Home
ಸುದ್ದಿಜಾಲ

Amazon Smartphone Upgrade Days sale: ಸ್ಮಾರ್ಟ್‌ಫೋನ್‌ ಖರೀದಿಗೆ ಇದುವೇ ಸೂಕ್ತ ಸಮಯ!

ಜನಪ್ರಿಯ ಇ-ಕಾಮರ್ಸ್‌ ದೈತ್ಯ ಅಮೆಜಾನ್ ಇಂಡಿಯಾ ಸ್ಮಾರ್ಟ್‌ಫೋನ್‌ಗಳಿಗಾಗಿ ಹೊಸ ಸೇಲ್‌ ಪ್ರಾರಂಭಿಸಿದೆ. ಸ್ಮಾರ್ಟ್‌ಫೋನ್‌ ಪ್ರಿಯರಿಗಾಗಿ ಅಮೆಜಾನ್‌ ಸ್ಮಾರ್ಟ್‌ಫೋನ್ ಅಪ್‌ಗ್ರೇಡ್ ಡೇಸ್ ಸೇಲ್‌ ನಡೆಸುತ್ತಿದೆ. ಇನ್ನು ಈ ಸೇಲ್‌ ಜುಲೈ 5 ರಿಂದ ಪ್ರಾರಂಭವಾಗಿದ್ದು, ಜುಲೈ 8 ರವರೆಗೆ ಮುಂದುವರಿಯಲಿದೆ. ಇನ್ನು ಈ ಸೇಲ್‌ನಲ್ಲಿ ಉತ್ತಮ ಫೋನ್ ಖರೀದಿಸಲು ಕಾಯುತ್ತಿರುವ ಗ್ರಾಹಕರು ಭರ್ಜರಿ ರಿಯಾಯಿತಿಯನ್ನು ಪಡದುಕೊಳ್ಳಬಹುದಾಗಿದೆ. ಈ ಸೇಲ್‌ ಜನಪ್ರಿಯ ಬ್ರಾಂಡ್‌ಗಳಾದ ಶಿಯೋಮಿ, ಸ್ಯಾಮ್‌ಸಂಗ್, ಆಪಲ್, ವಿವೊ, ಮತ್ತು ಒಪ್ಪೊ ಮೇಲೆ 40% ವರೆಗೆ ರಿಯಾಯಿತಿಯನ್ನು ಹೊಂದಿದೆ.

ಸ್ಮಾರ್ಟ್‌ಫೋನ್‌

ಹೌದು, ಅಮೆಜಾನ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸ್ಮಾರ್ಟ್‌ಫೋನ್‌ ಅಪ್‌ಗ್ರೇಡ್‌ ಡೇಸ್‌ ಸೇಲ್‌ ನಡೆಸುತ್ತಿದೆ. ಇನ್ನು ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಭಾರಿ ರಿಯಾಇತಿ ದೊರರೆಯಲಿದೆ. ಅದರಲ್ಲೂ ಅಮೆಜಾನ್ ನೋ ಕಾಸ್ಟ್‌ ಇಎಂಐ ಆಯ್ಕೆಗಳು, ವಿನಿಮಯ ವ್ಯವಹಾರಗಳು ಮತ್ತು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಹೆಚ್ಚುವರಿ 10% ತ್ವರಿತ ರಿಯಾಯಿತಿಯನ್ನು ನೀಡುತ್ತಿದೆ. ಹಾಗಾದ್ರೆ ಅಮೆಜಾನ್‌ ಅಪ್‌ಗ್ರೇಡ್‌ ಡೇಸ್‌ ಸೇಲ್‌ನಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿ ನೀಡಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳು

ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳು

ಅಮೆಜಾನ್‌ ಸ್ಮಾರ್ಟ್‌ಫೋನ್‌ ಅಪ್‌ಗ್ರೇಡ್‌ ಡೇಸ್‌ ಸೇಲ್‌ನಲ್ಲಿ ಒನ್‌ಪ್ಲಸ್ ಬ್ರಾಂಡ್‌ ಸ್ಮಾರ್ಟ್‌ಫೋನ್‌ಗಳ ಮೇಲೆ ಅದ್ಭುತ ರಿಯಾಯಿತಿ ಮತ್ತು ಇಎಂಐ ಆಯ್ಕೆಗಳು ಲಭ್ಯವಿದೆ. ಹೊಸದಾಗಿ ಬಿಡುಗಡೆಯಾದ ಒನ್‌ಪ್ಲಸ್ ನಾರ್ಡ್ CE 5G ಸ್ಮಾರ್ಟ್‌ಫೋನ್‌ 22,999 ರೂ.ಗಳಿಂದ ಪ್ರಾರಂಭವಾಗಲಿದೆ. ಇನ್ನು ಒನ್‌ಪ್ಲಸ್ 9 5G ಸ್ಮಾರ್ಟ್‌ಫೋನ್‌ 39,999ರೂ.ಗಳಿಂದ ಪ್ರಾರಂಭವಾಗುವ ಸರಣಿಯು ಅತ್ಯಾಕರ್ಷಕ ಬ್ಯಾಂಕ್ ಆಫರ್‌ಗಳೊಂದಿಗೆ ಸೇಲ್‌ ಆಗಲಿದೆ. ಇದಲ್ಲದೆ ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳು ಅತ್ಯಾಕರ್ಷಕ ಬ್ಯಾಂಕ್ ಕೊಡುಗೆಗಳೊಂದಿಗೆ 4,000 ರೂ.ಗಳವರೆಗೆ ಹೆಚ್ಚು ಕೈಗೆಟುಕುವಂತಾಗಲಿವೆ. ಜೊತೆಗೆ 9ತಿಂಗಳ ನೋ ಕಾಸ್ಟ್ ಇಎಂಐ ಅನ್ನು ಸಹ ದೊರೆಯಲಿದೆ.

ಶಿಯೋಮಿ ಸ್ಮಾರ್ಟ್‌ಫೋನ್‌ಗಳು

ಶಿಯೋಮಿ ಸ್ಮಾರ್ಟ್‌ಫೋನ್‌ಗಳು

ರೆಡ್‌ಮಿ ನೋಟ್ 10ಎಸ್, ರೆಡ್‌ಮಿ ನೋಟ್ 10ಎಸ್, ಮಿ 11 ಸರಣಿ ಸೇರಿದಂತೆ ಶಿಯೋಮಿ ಸ್ಮಾರ್ಟ್‌ಫೋನ್‌ಗಳು ಅತ್ಯಾಕರ್ಷಕ ವಿನಿಮಯ ಕೊಡುಗೆಗಳು ಮತ್ತು ರಿಯಾಯಿತಿಗಳೊಂದಿಗೆ ಲಭ್ಯವಿರುತ್ತವೆ. ಮಿ 11ಎಕ್ಸ್ ಆಕರ್ಷಕ ವಿನಿಮಯ ಕೊಡುಗೆಗಳೊಂದಿಗೆ 29,999 ರೂ.ಗಳ ಕಡಿಮೆ ಬೆಲೆಯಲ್ಲಿ ಲಭ್ಯವಿರುತ್ತದೆ. ಜೊತೆಗೆ ನೋ ಕಾಸ್ಟ್‌ ಇಎಂಐ ಕೊಡುಗೆಗಳೊಂದಿಗೆ ಲಭ್ಯವಿರುತ್ತದೆ. ಒಪ್ಪಂದಗಳನ್ನು ಇನ್ನಷ್ಟು ಸಿಹಿಯಾಗಿಸಲು ರೆಡ್‌ಮಿ ಸರಣಿಯು ಅತ್ಯಾಕರ್ಷಕ ಕೊಡುಗೆಗಳು ಮತ್ತು ಹೆಚ್ಚುವರಿ ಬ್ಯಾಂಕ್ ಕೊಡುಗೆಗಳನ್ನು ಸಹ ಹೊಂದಿರುತ್ತದೆ.

ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು

ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು

ಸ್ಯಾಮ್‌ಸಂಗ್ ಎಂ 32 ಅನ್ನು ಇತ್ತೀಚೆಗೆ ಬಿಡುಗಡೆ ಮಾಡುವುದರ ಜೊತೆಗೆ, ಗ್ರಾಹಕರು ಸಂಪೂರ್ಣ ಸ್ಯಾಮ್‌ಸಂಗ್ ಎಂ ಸರಣಿ ಶ್ರೇಣಿಯಲ್ಲಿ ಹಲವು ಕೊಡುಗೆಗಳನ್ನು ಸಹ ಆನಂದಿಸಬಹುದು. ಇದರಲ್ಲಿ ಉನ್ನತ ದರ್ಜೆಯ ಸ್ಮಾರ್ಟ್‌ಫೋನ್‌ಗಳು, ಅತ್ಯಾಕರ್ಷಕ ಬ್ಯಾಂಕ್ ಕೊಡುಗೆಗಳು ಮತ್ತು 9 ತಿಂಗಳವರೆಗೆ ಅಪ್‌ಗ್ರೇಡ್ ಸೇಲ್‌ನಲ್ಲಿ ನೋ ಕಾಸ್ಟ್‌ ಇಎಂಐ ಆಯ್ಕೆಯನ್ನು ಸಹ ಹೊಂದಿದೆ.

ಆಪಲ್ ಐಫೋನ್ 12

ಆಪಲ್ ಐಫೋನ್ 12

ಅಮೆಜಾನ್‌ ಅಪ್‌ಗ್ರೇಡ್ ಸೇಲ್‌ನಲ್ಲಿ 70,900 ರೂ ಬೆಲೆಯ ಆಪಲ್ ಐಫೋನ್ 12 9,000ರೂ, ರಿಯಾಯಿತಿಯೊಂದಿಗೆ ಲಭ್ಯವಿದೆ. ಎಸ್‌ಬಿಐ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ 750ರೂ, ರಿಯಾಯಿತಿ ಇದೆ. ಇದು ಅದರ ಬೆಲೆಯನ್ನು 70,150ರೂ,ಗೆ ಇಳಿಸುತ್ತದೆ. ಇದು ಐಫೋನ್ 12 ರ ಮೂಲ 64ಜಿಬಿ ಮಾದರಿಗೆ ಆಗಿದೆ. ಇದು ಕಪ್ಪು, ನೀಲಿ, ಹಸಿರು, ನೇರಳೆ, ಬಿಳಿ ಮತ್ತು ಕೆಂಪು ಬಣ್ಣಗಳ ಆರು ಬಣ್ಣಗಳಲ್ಲಿ ಬರುತ್ತದೆ.

ಶಿಯೋಮಿ ಮಿ 11x

ಶಿಯೋಮಿ ಮಿ 11x

ಶಿಯೋಮಿ ಮಿ 11xನಂತೆ, ಎಕ್ಸ್‌ಚೇಂಜ್ ಮತ್ತು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಇಎಂಐ ಆಫರ್‌ನೊಂದಿಗೆ ಈ ಮಾರಾಟದ ಸಮಯದಲ್ಲಿ ಇದರ ಬೆಲೆ 23,749 ರೂ, ಆಗಿದೆ.

ಶಿಯೋಮಿ ರೆಡ್‌ಮಿ 9

ಶಿಯೋಮಿ ರೆಡ್‌ಮಿ 9

ಇನ್ನು ಅಪ್‌ಗ್ರೇಡ್ ಸೇಲ್‌ನಲ್ಲಿ ಶಿಯೋಮಿ ರೆಡ್‌ಮಿ 9 ಅನ್ನು, 8,999 ರಿಂದ 7,920 ರೂ ರಿಯಾಯಿತಿ ದೊರೆಯಲಿದೆ. ಈ ಕೊಡುಗೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ ರಿಯಾಯಿತಿಯನ್ನು ಸಹ ಒಳಗೊಂಡಿದೆ.

Best Mobiles in India

English summary
Amazon Smartphone Upgrade Days sale is now live, and it brings deeps discounts on smartphones like iPhone 12, Xiaomi Mi 11X and more.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+