Home
ಸುದ್ದಿಜಾಲ

ಅಮೆಜಾನ್ ಎಲೆಕ್ಟ್ರಾನಿಕ್ಸ್ ಪ್ರೀಮಿಯರ್ ಲೀಗ್ ಆರಂಭ: 5 ದಿನ ರಿಯಾಯಿತಿಗಳ ಸುರಿಮಳೆ!

ಇ-ಕಾಮರ್ಸ್ ದೈತ್ಯ ಅಮೆಜಾನ್ ಇಂಡಿಯಾ, ಭಾರತೀಯ ಗ್ರಾಹಕರಿಗಾಗಿ "ಎಲೆಕ್ಟ್ರಾನಿಕ್ಸ್ ಪ್ರೀಮಿಯರ್ ಲೀಗ್" ಎಂಬ ಹೆಸರಿನಲ್ಲಿ ಆರು ದಿನಗಳ ಭರ್ಜರಿ ಮಾರಾಟವನ್ನು ಆಯೋಜಿಸಿದೆ. ಇದೇ ಮಾರ್ಚ್ 21 ರಿಂದ ಮಾರ್ಚ್ 26, 2025 ರವರೆಗೆ ನಡೆಯುವ ಈ ಮಾರಾಟದಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್ ಟಿವಿಗಳು ಮತ್ತು ಗೃಹೋಪಯೋಗಿ ವಸ್ತುಗಳ ಮೇಲೆ ಭರ್ಜರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಸ್ಯಾಮ್‌ಸಂಗ್, ಜೆಬಿಎಲ್, ಒನ್‌ಪ್ಲಸ್, ಐಕ್ಯೂಒಒ, ಎಲ್‌ಜಿ, ಸೋನಿ ಮುಂತಾದ ಪ್ರಸಿದ್ಧ ಬ್ರ್ಯಾಂಡ್‌ಗಳ ಉತ್ಪನ್ನಗಳಿಗೆ ವಿಶೇಷ ಡೀಲ್‌ಗಳು ಲಭ್ಯವಿವೆ. ಈ ಮಾರಾಟದ ಅವಧಿಯಲ್ಲಿ, ಗ್ರಾಹಕರು ವಿವಿಧ ವಿಭಾಗಗಳಲ್ಲಿ ಶೇಕಡಾ 75 ರಷ್ಟು ರಿಯಾಯಿತಿಗಳನ್ನು ಪಡೆಯಬಹುದು. ಜೊತೆಗೆ, ನೋ ಕಾಸ್ಟ್ ಇಎಂಐ ಆಯ್ಕೆಗಳು ಮತ್ತು ಐಸಿಐಸಿಐ ಮತ್ತು ಆಕ್ಸಿಸ್ ಬ್ಯಾಂಕ್ ಕಾರ್ಡ್‌ಗಳಿಗೆ ವಿಶೇಷ ಬ್ಯಾಂಕ್ ರಿಯಾಯಿತಿಗಳು ಕೂಡ ಲಭ್ಯವಿದೆ ಎಂದು ಕಂಪನಿಯು ತಿಳಿಸಿದೆ. ಹಾಗಾದರೆ, ಅಮೆಜಾನ್ ಎಲೆಕ್ಟ್ರಾನಿಕ್ಸ್ ಪ್ರೀಮಿಯರ್ ಲೀಗ್ ಒದಗಿಸುತ್ತಿರುವ ಪ್ರಮುಖ ಕೊಡುಗೆಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಸ್ಮಾರ್ಟ್‌ಫೋನ್‌ಗಳು ಮತ್ತು ಪರಿಕರಗಳು: ಶೇಕಡಾ 40 ರವರೆಗೆ ರಿಯಾಯಿತಿ, ಫ್ಲ್ಯಾಗ್‌ಶಿಪ್ ಮಾದರಿಗಳು ತಿಂಗಳಿಗೆ ₹1,999 ರಿಂದ ಪ್ರಾರಂಭವಾಗುವ ನೋ ಕಾಸ್ಟ್ ಇಎಂಐನಲ್ಲಿ ಲಭ್ಯವಿದೆ.
ಸ್ಮಾರ್ಟ್ ಟಿವಿಗಳು ಮತ್ತು ಪ್ರೊಜೆಕ್ಟರ್‌ಗಳು: ಶೇಕಡಾ 65 ರವರೆಗೆ ರಿಯಾಯಿತಿ, 4K ಟಿವಿಗಳು ತಿಂಗಳಿಗೆ ₹750 ರಿಂದ ಪ್ರಾರಂಭವಾಗುವ ನೋ ಕಾಸ್ಟ್ ಇಎಂಐನಲ್ಲಿ ಲಭ್ಯವಿದೆ.
ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಹೆಡ್‌ಫೋನ್‌ಗಳು: ಶೇಕಡಾ 75 ರವರೆಗೆ ಉಳಿತಾಯ, ಟ್ಯಾಬ್ಲೆಟ್‌ಗಳು ತಿಂಗಳಿಗೆ ₹2,999 ರಿಂದ ಪ್ರಾರಂಭವಾಗುವ ನೋ ಕಾಸ್ಟ್ ಇಎಂಐನಲ್ಲಿ ಲಭ್ಯವಿದೆ.
ದೊಡ್ಡ ಉಪಕರಣಗಳು: ಎಸಿಗಳು, ರೆಫ್ರಿಜರೇಟರ್‌ಗಳು ಮತ್ತು ವಾಷಿಂಗ್ ಮೆಷಿನ್‌ಗಳ ಮೇಲೆ ₹10,000 ವರೆಗೆ ರಿಯಾಯಿತಿ, ಜೊತೆಗೆ 18 ತಿಂಗಳವರೆಗೆ ನೋ ಕಾಸ್ಟ್ ಇಎಂಐ.
ಆಡಿಯೋ ಮತ್ತು ಕ್ಯಾಮೆರಾ ಡೀಲ್‌ಗಳು: ತಿಂಗಳಿಗೆ ₹949 ಕ್ಕೆ ಡಾಲ್ಬಿ ಆಡಿಯೋ ಸೌಂಡ್‌ಬಾರ್‌ಗಳು, ತಿಂಗಳಿಗೆ ₹1,799 ಕ್ಕೆ ಎಎನ್‌ಸಿ ಹೆಡ್‌ಫೋನ್‌ಗಳು ಮತ್ತು ತಿಂಗಳಿಗೆ ₹8,999 ಕ್ಕೆ ನೋ ಕಾಸ್ಟ್ ಇಎಂಐನಲ್ಲಿ ಪ್ರೀಮಿಯಂ ಕ್ಯಾಮೆರಾಗಳು ಲಭ್ಯವಿವೆ.

ಅಮೆಜಾನ್ ಎಲೆಕ್ಟ್ರಾನಿಕ್ಸ್ ಪ್ರೀಮಿಯರ್ ಲೀಗ್ ಆರಂಭ: 5 ದಿನ ರಿಯಾಯಿತಿಗಳ ಸುರಿಮಳೆ!

ಸ್ಮಾರ್ಟ್‌ಫೋನ್ ಪ್ರಿಯರಿಗೆ ವಿಶೇಷ ಕೊಡುಗೆಗಳು
ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವವರಿಗೆ, ಸ್ಯಾಮ್‌ಸಂಗ್ ಗ್ಯಾಲಕ್ಸಿ M35 5G (₹13,999), ರೆಡ್ಮಿ A4 (₹8,299), ಐಕ್ಯೂಒಒ Z9s 5G (₹17,499), ಒನ್‌ಪ್ಲಸ್ 13R (₹39,999) ಮತ್ತು ಐಕ್ಯೂಒಒ ನಿಯೋ 10R 5G (₹24,999) ಸೇರಿದಂತೆ ಹಲವು ಆಕರ್ಷಕ ಡೀಲ್‌ಗಳು ಲಭ್ಯವಿವೆ. ಜೊತೆಗೆ, ಒನ್‌ಪ್ಲಸ್ ನಾರ್ಡ್ ಬಡ್ಸ್ 3 ಪ್ರೊ (₹2,699) ಮತ್ತು ಅರ್ಬನ್ 20000mAh ಪವರ್ ಬ್ಯಾಂಕ್ (₹1,399) ಸಹ ಲಭ್ಯವಿವೆ.

ಗೃಹೋಪಯೋಗಿ ವಸ್ತುಗಳ ಮೇಲೆ ಭರ್ಜರಿ ರಿಯಾಯಿತಿ
ನಿಮ್ಮ ಮನೆಯನ್ನು ನವೀಕರಿಸಲು ಬಯಸುವವರಿಗೆ ಹೈಯರ್ 325L ಡಬಲ್ ಡೋರ್ ರೆಫ್ರಿಜರೇಟರ್ (₹28,990), ಸ್ಯಾಮ್‌ಸಂಗ್ 653L ಡಬಲ್ ಡೋರ್ ರೆಫ್ರಿಜರೇಟರ್ (₹66,990), ಡೈಕಿನ್ 1.5 ಟನ್ ಇನ್ವರ್ಟರ್ ಸ್ಪ್ಲಿಟ್ ಎಸಿ (₹37,240) ಮತ್ತು ಎಲ್‌ಜಿ 9 ಕೆಜಿ ಫುಲ್ ಆಟೋಮ್ಯಾಟಿಕ್ ವಾಷಿಂಗ್ ಮೆಷಿನ್ (₹32,990) ಸೇರಿದಂತೆ ಹಲವು ಉತ್ತಮ ಡೀಲ್‌ಗಳು ಲಭ್ಯವಿವೆ.

ಸ್ಮಾರ್ಟ್‌ಟಿವಿಗಳ ಮೇಲೆ ಆಫರ್‌ಗಳು
ಸ್ಮಾರ್ಟ್ ಟಿವಿಗಳಲ್ಲಿ, ಸೋನಿ ಬ್ರಾವಿಯಾ 3 ಸರಣಿ 55-ಇಂಚಿನ 4K ಸ್ಮಾರ್ಟ್ ಟಿವಿ (₹75,990) ಮತ್ತು ಸ್ಯಾಮ್‌ಸಂಗ್ 43-ಇಂಚಿನ 4K ಸ್ಮಾರ್ಟ್ ಎಲ್‌ಇಡಿ ಟಿವಿ (₹30,990) ರಿಯಾಯಿತಿ ದರದಲ್ಲಿ ಲಭ್ಯವಿವೆ.ಇಷ್ಟೇ ಅಲ್ಲದೆ, ಐಸಿಐಸಿಐ ಮತ್ತು ಆಕ್ಸಿಸ್ ಬ್ಯಾಂಕ್ ಕಾರ್ಡ್‌ದಾರರಿಗೆ ಶೇಕಡಾ 7.5 ರಿಯಾಯಿತಿ ಲಭ್ಯವಿದೆ. ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು ಶೇಕಡಾ 5 ರವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದ ಮತ್ತು ಅಮೆಜಾನ್ ಪೇ ಲೇಟರ್ ಬಳಸುವವರು ₹60,000 ವರೆಗೆ ಕ್ರೆಡಿಟ್ ಪಡೆಯಬಹುದು.

Best Mobiles in India

English summary
Amazon India has introduced the Electronics Premier League, a six-day shopping extravaganza featuring significant discounts on smartphones, laptops, smart TVs, and home appliances.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+