ಈಗ ಕೇವಲ 129 ರೂಪಾಯಿಗಳಗೆ ಲಭ್ಯವಿದೆ ಅಮೆಜಾನ್ ಪ್ರೈಮ್ ಸದಸ್ಯತ್ವ!!
ಭಾರತದ ಪ್ರಖ್ಯಾತ ಇ ಕಾಮರ್ಸ್ ಜಾಲತಾಣ ಸಂಸ್ಥೆ ಅಮೆಜಾನ್ ತನ್ನ ಪ್ರೈಮ್ ಸದಸ್ಯತ್ವವನ್ನು ಭಾರತೀಯರಿಗಾಗಿ ಬದಲಾಯಿಸಿದೆ. ಅಮೆಜಾನ್ ಸಂಸ್ಥೆಯ ಜನಪ್ರಿಯ ಪ್ರೈಮ್ ಸದಸ್ಯತ್ವಕ್ಕೆ ವರ್ಷಕ್ಕೆ 999 ರೂ.ಪಾವತಿಸುವುದು ದುಬಾರಿಯಾಗಿದ್ದ ಕಾರಣದಿಂದ ಅಮೆಜಾನ್ ತನ್ನ ಪ್ರೈಮ್ ಸದಸ್ಯತ್ವವನ್ನು ತಿಂಗಳಿನ ಲೆಕ್ಕದಲ್ಲಿ ನೀಡಲು ಮಂದಾಗಿದೆ.
ವರ್ಷಕ್ಕೆ 499 ರೂ.ಗಳ ಪ್ರೈಮ್ ಸದಸ್ಯತ್ವದ ಆಯ್ಕೆಯನ್ನು 999 ರೂಪಾಯಿಗೆ ಏರಿಸಿದ ನಂತರ ಅಮೆಜಾನ್ ಸಂಸ್ಥೆಯ ಜನಪ್ರಿಯ ಪ್ರೈಮ್ ಸದಸ್ಯತ್ವ ಬಳಕೆದಾರರ ಸಂಖ್ಯೆ ಇಳಿಮುಖವಾಗಿತ್ತು. ಹಾಗಾಗಿ, ವಾರ್ಷಿಕವಾಗಿ ಇದ್ದ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಭಾರತದಲ್ಲಿ ಮಾತ್ರ ತಿಂಗಳಿನ ಲೆಕ್ಕದಲ್ಲಿ ಬದಲಾಯಿಸಿ ಕೇವಲ 129 ರೂಪಾಯಿ ನೀಡಿ ಗಮನ ಸೆಳೆದಿದೆ.

ಅಮೆಜಾನ್ ತನ್ನ ಲಾಭಕ್ಕಾಗಿ ಈ ರೀತಿಯ ಆಫರ್ ನೀಡಿದ್ದರೂ ಸಹ ಈ ಆಫರ್ ಗ್ರಾಹಕರಿಗೂ ಭಾರಿ ಪ್ರಯೋಜನವನ್ನು ನೀಡಲಿದೆ. ಹಾಗಾದರೆ, ಏನಿದು ಅಮೆಜಾಜ್ ಪ್ರೈಮ್? ಪ್ರೈಮ್ ಮೆಂಬರ್‌ಶಿಪ್ ಪಡೆದುಕೊಂಡರೆ ಏನೆಲ್ಲಾ ಲಾಭ? ಪ್ರೈಮ್ ಮೆಂಬರ್‌ಶಿಪ್ ಪಡೆಯವುದು ಹೇಗೆ? ಎಂಬ ಎಲ್ಲಾ ಪ್ರಶ್ನೆಗಳಿಗೂ ಕೆಳಗಿನ ಸ್ಲೈಡರ್‌ಗಳಲ್ಲಿ ಉತ್ತರವನ್ನು ತಿಳಿಯಿರಿ.!

ಏನಿದು ಅಮೆಜಾಜ್ ಪ್ರೈಮ್?
ಅಮೆಜಾಜ್ ಪ್ರೈಮ್ ಮೆಂಬರ್‌ಶಿಪ್ ಎಂದರೆ ಒಂದು ನಂಬಿಕಸ್ಥವ ವ್ಯವಹಾರ ಎನ್ನಬಹುದು. ಅಮೆಜಾನ್ ಪ್ರೈಮ್ ಮೆಂಬರ್‌ಶಿಪ್ ಪಡೆಯಲು ವರ್ಷಕ್ಕೆ 999 ರೂಪಾಯಿ ಹಣವನ್ನು ಪಾವತಿಸಬೇಕು. ಇದರಿಂದ ಗ್ರಾಹಕ ಹಲವು ಪ್ರಯೋಜನಗಳನ್ನು ಪಡೆಯುತ್ತಾನೆ. ಇನ್ನು ಮೊದಲ ಒಂದು ತಿಂಗಳು ಉಚಿತ ಪ್ರೈಮ್ ಮೆಂಬರ್‌ಶಿಪ್ ಪಡೆಯಬಹುದಾಗಿದೆ.!!

ಪ್ರೈಮ್ ಮೆಂಬರ್‌ಶಿಪ್ ಪಡೆದರೆ ಏನು ಲಾಭ?
ನೀವು ಆನ್‌ಲೈನ್ ಶಾಪಿಂಗ್ ಪ್ರಿಯರಾಗಿದ್ದರೆ ನಿಮಗೆ ಪ್ರೈಮ್ ಮೆಂಬರ್‌ಶಿಪ್‌ನಿಂದ ಬಹಳಷ್ಟು ಲಾಭವಿದೆ.ಪ್ಲಾಶ್‌ಸೇಲ್‌ನಲ್ಲಿ ಮೊದಲ ಗ್ರಾಹಕರು ನೀವಾಗುತ್ತೀರಾ.ಇನ್ನು ಎಕ್ಸ್‌ಕ್ಲೂಸಿವ್ ಡಿಸ್ಕೌಂಟ್ಸ್ , ಫ್ರೀ ಶಿಪ್ಪಿಂಗ್, ಒನ್‌ಡೇ ಡೆಲಿವರಿ ಮತ್ತು ಅಮೆಜಾನ್ ವಿಡಿಯೋಸ್‌ಗೆ ಸದಸ್ಯತ್ವ ಸೇರಿದಂತೆ ಹಲವು ಲಾಭಗಳು ನಿಮಗೆ ದೊರೆಯುತ್ತವೆ.

ಪ್ರೈಮ್ ಮೆಂಬರ್‌ಶಿಪ್ ಪಡೆಯವುದು ಹೇಗೆ?
ಅಮೆಜಾನ್ ಆಪ್ ಡೌನ್‌ಲೋಡ್ ಮಾಡಿ ನಿಮ್ಮ ಅಕೌಂಟ್ ಮೂಲಕ ಲಾಗಿನ್ ಆಗಿ. ನಂತರ ನಿಮ್ಮ ಎಡಭಾಗದಲ್ಲಿ 'try menu' ಎಂದು ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿ ಪ್ರೈಮ್ ಮೆಂಬರ್‌ಶಿಪ್‌ಗೆ ಸಾಏರಿಕೊಳ್ಳಿ. ಇದು ನಿಮಗೆ ಒಂದು ತಿಂಗಳು ಉಚಿತವಾಗಿ ಮೊದಲು ಸಿಗುತ್ತಿತ್ತು. ಆದರೆ, ಉಚಿತ ಆಫರ್ ಈಗ ಲಭ್ಯವಿಲ್ಲ.

ಪ್ರೈಮ್ ಮೆಂಬರ್‌ಶಿಪ್ ಆದರೆ ಒಳ್ಳೆಯದೆ?
ಈ ಪ್ರಶ್ನೆಗೆ ಉತ್ತರ ನೀವು ಆನ್‌ಲೈನ್ ಶಾಪಿಂಗ್ ಪ್ರಿಯರಾಗಿದ್ದೀರಾ ಎಂಬುದರ ಮೆಲೆ ಡಿಸೈಡ್ ಆಗುತ್ತದೆ.! ನೀವು ಹೆಚ್ಚು ಆನ್‌ಲೈನ್ ಶಾಪಿಂಗ್ ಮಾಡದೇ ಇದ್ದರೆ ಈ ಅಮೆಜಾನ್ ಪ್ರೈಮ್ ಮೆಂಬರ್‌ಶಿಪ್ ಉತ್ತಮವಲ್ಲ ಎನ್ನಬಹುದಾದೂ,ಅಮೆಜಾನ್ ಪ್ರೈಮ್‌ನಲ್ಲಿ ನೀವು ಅತ್ಯುತ್ತಮ ವೀಡಿಯೋಗಳನ್ನು ವೀಕ್ಷಿಸಬಹದಾಗಿರುವುದರಿಂದ ಈ ಆಫರ್ ಒಳ್ಳೆಯದೇ.!

129 ರೂ.ಗೆ ಅಮೆಜಾನ್ ಪ್ರೈಮ್!
ಮೊದಲೇ ಹೇಳಿದಂತೆ ಭಾರತದಲ್ಲಿ ಅಮೆಜಾನ್ ಸಂಸ್ಥೆಯ ಜನಪ್ರಿಯ ಪ್ರೈಮ್ ಸದಸ್ಯತ್ವ ಬಳಕೆದಾರರ ಸಂಖ್ಯೆ ಇಳಿಮುಖವಾಗಿರುವುದರಿಂದ 129 ರೂ.ಗೆ ಅಮೆಜಾನ್ ಪ್ರೈಮ್ ಅನ್ನು ಅಮೆಜಾನ್ ಕಂಪೆನಿ ನೀಡಿದೆ. ಪ್ರತಿ ತಿಂಗಳು 129 ರೂಪಾಯಿಗಳಂತೆ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಪಡೆದರೆ ಒಂದು ವರ್ಷಕ್ಕೆ 1548 ರೂ.ಗಳನ್ನು ಗ್ರಾಹಕರು ಪಾವತಿಸಿದಂತಾಗುತ್ತದೆ.


Click it and Unblock the Notifications