ಭಾರತದಲ್ಲಿ ಮೂವಿ ಬಾಡಿಗೆ ಸೇವೆ ಲಾಂಚ್ ಮಾಡಿದ ಅಮೆಜಾನ್ ಪ್ರೈಮ್!
ಭಾರತದಲ್ಲಿ ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಅಮೆಜಾನ್ ಪ್ರೈಮ್ ವೀಡಿಯೋ ಕೂಡ ಸೇರಿದೆ. ಅಮೆಜಾನ್ ಪ್ರೈಮ್ ವೀಡಿಯೋ ತನ್ನ ಬಳಕೆದಾರರಿಗೆ ವಿಶೇಷ ಚಂದಾದಾರಿಕೆ ಪ್ಲಾನ್‌ಗಳನ್ನು ಹೊಂದಿದೆ. ಚಂದಾದಾರಿಕೆಯನ್ನು ಹೊಂದಿರುವ ಬಳಕೆದಾರರಿಗೆ ವಿಶೇಷ ಫೀಚರ್ಸ್‌ಗಳನ್ನು ಕೂಡ ಪರಿಚಯಿಸಿದೆ. ಸದ್ಯ ಇದೀಗ ಅಮೆಜಾನ್ ಪ್ರೈಮ್ ಭಾರತದಲ್ಲಿ ಹೊಸದಾಗಿ ಮೂವಿ ರೆಂಟಲ್ ಸೇವೆಯನ್ನು ಲಾಂಚ್ ಮಾಡಿದೆ. ಅಂದರೆ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ನೀವು ಸಿನಿಮಾವನ್ನು ಬಾಡಿಗೆಗೆ ತೆಗೆದುಕೊಂಡು ವೀಕ್ಷಿಸಬಹುದಾಗಿದೆ.

ಹೌದು, ಅಮೆಜಾನ್ ಪ್ರೈಮ್ ವಿಡಿಯೋ ಭಾರತದಲ್ಲಿ ಚಲನಚಿತ್ರ ಬಾಡಿಗೆ ಸೇವೆಯನ್ನು ಪ್ರಾರಂಭಿಸಿದೆ. ಇದು ಬ್ಯಾಟ್‌ಮ್ಯಾನ್, ಸ್ಕ್ರೀಮ್, ಮೂನ್‌ಫಾಲ್, ದಿ ಮ್ಯಾಟ್ರಿಕ್ಸ್ ರಿಸರ್ರೆಕ್ಷನ್ಸ್ ಮತ್ತು ಸ್ಪೈಡರ್ ಮ್ಯಾನ್: ನೋ ವೇ ಹೋಮ್ ಮೂಲಕ ಪ್ರಾರಂಭವಾಗುತ್ತದೆ. 99ರೂ.ಗಳಿಂದ 499ರೂ. ಪ್ಲಾನ್ ಸದಸ್ಯರು ಹೈ-ಡೆಫಿನಿಷನ್ (HD) ಅಥವಾ ಅಲ್ಟ್ರಾ HD 4K ನಲ್ಲಿ ಈ ಚಲನಚಿತ್ರಗಳನ್ನು ಬಾಡಿಗೆಗೆ ಪಡೆಯಬಹುದು. ಇನ್ನುಳಿದಂತೆ ಅಮೆಜಾನ್ ಪ್ರೈಮ್ ವೀಡಿಯೋ ಮೂವೀಸ್ ಬಾಡಿಗೆ ಸೇವೆ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಮೆಜಾನ್ ಪ್ರೈಮ್ ವಿಡಿಯೋ ಭಾರತದಲ್ಲಿ ಮೂವೀಸ್ ಬಾಡಿಗೆ ಸೇವೆಯನ್ನು ಪರಿಚಯಿಸಿದೆ. ಅಲ್ಲದೆ ಮುಂದಿನ ಎರಡು ವರ್ಷಗಳಲ್ಲಿ 40ಕ್ಕೂ ಹೆಚ್ಚು ಮೂಲ ಸರಣಿಗಳು ಮತ್ತು ಚಲನಚಿತ್ರಗಳನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದೆ. ಸದ್ಯ ಭಾರತದಲ್ಲಿ ಅಮೆಜಾನ್ ತನ್ನ ಪ್ರತಿಸ್ಪರ್ಧಿ ನೆಟ್‌ಫ್ಲಿಕ್ಸ್ ಮತ್ತು ಡಿಸ್ನಿಪ್ಲಸ್ ಹಾಟ್‌ಸ್ಟಾರ್ ಜೊತೆಗೆ ಪೈಪೋಟಿ ನಡೆಸುತ್ತಿದೆ. ಇದಕ್ಕಾಗಿ ಅಮೆಜಾನ್ ತನ್ನ ಗ್ರಾಹಕರ ವ್ಯಾಪ್ತಿಯನ್ನು ಮತ್ತು ಆಯ್ಕೆಯನ್ನು ವಿಸ್ತರಿಸುತ್ತದೆ ಎಂದು ಅಮೆಜಾನ್ ಹೇಳಿದೆ.

ಇದಲ್ಲದೆ ಅಮೆಜಾನ್ ಕಂಪನಿಯು ಮೂರು ಭಾರತೀಯ ಭಾಷೆಗಳಲ್ಲಿ ಹನ್ನೆರಡು ಮೂಲ ಸರಣಿಗಳ ಯೋಜನೆಗಳನ್ನು ಅನಾವರಣಗೊಳಿಸಿದೆ. ಅಮೆಜಾನ್ ಇಂಡಿಯಾದಲ್ಲಿ ಲೋಕಲ್ ವಿಷಯವನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಉತ್ಪಾದಿಸಲು ಹೆಚ್ಚು ಹೂಡಿಕೆ ಮಾಡಿದೆ. ಜೊತೆಗೆ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಡಿಜಿಟಲ್ ಪ್ರಸಾರ ಹಕ್ಕುಗಳಿಗಾಗಿ ರಿಲಯನ್ಸ್ ಇಂಡಸ್ಟ್ರೀಸ್, ಸೋನಿ ಗ್ರೂಪ್ ಮತ್ತು ಡಿಸ್ನಿ (ಪ್ರಸ್ತುತ ಹಕ್ಕುಗಳನ್ನು ಹೊಂದಿದೆ) ಜೊತೆಗೆ ಹೆವಿವೇಯ್ಟ್‌ಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ.

ಇನ್ನು ಅಮೆಜಾನ್ ಪ್ರೈಮ್ ವೀಡಿಯೋ ಸೇವೆಯಲ್ಲಿ ಉತ್ತಮ ಅನುಭವ ಪಡೆಯಬೇಕಾದರೆ ನೀವು ನಿಮ್ಮದೇ ಆದ ವಾಚ್ ಲಿಸ್ಟ್ ಅನ್ನು ನಿರ್ಮಿಸಬೇಕಾಗುತ್ತದೆ. ನೀವು ನೋಡಬೇಕು ಎಂದು ನೀವು ಭಾವಿಸುವ ಚಲನಚಿತ್ರ ಅಥವಾ ಸರಣಿಯನ್ನು ನೀವು ನೋಡಿದಾಗ ಅಥವಾ ಕೇಳಿದಾಗ, ಅಮೆಜಾನ್ ಪ್ರೈಮ್‌ನಲ್ಲಿ ಸರ್ಚ್ ಮಾಡಿ. ನಿಮಗೆ ಸರ್ಚ್‌ನಲ್ಲಿ ಕಂಡುಬಂದರೆ ಅದನ್ನು ನಿಮ್ಮ ವಾಚ್ ಲಿಸ್ಟ್‌ಗೆ ಸೇರಿಸಿ. ನಿಮ್ಮ ವಾಚ್‌ಲಿಸ್ಟ್ ಅನ್ನು ನೀವು ಈ ರೀತಿ ನಿರ್ಮಿಸುತ್ತಿದ್ದರೆ, ನೀವು ಏನನ್ನಾದರೂ ವೀಕ್ಷಿಸಲು ಬಯಸಿದಾಗ ನೀವು ಮಾಡಬೇಕಾಗಿರುವುದು ಅದನ್ನು ತೆರೆಯುವುದು ಸುಲಭವಾಗಲಿದೆ.

ಅಮೆಜಾನ್ ಪ್ರೈಮ್ ವೀಡಿಯೋ X-Ray ಎಂಬ ಫೀಚರ್ಸ್ ಅನ್ನು ಹೊಂದಿದೆ. ನೀವು ವೀಡಿಯೊವನ್ನು ವೀಕ್ಷಿಸುತ್ತಿರುವಾಗ ಅದನ್ನು ವಿರಾಮಗೊಳಿಸಿದಾಗ, UI "X-Ray" ಓವರ್‌ಲೇ ಅನ್ನು ಪ್ರಸ್ತುತಪಡಿಸುತ್ತದೆ. ಅದು ನೀವು ಏನನ್ನು ವೀಕ್ಷಿಸುತ್ತಿರುವಿರಿ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಿಮಗೆ ಅನುಮತಿಸುತ್ತದೆ. ಈ ಫೀಚರ್ಸ್ ಮೂಲಕ ಪಾತ್ರಗಳನ್ನು ಗುರುತಿಸಲು, ಪ್ರದರ್ಶನ ಅಥವಾ ಚಲನಚಿತ್ರದ ಕುರಿತು ಟ್ರಿವಿಯಾವನ್ನು ಕಲಿಯಲು, ಬೋನಸ್ ವಿಷಯವನ್ನು ತಿಳಿಯಲು ಸಾಧ್ಯವಾಗಲಿದೆ. ಯಾವುದೇ ನಿರ್ದಿಷ್ಟ ಸಮಯದಲ್ಲಿ ಮ್ಯೂಸಿಕ್ ಪ್ಲೇ ಮಾಡಲಾಗುತ್ತಿದೆ ಅನ್ನೊದನ್ನ ಗುರುತಿಸಲು ಬಳಸಬಹುದು.

ಅಮೆಜಾನ್-ಮಾಲೀಕತ್ವದ ಆನ್‌ಲೈನ್ ಚಲನಚಿತ್ರ ಡೇಟಾಬೇಸ್ IMDb ಆಗಿದೆ. ಚಲನಚಿತ್ರಗಳನ್ನು ಹುಡುಕಲು, ವಿಮರ್ಶೆಗಳನ್ನು ಹುಡುಕಲು ಮತ್ತು ಅವುಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನೀವು IMDbಯ ಡೇಟಾಬೇಸ್ ಅನ್ನು ಸಹ ನಿಯಂತ್ರಿಸಬಹುದು. IMDb ನಲ್ಲಿರುವ ಚಲನಚಿತ್ರವು ಪ್ರೈಮ್ ವೀಡಿಯೊದಲ್ಲಿ ಲಭ್ಯವಿದ್ದರೆ. ಚಲನಚಿತ್ರದ IMDb ಪುಟದಲ್ಲಿ ಲಿಂಕ್ ಇರುತ್ತದೆ. ಇದಲ್ಲದೆ IMDb ಅಮೆಜಾನ್ ಪ್ರೈಮ್‌ಗಿಂತ ಉತ್ತಮ ಹುಡುಕಾಟ ಕಾರ್ಯವನ್ನು ಹೊಂದಿದೆ. ನಿಮಗೆ ಚಲನಚಿತ್ರ ಹೆಸರು ನೆನಪಿಲ್ಲದಿದ್ದರೆ, ನಿರ್ದೇಶಕರ ಹೆಸರಿನ ಮೂಲಕ ಕೂಡ ಚಲನಚಿತ್ರವನ್ನು ಸರ್ಚ್ ಮಾಡುವುದಕ್ಕೆ ಸಾಧ್ಯವಾಗಲಿದೆ.


Click it and Unblock the Notifications








