ಮಾರುಕಟ್ಟೆ ಭವಿಷ್ಯವನ್ನೇ ಬದಲಾಯಿಸಲಿರುವ ಅಮೆಜಾನ್

Written By:

ಮಾರುಕಟ್ಟೆ ವಿಸ್ತರಣಾ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕಾಗಿ ಇಂದು ವೆಬ್‌ಸೈಟ್ ತಾಣಗಳು ಹತ್ತು ಹಲವು ಬಗೆಯಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿವೆ. ದರ ಕಡಿತ, ಪ್ರತೀ ಕೊಡುಗೆಯಲ್ಲಿ ಉಚಿತ ಉಡುಗೊರೆ ಕೂಪನ್ ಹೀಗೆ ಏನಾದರೊಂದು ವಿಶೇಷ ಆಯೋಜನೆಗಳನ್ನು ಮಾಡುತ್ತಿರುತ್ತದೆ.

ರೀಟೈಲ್ ಜಾಲತಾಣದಲ್ಲಿ ಪ್ರಮುಖ ಸ್ಥಾನದಲ್ಲಿರುವ ಅಮೆಜಾನ್ ಇತರ ಅತಿದೊಡ್ಡ ಮಾರಾಟ ಸಂಸ್ಥೆಗಳ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದೆ. ಒಂದು ಅಂದಾಜಿನ ಪ್ರಕಾರ ಅಮೆಜಾನ್ ಇಂಡಿಯಾದ ಗಳಿಕೆಯು ಪ್ರಪಂಚದ ಅತಿ ದೊಡ್ಡ ಮಾರುಕಟ್ಟೆಗೂ ಸಡ್ಡು ಹೊಡೆದು ನಿಂತಿದೆ.

ಮಾರುಕಟ್ಟೆ ಭವಿಷ್ಯವನ್ನೇ ಬದಲಾಯಿಸಲಿರುವ ಅಮೆಜಾನ್

ಇತರ ರೀಟೈಲ್ ವೆಬ್‌ಸೈಟ್‌ಗಳಿಗೆ ಹೋಲಿಸಿದಾಗ ಅಮೆಜಾನ್ ಮೊದಲ ಸ್ಥಾನದಲ್ಲಿರುವುದು ಪ್ರಮುಖ ಅಂಶವಾಗಿ ಗಮನ ಸೆಳೆದಿದೆ. ಇತರ ತಾಣಗಳಾದ ವಾಲ್‌ಮಾರ್ಟ್, ಸ್ಟೇಪಲ್ಸ್ ಮೂರು ಹಾಗೂ ನಾಲ್ಕನೆಯ ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದ್ದು ಅಮೆಜಾನ್ ವೇಗಕ್ಕೆ ದಾರಿ ಮಾಡಿಕೊಟ್ಟಂತಿದೆ. ಗ್ರಾಹಕರ ಮೆಚ್ಚಿನ ಆನ್‌ಲೈನ್ ತಾಣವಾಗಿರುವ ಅಮೆಜಾನ್ ಒಂದಲ್ಲಾ ಒಂದು ವಿಶೇಷ ಯೋಜನೆಗಳಿಂದ ಅವರ ಮನವನ್ನು ಸೆಳೆಯುವಂತೆ ಮಾಡಿದೆ.

ಇಲ್ಲಿ ಖರೀದಿಸುವ ಉತ್ಪನ್ನವು ಮಾರುಕಟ್ಟೆಯ ಇತರ ಬೆಲೆಗಳಿಗೆ ಹೋಲಿಸಿದಾಗ ಕಡಿಮೆಯಾಗಿದ್ದು ಜನರ ಮೆಚ್ಚುಗೆಯನ್ನು ಪಡೆದಿದೆ. ಉತ್ಪನ್ನ ಗುಣಮಟ್ಟ ಹಾಗೂ ಖಾತರಿ ಕೂಡ ಬಳಕೆದಾರರಿಗೆ ಮಾರ್ಗದರ್ಶಕವಾಗಿದೆ. ಹೆಚ್ಚಿನ ಗ್ರಾಹಕರು ಅಮೆಜಾನ್ ಇಂಡಿಯಾವನ್ನೇ ತಮ್ಮ ಆನ್‌ಲೈನ್ ಮಾರುಕಟ್ಟೆಯ ತಾಣವಾಗಿಸಿದ್ದು ಅದರ ಜನಪ್ರಿಯತೆಗೆ ಕಾರಣವಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot