Home
ಸುದ್ದಿಜಾಲ

ಅಮೆಜಾನ್‌ ಸೇಲ್‌ನಲ್ಲಿ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಬಿಗ್‌ ಆಫರ್‌!

ಆನ್‌ಲೈನ್‌ ಶಾಪಿಂಗ್‌ ಪ್ರಿಯರಿಗೆ ಅಮೆಜಾನ್‌ ನೆಚ್ಚಿನ ತಾಣ ಎನಿಸಿಕೊಂಡಿದೆ. ಆನ್‌ಲೈನ್‌ ಗ್ರಾಹಕರಿಗಾಗಿ ನಡೆಸುವ ವಿಶೇಷ ಡಿಸ್ಕೌಂಟ್‌ ಮೇಳಗಳು, ರಿಯಾಯಿತಿ ಸೇಲ್‌ಗಳು ಗ್ರಾಹಕರ ಗಮನ ಸೆಳೆದಿದೆ. ಸದ್ಯ ಇದೀಗ ಅಮೆಜಾನ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸ್ಮಾರ್ಟ್‌ಫೋನ್‌ ಅಪ್‌ಗ್ರೇಡ್‌ ಡೇಸ್‌ ಸೇಲ್‌ ಅನ್ನು ಆಯೋಜಿಸಿದೆ. ಈ ಸೇಲ್‌ ಈಗಾಗಲೇ ಲೈವ್‌ ಆಗಿದ್ದು, ಏಪ್ರಿಲ್‌ 4 ರವರೆಗೆ ನಡೆಯಲಿದೆ. ಇನ್ನು ಈ ಸೇಲ್‌ನಲ್ಲಿ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳ ಮೇಲೆ ಬಿಗ್‌ ಆಫರ್‌ ಅನ್ನು ಘೋಷಿಸಲಾಗಿದೆ. ಇದರಲ್ಲಿ ಒನ್‌ಪ್ಲಸ್‌, ಶಿಯೋಮಿ, ಸ್ಯಾಮ್‌ಸಂಗ್‌, ಐಕ್ಯೂ, ರಿಯಲ್‌ಮಿ, ಟೆಕ್ನೋ ಮತ್ತು ಒಪ್ಪೋನಂತಹ ಜನಪ್ರಿಯ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳಲ್ಲಿ 40% ರಷ್ಟು ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಸ್ಮಾರ್ಟ್‌ಫೋನ್‌ ಅಪ್‌ಗ್ರೇಡ್‌ ಡೇಸ್‌ ಸೇಲ್‌ ನಡೆಸುತ್ತಿದೆ. ಈ ಸೇಲ್‌ನಲ್ಲಿ ಒನ್‌ಪ್ಲಸ್‌ ನಾರ್ಡ್‌ CE 2, ರೆಡ್ಮಿ ನೋಟ್‌10 ಸರಣಿ, ರೆಡ್ಮಿ 9A ಸ್ಪೋರ್ಟ್ಸ್, ಐಕ್ಯೂ 9 ಪ್ರೊ 5G ಮತ್ತು ಐಕ್ಯೂ 9 SE ಫೋನ್‌ಗಳ ಮೇಲೆ ಬ್ಯಾಂಕ್‌ ಆಫರ್‌ ಮತ್ತು ಎಕ್ಸ್‌ಚೇಂಜ್‌ ಆಫರ್‌ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಸಿಟಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಗ್ರಾಹಕರು 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಇನ್ನುಳಿದಂತೆ ಈ ಸೇಲ್‌ನಲ್ಲಿ ಯಾವೆಲ್ಲಾ ಆಫರ್‌ ಪಡೆದುಕೊಳ್ಳಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಕ್ಯೂ

ಐಕ್ಯೂ

ಅಮೆಜಾನ್‌ ಸ್ಮಾರ್ಟ್‌ಫೋನ್‌ ಅಪ್‌ಗ್ರೇಡ್‌ ಡೇಸ್‌ ಸೇಲ್‌ನಲ್ಲಿ ಐಕ್ಯೂ ಕಂಪೆನಿಯ ಹಲವು ಸ್ಮಾರ್ಟ್‌ಫೋನ್‌ಗಳನ್ನು ಡಿಸ್ಕೌಂಟ್‌ನಲ್ಲಿ ಖರೀದಿಸಬಹುದು. ಇದರಲ್ಲಿ ಐಕ್ಯೂ 9 ಪ್ರೊ 5G ಸ್ಮಾರ್ಟ್‌ಫೋನ್‌ ಮೇಲೆ ನೀವು ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ 6,000ರೂ. ರಿಯಾಯಿತಿ ಜೊತೆಗೆ ಎಕ್ಸ್‌ಚೇಂಜ್‌ ಆಫರ್‌ ಮೇಲೆ 4,000 ವರೆಗೆ ರಿಯಾಯಿತಿ ಸೇರಿದಂತೆ 54,990ರೂ. ಗಳಿಗೆ ಲಭ್ಯವಾಗಲಿದೆ. ಇನ್ನು ಐಕ್ಯೂ 9 SE ಸ್ಮಾರ್ಟ್‌ಫೋನ್‌ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ ಮೂಲಕ ಖರೀದಿಸಿದರೆ 3,000ರೂ. ವರೆಗೆ ಮತ್ತು ಎಕ್ಸ್‌ಚೇಂಜ್‌ ಆಫರ್‌ನಲ್ಲಿ 3,000ರೂ. ವರೆಗೆ ರಿಯಾಯಿತಿ ದೊರೆಯಲಿದ್ದು, ಕೇವಲ 27,990ರೂ.ಗಳಿಗೆ ಈ ಫೋನ್‌ ದೊರೆಯಲಿದೆ.

ಒನ್‌ಪ್ಲಸ್‌

ಒನ್‌ಪ್ಲಸ್‌

ಸ್ಮಾರ್ಟ್‌ಫೋನ್ ಅಪ್‌ಗ್ರೇಡ್ ಡೇಸ್ ಸೇಲ್‌ನಲ್ಲಿ ಒನಪ್ಲಸ್‌ ಕಂಪೆನಿಯ ಫೋನ್‌ಗಳು ಬಿಗ್‌ ಡಿಸ್ಕೌಂಟ್‌ ಪಡೆದುಕೊಂಡಿದೆ. ಇದರಲ್ಲಿ ಒನ್‌ಪ್ಲಸ್‌ ನಾರ್ಡ್‌ CE 2 ಮತ್ತು ಒನ್‌ಪ್ಲಸ್‌ ನಾರ್ಡ್‌2 ಫೋನ್‌ಗಳು ಕ್ರಮವಾಗಿ 21,999ರೂ. ಮತ್ತು 28,499ರೂ. ಬೆಲೆಗೆ ದೊರೆಯಲಿದೆ. ಈ ಫೋನ್‌ಗಳ ಮೇಲೆ ಮೂರು ತಿಂಗಳ ನೋ-ಕಾಸ್ಟ್ EMI ಆಪರ್‌ ಮತ್ತು 2,000ರೂ ವರೆಗಿನ ಬ್ಯಾಂಕ್ ಕ್ಯಾಶ್‌ಬ್ಯಾಕ್ ಆಫರ್‌ ಕೂಡ ಸಿಗಲಿದೆ. ಇನ್ನು ಒನ್‌ಪ್ಲಸ್‌ 9RT ಫೋನ್‌ 38,999ರೂ. ಹಾಗೂ ಒನ್‌ಪ್ಲಸ್‌ 9R ಸ್ಮಾರ್ಟ್‌ಫೋನ್‌ 33,999ರೂ. ಬೆಲೆಗೆ ದೊರೆಯಲಿದೆ. ಜೊತೆಗೆ ಒನ್‌ಪ್ಲಸ್‌ 9 ಪ್ರೊ ಸ್ಮಾರ್ಟ್‌ಫೋನ್‌ 49,199ರೂ.ಬೆಲೆಗೆ ಲಭ್ಯವಾಗಲಿದೆ.

ಶಿಯೋಮಿ

ಶಿಯೋಮಿ

ಅಮೆಜಾನ್‌ ಸ್ಮಾರ್ಟ್‌ಫೋನ್ ಅಪ್‌ಗ್ರೇಡ್ ಡೇಸ್ ಸೇಲ್‌ ಸಮಯದಲ್ಲಿ ಶಿಯೋಮಿ ಸ್ಮಾರ್ಟ್‌ಫೋನ್‌ಗಳು ಹೆಚ್ಚುವರಿ ಬ್ಯಾಂಕ್ ಆಫರ್‌ ಮೂಲಕ ಲಭ್ಯವಾಗಲಿ. ಇದರಲ್ಲಿ ಗ್ರಾಹಕರು ರೆಡ್ಮಿ 10 ಪ್ರೈಮ್‌ ಅನ್ನು 11,249ರೂ.ಗಳಿಗೆ ಖರೀದಿಸಬಹುದು. ರೆಡ್ಮಿ 9A ಸ್ಪೋರ್ಟ್‌ 6,299ರೂ. ರೆಡ್ಮಿ ನೋಟ್‌11 ಫೋನ್‌ 12,499, ರೆಡ್ಮಿ ನೋಟ್‌ 10 ಪ್ರೊ ಸ್ಮಾರ್ಟ್‌ಫೋನ್‌ 16,749ರೂ.ಬೆಲೆಯಲ್ಲಿ ಲಭ್ಯವಾಗಲಿದೆ. ಇದಲ್ಲದೆ ರೆಡ್ಮಿ ನೋಟ್‌ 11T 5G 14,749ರೂ. ರೆಡ್ಮಿ ನೋಟ್‌ 10T 11,749ರೂ. ಶಿಯೋಮಿ 11 ಲೈಟ್‌ NE 5G ಸ್ಮಾರ್ಟ್‌ಫೋನ್‌ 24,999ರೂ.ಬೆಲೆಗೆ ದೊರೆಯಲಿದೆ.

ರಿಯಲ್‌ಮಿ

ರಿಯಲ್‌ಮಿ

ರಿಯಲ್‌ಮಿ ಕಂಪೆನಿ ಅಮೆಜಾನ್‌ನಲ್ಲಿ ಆಯ್ದ ಗೇಮಿಂಗ್-ಕೇಂದ್ರಿತ ಫೋನ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌ ನೀಡುತ್ತಿದೆ. ಇದರಲ್ಲಿ ರಿಯಲ್‌ಮಿ ನಾರ್ಜೋ 50 ಮತ್ತು ರಿಯಲ್‌ಮಿ ನಾರ್ಜೋ 50A ಫೋನ್‌ಗಳು ಮೇಲೆ ಕ್ರಮವಾಗಿ 11,749ರೂ. ಮತ್ತು 10,349ರೂ ಬೆಲೆಯಲ್ಲಿ ದೊರೆಯಲಿವೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ಗಳ ಮೇಲೆ 1,250 ವರೆಗಿನ ಕ್ಯಾಶ್‌ಬ್ಯಾಕ್ ಕೂಡ ಸಿಗಲಿದೆ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M ಸರಣಿಯ ಸ್ಮಾರ್ಟ್‌ಫೋನ್‌ಗಳು ಅಮೆಜಾನ್‌ ಸ್ಮಾರ್ಟ್‌ಫೋನ್‌ ಅಪ್‌ಗ್ರೇಡ್‌ ಡೇಸ್‌ ಸೇಲ್‌ನಲ್ಲಿ ವಿಶೇಷ ಆಫರ್‌ ಪಡೆದುಕೊಂಡಿವೆ. ಇದರಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M32 5G ಮತ್ತು ಸ್ಯಾಮ್‌ಸಂಗ್‌ ಗ್ಯಾಲಕ್ಸಿ M52 5G ಫೋನ್‌ಗಳು ಕ್ರಮವಾಗಿ 15,749ರೂ. ಮತ್ತು 23,749ರೂ.ಬೆಲೆಗೆ ಖರೀದಿಸಬಹುದಾಗಿದೆ. ಇವುಗಳ ಮೇಲೆ 1,250ರೂ ಕ್ಯಾಶ್‌ಬ್ಯಾಕ್‌ ಸಿಗಲಿದೆ. ಜೊತೆಗೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M12 ಮತ್ತು ಸ್ಯಾಮ್‌ಸಂಗ್‌ ಗ್ಯಾಲಕ್ಸಿ M32 ಫೋನ್‌ಗಳನ್ನು ನೀವು ಕ್ರಮವಾಗಿ 9,499ರೂ. ಮತ್ತು 12,999ರೂ.ಬೆಲೆಯಲ್ಲಿ ಖರೀದಿಸಿಬಹುದಾಗಿದೆ.

Best Mobiles in India

English summary
Amazon Smartphone Upgrade Days Sale: Offers On Smartphones You Can Get
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+