟರಿ ಸಾಮರ್ಥ್ಯ

ಹೊಸ ಸ್ಮಾರ್ಟ್‌ಫೋನ್‌ನ ಬ್ಯಾಟರಿ 3700 mAh ಸಾಮರ್ಥ್ಯ ಹೊಂದಿದ್ದು, ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್‌ನ 3300 mAh ಬ್ಯಾಟರಿಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿದೆ. ನಿಮ್ಮ ಸ್ಮಾರ್ಟ್‌ಫೋನ್‌ನ ಹೆಚ್ಚು ಸಮಯ ಬಳಸಲು ಇದು ಭರವಸೆ ನೀಡುತ್ತದೆ. ಇದಕ್ಕೆಲ್ಲಕ್ಕಿಂತ ಹೆಚ್ಚಾಗಿ ಜನಪ್ರಿಯ ಡ್ಯಾಶ್ ಚಾರ್ಜ್‌ರ್‌ನ ಮುಂದುವರೆದ ಆವೃತ್ತಿಯನ್ನು ಒನ್‌ಪ್ಲಸ್‌ 6Tಯಲ್ಲಿ ತರಲಾಗಿದೆ. ಹೊಸ OnePlus 6T ಸ್ಮಾರ್ಟ್‌ಫೋನ್‌ನ್ನು ಕಂಪನಿಯ ಸುಧಾರಿತ ಡ್ಯಾಶ್ ಚಾರ್ಜಿಂಗ್ ತಂತ್ರಜ್ಞಾನದ ಮೂಲಕ ಬೆಂಬಲಿಸಲಾಗುತ್ತದೆ. ಇದರ ಅರ್ಥ ನಿಮಗೆ ಅಗತ್ಯವಿದ್ದ ಸಮಯದಲ್ಲಿ ಆದಷ್ಟು ಬೇಗ ಸ್ಮಾರ್ಟ್‌ಫೋನ್‌ನ್ನು ಚಾರ್ಜ್‌ ಮಾಡಬಹುದಾಗಿದೆ.

ದೊಡ್ಡ ಮತ್ತು ಉತ್ಕೃಷ್ಟ ಡಿಸ್‌ಪ್ಲೇ

ದೊಡ್ಡ ಮತ್ತು ಉತ್ಕೃಷ್ಟ ಡಿಸ್‌ಪ್ಲೇ

ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ತನ್ನ ಬೆಲೆ ವರ್ಗದ ಇತರ ಸ್ಮಾರ್ಟ್‌ಫೋನ್‌ಗಳಿಗಿಂತ ಹೆಚ್ಚು ಆಕರ್ಷಕವಾದ ಮಲ್ಟಿಮೀಡಿಯಾ ಅನುಭವವನ್ನು ನೀಡುತ್ತದೆ. 6.4 ಇಂಚು AMOLED ಡಿಸ್‌ಪ್ಲೇ, ಫುಲ್ ಹೆಚ್‌ಡಿ ಪ್ಲಸ್ 2340p x 1080 ರೆಸೊಲ್ಯುಶನ್ ದೊಡ್ದ್ ಡಿಸ್‌ಪ್ಲೇ ಹೊಂದಿದ್ದು, ಬೆಜೆಲ್‌ ಲೆಸ್‌ AMOLED ಡಿಸ್‌ಪ್ಲೇ ವಾಟರ್‌ ಡ್ರಾಪ್‌ ನೋಚ್‌ನೊಂದಿಗೆ ಅಳವಡಿಸಲಾಗಿದೆ. ಫ್ರಾಂಟ್ ಕ್ಯಾಮೆರಾವನ್ನು ಸಣ್ಣ ನೀರಿನ ಬಿಂದುವಿನಂತ ಜಾಗದಲ್ಲಿ ಅಳವಡಿಸಿದ್ದು, ಆಕರ್ಷಕವಾಗಿದೆ. ಎಡ್ಜ್‌-ಟು-ಎಡ್ಜ್‌ ಸ್ಕ್ರೀನ್ ವೀಕ್ಷಣೆ ಅನುಭವವನ್ನು ನೀಡುವ ಒನ್‌ಪ್ಲಸ್‌ 6T ಗೇಮಿಂಗ್ ಮತ್ತು ಮಲ್ಟಿಮೀಡಿಯಾ ಬಳಕೆಗೆ ಹೇಳಿ ಮಾಡಿಸಿದಂತಿದೆ.

ಆಂಡ್ರಾಯ್ಡ್ ಪೈ ಔಟ್‌ ಆಫ್‌ ಬಾಕ್ಸ್‌

ಆಂಡ್ರಾಯ್ಡ್ ಪೈ ಔಟ್‌ ಆಫ್‌ ಬಾಕ್ಸ್‌

ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಇತ್ತೀಚಿನ ಆಂಡ್ರಾಯ್ಡ್ ಪೈ ಒಎಸ್‌ನೊಂದಿಗೆ ಬಂದಿದೆ. ಭಾರತದಲ್ಲಿ ಗೂಗಲ್‌ ಪಿಕ್ಸೆಲ್‌ ಹೊರತುಪಡಿಸಿ ಆಂಡ್ರಾಯ್ಡ್ ಪೈ ಔಟ್‌ ಆಫ್‌ ಬಾಕ್ಸ್‌ ಒಎಸ್‌ನೊಂದಿಗೆ ಮಾರುಕಟ್ಟೆಗೆ ಬಂದಿರುವ ಮೊದಲ ಸ್ಮಾರ್ಟ್‌ಫೋನ್‌ ಆಗಿದೆ. Google I/O ದಲ್ಲಿ ಪರಿಚಯಿಸಲ್ಪಟ್ಟ ಗೂಗಲ್‌ನ ಗೆಸ್ಚರ್‌ ನ್ಯಾವಿಗೇಷನ್‌ ಫೀಚರ್‌ನ್ನುಆಂಡ್ರಾಯ್ಡ್‌ಪೈ ಬೆಂಬಲಿತ Oxyzen OS ಒನ್‌ಪ್ಲಸ್‌ನಲ್ಲಿ ಇದೆ. ಇದು ಹೊಸ ಬ್ಯಾಟರಿ ಫೀಚರ್ ಹೊಂದಿದ್ದು, ಈ ಆಪ್‌ ಮೊಬೈಲ್ ಬಳಕೆಯನ್ನು ವಿಶ್ಲೇಷಿಸಿ, ಬಳಕೆದಾರನ ಬಳಕೆಗೆ ತಕ್ಕಂತೆ ಬ್ಯಾಟರಿ ಸಾಮರ್ಥ್ಯವನ್ನು ವಿನಿಯೋಗಿಸುತ್ತದೆ. ಆಂಡ್ರಾಯ್ಡ್ ಪೈ ಆಧಾರಿತ OxygenOS 9.0 ಒಎಸ್‌ನ್ನು ಹಿಂದಿನ ಆವೃತ್ತಿ ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್‌ಗೂ ರೋಲ್‌ ಔಟ್‌ ಮಾಡುತ್ತಿದೆ.

ಬುಲೆಟ್‌ ವೈರ್‌ಲೆಸ್‌ ಹೆಡ್‌ಫೋನ್‌ಗಳು

ಬುಲೆಟ್‌ ವೈರ್‌ಲೆಸ್‌ ಹೆಡ್‌ಫೋನ್‌ಗಳು

ಒನ್‌ಪ್ಲಸ್‌ 6T ಬಿಡುಗಡೆ ಮಾಡುವುದರ ಜತೆ ಕಂಪನಿ ಗ್ರಾಹಕರಿಗೆ ಹೆಚ್ಚುವರಿಯಾಗಿ ಏನನ್ನಾದರೂ ನೀಡಬೇಕೆಂಬ ಉದ್ದೇಶದಿಂದ ಸ್ಮಾರ್ಟ್‌ಫೋನಿನಲ್ಲಿ ಟೈಪ್-ಸಿ ಜ್ಯಾಕ್ ಜತೆ ಬರುವ ಹೊಸ ಬುಲೆಟ್‌ ಇಯರ್‌ಫೋನ್‌ಗಳನ್ನು ನೀಡಿದೆ. ಲಾಂಚ್‌ ಆದಾಗಿನಿಂದ ಸ್ಮಾರ್ಟ್‌ಫೋನ್‌ ಆಸಕ್ತರ ಬಾಯಲ್ಲಿ ಹೆಚ್ಚು ಹರಿದಾಡುತ್ತಿರದ್ದ ಮಾತು ಈಗ ನಿಜವಾಗಿದೆ. ಯಾವುದೇ ಅಡೆತಡೆಯಿಲ್ಲದ, ಎಫೆಕ್ಟ್‌ಗಳನ್ನು ಕಳೆದುಕೊಳ್ಳದೆ ಧ್ವನಿ ಮತ್ತು ಸಂಗೀತದ ಅನುಭವವನ್ನು ಪಡೆಯಬೇಕೆನ್ನುವವರಿಗೆ ಈ ಹೆಡ್‌ಫೋನ್ ಹತ್ತಿರವಾಗಬಹುದು.

Best Mobiles in India

English summary
During Amazon Prime Day sale, OnePlus is also offering its 2018 flagship phone, OnePlus 6T, at the lowest price. The 8GB RAM and 128GB storage model is listed at Rs 27,999. This is about Rs 14,000 down from the original price of Rs 41,999. The 8GB and 256GB model is available for Rs 31,999. to know more visit to kannad

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X