Home
ಸುದ್ದಿಜಾಲ

ಅಮೆಜಾನ್ ಸೇಲ್ 2025: ಸೆಪ್ಟೆಂಬರ್ 23ರಿಂದ ಆರಂಭ!..ಇಲ್ಲಿದೆ ಸಂಪೂರ್ಣ ಮಾಹಿತಿ!

ಅಮೆಜಾನ್ ಇಂಡಿಯಾ ತನ್ನ ಬಹುನಿರೀಕ್ಷಿತ 'ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2025' ಅನ್ನು ಇದೇ ಸೆಪ್ಟೆಂಬರ್ 23, 2025 ರಂದು ಆರಂಭಿಸುತ್ತಿದೆ. ಜಿಎಸ್‌ಟಿ ಕೌನ್ಸಿಲ್‌ನಿಂದ ಹೊಸ ಉತ್ಪನ್ನಗಳ ಮೇಲೆ ಭಾರೀ ತೆರಿಗೆ ರಿಯಾಯಿತಿ ದೊರೆತ ನಂತರ ಈ ಮಾಹಿತಿ ಹೊರಬಿದ್ದಿದ್ದು, ಈ ಬಾರಿ ಗ್ರಾಹಕರಿಗೆ ಮತ್ತಷ್ಟು ಉತ್ತಮ ಡೀಲ್‌ಗಳು ಲಭಿಸುವ ನಿರೀಕ್ಷೆ ಹೆಚ್ಚಾಗಿದೆ. ಪ್ರತಿ ವರ್ಷದಂತೆ, ಅಮೆಜಾನ್ ಪ್ರೈಮ್ ಸದಸ್ಯರು ಈ ಸೇಲ್‌ಗೆ 24 ಗಂಟೆಗಳ ಮೊದಲೇ ಪ್ರವೇಶ ಪಡೆದು ವಿಶೇಷ ರಿಯಾಯಿತಿಗಳನ್ನು ಪಡೆಯಬಹುದು. ಈ ವರ್ಷದ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.

ಭಾರಿ ರಿಯಾಯಿತಿಗಳು ಮತ್ತು ಡೀಲ್‌ಗಳು
ಈ ವರ್ಷದ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಟಿವಿಗಳು, ಗೃಹೋಪಯೋಗಿ ಉಪಕರಣಗಳು ಮತ್ತು ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳು ಲಭ್ಯವಿವೆ. ಸ್ಯಾಮ್‌ಸಂಗ್, ಆಪಲ್, ರಿಯಲ್‌ಮಿ, ಡೆಲ್ ಮತ್ತು ಅಸುಸ್‌ನಂತಹ ಪ್ರಮುಖ ಬ್ರ್ಯಾಂಡ್‌ಗಳ ಮೇಲೆ 40% ವರೆಗೆ ರಿಯಾಯಿತಿ ಘೋಷಿಸಲಾಗಿದೆ.

ಅಲ್ಲದೆ, ಎಚ್‌ಪಿ, ಬೋಟ್, ಮತ್ತು ಸೋನಿ ಸೇರಿದಂತೆ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ 80% ವರೆಗೆ ರಿಯಾಯಿತಿ ಸಿಗುವ ಸಾಧ್ಯತೆ ಇದೆ. ಗೃಹೋಪಯೋಗಿ ಉಪಕರಣಗಳಾದ ವಾಷಿಂಗ್ ಮೆಷಿನ್, ರೆಫ್ರಿಜರೇಟರ್ ಮತ್ತು ಸ್ಮಾರ್ಟ್ ಹೋಮ್ ಡಿವೈಸ್‌ಗಳ ಮೇಲೆ ಎಲ್‌ಜಿ, ಸ್ಯಾಮ್‌ಸಂಗ್, ಹೈಯರ್ ಮತ್ತು ಗೊದ್ರೆಜ್‌ನಂತಹ ಬ್ರ್ಯಾಂಡ್‌ಗಳಿಂದ 65% ವರೆಗೆ ರಿಯಾಯಿತಿ ನಿರೀಕ್ಷಿಸಲಾಗಿದೆ.

ಸ್ಯಾಮ್‌ಸಂಗ್ ಫೋನ್‌ಗಳ ಮೇಲೆ ವಿಶೇಷ ಗಮನ
ಈ ಸೇಲ್‌ನಲ್ಲಿ ಸ್ಯಾಮ್‌ಸಂಗ್ ಫೋನ್‌ಗಳಿಗೆ ವಿಶೇಷ ಮಹತ್ವ ನೀಡಲಾಗಿದೆ. ಕಳೆದ ವರ್ಷ ಬಿಡುಗಡೆಯಾದ Galaxy S24 Ultra, M06 5G, M16 5G, A55 5G, A56 5G, ಮತ್ತು A36 5G ಮಾಡೆಲ್‌ಗಳ ಮೇಲೆ ರಿಯಾಯಿತಿಗಳನ್ನು ಪಡೆಯಬಹುದು.

ಇದರ ಜೊತೆಗೆ, Galaxy Z Fold 6 ಮತ್ತು ಇತರ ಫೋಲ್ಡ್ ಮಾಡೆಲ್‌ಗಳು ಸಹ ಬಿಡುಗಡೆಯಾಗಲಿವೆ. ಅಮೆಜಾನ್‌ನ ಹೇಳಿಕೆಯ ಪ್ರಕಾರ, ಸ್ಯಾಮ್‌ಸಂಗ್ ಫೋನ್‌ಗಳ ಮೇಲೆ ₹10,000 ಕ್ಕಿಂತ ಹೆಚ್ಚು ಉಳಿತಾಯ ಮಾಡಬಹುದು.

ಅಮೆಜಾನ್ ಸೇಲ್ 2025: ಸೆಪ್ಟೆಂಬರ್ 23ರಿಂದ ಆರಂಭ!..ಇಲ್ಲಿದೆ ಸಂಪೂರ್ಣ ಮಾಹಿತಿ!

ಕೊಡುಗೆ ಮತ್ತು ಪಾವತಿ ಆಯ್ಕೆಗಳು
ಈ ಬಾರಿಯ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ SBI ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ಗ್ರಾಹಕರಿಗೆ 10% ತ್ವರಿತ ರಿಯಾಯಿತಿ ಸಿಗುತ್ತದೆ, ಇದು ಇಎಂಐ ವ್ಯವಹಾರಗಳಿಗೂ ಅನ್ವಯಿಸುತ್ತದೆ. ಇದರ ಜೊತೆಗೆ, ಅಮೆಜಾನ್ ಪೇ ಮತ್ತು ಐಸಿಐಸಿಐ ಕಾರ್ಡ್‌ಗಳ ಮೂಲಕ ವಹಿವಾಟು ನಡೆಸಿದರೆ ಕ್ಯಾಶ್‌ಬ್ಯಾಕ್ ಮತ್ತು ಇತರ ವಿಶೇಷ ಪ್ರಯೋಜನಗಳನ್ನು ಪಡೆಯಬಹುದು.

ಗ್ರಾಹಕರು ತಮ್ಮ ಹಳೆಯ ಫೋನ್‌ಗಳನ್ನು ವಿನಿಮಯ ಮಾಡಿಕೊಂಡು ಎಕ್ಸ್‌ಚೇಂಜ್ ಬೋನಸ್ ಪಡೆಯಬಹುದು. ಅಲ್ಲದೆ, ಇಎಂಐ ಮೂಲಕ ಖರೀದಿಸುವವರಿಗೆ ಬಡ್ಡಿರಹಿತ ಇಎಂಐ (No-cost EMI) ಆಯ್ಕೆಯೂ ಲಭ್ಯವಿದೆ.

ಪ್ರಮುಖ ದಿನಾಂಕಗಳು ಮತ್ತು ನಿರೀಕ್ಷೆಗಳು
ಅಮೆಜಾನ್ ಈ ಬೃಹತ್ ಸೇಲ ಸೆಪ್ಟೆಂಬರ್ 23 ಆರಂಭವಾಗಿ ಎಷ್ಟು ದಿನ ನಡೆಯಲಿದೆ ಎಂಬ ನಿಖರ ಅವಧಿಯನ್ನು ಇನ್ನೂ ಪ್ರಕಟಿಸಿಲ್ಲ. ಆದರೂ, ಕೆಲವು ಮೂಲಗಳ ಪ್ರಕಾರ, ಸೇಲ್ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 7 ರವರೆಗೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಿವೆ. ಈ ವರ್ಷದ ಜಿಎಸ್‌ಟಿ ದರ ಕಡಿತವು ಬೆಲೆಗಳನ್ನು ಮತ್ತಷ್ಟು ಇಳಿಸಬಹುದಾದ ಕಾರಣ, ಗ್ರಾಹಕರು ಈ ಸೇಲ್‌ನಲ್ಲಿ ಉತ್ತಮ ಖರೀದಿಗಳನ್ನು ಮಾಡುವ ಅವಕಾಶವಿದೆ. ಹೆಚ್ಚು ನಿಖರವಾದ ಮಾಹಿತಿಗಾಗಿ ಅಮೆಜಾನ್‌ನ ಅಧಿಕೃತ ಪ್ರಕಟಣೆಗಳನ್ನು ನಾವು ಗಮನಿಸುತ್ತಿದ್ದೇವೆ. ಏನಾದರೂ, ಅಧಿಕೃತ ಬದಲಾವಣೆ ಇದ್ದರೆ, ನಾವು ಅಪ್‌ಡೇಟ್ ಮಾಡುತ್ತೇವೆ.

Best Mobiles in India

English summary
Amazon Great Indian Festival Sale 2025 starts on September 23, offering early access for Prime members and discounts of up to 80% on electronics, fashion, home appliances, and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+