ಪ್ರೈಮ್ ಸದಸ್ಯತ್ವ: ಆಚ್ಚರಿ ಮಾಹಿತಿ ಬಿಚ್ಚಿಟ್ಟ ಅಮೆಜಾನ್..!

|

ಭಾರತೀಯ ಇ ಕಾರ್ಮಸ್ ಮಾರುಕಟ್ಟೆಯಲ್ಲಿ ತನ್ನದೇ ಪ್ರಭಾವವನ್ನು ಹೊಂದಿರುವ ಅಮೆಜಾನ್, ಮಾರುಕಟ್ಟೆಯಲ್ಲಿ ಎಲ್ಲ ಮಾದರಿಯ ವಸ್ತುಗಳನ್ನು ಭಾರತದ ಮೂಲೆ ಮೂಲೆಗೂ ಮಾರಾಟ ಮಾಡುತ್ತಿದೆ. ಇದೇ ಮಾದರಿಯ ಕೆಲವು ಗ್ಯಾಜೆಟ್ ಗಳನ್ನು, ಆಪ್‌ ಗಳನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದ್ದು, ಅದರಲ್ಲಿಯೂ ಅಮೆಜಾನ್ ಪ್ರೈಮ್ ಸೇವೆ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿದೆ.

ಪ್ರೈಮ್ ಸದಸ್ಯತ್ವ: ಆಚ್ಚರಿ ಮಾಹಿತಿ ಬಿಚ್ಚಿಟ್ಟ ಅಮೆಜಾನ್..!

ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಜಾಗತಿಕವಾಗಿ ಅಮೆಜಾನ್ ಜಾರಿಗೆ ತಂದಿದ್ದು, ಈ ಕಾರ್ಯಕ್ರಮದಲ್ಲಿ ಬಳಕೆದಾರರಿಗೆ ಉಚಿತ ಡೆಲಿವರಿ, ವೇಗದ ಡೆಲಿವರಿ, ಸೇಲ್‌ನಲ್ಲಿ ಮೊದಲ ಆಧ್ಯತೆ ಸೇರಿದಂತೆ ಹಲವು ಆಯ್ಕೆಗಳನ್ನು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ಬಳಕೆದಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಮೆಚ್ಚಿಗೆಯಾಗಿದ್ದು, ಅಧಿಕ ಮಂದಿ ಪ್ರೈಮ್ ಸದಸ್ಯತ್ವನ್ನು ಪಡೆದುಕೊಂಡಿದ್ದಾರೆ. ಜಾಗತಿಕವಾಗಿ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಂಡವರ ಸಂಖ್ಯೆ 100 ಮಿಲಿಯನ್ ತಲುಪಿದೆ ಎಂದು ಕಂಪನಿಯೂ ತಿಳಿಸಿದೆ.

ರೂ.999 ಕ್ಕೆ ಅಮೆಜಾನ್ ಪ್ರೈಮ್ ಸದಸ್ಯತ್ವ

ರೂ.999 ಕ್ಕೆ ಅಮೆಜಾನ್ ಪ್ರೈಮ್ ಸದಸ್ಯತ್ವ

ಭಾರತದಲ್ಲಿ ರೂ.999 ಕ್ಕೆ ಅಮೆಜಾನ್ ಪ್ರೈಮ್ ಸದಸ್ಯತ್ವವು ಲಭ್ಯವಿದ್ದು, ಇದರಲ್ಲಿ ಬಳಕೆದಾರರಿಗೆ ಹೆಚ್ಚಿನ ಲಾಭ ಮಾಡಿಕೊಡುತ್ತಿರುವುದು ಪ್ರೈಮ್ ವಿಡಿಯೋ ಮತ್ತು ಪ್ರೈಮ್ ಆಡಿಯೋ ಸೇವೆ. ಇದರಲ್ಲಿ ಅಮೆಜಾನ್ ಪ್ರೈಮ್ ಸದಸ್ಯರಿಗಾಗಿಯೇ ವಿಶೇಷ ವಿಡಿಯೋಗಳು ಮತ್ತು ಆಡಿಯೋಗಳು ದೊರೆಯಲಿದೆ. ಅಲ್ಲದೇ ಹೊಸ ಸಿನಿಮಾಗಳು ನೋಡಲು ಸಿಗಲಿದೆ. ಈ ಹಿನ್ನಲೆಯಲ್ಲಿ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ.

ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಹೇಗೆ..?
ಅದೇ ದಿನದಲ್ಲಿ ಡೆಲಿವರಿ

ಅದೇ ದಿನದಲ್ಲಿ ಡೆಲಿವರಿ

ಆರಂಭದಲ್ಲಿ ಪ್ರೈಮ್ ಸದಸ್ಯತ್ವವನ್ನು ರೂ.499ಕ್ಕೆ ನೀಡುತಿತ್ತು, ಆದರೆ ಸದ್ಯ ಈ ಬೆಲೆಯೂ ರೂ.999 ಆಗಿದೆ. ಈ ಸೇವೆಯನ್ನು ಪಡೆದುಕೊಂಡವರಿಗೆ ಮೈಟ್ರೋ ನಗರಗಳಲ್ಲಿದ್ದರೇ ಅದೇ ದಿನದಲ್ಲಿ ಡೆಲಿವರಿ ದೊರೆಯಲಿದ್ದು, ಅದನ್ನು ಬಿಟ್ಟರೇ ಒಂದು ದಿನ ಇಲ್ಲವೇ ಎರಡು ದಿನದಲ್ಲಿ ಡೆಲಿವರಿ ಉಚಿತವಾಗಿ ಲಭ್ಯವಿರಲಿದೆ.

100 ಮಿಲಿಯನ್ ಮಂದಿ ಸದಸ್ಯರು

100 ಮಿಲಿಯನ್ ಮಂದಿ ಸದಸ್ಯರು

ಈಗಾಗಲೇ ಸುಮಾರು 100 ಮಿಲಿಯನ್ ಮಂದಿ ಪೇಯ್ಡ್ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಪಡೆದಕೊಂಡಿದ್ದಾರೆ ಎಂಬ ಮಾಹಿತಿಯನ್ನು ಅಮೆಜಾನ್ ಬಿಟ್ಟುಕೊಟ್ಟಿದ್ದು, ಸುಮಾರು 5 ಬಿಲಿಯನ್ ವಸ್ತುಗಳನ್ನ ಪ್ರೈಮ್ ಸದಸ್ಯರಿಗೆ ತಲುಪಿಸಿದೆ ಎನ್ನಲಾಗಿದೆ. ಒಟ್ಟು ಒಂಭತ್ತು ದೇಶಗಳ ಸುಮಾರು 50 ನಗರಗಳಲ್ಲಿ ಈ ಸೇವೆಯೂ ದೊರೆಯುತ್ತಿದೆ ಎಂದು ಮೊದಲ ಬಾರಿಗೆ ತನ್ನ ಪ್ರೈಮ್ ಸದಸ್ಯತ್ವದ ಬಗ್ಗೆ ಮಾಹಿತಿಯನ್ನು ಬಿಟ್ಟುಕೊಟ್ಟಿದೆ.

Best Mobiles in India

English summary
Amazon Prime has 100 million subscribers, reveals CEO Jeff Bezos. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X