ಅಮೆಜಾನ್ ಪ್ರೈಮ್ ನಲ್ಲಿ ಚಲನಚಿತ್ರಗಳ ಪ್ರೊಫೈಲ್ ಬದಲಾಯಿಸುವುದು ಹೇಗೆ?
ಪ್ರಸ್ತುತ ದಿನಗಳಲ್ಲಿ ಭಾರತದಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಇದರಲ್ಲಿ ಅಮೆಜಾನ್ ಪ್ರೈಮ್ ವಿಡಿಯೋ ಪ್ಲಾಟ್‌ಪಾರ್ಮ್ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ತನ್ನ ಆಕರ್ಷಕ ಚಂದಾದಾರಿಕೆ ಪ್ಲ್ಯಾನ್‌ಗಳು, ವಿಶೇಷ ಫೀಚರ್ಸ್‌ಗಳಿಂದ ಬಳಕೆದಾರರ ಗಮನ ಸೆಳೆದಿದೆ. ಸದ್ಯ ಇದೀಗ ಅಮೆಜಾನ್ ಪ್ರೈಮ್ ವಿಡಿಯೋ ಹೊಸ ಫೀಚರ್ಸ್ ಅನ್ನು ಘೋಷಿಸಿದೆ. ಇದು ಬಳಕೆದಾರರಿಗೆ ಅಮೆಜಾನ್ ಮೂಲ ಚಲನಚಿತ್ರಗಳು ಮತ್ತು ಪ್ರದರ್ಶನಗಳಲ್ಲಿ ಜನಪ್ರಿಯ ಪಾತ್ರಗಳ ಪ್ರೊಫೈಲ್ ಚಿತ್ರಗಳನ್ನು ಸೆಟ್ ಮಾಡಲು ಅನುವು ಮಾಡಿಕೊಡುತ್ತದೆ.

ಹೌದು, ಅಮೆಜಾನ್ ಪ್ರೈಮ್ ವಿಡಿಯೋ ಬಳಕೆದಾರರಿಗೆ ಹೊಸ ಫೀಚರ್ಸ್ ಅನ್ನು ಪರಿಚಯಿಸಿದೆ. ಈ ಫೀಚರ್ಸ್ ಮೂಲಕ ಬಳಕೆದಾರರು ಮೂಲ ಚಲನಚಿತ್ರಗಳ ಪ್ರೊಫೈಲ್ ಚಿತ್ರಗಳನ್ನು ಸೆಟ್ ಮಾಡಬಹುದಾಗಿದೆ. ಇಲ್ಲಿಗೆ ಬೇಕಿದ್ದರೆ ನಿಮ್ಮದೇ ಆದ ಫೋಟೋವನ್ನು ಕೂಡ ಸೆಟ್ ಮಾಡಬಹುದಾಗಿದೆ. ಇನ್ನು ಅಮೆಜಾನ್ ಈ ವೈಶಿಷ್ಟ್ಯವನ್ನು ಎಲ್ಲರಿಗೂ ಪರಿಚಯಿಸಿದೆ. ಆದ್ದರಿಂದ ಆಸಕ್ತರು ಈಗ ಇದನ್ನು ಪ್ರಯತ್ನಿಸಬಹುದು. ಹಾಗಾದ್ರೆ ಅಮೆಜಾನ್ ಪ್ರೈಮ್‌ನಲ್ಲಿ ಮೂಲಚಿತ್ರಗಳ ಪ್ರೊಫೈಲ್‌ಪಿಕ್ ಬದಲಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮೆಜಾನ್ ಪ್ರೈಮ್ ವಿಡಿಯೋ ಬೆಂಬಲಿಸುವ ಎಲ್ಲಾ ಡಿವೈಸ್‌ಗಳಲ್ಲಿ ಬಳಕೆದಾರರು ಈ ಫೀಚರ್ಸ್ ಅನ್ನು ಕಾಣಬಹುದಾಗಿದೆ. ಅಲ್ಲದೆ ಬ್ಲಾಗ್ ಪೋಸ್ಟ್‌ನಲ್ಲಿ, ಪಾತ್ರಗಳು ಲಭ್ಯವಿರುವ ಚಲನಚಿತ್ರಗಳು ಮತ್ತು ಟಿವಿ ಸರಣಿಗಳ ಹೆಸರನ್ನು ಕಂಪನಿಯು ಬಹಿರಂಗಪಡಿಸಿದೆ. ಇನ್ನು ಐಒಎಸ್, ಆಂಡ್ರಾಯ್ಡ್ ಮತ್ತು ಫೈರ್ ಟ್ಯಾಬ್ಲೆಟ್‌ಗಳಲ್ಲಿ ಪ್ರೊಫೈಲ್ ಫೋಟೋವನ್ನು ಸೆಟ್ ಮಾಡುವುದಕ್ಕೆ ಕೆಳಗಿನ ಹಂತಗಳನ್ನು ಅನುಸರಿಸಿರಿ.

ಅಮೆಜಾನ್ ಪ್ರೈಮ್ ನಲ್ಲಿ ಚಲನಚಿತ್ರಗಳ ಪ್ರೊಫೈಲ್ ಬದಲಾಯಿಸುವುದು ಹೇಗೆ?
ಹಂತ 1: ನಿಮ್ಮ ಫೋನ್‌ನಲ್ಲಿ ಅಮೆಜಾನ್ ಪ್ರೈಮ್ ಅಪ್ಲಿಕೇಶನ್ ತೆರೆಯಿರಿ ಮತ್ತು ಪ್ರೈಮ್ ವಿಡಿಯೋ ಆಪ್ ಸ್ಕ್ರೀನ್‌ನ ಕೆಳಭಾಗದಲ್ಲಿರುವ ಮೈ ಸ್ಟಫ್ ಅನ್ನು ಟ್ಯಾಪ್ ಮಾಡಿ.
ಹಂತ 2: ಡ್ರಾಪ್-ಡೌನ್ ಮೆನು ತೆರೆಯಲು ಪ್ರೊಫೈಲ್ ಹೆಸರಿನ ಮೇಲೆ ಕ್ಲಿಕ್ ಮಾಡಿ, ನಂತರ ಎಡಿಟ್ ಆಯ್ಕೆ ಮಾಡಿ. ನೀವು ಯಾರ ಚಿತ್ರವನ್ನು ಬದಲಾಯಿಸಲು ಬಯಸುತ್ತೀರೋ ಆ ಪ್ರೊಫೈಲ್ ಅನ್ನು ಆಯ್ಕೆ ಮಾಡಿ.
ಹಂತ 3: ಎಡಿಟ್ ಪ್ರೊಫೈಲ್ ಸ್ಕ್ರೀನ್‌ನಲ್ಲಿ, ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ ಮತ್ತು ಲಭ್ಯವಿರುವ ಪಟ್ಟಿಯಿಂದ ಆಯ್ಕೆ ಮಾಡಿ.
ಹಂತ 4: ಹೊಸ ಪ್ರೊಫೈಲ್ ರಚಿಸುವಾಗ, ಪ್ರೊಫೈಲ್ ಇಮೇಜ್ ಮೇಲೆ ಕ್ಲಿಕ್ ಮಾಡಿ ಮತ್ತು ಲಭ್ಯವಿರುವ ಪಟ್ಟಿಯಿಂದ ಆಯ್ಕೆ ಮಾಡಿ.

ಅಮೆಜಾನ್ ಪ್ರೈಮ್ ವಿಡಿಯೋ ವೆಬ್‌ಸೈಟ್‌ನಲ್ಲಿ ಪ್ರೊಫೈಲ್ ಫೋಟೋವನ್ನು ಬದಲಾಯಿಸುವುದು ಹೇಗೆ?
* ಪ್ರೈಮ್ ವಿಡಿಯೋ ಮುಖಪುಟಕ್ಕೆ ಭೇಟಿ ನೀಡಿ, ಮತ್ತು ಪ್ರೊಫೈಲ್ ಹೆಸರಿನ ಮೇಲೆ ಕ್ಲಿಕ್ ಮಾಡಿ, ಅದನ್ನು ಯಾರು ನೋಡುತ್ತಿದ್ದಾರೆ ಎಂದು ನೀವು ಮುಂದೆ ನೋಡುತ್ತೀರಿ?
* ನಂತರ, ಪ್ರೊಫೈಲ್‌ಗಳನ್ನು ನಿರ್ವಹಿಸಿ ಮೇಲೆ ಕ್ಲಿಕ್ ಮಾಡಿ, ತದನಂತರ ನೀವು ಸಂಪಾದಿಸಲು ಬಯಸುವ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ. ನಂತರ ನೀವು ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ ಮತ್ತು ಲಭ್ಯವಿರುವ ಪಟ್ಟಿಯಿಂದ ಆಯ್ಕೆ ಮಾಡಬಹುದು.


Click it and Unblock the Notifications








