Home
ಸುದ್ದಿಜಾಲ

ಫ್ಲಿಪ್‌ಕಾರ್ಟ್‌ ಮೂಲಕ ಅಮೆಜಾನ್ ವಿರುದ್ಧ ತೊಡೆ ತಟ್ಟಲಿದೆ ವಾಲ್‌ಮಾರ್ಟ್: ಬಹು ದೊಡ್ಡ ಸೇಲ್‌...!

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಇ-ಕಾರ್ಮಸ್ ಕಂಪನಿಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ ಕಂಪನಿಗಳು ಮತ್ತೊಂದು ದೊಡ್ಡ ಪ್ರಮಾಣದ ಸೇಲ್ ನಲ್ಲಿ ಎದುರು-ಬದುರಾಗಲಿವೆ. ಫ್ಲಿಪ್‌ಕಾರ್ಟ್‌ ಮೂಲಕ ಅಮೆಜಾನ್ ವಿರುದ್ಧ ತೊಡೆ ತಟ್ಟಲು ವಾಲ್‌ಮಾರ್ಟ್ ದೊಡ್ಡ ಮಟ್ಟದಲ್ಲಿ ಸೇಲ್‌ವೊಂದನ್ನು ಆಯೋಜಿಸಲಿದೆ. ಅಮೆಜಾನ್‌ ಸಹ ಸೇಲ್‌ ಅನ್ನು ಘೋಷಿಸಲಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಖರೀದಿದಾರರಿಗೆ ಹಬ್ಬ ಎಂದರೆ ತಪ್ಪಾಗುವುದಿಲ್ಲ.

ಫ್ಲಿಪ್‌ಕಾರ್ಟ್‌ ಮೂಲಕ ಅಮೆಜಾನ್ ವಿರುದ್ಧ ತೊಡೆ ತಟ್ಟಲಿದೆ ವಾಲ್‌ಮಾರ್ಟ್..!

ಇದೇ ಮೊದಲ ಬಾರಿಗೆ ಫ್ಲಿಪ್‌ಕಾರ್ಟ್ ಮೂಲಕ ಭಾರತೀಯ ಇ-ಕಾರ್ಮಸ್ ಮಾರುಕಟ್ಟೆಯಲ್ಲಿ ಕಾಲಿಟ್ಟಿರುವ ವಾಲ್‌ವಾರ್ಟ್, ಅಮೆರಿಕಾದಲ್ಲಿ ನೇರಾ ಪ್ರತಿ ಸ್ಪರ್ಧಿಯಾಗಿರುವ ಅಮೆಜಾನ್‌ನೊಂದಿಗೆ ಇಲ್ಲಿಯೂ ಸ್ಪರ್ಧೆಯನ್ನು ನಡೆಸಲಿದೆ. ಇದಕ್ಕದಾಗಿ ಶುರುವಾಗಲಿರುವ ಹಬ್ಬದ ಸಿಜನ್ ನಲ್ಲಿ ದೊಡ್ಡ ಮಟ್ಟದ ಸೇಲ್‌ವೊಂದನ್ನು ಆಯೋಜಿಸಲಿದೆ. ಇದರಿಂದಾಗಿ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರಗು ದೊರೆಯಲಿದೆ ಎನ್ನಲಾಗಿದೆ.

ಗಣೇಶ ಹಬ್ಬ ಮತ್ತು ದೀಪಾವಳಿಗೆ ಭರ್ಜರಿ ಸೇಲ್:

ಗಣೇಶ ಹಬ್ಬ ಮತ್ತು ದೀಪಾವಳಿಗೆ ಭರ್ಜರಿ ಸೇಲ್:

ಈಗ ತಾನೇ ಫ್ರೀಡಮ್ ಸೇಲ್ ಆಯೋಜಿಸಿದ್ದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್, ಮತ್ತೊಂದು ಸೇಲ್‌ಗೆ ಭರ್ಜರಿ ತಯಾರಿಯನ್ನು ನಡೆಸಿವೆ. ದೇಶದಲ್ಲಿ ಜೋರಾಗಿ ನಡೆಯಲಿರುವ ಗಣೇಶ ಹಬ್ಬ ಮತ್ತು ದೀಪಾವಳಿ ಮುಂಚೆಯೇ ಸೇಲ್ ವೊಂದನ್ನು ಆಯೋಜಿಸಲು ಮುಂದಾಗಿವೆ. ಈ ಸಂದರ್ಭದಲ್ಲಿ ಬಹುತೇಕ ಎಲ್ಲಾ ವರ್ಗದ ವಸ್ತುಗಳ ಮೇಲೆ ದೊಡ್ಡ ಮಟ್ಟದ ಆಫರ್ ಗಳನ್ನು ನೀಡಲಿವೆ ಎನ್ನಲಾಗಿದೆ.

ವಾಲ್‌ಮಾರ್ಟ್ ಆಫರ್:

ವಾಲ್‌ಮಾರ್ಟ್ ಆಫರ್:

ಈಗಾಗಲೇ ವಾಲ್‌ಮಾರ್ಟ್ ಫ್ಲಿಪ್‌ಕಾರ್ಟ್‌ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಈ ಹಿನ್ನಲೆಯಲ್ಲಿ ಹೊಸದಾಗಿ ಫ್ಲಿಪ್‌ಕಾರ್ಟ್ ಪ್ಲಸ್ ಸೇವೆಗೆ ಚಾಲನೆಯನ್ನು ನೀಡಿದೆ. ಇದೇ ಸಂದರ್ಭದಲ್ಲಿ ಮತ್ತಷ್ಟು ಬಳಕೆದಾರರನ್ನು ಒಂದೇ ಏಟಿಗೆ ಸೆಳೆಯುವ ಸಲುವಾಗಿ ವಾಲಾಮಾರ್ಟ್‌ ಈ ಬಾರಿಯ ಸೇಲ್‌ನಲ್ಲಿ ಅಚ್ಚರಿಯ ಆಫರ್‌ಗಳನ್ನು ನೀಡಲಿದೆ ಎನ್ನಲಾಗಿದೆ. ಮೊದಲ ಬಾರಿಗೆ ಅತೀ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುವ ಯೋಜನೆ ರೂಪಿಸಿದೆ.

ದೀರ್ಘಕಾಲದ ಆಫರ್:

ದೀರ್ಘಕಾಲದ ಆಫರ್:

ಇನ್ನು ಒಂದರ ಹಿಂದೆ ಒಂದು ಹಬ್ಬಗಳು ಶುರುವಾಗುವ ಹಿನ್ನಲೆಯಲ್ಲಿ ಈ ಬಾರಿ ಹೊಸದಾಗಿ ದೀರ್ಘಕಾಲದ ಆಫರ್ ಅನ್ನು ಪರಿಚಯ ಮಾಡುವ ಸಾಧ್ಯತೆಯೂ ಹೆಚ್ಚಾಗಿದೆ. ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ನವರಾತ್ರಿ, ದೀಪಾವಳಿ ಒಂದರ ಹಿಂದೆ ಒಂದು ಇರುವ ಕಾರಣಕ್ಕೆ ಒಂದೇ ಬಾರಿ ದೀರ್ಘಕಾಲದ ಆಫರ್ ನೀಡುವ ಸಾಧ್ಯತೆ ಹೆಚ್ಚಾಗಿದೆ.

ಮೊಬೈಲ್ ಮೇಲೆ ಭಾರೀ ಆಫರ್:

ಮೊಬೈಲ್ ಮೇಲೆ ಭಾರೀ ಆಫರ್:

ಈ ಬಾರಿ ಆಯೋಜಿಸುವ ಆಫರ್ ನಲ್ಲಿ ಗೃಹೋಪಯೋಗಿ ವಸ್ತುಗಳು, ಲ್ಯಾಪ್ ಟಾಪ್ ಮೇಲೆ ಭಾರೀ ಡಿಸ್ಕೌಂಟ್ ಘೋಷಣೆಯಾಗುವ ಸಾಧ್ಯತೆ ಇದ್ದು, ಇದರೊಂದಿಗೆ ಸ್ಮಾರ್ಟ್‌ಫೋನ್‌ಗಳ ಮೇಲೆ ಹಿಂದೆಂದೂ ಕಂಡಿರದ ಆಫರ್‌ಗಳನ್ನು ಲಾಂಚ್ ಮಾಡುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸ ಬಯಸುವವರು ಕೊಂಚ ದಿನ ಕಾಯುವುದು ಉತ್ತಮ.

ಬಟ್ಟೆ ಮೇಲೆ:

ಬಟ್ಟೆ ಮೇಲೆ:

ಈ ಬಾರಿ ಹಬ್ಬಗಳಲ್ಲಿ ಫ್ಯಾಷನ್ ಮೇಲೆ ಹೆಚ್ಚಿನ ಗಮನವನ್ನು ಎರಡು ಕಂಪನಿಗಳು ನೀಡಲಿದ್ದು, ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಟ್ಟೆ ಖರೀದಿಯುವ ನಡೆಯುವ ಹಿನ್ನಲೆಯಲ್ಲಿ ಹಬ್ಬಕ್ಕಾಗಿಯೇ ಬಟ್ಟೆಗಳ ಮೇಲೆ ಬೊಂಬಾಟ್ ಆಫರ್ ಗಳನ್ನು ನೀಡುವ ಸಾಧ್ಯತೆಯೂ ಹೆಚ್ಚಿನ ಪ್ರಮಾಣದಲ್ಲಿದೆ.

Best Mobiles in India

English summary
Amazon vs Flipkart: This Diwali sale may offer 'best-ever' discounts. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+