Home
ಸುದ್ದಿಜಾಲ

ಸ್ಮಾರ್ಟ್‌ಫೋನ್‌ ಖರೀದಿಸುವವರು ಸ್ವಲ್ಪ ದಿನ ಕಾಯಿರಿ! ಶೀಘ್ರದಲ್ಲೇ ಬಿಗ್‌ ಡಿಸ್ಕೌಂಟ್‌ ದೊರೆಯಲಿದೆ!

ಆನ್‌ಲೈನ್‌ ಶಾಪಿಂಗ್‌ ಪ್ರಿಯರಿಗಾಗಿ ಅಮೆಜಾನ್‌ ಪ್ರೈಮ್‌ ಡೇ ಸೇಲ್‌ ಮೂಲಕ ಮತ್ತೊಮ್ಮೆ ರಿಯಾಯಿತಿ ಮೇಳವನ್ನು ಹೊತ್ತು ತರಲಿದೆ. ಈ ಸೇಲ್‌ ಪ್ರೈಮ್‌ ಸದಸ್ಯರಿಗಾಗಿ ಇದೇ ಜುಲೈ 15 ರಂದು ಪ್ರಾರಂಭವಾಗಲಿದೆ. ಎರಡು ದಿನಗಳ ಕಾಲ ನಡೆಯುವ ಈ ಸೇಲ್‌ನಲ್ಲಿ ಭಾರಿ ರಿಯಾಯಿತಿಗಳು ಮತ್ತು ಬ್ಯಾಂಕ್‌ ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.

ಹೌದು, ಅಮೆಜಾನ್‌ ಪ್ರೈಮ್‌ ಡೇ ಸೇಲ್‌ ಸದ್ಯದಲ್ಲೇ ಪ್ರಾರಂಭವಾಗಲಿದೆ. ಇನ್ನು ಈ ಸೇಲ್‌ ಸಮಯದಲ್ಲಿ ಎಂದಿನಂತೆ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್‌ ದೊರೆಯುವುದು ಕನ್ಫರ್ಮ್‌ ಆಗಿದೆ. ಅದರಲ್ಲೂ 20 ಸಾವಿರ, 30ಸಾವಿರ ರೂ ಬೆಲೆಯ ಸ್ಮಾರ್ಟ್‌ಫೊನ್‌ಗಳ ಮೇಲೆ ವಿಶೇಷ ರಿಯಾಯಿತಿ ಲಭ್ಯವಾಗಲಿದೆ. ಹಾಗಾದ್ರೆ ಅಮೆಜಾನ್‌ ಸೇಲ್‌ ಸಮಯದಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಾಗುವ ಸ್ಮಾರ್ಟ್‌ಫೋನ್‌ಗಳ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೋನ್‌ ಖರೀದಿಸುವವರು ಸ್ವಲ್ಪ ದಿನ ಕಾಯಿರಿ! ಶೀಘ್ರದಲ್ಲೇ ಬಿಗ್‌ ಡಿಸ್ಕೌಂಟ್‌!

ರಿಯಲ್‌ಮಿ ನಾರ್ಜೊ N53
ರಿಯಲ್‌ಮಿ ನಾರ್ಜೊ N53 ಸ್ಮಾರ್ಟ್‌ಫೋನ್‌ ಈಗಾಗಲೇ 8,999ರೂ.ಬೆಲೆಗೆ ಲಭ್ಯವಿದೆ. ಆದರೆ ಸೇಲ್‌ ಸಮಯದಲ್ಲಿ ಈ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಇನ್ನಷ್ಟು ಕಡಿತವನ್ನು ನಿರೀಕ್ಷಿಸಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.74 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇದು ಆಕ್ಟಾ-ಕೋರ್ ಯುನಿಸೊಕ್ T612 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ AI ಸೆನ್ಸಾರ್‌ ಅನ್ನು ಹೊಂದಿದೆ.

ಒನ್‌ಪ್ಲಸ್‌ ನಾರ್ಡ್‌ CE 3ಲೈಟ್‌
ಒನ್‌ಪ್ಲಸ್‌ ನಾರ್ಡ್‌ CE 3ಲೈಟ್‌ ಸ್ಮಾರ್ಟ್‌ಫೋನ್‌ 8GB RAM ರೂಪಾಂತರವು ಪ್ರಸ್ತುತ 19,999ರೂ. ಬೆಲೆಯಲ್ಲಿ ಲಭ್ಯವಿದೆ. ಆದರೆ ಈ ಸ್ಮಾರ್ಟ್‌ಫೋನ್‌ ಬೆಲೆ ಸೇಲ್‌ ಸಮಯದಲ್ಲಿ ಇನ್ನಷ್ಟು ಕಡಿತವಾಗುವ ಸಂಭವವಿದೆ. ಇದರೊಂದಿಗೆ ಬ್ಯಾಂಕ್‌ ಆಫರ್‌ಗಳು ಹಾಗೂ ಎಕ್ಸ್‌ಚೇಂಜ್‌ ಆಫರ್‌ಗಳನ್ನು ಈ ಸ್ಮಾರ್ಟ್‌ಫೋನ್‌ ಮೇಲೆ ನಿರೀಕ್ಷಿಸಬಹುದಾಗಿದೆ. ಈ ಸ್ಮಾರ್ಟ್‌ಫೋನ್‌ 6.72 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಇದು ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ.

ರೆಡ್ಮಿ K50i 5G
ರೆಡ್ಮಿ K50i 5G ಸ್ಮಾರ್ಟ್‌ಫೋನ್‌ ಕೂಡ ಬೆಲೆ ಸುಮಾರು 21,000 ರಿಂದ 22,000 ರೂ.ಗೆ ಇಳಿಯಬಹುದು ಎಂದು ನಿರೀಕ್ಷಿಸಲಾಗಿದೆ. ಇನ್ನು ರೆಡ್ಮಿ K50i ಸ್ಮಾರ್ಟ್‌ಫೋನ್‌ 6.6 ಇಂಚಿನ ಐಪಿಎಸ್‌ ಎಲ್‌ಸಿಡಿ ಮಾದರಿಯ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಇದು ಮೀಡಿಯಾ ಟೆಕ್‌ ಡೈಮೆನ್ಸಿಟಿ 8100 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಓಎಸ್‌ ಬೆಂಬಲ ಪಡೆದಿದೆ.

ಫೋನ್‌ ಖರೀದಿಸುವವರು ಸ್ವಲ್ಪ ದಿನ ಕಾಯಿರಿ! ಶೀಘ್ರದಲ್ಲೇ ಬಿಗ್‌ ಡಿಸ್ಕೌಂಟ್‌!

ಐಕ್ಯೂ 11
ಐಕ್ಯೂ 11 ಸ್ಮಾರ್ಟ್‌ಫೋನ್‌ ಬೆಲೆ 49,000ರೂ.ಗಳಿಗೆ ಇಳಿಯುವ ನಿರೀಕ್ಷೆಯಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.78 ಇಂಚಿನ ಪಂಚ್-ಹೋಲ್ ಸ್ಯಾಮ್‌ಸಂಗ್‌ E6 ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2 SoC ಪ್ರೊಸೆಸರ್‌ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್‌ 13 ಆಧಾರಿತ ಫಂಟೌಚ್‌ OS 13 ಬಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಐಪೋನ್‌ 14
ಐಪೋನ್‌ 14 ಕೂಡ ಅಮೆಜಾನ್‌ ಪ್ರೈಮ್‌ ಡೇ ಸೇಲ್‌ನಲ್ಲಿ 60,000ರೂ.ಬೆಲೆಗೆ ಲಭ್ಯವಾಗುವ ನಿರೀಕ್ಷೆಯಿದೆ. ಇದರೊಂದಿಗೆ ಎಕ್ಸ್‌ಚೇಂಜ್‌ ಆಫರ್‌ನಲ್ಲಿ ಇನ್ನಷ್ಟು ಕಡಿಮೆಯಾಗುವ ಸಾದ್ಯತೆಯಿದೆ. ಇನ್ನು ಐಫೋನ್ 14 6.1 ಇಂಚಿನ FHD+ ಡಿಸ್‌ಪ್ಲೇ ಹೊಂದಿದ್ದು, 1200nits ಬ್ರೈಟ್ನಸ್‌ ಸಪೋರ್ಟ್‌ ಹೊಂದಿದೆ. ಇದು ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಇದರೊಂದಿಗೆ 12 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

Best Mobiles in India

English summary
Amazon Prime Day Sale start on July 15: Best smartphones with big discounts
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+