Home
ಸುದ್ದಿಜಾಲ

Amazon ಸ್ಪೆಷಲ್ ಆಫರ್: ಸ್ಮಾರ್ಟ್ ಫೋನ್ ಗಳಿಗೆ No Cost EMI

By Gizbot Bureau

ಅಮೇಜಾನ್ ಇಂಡಿಯಾದಲ್ಲಿ ನೋ ಕಾಸ್ಟ್ ಇಎಂಐ ಪಾವತಿ ಆಯ್ಕೆಯು ವಿಭಿನ್ನ ಕೆಟಗರಿಯ ವಸ್ತುಗಳಿಗೆ ಲಭ್ಯವಾಗುತ್ತಿದೆ. ಹೆಚ್ಚುವರಿ ಯಾವುದೇ ಬಡ್ಡಿ ಇಲ್ಲದೆ ಗ್ರಾಹಕರು ಮಾಸಿಕ ರೂಪದಲ್ಲಿ ಪಾವತಿ ಮಾಡುವ ಮೂಲಕ ತಮ್ಮ ಅಗತ್ಯದ ವಸ್ತುಗಳನ್ನು ಖರೀದಿಸುವುದಕ್ಕೆ ಇದರಲ್ಲಿ ಅವಕಾಶವಿರುತ್ತದೆ. 12 ತಿಂಗಳ ಅವಧಿಯ ನೋ ಕಾಸ್ಟ್ ಇಎಂಐ ಪಾವತಿ ಆಯ್ಕೆಯನ್ನು ಈ ಮೂಲಕ ಪಡೆಯಬಹುದಾಗಿದೆ. ಹೆಚ್ಚಿನ ಬ್ಯಾಂಕ್ ಗಳ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರು ಈ ಸೌಲಭ್ಯ ಪಡೆದುಕೊಳ್ಳುವುದಕ್ಕೆ ಅರ್ಹರಾಗಿರುತ್ತಾರೆ.

ಫೋನ್

ಈ ಅವಕಾಶದಲ್ಲಿ ಫೋನ್ ಖರೀದಿಸಬೇಕು ಎಂದುಕೊಳ್ಳುವ ಗ್ರಾಹಕರಿಗಾಗಿ ನಾವಿಲ್ಲಿ ಕೆಲವು ಸ್ಮಾರ್ಟ್ ಫೋನ್ ಗಳ ಪಟ್ಟಿಯನ್ನು ನೀಡುತ್ತಿದ್ದೇವೆ. ಈ ಸ್ಪೆಷಲ್ ಆಫರ್ ಮೂಲಕ ಸದ್ಯ ಈ ಕೆಳಗಿನ ಫೋನ್ ಗಳನ್ನು ಅಮೇಜಾನ್ ನಲ್ಲಿ ಖರೀದಿಸುವುದಕ್ಕೆ ಅವಕಾಶವಿರುತ್ತದೆ. ಅಮೇಜಾನಿನ ಈ ಸ್ಪೆಷಲ್ ಸೇಲ್ ಮೂಲಕ ನಿಮ್ಮ ನೆಚ್ಚಿನ ಸ್ಮಾರ್ಟ್ ಫೋನ್ ನ್ನು ನೀವು ಡೌನ್ ಪೇಮೆಂಟ್ ಮಾಡಿ ಹೆಚ್ಚುವರಿ ಬಡ್ಡಿಯೂ ಇಲ್ಲದೆ ಖರೀದಿಸುವುದಕ್ಕೆ ಸಾಧ್ಯವಾಗುತ್ತದೆ.

ಎಲ್ ಜಿ ವಿ40 ThinQ

ಎಲ್ ಜಿ ವಿ40 ThinQ

ಎಲ್ ಜಿ ವಿ40 ThinQ, ಕಂಪೆನಿಯಿಂದ ಬಿಡುಗಡೆಗೊಂಡಿರುವ ನೂತನ ಸ್ಮಾರ್ಟ್ ಫೋನ್ ಇದಾಗಿದ್ದು ಇದರ ಬೆಲೆ 39,999 ರುಪಾಯಿಗಳು. ಸದ್ಯ ನೋ ಕಾಸ್ಟ್ ಇಎಂಐ ಆಯ್ಕೆಯಲ್ಲಿ ಮಾಸಿಕ 1,883 ರುಪಾಯಿ ಪಾವತಿ ಮಾಡಿ ಅಮೇಜಾನ್ ನಲ್ಲಿ ಖರೀದಿಸುವ ಅವಕಾಶ ಇದರಲ್ಲಿದೆ.

ಒನ್ ಪ್ಲಸ್ 7ಟಿ ಪ್ರೋ

ಒನ್ ಪ್ಲಸ್ 7ಟಿ ಪ್ರೋ

ಒನ್ ಪ್ಲಸ್ 7ಟಿ ಪ್ರೋ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಇದೀಗ ನಿಮಗೆ ಅಮೇಜಾನ್ ನಲ್ಲಿ ನೋ ಕಾಸ್ಟ್ ಇಎಂಐ ಆಯ್ಕೆಯಲ್ಲಿ ಲಭ್ಯವಿದ್ದು ಮಾಸಿಕ 2.107 ರುಪಾಯಿ ಪಾವತಿ ಮಾಡಿ ಇದನ್ನು ಖರೀದಿಸಬಹುದು.

ಹುವಾಯಿ ಪಿ30 ಪ್ರೋ

ಹುವಾಯಿ ಪಿ30 ಪ್ರೋ

ಹುವಾಯಿ ಪಿ30 ಪ್ರೋ ಪ್ರೀಮಿಯಂ ಸ್ಮಾರ್ಟ್ ಫೋನ್ ಕೂಡ ಇದರಲ್ಲಿ ಲಭ್ಯವಿದೆ. 2,707 ರುಪಾಯಿ ಮಾಸಿಕ ಪಾವತಿ ಮಾಡುವ ಮೂಲಕ ನೀವು ಇದನ್ನು ಖರೀದಿಸಬಹುದು.

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10 ಲೈಟ್

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10 ಲೈಟ್

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10 ಲೈಟ್ ಆನ್ ಲೈನ್ ನಲ್ಲಿ 39,999 ರುಪಾಯಿ ಬೆಲೆಗೆ ಲಭ್ಯವಿದೆ. ನೋ ಕಾಸ್ಟ್ ಇಎಂಐ ಆಯ್ಕೆಯಲ್ಲಿ ಮಾಸಿಕ 1,883 ರುಪಾಯಿ ಪಾವತಿ ಮಾಡಿ ಖರೀದಿಸಬಹುದು.

ಆಪಲ್ ಐಫೋನ್ 11

ಆಪಲ್ ಐಫೋನ್ 11

ಆಪಲ್ ಐಫೋನ್ 11 63,999 ರುಪಾಯಿಗೆ ಅಮೇಜಾನ್ ಇಂಡಿಯಾದಲ್ಲಿ ಲಭ್ಯವಿದೆ. ಇದನ್ನು ನೋ ಕಾಸ್ಟ್ ಇಎಂಐ ಆಯ್ಕೆಯಲ್ಲಿ 3,013 ರುಪಾಯಿ ಪ್ರತಿ ತಿಂಗಳು ಪಾವತಿ ಮಾಡಿ ಖರೀದಿಸುವ ಅವಕಾಶ ಗ್ರಾಹಕರಿಗೆ ಅಮೇಜಾನ್ ನಲ್ಲಿ ಲಭ್ಯವಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ಪ್ಲಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ಪ್ಲಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ಪ್ಲಸ್ ಅಮೇಜಾನ್ ವೆಬ್ ಸೈಟ್ ನಲ್ಲಿ ಲಭ್ಯವಿದೆ. ಇದರ ಆರಂಭಿಕ ಬೆಲೆ 52,999 ರುಪಾಯಿಗಳು, ನೋ ಕಾಸ್ಟ್ ಇಎಂಐ ಪಾವತಿ ಆಯ್ಕೆಯಲ್ಲಿ ಇದನ್ನೂ ಕೂಡ ಖರೀದಿಸುವುದಕ್ಕೆ ಸಾಧ್ಯವಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 20 ಆಲ್ಟ್ರಾ 5ಜಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 20 ಆಲ್ಟ್ರಾ 5ಜಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 20 ಆಲ್ಟ್ರಾ 5ಜಿ ಕೂಡ ಅಮೇಜಾನ್ ನಲ್ಲಿ ನೋ ಕಾಸ್ಟ್ ಇಎಂಐ ಆಯ್ಕೆಯಲ್ಲಿ ಲಭ್ಯವಿದ್ದು ಪ್ರತಿ ತಿಂಗಳು 4,943 ರುಪಾಯಿ ಪಾವತಿ ಮಾಡಿ ಕೊಂಡುಕೊಳ್ಳಬಹುದು.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20 ಪ್ಲಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20 ಪ್ಲಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20 ಪ್ಲಸ್ ನ ಬೆಲೆ 77,999 ರುಪಾಯಿಗಳು ಮತ್ತು ನೋ ಕಾಸ್ಟ್ ಇಎಂಐ ಆಯ್ಕೆಯಲ್ಲಿ ನೀವು ಇದನ್ನು ಪ್ರತಿ ತಿಂಗಳ ಕಂತು 3.672 ರುಪಾಯಿ ಪಾವತಿ ಮಾಡಿ ಖರೀದಿಸಬಹುದು..

Best Mobiles in India

English summary
Amazon India is providing a no-cost EMI payment option across product categories. This convenient mode of payment lets customers but a product and pay for it on a monthly basis sans any additional interest. The no-cost EMI payment option can be availed for up to 12 months.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+