ಅಮೆಜಾನ್ Year End Sale: ದಾಖಲೆಯ ಕಡಿಮೆ ಬೆಲೆಗೆ OnePlus 13 ಸೇಲ್!
ಅಮೆಜಾನ್‌ನ Year End Sale 2025 ಭಾರತೀಯ ಗ್ರಾಹಕರ ಗಮನ ಸೆಳೆಯುವಂತೆ ಭರ್ಜರಿ ಡೀಲ್‌ಗಳನ್ನು ತಂದಿದೆ. ವರ್ಷಾತ್ಯಂದ ಈ ಸೇಲ್‌ನಲ್ಲಿ ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು ಮತ್ತು ದಿನನಿತ್ಯದ ಗ್ಯಾಜೆಟ್‌ಗಳ ಜೊತೆಗೆ, ಪ್ರೀಮಿಯಂ ಸ್ಮಾರ್ಟ್‌ಫೋನ್ ವಿಭಾಗದಲ್ಲೂ ಆಕರ್ಷಕ ರಿಯಾಯಿತಿಗಳು ಲಭ್ಯವಾಗುತ್ತಿವೆ. ಈ ಸೇಲ್‌ನ ಪ್ರಮುಖ ಆಕರ್ಷಣೆಯಾಗಿ OnePlus 13 ಇದೀಗ ಕಡಿತ ಬೆಲೆಯಲ್ಲಿ ದೊರೆಯುತ್ತಿದ್ದು, ಸರಿಯಾದ ಬ್ಯಾಂಕ್ ಮತ್ತು ಎಕ್ಸ್ಚೇಂಜ್ ಆಫರ್‌ಗಳನ್ನು ಬಳಸಿಕೊಂಡರೆ ಈ ಫ್ಲ್ಯಾಗ್‌ಶಿಪ್ ಫೋನ್ ₹40,000 ಕ್ಕಿಂತ ಕಡಿಮೆ ದರದಲ್ಲಿಯೂ ಕೈಗೆಟುಕುವ ಸಾಧ್ಯತೆ ಇದೆ.
ಹೌದು, OnePlus 13 (12GB RAM ಮತ್ತು 256GB ಸ್ಟೋರೇಜ್) ಮಾದರಿ ಅಮೆಜಾನ್‌ನಲ್ಲಿ ಈಗ ₹63,999 (ಇದರ ಮೂಲ ಬೆಲೆ ₹72,999) ದರಕ್ಕೆ ಲಭ್ಯವಿದೆ. ಇದು ಅದರ ಅಧಿಕೃತ ಲಾಂಚ್ ಬೆಲೆಗಿಂತ ಅತ್ಯಂತ ಕಡಿಮೆ ಬೆಲೆಯಾಗಿದೆ. ಇದರ ಜೊತೆಗೆ HDFC ಹಾಗೂ Axis ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿ ಮಾಡಿದರೆ ₹4,000 ತಕ್ಷಣದ ಡಿಸ್ಕೌಂಟ್ ಸಿಗುತ್ತದೆ. ಈ ಫೋನ್ ಖರೀದಿಗೆ ಮತ್ತೊಂದು ದೊಡ್ಡ ಲಾಭ ಎಂದರೆ, ಅಮೆಜಾನ್ ಅತ್ಯುತ್ತಮ ಎಕ್ಸ್ಚೇಂಜ್ ಆಫರ್ ಕೂಡ ಒದಗಿಸಿದ್ದು, ಬಳಕೆದಾರರು ತಮ್ಮ ಹಳೆಯ ಸ್ಮಾರ್ಟ್‌ಫೋನ್ ವಿನಿಮಯದ ಮೇಲೆ ಭಾರೀ ಉಳಿತಾಯ ಮಾಡಬಹುದು.
ನಿಮ್ಮ ಹಳೆಯ ಫೋನ್‌ನ ಸ್ಥಿತಿ ಮತ್ತು ಬ್ರ್ಯಾಂಡ್ ಅನ್ನು ಅವಲಂಬಿಸಿ ಎಕ್ಸ್ಚೇಂಜ್ ಮೌಲ್ಯ ₹20,000 ಅಥವಾ ಅದಕ್ಕಿಂತ ಹೆಚ್ಚಿನದನ್ನು ಪಡೆಯಲು ಅಮೆಜಾನ್ ಅವಕಾಶ ಕಲ್ಪಿಸಿದೆ. ಈ ಮೂಲಕ OnePlus 13 ರ ಪರಿಣಾಮಕಾರಿ ಬೆಲೆ ₹40,000 ಗಡಿಯನ್ನು ತಲುಪುತ್ತದೆ. ವರ್ಷಾಂತ್ಯದ ಮೊದಲು ಸ್ಮಾರ್ಟ್‌ಫೋನ್ ಅಪ್‌ಗ್ರೇಡ್ ಮಾಡಲು ಯೋಜಿಸುವವರಿಗೆ, ಈ ಡೀಲ್ OnePlus 13 ಅನ್ನು ಪ್ರಸ್ತುತ ಪ್ರೀಮಿಯಂ ವಿಭಾಗದಲ್ಲಿ ಅತ್ಯಂತ ಆಕರ್ಷಕ ಕೊಡುಗೆಗಳಲ್ಲಿ ಒಂದಾಗಿ ಕಾಣಿಸುತ್ತಿದೆ. ಏಕೆಂದರೆ, ಈ ಫೋನ್ ಪ್ರಸ್ತುತವೂ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿರುವ ಆಲ್-ಇನ್-ಒನ್ ಸಾಧನವಾಗಿದೆ.

2025 ರಲ್ಲೂ ಖರೀದಿಗೆ ಯೋಗ್ಯವಾಗಿದೆಯೇ?
ಹೌದು, 2025 ರಲ್ಲೂ OnePlus 13 ಸಾಧನವು ಖರೀದಿಗೆ ಯೋಗ್ಯವಾಗಿದೆ. ಇದರಲ್ಲಿನ ಪ್ರೀಮಿಯಂ ಡಿಸ್‌ಪ್ಲೇ, ಬಲಿಷ್ಠ ಕಾರ್ಯಕ್ಷಮತೆ, ಉತ್ತಮ ಕ್ಯಾಮೆರಾ ಮತ್ತು ದೀರ್ಘ ಬ್ಯಾಟರಿ ಲೈಫ್ ಪ್ರಸ್ತುತವೂ ಅತ್ಯುತ್ತಮ ಕೊಡುಗೆಯನ್ನಾಗಿ ಮಾಡುತ್ತವೆ. ಏಕೆಂದರೆ,
ಡಿಸ್‌ಪ್ಲೇ ವಿಷಯದಲ್ಲಿ OnePlus 13 ತನ್ನದೇ ಆದ ಸ್ಥಾನ ಹೊಂದಿದೆ. ಇದರಲ್ಲಿ 6.82 ಇಂಚಿನ ಕ್ವಾಡ್-ಕರ್ವ್ಡ್ AMOLED ಪರದೆ ನೀಡಲಾಗಿದ್ದು, 2K ರೆಸಲ್ಯೂಷನ್ ಮತ್ತು 120Hz ರಿಫ್ರೆಶ್ ರೇಟ್ ಬೆಂಬಲಿಸುತ್ತದೆ. ಡಾಲ್ಬಿ ವಿಷನ್ HDR ಮತ್ತು ಹೆಚ್ಚಿನ ಬ್ರೈಟ್‌ನೆಸ್ ಇರುವುದರಿಂದ ಸಿನಿಮಾ ವೀಕ್ಷಣೆ, ಗೇಮಿಂಗ್ ಹಾಗೂ ಹೊರಗಡೆ ಬಳಕೆ ಎಲ್ಲಕ್ಕೂ ಇದು ಸೂಕ್ತವಾಗಿದೆ.
ಕಾರ್ಯಕ್ಷಮತೆಯ ಭಾಗದಲ್ಲಿ, OnePlus 13 Qualcomm Snapdragon 8 Elite ಪ್ರೊಸೆಸರ್‌ನೊಂದಿಗೆ ಬರುತ್ತದೆ. LPDDR5X RAM ಮತ್ತು UFS 4.0 ಸ್ಟೋರೇಜ್‌ನ ಸಂಯೋಜನೆ ವೇಗವಾದ ಆ್ಯಪ್ ಲೋಡಿಂಗ್ ಮತ್ತು ಸ್ಮೂತ್ ಮಲ್ಟಿಟಾಸ್ಕಿಂಗ್ ಅನುಭವ ನೀಡುತ್ತದೆ. 2025ರಲ್ಲೂ ಈ ಚಿಪ್‌ಸೆಟ್ ದಿನನಿತ್ಯದ ಬಳಕೆ ಮತ್ತು ಹೆವಿ ಟಾಸ್ಕ್‌ಗಳಿಗೆ ಸಾಕಷ್ಟು ಶಕ್ತಿಯುತವಾಗಿದೆ.
ಫೋಟೋಗ್ರಫಿ ಪ್ರಿಯರಿಗೆ OnePlus 13 ನಿರಾಸೆ ಮಾಡೋದಿಲ್ಲ. ಫೋನ್‌ನಲ್ಲಿ 50MP Sony ಪ್ರೈಮರಿ ಕ್ಯಾಮೆರಾ, 50MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 3x ಆಪ್ಟಿಕಲ್ ಜೂಮ್ ಹೊಂದಿರುವ 50MP ಟೆಲಿಫೋಟೋ ಕ್ಯಾಮೆರಾ ನೀಡಲಾಗಿದೆ. ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳಿಗೆ 32MP ಫ್ರಂಟ್ ಕ್ಯಾಮೆರಾ ಲಭ್ಯವಿದೆ, ಇದು ಸ್ಪಷ್ಟ ಚಿತ್ರಗಳು ಮತ್ತು ವಿಡಿಯೋಗಳನ್ನು ನೀಡುತ್ತದೆ.
ಬ್ಯಾಟರಿಯ ವಿಚಾರಕ್ಕೆ ಬಂದರೆ, OnePlus 13 ನಲ್ಲಿ ದೊಡ್ಡ 6,000mAh ಬ್ಯಾಟರಿ ಇದೆ. 100W ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಇರುವುದರಿಂದ ಕಡಿಮೆ ಸಮಯದಲ್ಲಿ ಚಾರ್ಜ್ ಆಗುತ್ತದೆ. ಜೊತೆಗೆ IP68 ಮತ್ತು IP69 ರೇಟಿಂಗ್‌ಗಳು ಫೋನ್‌ಗೆ ಧೂಳು ಮತ್ತು ನೀರಿನಿಂದ ಹೆಚ್ಚುವರಿ ರಕ್ಷಣೆ ಒದಗಿಸುತ್ತವೆ.


Click it and Unblock the Notifications








