ಅಮೆಜಾನ್ ಅಪ್‌ಗ್ರೇಡ್ ಡೇಸ್ ಸೇಲ್‌ನಲ್ಲಿ ಈ ಡಿವೈಸ್‌ಗಳಿಗೆ ಬಿಗ್ ಆಫರ್!
ಇ-ಕಾಮರ್ಸ್ ದೈತ್ಯ ಅಮೆಜಾನ್ ಪ್ಲಾಟ್‌ಫಾರ್ಮ್ ಶಾಪಿಂಗ್ ಪ್ರಿಯರ ನೆಚ್ಚಿನ ತಾಣ ಎನಿಸಿಕೊಂಡಿದೆ. ಆನ್‌ಲೈನ್ ಶಾಫಿಂಗ್ ಪ್ರಿಯರಿಗಾಗಿ ವಿಶೇಷ ಸೇಲ್‌ಗಳನ್ನು ಆಯೋಜಿಸುತ್ತಲೇ ಬಂದಿದೆ. ಸದ್ಯ ಇದೀಗ ಅಮೆಜಾನ್ ಹೊಸ ಅಪ್‌ಗ್ರೇಡ್ ಡೇಸ್ ಸೇಲ್ ಅನ್ನು ಹೊತ್ತು ತಂದಿದೆ. ಈ ಸೇಲ್ ಇದೇ ಫೆಬ್ರವರಿ 11 ರಂದು ಎಂಡ್ ಆಗಲಿದೆ. ಇನ್ನು ಈ ಅಪ್‌ಗ್ರೇಡ್ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್, ಸ್ಮಾರ್ಟ್‌ಟಿವಿಗಳ ಮೇಲೆ ಬಿಗ್ ಡಿಸ್ಕೌಂಟ್ ಜೊತೆಗೆ ವಿಶೇಷ ಆಫರ್ ಅನ್ನು ನೀಡುತ್ತಿದೆ.

ಹೌದು, ಅಮೆಜಾನ್ ಹೊಸ ಅಪ್‌ಗ್ರೇಡ್ ಸೇಲ್ ಆಯೋಜಿಸಿದೆ. ಈ ಸೇಲ್‌ನಲ್ಲಿ ಖರೀದಿದಾರರು ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಮೂಲಕ 1,500ರೂ. ವರೆಗೆ 10% ಡಿಸ್ಕೌಂಟ್ ಪಡೆದುಕೊಳ್ಳಬಹುದು. ಹೆಚ್ಚುವರಿಯಾಗಿ, ಪ್ರೈಮ್ ಸದಸ್ಯರು ಕೇವಲ ಪ್ರೈಮ್‌ಗಾಗಿ ಅಡ್ವಾಂಟೇಜ್‌ನೊಂದಿಗೆ 20,000ರೂ. ತನಕ ಸೇವ್ ಮಾಡಬಹುದಾಗಿದೆ. ಇದು 6 ತಿಂಗಳ ಉಚಿತ ಸ್ಕ್ರೀನ್ ರಿಪ್ಲೇಸ್‌ಮೆಂಟ್ ಮತ್ತು HDFC ಬ್ಯಾಂಕ್ ಕಾರ್ಡ್ ಮೂಲಕ ಹೆಚ್ಚುವರಿ 3 ತಿಂಗಳ ನೋ ಕಾಸ್ಟ್ ಇಎಂಐ ಅನ್ನು ನೀಡಲಿದೆ. ಹಾಗಾದ್ರೆ ಈ ಸೇಲ್‌ನಲ್ಲಿ ನೀವು ಏನೆಲ್ಲಾ ಡಿಸ್ಕೌಂಟ್ ಪಡೆದುಕೊಳ್ಳಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್ಕೌಂಟ್ ಪಡೆದುಕೊಂಡಿರುವ ಸ್ಮಾರ್ಟ್‌ಫೋನ್‌ಗಳು
ಅಮೆಜಾನ್ ಅಪ್‌ಗ್ರೇಡ್ ಸೇಲ್‌ನಲ್ಲಿ ಆಪಲ್ ಐಫೋನ್ 12 ಪ್ರಸ್ತುತ 54,999ರೂ.ಗಳಿಗೆ ಲಭ್ಯವಿದೆ. ಇದಲ್ಲದೆ ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸುವ ಗ್ರಾಹಕರು 1,750 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಇನ್ನು ಈ ಐಫೋನ್ ಕೆಂಪು, ಬಿಳಿ, ಕಪ್ಪು, ಹಸಿರು, ನೇರಳೆ ಮತ್ತು ನೀಲಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಇದಲ್ಲದೆ ಒನ್‌ಪ್ಲಸ್ 9 ಸ್ಮಾರ್ಟ್‌ಫೋನ್ 54,999ರೂ.ಗಳಿಗೆ ದೊರೆಯಲಿದೆ. ಹಾಗೆಯೇ ಒನ್‌ಪ್ಲಸ್ 9RT ಸ್ಮಾರ್ಟ್‌ಫೋನ್ ರಿಯಾಯಿತಿ ದರದಲ್ಲಿ ಕೇವಲ 42,999ರೂ.ಗಳಿಗೆ ಲಭ್ಯವಿದೆ. ಇನ್ನು ಒನ್‌ಪ್ಲಸ್ 9ಪ್ರೊ ಸ್ಮಾರ್ಟ್‌ಫೋನ್ 64,999ರೂ.ಗಳಿಗೆ ಸಿಗಲಿದೆ. ಜೊತೆಗೆ ಎಕ್ಸ್‌ಚೇಂಜ್ ಆಫರ್‌ಗಳು ಮತ್ತು ನೋ ಕಾಸ್ಟ್ ಇಎಂಐ ಜೊತೆಗೆ ಆಕ್ಸಿಸ್ ಬ್ಯಾಂಕ್ ಕಾರ್ಡ್‌ಗಳಲ್ಲಿ 4,000ರೂ. ವರೆಗೆ ರಿಯಾಯಿತಿ ಪಡೆಯಬಹುದು.

ಇದಲ್ಲದೆ ಅಮೆಜಾನ್‌ನಲ್ಲಿ ಪ್ರಸ್ತುತ ಸ್ಯಾಮ್‌ಸಂಗ್ ಗ್ಯಾಲಕ್ಸಿ M12 ಸ್ಮಾರ್ಟ್‌ಫೋನ್ 10,499ರೂ.ಗಳಿಗೆ ಮಾರಾಟವಾಗುತ್ತಿದೆ. ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ M21 ಫೋನ್ 12,999ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ ಸ್ಯಾಮ್‌ಸಂಗ್ ಗ್ಯಾಲಕ್ಸಿ M32 14,999ರೂ.ಗಳಿಗೆ ದೊರೆಯಲಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ M32 5G ನಿಮಗೆ 16,999ರೂ.ಬೆಲೆಗೆ ಸಿಗಲಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ M52 5G 24,999ರೂ.ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ S20 FE 5G 38,240ರೂ.ಬೆಲೆಗೆ ದೊರೆಯಲಿದೆ.

ಸ್ಮಾರ್ಟ್‌ಟಿವಿಗಳ ಮೇಲೆ ಅತ್ಯುತ್ತಮ ಆಫರ್‌ಗಳು!
ಅಮೆಜಾನ್ ಅಪ್‌ಗ್ರೇಡ್ ಸೇಲ್‌ನಲ್ಲಿ ಒನ್‌ಪ್ಲಸ್ TV Y ಸರಣಿಯು 16,499ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿರುತ್ತದೆ. ಇನ್ನು U ಸರಣಿಯ UHD ಟಿವಿಗಳು 40,999ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಇದಲ್ಲದೆ ಗ್ರಾಹಕರು ತಮ್ಮ ಒನ್‌ಪ್ಲಸ್ ಟೆಲಿವಿಷನ್‌ಗಳ ಖರೀದಿಯಲ್ಲಿ ಆಯ್ದ ಬ್ಯಾಂಕ್ ಕಾರ್ಡ್‌ಗಳಲ್ಲಿ 3,000ರೂ.ಗಳ ವರೆಗೆ ಹೆಚ್ಚುವರಿ ಬ್ಯಾಂಕ್ ರಿಯಾಯಿತಿ ಪಡೆಯಬಹುದು. ಜೊತೆಗೆ 9 ತಿಂಗಳವರೆಗೆ ನೋ ಕಾಸ್ಟ್ EMI ಅನ್ನು ಪಡೆಯಬಹುದು.

ಇನ್ನು ಸ್ಯಾಮ್‌ಸಂಗ್ ವಂಡರ್‌ಟೈನ್‌ಮೆಂಟ್ ಸರಣಿಯು ಅಮೆಜಾನ್‌ನಲ್ಲಿ 17,490ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಸ್ಯಾಮ್‌ಸಂಗ್ 4K ಕ್ರಿಸ್ಟಲ್ UHD ಸರಣಿಯು 37,990ರೂ.ಬೆಲೆಯಲ್ಲಿ ದೊರೆಯಲಿದೆ. ಇದರಲ್ಲಿ ಖರೀದಿದಾರರು ಹೆಚ್ಚುವರಿಯಾಗಿ 1,500ರೂ.ಗಳ ರಿಯಾಯಿತಿ ಮತ್ತು 18 ತಿಂಗಳವರೆಗೆ ನೋ ಕಾಸ್ಟ್ EMI ಆಯ್ಕೆಯನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಅಮೆಜಾನ್ ಪ್ರಕಾರ, ಸೋನಿ ಬ್ರಾವಿಯಾ ಶ್ರೇಣಿಯು 28,990ರೂ.ಗಳಿಂದ ಲಭ್ಯವಿರುತ್ತದೆ. ಪ್ರೀಮಿಯಂ ಸೋನಿ 50 ಇಂಚಿನ 4K UHD ಗೂಗಲ್ ಟಿವಿ ಮೇಲೆ 30% ಡಿಸ್ಕೌಂಟ್ ಪಡೆದುಕೊಳ್ಳಬಹುದು. ಇದರೊಂದಿಗೆ ಗ್ರಾಹಕರು ತಮ್ಮ ಸೋನಿ ಟೆಲಿವಿಷನ್‌ಗಳ ಖರೀದಿಯ ಮೇಲೆ ಹೆಚ್ಚುವರಿ ಬ್ಯಾಂಕ್ ರಿಯಾಯಿತಿಗಳು ಮತ್ತು 18 ತಿಂಗಳ ನೊ-ಕಾಸ್ಟ್ EMI ಅನ್ನು ಸಹ ಪಡೆಯಬಹುದು.


Click it and Unblock the Notifications








