ಸದ್ಯದಲ್ಲೇ ಅಮೆಜಾನ್‌ ಪೇ ಮೂಲಕ ಕಿರುಸಾಲ ಸೌಲಭ್ಯ ಕೂಡ ಲಭ್ಯ!

|

ಜನಪ್ರಿಯ ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹಲವು ಸೇವೆಗಳನ್ನು ಒದಗಿಸಿದೆ. ಈಗಾಗಲೇ ಗ್ರಾಹಕರ ನಡುವೆ ಉತ್ತಮ ಸಂಪರ್ಕ ಸಾಧಿಸಲು ಅಮೆಜಾನ್‌ ಪೇ ಸೇವೆಯನ್ನು ಪರಿಚಯಿಸಿರೋದು ನಿಮಗೆಲ್ಲಾ ಗೊತ್ತೆ ಇದೆ. ಸದ್ಯ ಇದೀಗ ಅಮೆಜಾನ್ ತನ್ನ ಅಮೆಜಾನ್ ಪೇ ಸೇವೆಯ ಮೂಲಕ ಶೀಘ್ರದಲ್ಲೇ ಕಿರಾನಾ ಅಂಗಡಿಗಳಿಗೆ ಸಣ್ಣ ಸಾಲ ಮತ್ತು ವಿಮೆ ಸೇವೆಯನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ.

ಅಮೆಜಾನ್‌

ಹೌದು, ಅಮೆಜಾನ್‌ ತನ್ನ ಗ್ರಾಹಕರಿಗೆ ಅಮೆಜಾನ್‌ ಪೇ ಮೂಲಕ ಕಿರು ಸಾಲ ಸೌಲಭ್ಯ ಪಡೆದುಕೊಳ್ಳುವ ಅವಕಾಶ ನೀಡಲು ಮುಂದಾಗಿದೆ. ಇದಲ್ಲದೆ, ಆಫ್‌ಲೈನ್ ವ್ಯಾಪಾರಿ ಪಾಲುದಾರರು ‘ಅಮೆಜಾನ್ ಪೇ ಫಾರ್ ಬ್ಯುಸಿನೆಸ್' ಆಪ್ ಬಳಸಿ ತಮ್ಮದೇ ಆದ ಕ್ಯೂಆರ್ ಕೋಡ್‌ಗಳನ್ನು ರಚಿಸಲು ಸಹ ಅವಕಾಶ ನೀಡಿದೆ ಎಂದು ವರದಿ ಆಗಿದೆ. ಕಂಪನಿಯು ಪ್ರಸ್ತುತ ತನ್ನ ಪಾವತಿ ಮತ್ತು ಹಣಕಾಸು ಸೇವೆಗಳ ಅಡಿಯಲ್ಲಿ 5 ಮಿಲಿಯನ್ ವ್ಯಾಪಾರಿಗಳ ಜೊತೆಗೆ ಸಹಿ ಹಾಕಿದೆ ಎಂದು ಹೇಳಿಕೊಂಡಿದೆ. ಹಾಗಾದ್ರೆ ಅಮೆಜಾನ್‌ ಹೊಸದಾಗಿ ಯಾವೆಲ್ಲಾ ಪ್ಲ್ಯಾನ್‌ ರೂಪಿಸಿಕೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಯುಪಿಐ

ಇತ್ತೀಚಿನ ದಿನಗಳಲ್ಲಿ ಯುಪಿಐ ಆಧಾರಿತ ಪೇಮೆಂಟ್‌ ಸೇವೆ ನೀಡುವ ಅಪ್ಲಿಕೇಶನ್‌ಗಳು ಜನಪ್ರಿಯತೆ ಪಡೆದುಕೊಂಡಿವೆ. ಇದೇ ಕಾರಣಕ್ಕೆ ಅಮೆಜಾನ್‌ ಕೂಡ ತನ್ನ ಗ್ರಾಹಕರಿಗೆ ಅಮೆಜಾನ್‌ ಪೇ ಅಪ್ಲಿಕೇಶನ್‌ ಪರಿಚಯಿಸಿದೆ. ಈ ಅಪ್ಲಿಕೇಶನ್‌ ಬಳಸಿ ಪೇಮೆಂಟ್‌ ಮಾಡಬಹುದಾಗಿದೆ. ಸದ್ಯ ಇದೀಗ ಈ ಅಪ್ಲಿಕೇಶನ್‌ ಬಳಸಿ ಕಿರುಸಾಲ ಪಡೆಯುವ ಸೌಲಭ್ಯ ಕೂಡ ದೊರೆಯಲಿದೆ. ಇದಕ್ಕಾಗಿ ಅಮೆಜಾನ್‌ ಕಂಪನಿಯು ತನ್ನ ಸ್ಥಳೀಯ ಅಂಗಡಿಗಳ ಕಾರ್ಯಕ್ರಮದಡಿ 2025 ರ ವೇಳೆಗೆ ಸುಮಾರು ಒಂದು ಮಿಲಿಯನ್ ಆಫ್‌ಲೈನ್ ಕಿರಾನಾ ಮಳಿಗೆಗಳನ್ನು ತನ್ನ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗೆ ತರಲು ಪ್ಲ್ಯಾನ್‌ ರೂಪಿಸಿದೆ. ಸ್ಥಳೀಯ ಸ್ಟೋರ್‌ಗಳಿಗೆ ಹಣಕಾಸಿನ ನೆರವು ನೀಡಲು ಕಿರು ಸಾಲ ನೀಡಲಿದೆ.

ಅಮೆಜಾನ್‌

ಅಮೆಜಾನ್‌ ಕಂಪನಿಯು ತನ್ನ ವ್ಯವಹಾರ ಅಪ್ಲಿಕೇಶನ್‌ನಲ್ಲಿ ಹೊಸ ಸೇವೆಗಳನ್ನು ನೀಡಲು ನೋಡುತ್ತಿದೆ.ಲೋಕಲ್‌ ಸ್ಟೋರ್‌ಗಳಿಗಾಗಿ ತನ್ನ ಹೊಸ ಕೊಡುಗೆಗಳಿಗೆ ಮಾರುಕಟ್ಟೆ-ಸೂಕ್ತವಾದ ಉತ್ಪನ್ನವನ್ನು ಅರ್ಥಮಾಡಿಕೊಳ್ಳಲು ಇನ್ನೂ ಪ್ರಯತ್ನಿಸುತ್ತಿದೆ. ಆದರಿಂದ ಕಿರು ಸಾಲ ಸೌಲಭ್ಯವವನ್ನು ನೀಡಲು ಮುಂದಾಗಿದೆ. ನಗದು ಡಿಜಿಟಲೀಕರಣ ಮತ್ತು ಅದರ ಕ್ರೆಡಿಟ್ ಕೊಡುಗೆಯನ್ನು ಅಳೆಯುವುದಕ್ಕೆ ಮುಂದಾಗಿದೆ. ಇನ್ನು ಕ್ರೆಡಿಟ್ ಗ್ರಾಹಕರಿಗೆ ಹೆಚ್ಚು ಕನ್ಸೂಮ್‌ ಮಾಡಲು ಅನುವು ಮಾಡಿಕೊಡುತ್ತದೆ ಮತ್ತು ನಗದು ಡಿಜಿಟಲೀಕರಣವು ಕಂಪನಿಯು ಗ್ರಾಹಕರಿಗೆ ಹೆಚ್ಚಿನ ಹಂತದಲ್ಲಿ ನಂತರದ ದಿನಗಳಲ್ಲಿ ಹೆಚ್ಚಿನ ಸೇವೆಗಳನ್ನು ನೀಡಲು ಅನುವು ಮಾಡಿಕೊಡುತ್ತದೆ.

ಅಮೆಜಾನ್ ಪೇ

ಇದಲ್ಲದೆ ಕಿರಾನಾ ಪಾಲುದಾರರಿಗೆ ದಾಸ್ತಾನು ನಿರ್ವಹಿಸಲು ಮತ್ತು ಸ್ವಯಂಚಾಲಿತಗೊಳಿಸಲು, ಖರೀದಿ ಆದೇಶಗಳನ್ನು ಕಳುಹಿಸಲು ಮತ್ತು ಬಿಲ್ಲಿಂಗ್‌ಗಳನ್ನು ನಿರ್ವಹಿಸಲು ಅಮೆಜಾನ್ ಇಂಡಿಯಾ ಇತ್ತೀಚೆಗೆ ಪರ್ಪೂಲ್ ಅನ್ನು ಸ್ವಾಧೀನಪಡಿಸಿಕೊಂಡಿದೆ. ಅದರಲ್ಲೂ ಅಮೆಜಾನ್ ಪೇ ಕಳೆದ ವರ್ಷ ಸ್ಮಾರ್ಟ್ ಸ್ಟೋರ್ ಅನ್ನು ಸಹ ಪ್ರಾರಂಭಿಸಿದೆ. ಇದು ಬಳಕೆದಾರರಿಗೆ ಕ್ಯೂಆರ್ ಕೋಡ್‌ಗಳನ್ನು ಆಫ್‌ಲೈನ್ ಅಂಗಡಿಗಳಲ್ಲಿ ಸ್ಕ್ಯಾನ್ ಮಾಡಲು ಮತ್ತು ಅಂಗಡಿಯೊಳಗೆ ದಾಸ್ತಾನು ಇರುವ ಎಲ್ಲಾ ಉತ್ಪನ್ನಗಳನ್ನು ಅನ್ವೇಷಿಸಲು ಅವಕಾಶ ಮಾಡಿಕೊಟ್ಟಿದೆ. ಇದೆಲ್ಲದರ ಮೂಲಕ ಅಮೆಜಾನ್‌ ಸ್ಥಳೀಯ ಮಟ್ಟದಲ್ಲೂ ತನ್ನ ಪ್ರಾಬಲ್ಯವನ್ನು ವಿಸ್ತರಿಸುವ ಉದ್ದೇಶದಿಂದ ಕಿರುಸಾಲ ಸೌಲಭ್ಯವನ್ನು ನೀಡುವುದಕ್ಕೆ ಮುಂದಾಗಿದೆ.

Most Read Articles
Best Mobiles in India

English summary
Amazon Pay is looking to offer new services on its business app and is still trying to understand the product, market-fit for kirana stores.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X