ಸ್ಮಾರ್ಟ್ ಬಲ್ಬ್ ಗಳಿಗೆ ಅಮೆಜಾನ್‌ನಲ್ಲಿ 76% ಡಿಸ್ಕೌಂಟ್ ಆಫರ್!
ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್‌ನಲ್ಲಿ ಆನ್‌ಲೈನ್ ಶಾಪಿಂಗ್ ಪ್ರಿಯರಿಗೆ ಭರಪೂರ ಆಫರ್‌ಗಳನ್ನು ನೀಡಲಾಗ್ತಿದೆ. ನೀವು ಖರೀದಿಸುವ ಪ್ರತಿಯೊಂದು ವಸ್ತುವಿನ ಮೇಲೂ ಕೂಡ ನೀವು ಆಕರ್ಷಕ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕೆ ಸ್ಮಾರ್ಟ್ ಡಿವೈಸ್‌ಗಳು ಕೂಡ ಹೊರತಾಗಿಲ್ಲ. ಅದರಲ್ಲೂ ಸ್ಮಾರ್ಟ್ ಹೋಮ್ ಡಿವೈಸ್‌ಗಳಿಗೆ ಬಿಗ್ ಆಫರ್ ಲಭ್ಯವಿದೆ.
ಹೌದು, ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ ಇಂದು ರಾತ್ರಿ ಕೊನೆಗೊಳ್ಳಲಿದೆ. ಕೊನೆಯ ದಿನವಾದ ಇಂದು ಅಮೆಜಾನ್‌ನಲ್ಲಿ ನೀವು ನಿರೀಕ್ಷೆಗೂ ಮೀರಿದ ಆಫರ್‌ಗಳನ್ನು ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಸ್ಮಾರ್ಟ್ ಹೋಮ್ ಡಿವೈಸ್‌ಗಳನ್ನು ಖರೀದಿಸಬೇಕೆಂದುಕೊಂಡಿದ್ದರೆ ಇದು ನಿಮಗೆ ಬೆಸ್ಟ್ ಟೈಂ ಆಗಿದೆ. ಹಾಗಾದ್ರೆ ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್‌ನಲ್ಲಿ ಡಿಸ್ಕೌಂಟ್ ಪಡೆದುಕೊಂಡಿರುವ ಸ್ಮಾರ್ಟ್ ಡಿವೈಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮೆಜಾನ್ ಎಕೋ ಡಾಟ್ 4 ನೇ ತಲೆಮಾರು
ಮನೆಗೊಂದು ಸ್ಮಾರ್ಟ್ ಸ್ಪೀಕರ್ ಖರೀದಿಸಬೇಕೆಂದು ಕೊಂಡವರಿಗೆ ಅಮೆಜಾನ್ ಎಕೋ ಡಾಟ್ 4 ನೇ ತಲೆಮಾರು ಸೂಕ್ತ ಆಯ್ಕೆಯಾಗಿದೆ. ಇದು ಅಮೆಜಾನ್‌ನಲ್ಲಿ 23% ರಿಯಾಯಿತಿಯನ್ನು ಪಡೆದುಕೊಂಡಿದ್ದು, ನಿಮಗೆ ಕೇವಲ 3,449 ರೂ.ಗಳಲ್ಲಿ ಲಭ್ಯವಿದೆ. ಇನ್ನು ಈ ಸ್ಮಾರ್ಟ್ ಸ್ಪೀಕರ್ ಅಮೆಜಾನ್ ಅಲೆಕ್ಸಾ ಚಾಲಿತವಾಗಿದ್ದು, ಸ್ಮಾರ್ಟ್ ಅಸಿಸ್ಟೆಂಟ್ ಆಗಿಯೂ ಕಾರ್ಯನಿರ್ವಹಿಸಲಿದೆ.
ವಿಪ್ರೊ 10A ವೈಫೈ ಸ್ಮಾರ್ಟ್ ಪ್ಲಗ್
ಹೊಸದೊಂದು ಸ್ಮಾರ್ಟ್ ಪ್ಲಗ್ ಖರೀದಿಸಬೇಕೆಂದುಕೊಂಡವರಿಗೂ ಅಮೆಜಾನ್‌ನಲ್ಲಿ ಭರ್ಜರಿ ಡಿಸ್ಕೌಂಟ್ ಲಭ್ಯವಿದೆ. ಅದರಂತೆ ವಿಪ್ರೊ 10A ವೈಫೈ ಸ್ಮಾರ್ಟ್ ಪ್ಲಗ್ 55% ರಿಯಾಯಿತಿಯನ್ನು ಪಡೆದುಕೊಂಡಿದೆ. ಇದರಿಂದ ಇದನ್ನು ನೀವು ಕೇವಲ 999 ರೂಗಳಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್ ಪ್ಲಗ್ ವಿಪ್ರೋ ಸ್ಮಾರ್ಟ್ ಹೋಮ್ ಅಪ್ಲಿಕೇಶನ್ ಅನ್ನು ಬೆಂಬಲಿಸಲಿದ್ದು, ಅಪ್ಲಿಕೇಶನ್ ಮೂಲಕ ಉಪಕರಣಗಳನ್ನು ನಿಯಂತ್ರಿಸಲು ಇದನ್ನು ಬಳಸಬಹುದು.
ವಿಪ್ರೊ 9W B22D WiFi LED ಸ್ಮಾರ್ಟ್ ಬಲ್ಬ್
ಅಮೆಜಾನ್ ವಿಪ್ರೊ 9W B22D WiFi LED ಸ್ಮಾರ್ಟ್ ಬಲ್ಬ್ ಮೇಲೆ 76% ರಿಯಾಯಿತಿಯನ್ನು ನೀಡುತ್ತಿದೆ. ಇದನ್ನು ನೀವು ಕೇವಲ 499 ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಬಲ್ಬ್ ವೈಫೈ ಆಕ್ಟಿವೇಶನ್ ಅನ್ನು ಹೊಂದಿದೆ. ಇದರಲ್ಲಿ ಅಲಾರಂ ಗಡಿಯಾರ ಫೀಚರ್ಸ್ ಅನ್ನು ಸಹ ಹೊಂದಿಸಬಹುದಾಗಿದೆ. ಹಾಗೆಯೇ ಈ ಸ್ಮಾರ್ಟ್ ಬಲ್ಬ್ ಗೂಗಲ್ ಅಸಿಸ್ಟೆಂಟ್ ಮತ್ತು ಅಲೆಕ್ಸಾಗೆ ಬೆಂಬಲದೊಂದಿಗೆ ಬರುತ್ತದೆ.

ಫಿಲಿಪ್ಸ್ ವಿಜ್ ಸ್ಮಾರ್ಟ್ ಬಲ್ಬ್
ಫಿಲಿಪ್ಸ್ ವಿಜ್ ಸ್ಮಾರ್ಟ್ ಬಲ್ಬ್ ಅಮೆಜಾನ್ ಸೇಲ್‌ನಲ್ಲಿ 75% ರಿಯಾಯಿತಿಯನ್ನು ಪಡೆದುಕೊಂಡಿದೆ. ಇದರಿಂದ ಈ ಸ್ಮಾರ್ಟ್‌ಬಲ್ಬ್ ಅನ್ನು ನೀವು ಕೇವಲ 499ರೂ.ಬೆಲೆಯಲ್ಲಿ ಖರೀದಿಸಬಹುದಾಗಿದೆ. ಈ ಸ್ಮಾರ್ಟ್‌ಬಲ್ಬ್ ಆಂಡ್ರಾಯ್ಡ್ ಮತ್ತು ಐಒಎಸ್ ಡಿವೈಸ್‌ಗಳನ್ನು ಬೆಂಬಲಿಸಲಿದೆ. ಇದು ಆಪಲ್ ಹೋಮ್‌ಕಿಟ್ ಅನ್ನು ಬೆಂಬಲಿಸುವ ಸ್ಮಾರ್ಟ್ ಬಲ್ಬ್‌ಗಳಲ್ಲಿ ಒಂದಾಗಿದೆ. ಜೊತೆಗೆ ಬಲ್ಬ್ ಶೆಡ್ಯೂಲಿಂಗ್ ಮೋಡ್, ಕಲರ್ಸ್ ಮತ್ತು ಬ್ರೈಟ್‌ನೆಸ್ ಕಂಟ್ರೋಲ್‌ಗಳನ್ನು ಸಹ ನೀಡಲಿದೆ.
ವಿಪ್ರೊ ನೆಕ್ಸ್ಟ್ 20W ಸ್ಮಾರ್ಟ್ LED ಬ್ಯಾಟನ್
ವಿಪ್ರೊ ಕಂಪೆನಿಯ ಈ ಹೊಸ ಸ್ಮಾರ್ಟ್ ಎಲ್‌ಇಡಿ ಬ್ಯಾಟನ್ ಲೈಟ್ ವಿಶಿಷ್ಟ ಫೀಚರ್ಸ್‌ಗಳಿಗೆ ಹೆಸರುವಾಸಿಯಾಗಿದೆ. ಈ ಸ್ಮಾರ್ಟ್ ಬಲ್ಬ್ ಕೂಡ ಇದೀಗ ಅಮೆಜಾನ್‌ನಲ್ಲಿ 66% ರಿಯಾಯಿತಿಯನ್ನು ಪಡೆದುಕೊಂಡಿದೆ. ಆದರಿಂದ ಈ ಬಲ್ಬ್ ಅನ್ನು ನೀವು ಕೇವಲ 847ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್ LED ಬ್ಯಾಟನ್ ಲೈಟ್ Wi-Fi ಕನೆಕ್ಟಿವಿಟಿಯೊಂದಿಗೆ ಬರಲಿದೆ. ಅಲ್ಲದೆ ಇದು ವಿಪ್ರೊ ನೆಕ್ಸ್ಟ್ ಸ್ಮಾರ್ಟ್ ಅಪ್ಲಿಕೇಶನ್ ಅನ್ನು ಬೆಂಬಲಿಸಲಿದ್ದು, ವಾಯ್ಸ್ ಕಮಾಂಡ್‌ಗಳ ಮೂಲಕ ಸ್ಮಾರ್ಟ್‌ಲೈಟ್ ಅನ್ನು ಕಂಟ್ರೋಲ್ ಮಾಡಬಹುದಾಗಿದೆ.


Click it and Unblock the Notifications








