ಆನ್‌ಲೈನ್‌ನಲ್ಲಿ ಗೋಲ್ಮಾಲ್ ಐಫೋನ್ ಬದಲಿಗೆ ಪ್ರೆಶ್ಶರ್ ಕುಕ್ಕರ್

By Shwetha
|

ಆನ್‌ಲೈನ್‌ನಲ್ಲಿ ವಸ್ತುಗಳನ್ನು ಖರೀದಿ ಮಾಡುವುದು ಎಂದರೆ ಈಗ ಚಿಟಿಕೆ ಹೊಡೆಯುವಷ್ಟು ಸಲೀಸಾಗಿಬಿಟ್ಟಿದೆ. ಆನ್‌ಲೈನ್ ವಸ್ತುಗಳನ್ನು ಆರಾಮಾಗಿ ಕುಳಿತಲ್ಲೇ ಆರ್ಡರ್ ಮಾಡಿ ಖರೀದಿಸಬಹುದಾಗಿದ್ದರಿಂದ ಅಂಗಡಿಗೆ ಹೋಗಿ ಅಲ್ಲಿ ಗಂಟೆಗಟ್ಟಲೆ ನಿಮ್ಮ ಮೆಚ್ಚಿನ ವಸ್ತುಗಳನ್ನು ಆಯ್ಕೆ ಮಾಡುವ ವಿಧಾನಕ್ಕಿಂತ ಇದುವೇ ಬೆಸ್ಟ್ ಎಂಬ ಭಾವನೆ ನಮ್ಮ ಜನರಲ್ಲಿದೆ.

ಓದಿರಿ: ಮೈಕ್ರೋಸಾಫ್ಟ್ ಕೋರ್ಟಾನಾ: ತಿಳಿದುಕೊಳ್ಳಬೇಕಾದ ಅಂಶಗಳೇನು?

ಇಂಟರ್ನೆಟ್ ಸೌಲಭ್ಯದ ಮೂಲಕ ಕಂಪ್ಯೂಟರ್‌ನಲ್ಲಿ ನಿಮ್ಮ ಮನಮೆಚ್ಚಿದ ವಸ್ತುಗಳನ್ನು ಆಯ್ಕೆಮಾಡಿ ಮತ್ತು ಮನೆಯ ವಿಳಾಸವನ್ನು ನೀಡಿ ಬೇಕಾದ ಉತ್ಪನ್ನಗಳನ್ನು ನಿಮ್ಮ ಕಾಲಬುಡಕ್ಕೆ ಆರ್ಡರ್ ಮಾಡಿಸಿಕೊಳ್ಳಿ. ಶಾಪ್‌ಗಳಿಗೆ ಹೋಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಕೂಡ ಇರುವುದಿಲ್ಲ ಮತ್ತು ಅದಕ್ಕಾಗಿ ನಿಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡುವುದೂ ಬೇಕಾಗಿರುವುದಿಲ್ಲ. ಆದ್ದರಿಂದಲೇ ಇಂದಿನ ಕಾಲಮಾನದಲ್ಲಿ ಆನ್‌ಲೈನ್ ಶಾಪಿಂಗ್ ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಿರುವುದು.

ಓದಿರಿ: ಸ್ಮಾರ್ಟ್‌ಫೋನ್ ಖರೀದಿಯಲ್ಲಿ ಯಾವ ಅಂಶಗಳು ಅತಿಮುಖ್ಯ

ಆದರೆ ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಮೋಸ ವ್ಯವಸ್ಥಿತವಾಗಿ ನಡೆದು ಬರುತ್ತಿದ್ದು ಇದು ಗ್ರಾಹಕರಲ್ಲಿ ತಲೆನೋವನ್ನು ಉಂಟುಮಾಡುತ್ತಿದೆ. ಹೆಚ್ಚಾಗಿ ಫೋನ್‌ಗಳ ವಿಷಯದಲ್ಲೇ ಈ ಮೋಸ ಹೆಚ್ಚು ಸಂಭವಿಸುತ್ತಿದೆ. ಖರೀದಿ ಮಾಡಿದ ಫೋನ್ ಬದಲಿಗೆ ಇಟ್ಟಿಗೆ, ಸೋಪು, ಆಟಿಕೆ ಸಾಮಾನು ಹೀಗೆ ಖರೀದಿಸಿದ ಗ್ರಾಹಕರನ್ನು ಬೆಸ್ತು ಬೀಳಿಸಿ ನಂತರ ಆ ತಾಣಗಳಿಗೆ ಅವರು ಛೀಮಾರಿ ಹಾಕಿ ಹಣ ವಾಪಸ್ ಪಡೆದುಕೊಳ್ಳುತ್ತಿರುವುದು ರೀಟೈಲ್ ತಾಣಗಳು ನಂತರ ಕ್ಷಮೆ ಕೇಳುವುದು ಅವ್ಯಾಹತವಾಗಿ ನಡೆಯುತ್ತಿದೆ. ಇಂದಿನ ಲೇಖನದಲ್ಲಿ ಇಂತಹುದೇ ಮೋಸದ ಕಥೆಯ ಬಗ್ಗೆ ನೀವು ತಿಳಿದುಕೊಳ್ಳಲಿದ್ದೀರಿ.

ಪ್ರೆಶ್ಶರ್ ಕುಕ್ಕರ್

ಪ್ರೆಶ್ಶರ್ ಕುಕ್ಕರ್

ಐಫೋನ್ ಮತ್ತು ಐಪ್ಯಾಡ್ ಬದಲಿಗೆ ಪ್ರೆಶ್ಶರ್ ಕುಕ್ಕರ್ ಈ ಬಾರಿ ಗ್ರಾಹಕರಿಗೆ ಬಂದುಬಿಟ್ಟಿದೆ.

ಚಳ್ಳೆ ಹಣ್ಣು

ಚಳ್ಳೆ ಹಣ್ಣು

ಅಮೆಜಾನ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಒಬ್ಬ ವ್ಯಕ್ತಿಯೇ ದುಬಾರಿ ಇಲೆಕ್ಟ್ರಾನಿಕ್ ವಸ್ತುಗಳ ಬದಲಿಗೆ ಪ್ರೆಶ್ಶರ್ ಕುಕ್ಕರ್ ಅನ್ನು ರವಾನಿಸಿ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ವ್ಯಕ್ತಿ.

ಕದ್ದು ಮಾರಾಟ

ಕದ್ದು ಮಾರಾಟ

ಪ್ರಮೋದ್ ಬಾಂಬಲೆ ಹೆಸರಿನ 21 ವರ್ಷ ವಯಸ್ಸಿನ ವ್ಯಕ್ತಿ ಕಂಪೆನಿಯ ಪ್ಯಾಕೇಜ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ. ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿರುವ ವಸ್ತುಗಳನ್ನು ಪ್ಯಾಕ್ ಮಾಡುವುದು ಇವನ ಕೆಲಸವಾಗಿದೆ. ದುಬಾರಿ ಇಲೆಕ್ಟ್ರಾನಿಕ್ ಉಪಕರಣಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಸುದ್ದಿ ಪೋಲೀಸರಿಗೆ ತಿಳಿದಿದ್ದು ಅದೂ ಅಮೆಜಾನ್‌ನಿಂದ ಕದ್ದು ಮಾರುತ್ತಿರುವುದು ಎಂಬ ವಿಷಯ ದೃಢವಾಯಿತು.

ಆರ್ಡರ್ ಸಂಖ್ಯೆಗಳಿಂದ ಕಳ್ಳಾಟ

ಆರ್ಡರ್ ಸಂಖ್ಯೆಗಳಿಂದ ಕಳ್ಳಾಟ

ಈ ನಿಟ್ಟಿನಲ್ಲಿ ತನಿಖೆಯನ್ನು ನಡೆಸಿದ ಪೋಲೀಸರು ಅಪರಾಧಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಅಪರಾಧಿ ಪ್ಯಾಕೇಜ್ ವಿಭಾಗದಲ್ಲಿ ಇದ್ದುದರಿಂದಾಗಿ ಆರ್ಡರ್ ಸಂಖ್ಯೆಗಳನ್ನು ಸುಲಭವಾಗಿ ಆತನಿಗೆ ಪ್ರವೇಶಿಸಬಹುದಾಗಿತ್ತು.

ಉತ್ಪನ್ನದ ತೂಕಕ್ಕೆ ಸಮನಾಗಿ ಪ್ರೆಶ್ಶರ್ ಕುಕ್ಕರ್

ಉತ್ಪನ್ನದ ತೂಕಕ್ಕೆ ಸಮನಾಗಿ ಪ್ರೆಶ್ಶರ್ ಕುಕ್ಕರ್

ಆರ್ಡರ್ ಸಂಖ್ಯೆಗಳನ್ನು ಬಳಸಿಕೊಂಡು ಆರ್ಡರ್‌ಗಳನ್ನು ಆತನೇ ಖುದ್ದು ಪ್ಯಾಕ್ ಮಾಡುತ್ತಿದ್ದ. ಆದರೆ ಉತ್ಪನ್ನಕ್ಕೆ ಬದಲಾಗಿ ಪ್ರೆಶ್ಶರ್ ಕುಕ್ಕರ್‌ಗಳನ್ನು ಇರಿಸುತ್ತಿದ್ದ. ನಂತರ ಬಾಕ್ಸ್‌ನಲ್ಲಿದ್ದ ಐಫೋನ್, ಐಪ್ಯಾಡ್, ವಾಚ್‌ಗಳು, ಕ್ಯಾಮೆರಾ ಮೊದಲಾದ ದುಬಾರಿ ಐಟಮ್‌ಗಳನ್ನು ಕದ್ದು ಮಾರಾಟ ಮಾಡುತ್ತಿದ್ದ. ಆ ಉತ್ಪನ್ನದ ಸರಿಸಮನಾದ ತೂಕಕ್ಕೆ ಪ್ರೆಶ್ಶರ್ ಕುಕ್ಕರ್‌ಗಳನ್ನು ಈತ ಇರಿಸುತ್ತಿದ್ದ.

ಕದ್ದ ಗ್ಯಾಜೆಟ್ ಮಾರಾಟ

ಕದ್ದ ಗ್ಯಾಜೆಟ್ ಮಾರಾಟ

ದುಬಾರಿ ವಸ್ತುಗಳ ಬದಲಿಗೆ 5 ಕೆಜಿಯ ಪ್ರೆಶ್ಶರ್ ಕುಕ್ಕರ್ ಅನ್ನು ಇರಿಸಿ ಪ್ಯಾಕೇಜ್ ಅನ್ನು ತಾನೇ ಡೆಲಿವರಿ ಮಾಡುತ್ತಿದ್ದ ನಂತರ ಕದ್ದ ಗ್ಯಾಜೆಟ್‌ಗಳನ್ನು ಮಾರುತ್ತಿದ್ದ.

ಸ್ನೇಹಿತರ ಮನೆಯಲ್ಲಿ ಕದ್ದ ಮಾಲು

ಸ್ನೇಹಿತರ ಮನೆಯಲ್ಲಿ ಕದ್ದ ಮಾಲು

ಇನ್ನು ತನಿಖೆಯ ಸಂದರ್ಭದಲ್ಲಿ ಬಾಂಬಲೆ ಕದ್ದಿರುವ ದುಬಾರಿ ಇಲೆಕ್ಟ್ರಾನಿಕ್ ಉತ್ಪನ್ನಗಳನ್ನು ತನ್ನ ಸ್ನೇಹಿತರ ಮನೆಯಲ್ಲಿ ಬಚ್ಚಿಟ್ಟಿರುವ ಸತ್ಯವನ್ನು ಬಹಿರಂಗಪಡಿಸಿದ್ದಾನೆ. ಉಳಿದ ಐಟಮ್‌ಗಳನ್ನು ಆತ ಮಾರಾಟ ಮಾಡಿದ್ದಾನೆ.

ದೊಡ್ಡ ಜಾಲ

ದೊಡ್ಡ ಜಾಲ

ಈತನಲ್ಲದೆ ಇನ್ನೂ ಮೂರು ನಾಲ್ಕು ಜನ ಈ ಅವ್ಯವಹಾರದಲ್ಲಿ ತೊಡಗಿದ್ದು, ಪೋಲೀಸರು ಅವರಿಗಾಗಿ ಬಲೆ ಬೀಸಿದ್ದಾರೆ.

ಗ್ರಾಹಕರಿಗೆ ಚಳ್ಳೆಹಣ್ಣು

ಗ್ರಾಹಕರಿಗೆ ಚಳ್ಳೆಹಣ್ಣು

ರೀಟೈಲ್ ತಾಣಗಳಲ್ಲಿ ಇಟ್ಟಿಗೆ, ಆಟಿಕೆ, ಸೋಪು ಮೊದಲಾದ ವಸ್ತುಗಳನ್ನಿಟ್ಟು ಗ್ರಾಹಕರಿಗೆ ಚಳ್ಳೆ ಹಣ್ಣು ತಿನ್ನಿಸುವುದರ ಹಿಂದೆ ಇಂತಹುದೇ ಜಾಲವೊಂದು ಏಕೆ ಅಡಗಿರಬಾರದು.

ಬೆಸ್ತು ಬೀಳಿಸು

ಬೆಸ್ತು ಬೀಳಿಸು

ರೀಟೈಲ್ ತಾಣಗಳು ಮತ್ತು ಗ್ರಾಹಕರನ್ನು ಬೆಸ್ತು ಬೀಳಿಸುತ್ತಿರುವ ಇಂತಹ ಅಪರಾಧಗಳು ಸಂಸ್ಥೆಯ ಒಳಗೆ ಎಷ್ಟೊಂದು ನಡೆಯುತ್ತಿದೆ ಎಂಬುದು ಯಾರು ಬಲ್ಲರು ಅಲ್ಲವೇ?

Best Mobiles in India

English summary
Now this, is what you call an inside job. We've all seen phone boxes holding stones and laptop packaging holding rocks. But have you ever received a pressure cooker's package filled to the brim with iPhones and iPads?.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X