ನೆಟ್‌ಫ್ಲಿಕ್ಸ್‌ಗೆ ಸೆಡ್ಡು ಹೊಡೆಯುವ ಪ್ಲಾನ್‌ ಪರಿಚಯಿಸಿದ ಅಮೆಜಾನ್‌ ಪ್ರೈಮ್‌!

|

ಅಮೆಜಾನ್‌ ಪ್ರೈಮ್‌ ವೀಡಿಯೋ ಭಾರತದಲ್ಲಿ ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಿವಿಧ ಮಾದರಿಯ ಶೋ, ವೆಬ್‌ ಸಿರೀಸ್‌, ಕಾರ್ಯಕ್ರಮಗಳು, ಚಲನಚಿತ್ರಗಳ ಸರಣಿಯ ಮೂಲಕ ಗಮನಸೆಳೆದಿದೆ. ಸದ್ಯ ಇದೀಗ ತನ್ನ ಮೊಬೈಲ್‌ ಆವೃತ್ತಿಯಲ್ಲಿ ಹೊಸದಾಗಿ ವಾರ್ಷಿಕ ಚಂದಾದಾರಿಕೆ ನೀಡುವ ಪ್ಲಾನ್‌ ಅನ್ನು ಪರಿಚಯಿಸಿದೆ. ಇದರ ಮೂಲಕ ಅಮೆಜಾನ್‌ ಪ್ರೈಮ್‌ ವೀಡಿಯೊ ಮೊಬೈಲ್‌ ಆವೃತ್ತಿಯಲ್ಲಿ ವಾರ್ಷಿಕ ಪ್ಲಾನ್‌ ಬಯಸೋರಿಗೆ ಗುಡ್‌ ನ್ಯೂಸ್‌ ನೀಡಿದೆ.

ಅಮೆಜಾನ್

ಹೌದು, ಅಮೆಜಾನ್ ಪ್ರೈಮ್‌ ವೀಡಿಯೋ ಭಾರತದಲ್ಲಿ ಮೊಬೈಲ್ ಆವೃತ್ತಿಯ ವಾರ್ಷಿಕ ಪ್ಲಾನ್‌ ಪರಿಚಯಿಸಿದೆ. ಈ ಪ್ಲಾನ್‌ ಅಮೆಜಾನ್‌ ಪ್ರೈಮ್‌ನ ಪ್ರತಿಸ್ಫರ್ಧಿ ನೆಟ್‌ಫ್ಲಿಕ್ಸ್‌ನ ಮೊಬೈಲ್ ಪ್ಲಾನ್‌ನೊಂದಿಗೆ ಪೈಪೋಟಿ ನಡೆಸಲಿದೆ. ಈ ಪ್ಲಾನ್‌ನಲ್ಲಿ SD ಗುಣಮಟ್ಟದ ಚಲನಚಿತ್ರಗಳು ಮತ್ತು ಶೋಗಳನ್ನು ವೀಕ್ಷಿಸುವುದಕ್ಕೆ ಸಾಧ್ಯವಾಗಲಿದೆ. ಇದಲ್ಲದೆ ಲೈವ್‌ ಕ್ರಿಕೆಟ್‌ ವೀಕ್ಷಣೆಯನ್ನು ಕೂಡ ಮಾಡುವುದಕ್ಕೆ ಅವಕಾಶ ಸಿಗಲಿದೆ ಎನ್ನಲಾಗಿದೆ. ಹಾಗಾದ್ರೆ ಅಮೆಜಾನ್‌ ಪ್ರೈಮ್‌ ಪರಿಚಯಿಸಿರುವ ಹೊಸ ಪ್ಲಾನ್‌ನ ವಿಶೇಷತೆ ಏನಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾರ್ಷಿಕ ಪ್ಲಾನ್‌ನ ಪ್ರಯೋಜನಗಳು

ವಾರ್ಷಿಕ ಪ್ಲಾನ್‌ನ ಪ್ರಯೋಜನಗಳು

ಅಮೆಜಾನ್‌ ಪ್ರೈಮ್‌ ವೀಡಿಯೋ ಮೊಬೈಲ್‌ ಆವೃತ್ತಿಯ ವಾರ್ಷಿಕ ಪ್ಲಾನ್‌ 599ರೂ. ಬೆಲೆಯಲ್ಲಿ ಬರಲಿದೆ. ಈ ಪ್ಲಾನ್‌ ಒಂದು ಮೊಬೈಲ್‌ ಡಿವೈಸ್‌ನಲ್ಲಿ ಮಾತ್ರ ಕಾರ್ಯನಿರ್ವಹಿಸಲಿದೆ. ಇದರಲ್ಲಿ ನೀವು SD-ಗುಣಮಟ್ಟದ ಚಲನಚಿತ್ರಗಳು ಮತ್ತು ಶೋಗಳು, ಅಮೆಜಾನ್‌ ಒರಿಜಿನಲ್ಸ್‌, ಲೈವ್‌ ಕ್ರಿಕೆಟ್ ಸೇರಿದಂತೆ ಹಲವು ಕಾರ್ಯಕ್ರಮಗಳ ವೀಕ್ಷಣೆಗೆ ಪ್ರವೇಶವನ್ನು ಒದಗಿಸಲಿದೆ. ಇನ್ನು ಈ ಪ್ಲಾನ್‌ನಲ್ಲಿ ಎಕ್ಸ್-ರೇ ಮತ್ತು ಆಫ್‌ಲೈನ್ ವೀಕ್ಷಣೆಯಂತಹ ಫಿಚರ್ಸ್‌ಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ.

ಅಮೆಜಾನ್‌

ಆದರೆ ಅಮೆಜಾನ್‌ ಪ್ರೈಮ್‌ ವೀಡಿಯೋ ಮೊಬೈಲ್‌ ಆವೃತ್ತಿಯ ವಾರ್ಷಿಕ ಪ್ಲಾನ್‌ನಲ್ಲಿ ಅಮೆಜಾನ್ ಮ್ಯೂಸಿಕ್‌, ಅನಿಯಮಿತ ಉಚಿತ ಮತ್ತು ವೇಗದ ವಿತರಣೆ, ಪ್ರೈಮ್ ಡೀಲ್‌ಗಳಿಗೆ ಆರಂಭಿಕ ಪ್ರವೇಶ, ಜಾಹೀರಾತು-ಮುಕ್ತ ಸಂಗೀತ, ಅಮೆಜಾನ್ ಪ್ರೈಮ್ ಗೇಮ್‌ಗಳಿಗೆ ಪ್ರವೇಶವನ್ನು ಪಡೆಯಲು ಸಾಧ್ಯವಿಲ್ಲ. ಅಲ್ಲದೆ ಅಮೆಜಾನ್‌ ಪೇ ಐಸಿಐಸಿಐಯಲ್ಲಿ 5% ರಿವಾರ್ಡ್ ಪಾಯಿಂಟ್‌ಗಳು ಪಡೆಯವ ಅವಕಾಶ ನೀಡುವ ಪ್ರಯೋಜನಗಳನ್ನು ಈ ಪ್ಲಾನ್‌ ಒಳಗೊಂಡಿಲ್ಲ ಅನ್ನೊದು ಕೂಡ ಗಮನಿಸಬೇಕಾದ ವಿಚಾರವಾಗಿದೆ.

ನೆಟ್‌ಫ್ಲಿಕ್ಸ್‌ ಮೊಬೈಲ್‌ ಓನ್ಲಿ ಪ್ಲಾನ್‌ ಹೇಗಿದೆ?

ನೆಟ್‌ಫ್ಲಿಕ್ಸ್‌ ಮೊಬೈಲ್‌ ಓನ್ಲಿ ಪ್ಲಾನ್‌ ಹೇಗಿದೆ?

ಇನ್ನು ಅಮೆಜಾನ್‌ ಮೊಬೈಲ್‌ ಪ್ಲಾನ್‌ಗೆ ಪೈಪೋಟಿ ನೀಡುವ ನೆಟ್‌ಫ್ಲಿಕ್ಸ್‌ನ ಮೊಬೈಲ್-ಓನ್ಲಿ ಪ್ಲಾನ್‌ ತಿಂಗಳಿಗೆ 149ರೂ. ಬೆಲೆಯಲ್ಲಿ ಪ್ರಾರಂಭವಾಗಲಿದೆ. ಈ ಪ್ಲಾನ್‌ನಲ್ಲಿ ಒಂದು ಡಿವೈಸ್‌ಗೆ ಮಾತ್ರ ಪ್ರವೇಶ ಸಿಗಲಿದೆ. ಇದರಲ್ಲಿ ನೀವು SD ಗುಣಮಟ್ಟದಲ್ಲಿ ಚಲನಚಿತ್ರಗಳು ಮತ್ತು ಪ್ರದರ್ಶನಗಳನ್ನು ವೀಕ್ಷಿಸಲು ಅನುಮತಿಸುತ್ತದೆ. ಅಲ್ಲದೆ ನಿಮಗೆ ಇಷ್ಟವಾದ ವಿಷಯವನ್ನು ಡೌನ್‌ಲೋಡ್ ಮಾಡುವ ಆಯ್ಕೆಯೂ ಇದೆ.

ಅಮೆಜಾನ್

ಸದ್ಯ ಅಮೆಜಾನ್ ಪ್ರೈಮ್ ಮೊಬೈಲ್ ಆವೃತ್ತಿಯ ಹೊಸ ಪ್ಲಾನ್‌ ಇದೀಗ ಭಾರತದಲ್ಲಿ ಲಭ್ಯವಿದೆ. ಈ ಪ್ಲಾನ್‌ಗೆ ನೀವು ಸಬ್‌ಸ್ಕ್ರೈಬ್‌ ಆಗಲು ಬಯಸಿದರೆ ಅಮೆಜಾನ್‌ ಪ್ರೈಮ್‌ ವೀಡಿಯೋ ಆಂಡ್ರಾಯ್ಡ್‌ ಅಪ್ಲಿಕೇಶನ್ ಅಥವಾ ಪ್ರೈಮ್ ವೀಡಿಯೊದ ವೆಬ್‌ಸೈಟ್‌ನಲ್ಲಿ ಹೋಗಿ ಸಬ್‌ಸ್ಕ್ರೈಬ್‌ ಆಗಬಹುದಾಗಿದೆ. ಒಂದು ವೇಳೆ ನೀವು ಪೂರ್ಣ ಪ್ರಮಾಣದ ಪ್ರೈಮ್ ವಿಡಿಯೋ ಪ್ಲಾನ್‌ ಬಯಸಿದರೆ, ವರ್ಷಕ್ಕೆ 1,499ರೂ. ಅಥವಾ ತಿಂಗಳಿಗೆ 179ರೂ. ಪ್ಲಾನ್‌ ಪಡೆದುಕೊಳ್ಳವುದಕ್ಕೆ ಅವಕಾಶವಿದೆ.

ಜಿಯೋ

ಇದಲ್ಲದೆ ಜಿಯೋ, ಭಾರ್ತಿ ಏರ್‌ಟೆಲ್‌ ಹಾಗೂ ವಿ ಟೆಲಿಕಾಂ ಸಂಸ್ಥೆಗಳು ತಮ್ಮ ಕೆಲವು ಪೋಸ್ಟ್‌ಪೇಯ್ಡ್‌ ಯೋಜನೆಗಳಲ್ಲಿ ಅಮೆಜಾನ್‌ ಪ್ರೈಮ್‌ ವಿಡಿಯೋ (Amazon Prime) ಓಟಿಟಿ ಚಂದಾದಾರಿಕೆ ಪ್ರಯೋಜನ ನೀಡಿವೆ. ಇದರಲ್ಲಿ ಜಿಯೋ 399ರೂ. ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಗ್ರಾಹಕರಿಗೆ 75 GB ಡೇಟಾದೊಂದಿಗೆ ಅನಿಯಮಿತ ವಾಯಿಸ್ ಕರೆ ಮಾಡುವ ಸೌಲಭ್ಯ ದೊರೆಯುತ್ತದೆ. ಇದರ ಜೊತೆಗೆ ಈ ಪೋಸ್ಟ್‌ಪೇಯ್ಡ್ ಪ್ಲ್ಯಾನಿನಲ್ಲಿ 200GB ಡೇಟಾ ರೋಲ್ ಓವರ್ ಆಯ್ಕೆಯೂ ದೊರೆಯಲಿದೆ ಮತ್ತು ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯವಾಗಲಿದೆ.

ಪೋಸ್ಟ್‌ಪೇಯ್ಡ್

ಏರ್‌ಟೆಲ್‌ 499ರೂ. ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಗ್ರಾಹಕರಿಗೆ 75 GB ಡೇಟಾದೊಂದಿಗೆ ಅನಿಯಮಿತ ವಾಯಿಸ್ ಕರೆ ಮಾಡುವ ಸೌಲಭ್ಯ ದೊರೆಯುತ್ತದೆ. ಇದರ ಜೊತೆಗೆ ಈ ಪೋಸ್ಟ್‌ಪೇಯ್ಡ್ ಪ್ಲ್ಯಾನಿನಲ್ಲಿ ಹೆಚ್ಚುವರಿಯಾಗಿ ಒಂದು ವರ್ಷದ ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರಿಕೆ ಸಿಗಲಿದೆ.

Best Mobiles in India

English summary
Amazon Prime Video has introduced a new Mobile Edition annual plan in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X