Amazon Prime ಯೂತ್‌ ಆಫರ್‌ನಲ್ಲಿ ಬಳಕೆದಾರರಿಗೆ ಭರ್ಜರಿ ರಿಯಾಯಿತಿ!

|

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಕೂಡ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇವುಗಳಲ್ಲಿ ಅಮೆಜಾನ್‌ ಪ್ರೈಮ್‌ ಮುಂಚೂಣಿಯಲ್ಲಿದೆ. ಈಗಾಗಲೇ ಅಮೆಜಾನ್‌ ಪ್ರೈಮ್‌ ಹಲವು ವಿಶೇಷತೆಗಳನ್ನು ಪರಿಚಯಿಸುವ ಮೂಲಕ ಬಳಕೆದಾರರ ನೆಚ್ಚಿನ ಒಟಿಟಿ ಪ್ಲಾಟ್‌ಫಾರ್ಮ್‌ ಆಗಿ ಗುರುತಿಸಿಕೊಂಡಿದೆ. ಸದ್ಯ ಇದೀಗ ವೀಡಿಯೋ ಸ್ಟ್ರೀಮಿಂಗ್‌ ದೈತ್ಯ ಅಮೆಜಾನ್ ಪ್ರೈಮ್ 18-24 ವರ್ಷದೊಳಗಿನ ಬಳಕೆದಾರರಿಗಾಗಿ ಯೂತ್‌ ಆಫರ್‌ ಅನ್ನು ಪರಿಚಯಿಸಿದೆ.

ಅಮೆಜಾನ್‌ ಪ್ರೈಮ್‌

ಹೌದು, ವೀಡಿಯೊ ಸ್ಟ್ರೀಮಿಂಗ್ ದೈತ್ಯ ಅಮೆಜಾನ್‌ ಪ್ರೈಮ್‌ ತನ್ನ ಬಳಕೆದಾರರಿಗೆ ಯೂತ್‌ ಆಫರ್‌ ಅನ್ನು ಬಿಡುಗಡೆ ಮಾಡಿದೆ. ಈ ಆಫರ್‌ ಅರ್ಹ ಬಳಕೆದಾರರಿಗೆ ಮೂರು ತಿಂಗಳು ಮತ್ತು ಒಂದು ವರ್ಷದ ಚಂದಾದಾರಿಕೆಗಳಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡುತ್ತಿದೆ. ಈ ಪ್ರಸ್ತಾಪವನ್ನು ಆಂಡ್ರಾಯ್ಡ್ ಅಪ್ಲಿಕೇಶನ್ ಬಳಕೆದಾರರು ಮತ್ತು ಇತರ ಓಎಸ್ ಗಾಗಿ ಮೊಬೈಲ್ ಬ್ರೌಸರ್ ಆವೃತ್ತಿಯಿಂದ ಮಾತ್ರ ಪಡೆಯಬಹುದು ಎಂದು ಅಮೆಜಾನ್ ಹೇಳಿದೆ. ಹಾಗಾದ್ರೆ ಈ ಆಫರ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಮುಂದೆ ಓದಿರಿ.

ಅಮೆಜಾನ್‌

ಅಮೆಜಾನ್‌ ಪ್ರೈಮ್‌ನಲ್ಲಿ ಪರಿಚಯಿಸಲಾಗರುವ ಹೊಸ ಯೂತ್‌ ಆಫರ್‌ ಅರ್ಹ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದೆ. ಇನ್ನು ಐಒಎಸ್ ಮೊಬೈಲ್ ಅಪ್ಲಿಕೇಶನ್ ಮೂಲಕ ಈ ಆಫರ್ ಅನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಆದರೆ ಮೊಬೈಲ್‌ ಬ್ರೌಸರ್‌ ಮೂಲಕ ಅಮೆಜಾನ್ ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡುವ ಮೂಲಕ ಐಫೋನ್ ಬಳಕೆದಾರರು ಪುನಃ ಪಡೆದುಕೊಳ್ಳಬಹುದು. ಇನ್ನು ಈ ಆಫರ್‌ ಪಡೆದುಕೊಳ್ಳಲು ಅರ್ಹ ಬಳಕೆದಾರರು ವರ್ಷಪೂರ್ತಿ ಅಥವಾ 3 ತಿಂಗಳ ಚಂದಾದಾರಿಕೆಯ ಪೂರ್ತಿ ಹಣ ಪಾವತಿಸಬೇಕಾಗುತ್ತದೆ. ಅಂದರೆ ಕ್ರಮವಾಗಿ 999 ಮತ್ತು 329 ರೂ. ಅಮೆಜಾನ್ ನಂತರ ಅರ್ಹ ಬಳಕೆದಾರರಿಗೆ ಅವರು ಆಯ್ಕೆ ಮಾಡಿದ ಯೋಜನೆಗೆ ಅನುಗುಣವಾಗಿ 500 ಅಥವಾ 165 ರೂ.ಗಳ ಕ್ಯಾಶ್‌ಬ್ಯಾಕ್‌ ಅನ್ನು ನೀಡುತ್ತದೆ.

ಬಳಕೆದಾರರು ಅಮೆಜಾನ್‌ ಯೂತ್‌ ಆಫರ್‌ ಅನ್ನು ಪಡೆದುಕೊಳ್ಳುವುದು ಹೇಗೆ?

ಬಳಕೆದಾರರು ಅಮೆಜಾನ್‌ ಯೂತ್‌ ಆಫರ್‌ ಅನ್ನು ಪಡೆದುಕೊಳ್ಳುವುದು ಹೇಗೆ?

ಹಂತ:1 ಅಮೆಜಾನ್ ಪ್ರೈಮ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು ವಿವರಗಳೊಂದಿಗೆ ಸೈನ್ ಅಪ್ ಮಾಡಿ.

ಹಂತ:2 ನಿಮ್ಮ ವಯಸ್ಸನ್ನು ಪರಿಶೀಲಿಸಲು ಐಡಿ ಪ್ರೂಫ್ ನಮೂದಿಸಿ( ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ)

ಹಂತ:3 ನಂತರ ಎಲೆಕ್ಟ್ರಾನಿಕ್ ವಿಧಾನದಿಂದ ನಿಮ್ಮ ಆಯ್ಕೆಯ ಪ್ಲ್ಯಾನ್‌ಗೆ ಹಣ ಪಾವತಿಸಿ (ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಅಮೆಜಾನ್ ಪೇ ಬ್ಯಾಲೆನ್ಸ್)

ಹಂತ:4 ನಿಮ್ಮ ವಯಸ್ಸು ಮತ್ತು ಪ್ಲ್ಯಾನ್‌ ಅನ್ನು ಪರಿಶೀಲಿಸಿದ ನಂತರ, 500ರೂ ಅಥವಾ 165ರೂ. ಗಳನ್ನು 48 ಗಂಟೆಗಳ ಒಳಗೆ ಗ್ರಾಹಕರ ಅಮೆಜಾನ್ ಪೇ ಬ್ಯಾಲೆನ್ಸ್ ಖಾತೆಗೆ ಜಮಾ ಮಾಡಲಾಗುತ್ತದೆ.

ಅಮೆಜಾನ್

ಇನ್ನು ಅಮೆಜಾನ್ ಪ್ರೈಮ್ ಇತ್ತೀಚಿಗೆ ಆರ್‌ಬಿಐನ ಹೊಸ ಮಾರ್ಗಸೂಚಿಗಳನ್ನು ಅನುಸರಿಸುವ ಕಾರಣದಿಂದಾಗಿ ಒಂದು ತಿಂಗಳ ಚಂದಾದಾರಿಕೆಯನ್ನು ನೀಡುವುದನ್ನು ನಿಲ್ಲಿಸಿದೆ. ಪ್ರಸ್ತುತ, ಹೊಸ ಬಳಕೆದಾರರು ಕೇವಲ ಎರಡು ಆಯ್ಕೆಯ ಯೋಜನೆಗಳನ್ನು ಹೊಂದಿದೆ. ಇದರಲ್ಲಿ 329 ರೂ ವೆಚ್ಚದ ಮೂರು ತಿಂಗಳ ಯೋಜನೆ ಮತ್ತು 999 ರೂಗಳ ವಾರ್ಷಿಕ ಯೋಜನೆಗಳು ಸೇರಿವೆ. ಇದಲ್ಲದೆ ಏರ್‌ಟೆಲ್ ಬಳಕೆದಾರರು 349 ರೂ.ಗಳ ಪ್ರಿಪೇಯ್ಡ್ ಯೋಜನೆಯೊಂದಿಗೆ ಒಂದು ತಿಂಗಳು ಉಚಿತ ಪ್ರೈಮ್‌ಗೆ ಪ್ರವೇಶ ಪಡೆಯಬಹುದಾಗಿದೆ.

Best Mobiles in India

English summary
Amazon Prime is giving 50 per cent discount to new users aged between 18 and 24.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X