ಆಂಬ್ರೇನ್ ಸಂಸ್ಥೆಯಿಂದ ಹೊಸ ವಾಯರ್‌ಲೆಸ್ ಪವರ್‌ಬ್ಯಾಂಕ್ ಬಿಡುಗಡೆ: ಬೆಲೆ ಕೇವಲ 1,999ರೂ ಮಾತ್ರ!
ಜನಪ್ರಿಯ ಪವರ್‌ಬ್ಯಾಂಕ್ ತಯಾರಕ ಕಂಪೆನಿಗಳಲ್ಲಿ ಒಂದಾದ ಆಂಬ್ರೇನ್ ಹೊಸ ಪವರ್ ಬ್ಯಾಂಕ್ ಬಿಡುಗಡೆ ಮಾಡಿದೆ. ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಪವರ್‌ಬ್ಯಾಂಕ್‌ಗಳ ಬೇಡಿಕೆಗೆ ಅನುಗುಣವಾಗಿ ಹೊಸ ಆಂಬ್ರೇನ್ ಏರೋಸಿಂಕ್ ಕ್ವಾಡ್ 4 ಇನ್ 1 ವಾಯರ್‌ಲೆಸ್ ಪವರ್‌ಬ್ಯಾಂಕ್ ಅನ್ನು ಪರಿಚಯಿಸಿದೆ. ಇದು ಸಂಪೂರ್ಣವಾಗಿ ಭಾರತದಲ್ಲಿಯೇ ತಯಾರಾಗಿರುವ ಪವರ್‌ಬ್ಯಾಂಕ್ ಆಗಿದೆ.
ಹೌದು, ಆಂಬ್ರೇನ್ (Ambrane)ಕಂಪೆನಿ "ಮೇಡ್ ಇನ್ ಇಂಡಿಯಾ" ಉಪಕ್ರಮಕ್ಕೆ ಅನುಗುಣವಾಗಿ ಹೊಸ ಪವರ್ ಬ್ಯಾಂಕ್ ಬಿಡುಗಡೆ ಮಾಡಿದೆ. ಇದು ತನ್ನ ನಯವಾದ ವಿನ್ಯಾಸವನ್ನು ಹೊಂದಿದ್ದು, 10,000mAh ಸಾಮರ್ಥ್ಯವನ್ನು ಪಡೆದಿದೆ. ಈ ಪವರ್ ಬ್ಯಾಂಕ್ ಮಲ್ಟಿ ಡಿವೈಸ್‌ಗಳಿಗೆ ಚಾರ್ಜಿಂಗ್ ಮಾಡುವುದಕ್ಕೆ ಸೂಕ್ತವಾಗಿದೆ. ಹಾಗಾದ್ರೆ ಆಂಬ್ರೇನ್ ಏರೋಸಿಂಕ್ ಕ್ವಾಡ್ 4 ಇನ್ 1 ವಾಯರ್‌ಲೆಸ್ ಪವರ್‌ಬ್ಯಾಂಕ್ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಂಬ್ರೇನ್ ಏರೋಸಿಂಕ್ ಕ್ವಾಡ್ 4 ಇನ್ 1 ವಾಯರ್‌ಲೆಸ್ ಪವರ್‌ಬ್ಯಾಂಕ್ 10000mAh ಸಾಮರ್ಥ್ಯವನ್ನು ಹೊಂದಿದೆ. ಇದು ಕಾಂಪ್ಯಾಕ್ಟ್ ಮತ್ತು ಪೋರ್ಟಬಲ್ ಪವರ್ ಬ್ಯಾಂಕ್ ಆಗಿದ್ದು, ಎಲ್ಇಡಿ ಡಿಟೆಕ್ಟರ್‌ಗಳನ್ನು ಹೊಂದಿದೆ. ಇನ್ನು ಈ ಪವರ್ ಬ್ಯಾಂಕ್ Qi ಸಕ್ರಿಯಗೊಳಿಸಿದ ಡಿವೈಸ್‌ಗಳನ್ನು ಬೆಂಬಲಿಸಲಿದ್ದು, ಟೈಪ್-C ಮತ್ತು USB ಚಾರ್ಜಿಂಗ್ ಔಟ್‌ಪುಟ್‌ಗಳ ಮೂಲಕ 22.5W ವೇಗವನ್ನು ನೀಡಲಿದೆ. ಜೊತೆಗೆ ತ್ವರಿತ ಚಾರ್ಜ್ 3.0 ಮತ್ತು ಪವರ್ ಡೆಲಿವರಿಯೊಂದಿಗೆ ಹೊಂದಿಕೊಳ್ಳುತ್ತದೆ.
ಇನ್ನು ವಾಯರ್‌ಲೆಸ್ ಔಟ್‌ಪುಟ್‌ಗಾಗಿ 15W ಮತ್ತು 5W ಬೇಸ್ ವಾಯರ್‌ಲೆಸ್ ಔಟ್‌ಪುಟ್ ಅನ್ನು ಒಳಗೊಂಡಿದೆ. ಈ ಪವರ್ ಬ್ಯಾಂಕ್ ಟೈಪ್-ಸಿ ಪೋರ್ಟ್ ಮೂಲಕ 20W ವೇಗದ ಇನ್‌ಪುಟ್ ನೀಡಲಿದೆ. ಇದರ ಮೂಲಕ ಸ್ಪೀಡ್ ಆಟೋ ಚಾರ್ಜಿಂಗ್ ಅನ್ನು ಸಹ ಬೆಂಬಲಿಸಲಿದೆ. ಹಾಗೆಯೇ ಬಳಕೆಯಲ್ಲಿ ಮಲ್ಟಿಫೇಸ್ ಅನ್ನು ಹೊಂದಿದೆ. ಇದರಿಂದ 5W ಬೇಸ್‌ನೊಂದಿಗೆ ಇಯರ್‌ಬಡ್ಸ್ ಹಾಗೂ ಸ್ಮಾರ್ಟ್‌ಫೋನ್‌ಗಳನ್ನು ಚಾರ್ಜ್ ಮಾಡಲಿದೆ.

ಇದು ಪೋರ್ಟಬಲ್ ವೈರ್‌ಲೆಸ್ ಪವರ್ ಬ್ಯಾಂಕ್ (15W), ವೈರ್ಡ್ ಚಾರ್ಜಿಂಗ್ ಪವರ್ ಬ್ಯಾಂಕ್ (22.5W ಗರಿಷ್ಠ) ಆಗಿ ಕೂಡ ಕಾರ್ಯನಿರ್ವಹಿಸಲಿದೆ. ಅಲ್ಲದೆ ಈ ಪವರ್ ಬ್ಯಾಂಕ್ ಅಡ್ಡ ಅಥವಾ ಲಂಬ ಸ್ಥಾನಗಳಲ್ಲಿ ಮೊಬೈಲ್ ಚಾರ್ಜಿಂಗ್ ಸ್ಟ್ಯಾಂಡ್ ಆಗಿ ಕೂಡ ಬಳಕೆಗೆ ಬರಲಿದೆ. ಇದರ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಗಾಗಿ BIS ನಿಂದ ಪ್ರಮಾಣೀಕರಣವನ್ನು ಸಹ ಪಡೆದಿದ್ದು, 5mm ಥಿಕ್‌ನೆಸ್ ಅಡಿಯಲ್ಲಿ ಕೇಸ್‌ಗಳೊಂದಿಗೆ ಚಾರ್ಜ್ ಮಾಡುವುದಕ್ಕೆ ಕೂಡ ಬೆಂಬಲವನ್ನು ಹೊಂದಿದೆ. ಇದರಿಂದ ಬಳಕೆದಾರರಿಗೆ ಪೋನ್ ಚಾರ್ಜಿಂಗ್‌ಗಾಗಿ ಪರದಾಡಬೇಕಾದ ಅನಿವಾರ್ಯತೆಯಿಲ್ಲ.
ಇನ್ನು ಪವರ್ ಬ್ಯಾಂಕ್ ಸಂಪೂರ್ಣ ಸ್ವದೇಶಿಯಾಗಿದ್ದು, ಭಾರತದಲ್ಲಿಯೇ ತಯಾರಿಸಲಾಗಿದೆ. ಮೇಡ್ ಇನ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಇದನ್ನು ಬಿಡುಗಡೆ ಮಾಡಲಾಗಿದೆ. ಈ ಪವರ್ ಬ್ಯಾಂಕ್‌ನಲ್ಲಿ ಸುರಕ್ಷತೆಗೆ ಕೂಡ ಹೆಚ್ಚಿನ ಅದ್ಯತೆಯನ್ನು ನೀಡಲಾಗಿದೆ. ಅದರಂತೆ ಸುರಕ್ಷತೆಗಾಗಿ ಮಲ್ಟಿ-ಲೇಯರ್ ಚಾರ್ಜಿಂಗ್ ಪ್ರೊಟೆಕ್ಷನ್ ಕೂಡ ಹೊಂದಿದೆ. ಇದು USB-A ಅಥವಾ Type-C ಚಾರ್ಜ್ ಮಾಡಬಹುದಾದ ಸಾಧನಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಇನ್ನು ಇದರ ನಯವಾದ ವಿನ್ಯಾಸ ಬಳಕೆದಾರರನ್ನು ಆಕರ್ಷಿಸುವಂತೆ. ಇದನ್ನು ನೀವು ಸುಲಭವಾಗಿ ಕ್ಯಾರಿ ಮಾಡಬಹುದಾಗಿರುವುದರಿಂದ ಪ್ರಯಾಣಿಸುವಾಗ ತೆಗೆದುಕೊಂಡು ಹೋಗಬಹುದು.

ಬೆಲೆ ಮತ್ತು ಲಭ್ಯತೆ
ಆಂಬ್ರೆನ್ ಏರೋಸಿಂಕ್ ಕ್ವಾಡ್ 4-ಇನ್-1 ವೈರ್‌ಲೆಸ್ ಪವರ್‌ಬ್ಯಾಂಕ್ ಭಾರತದಲ್ಲಿ 1,999ರೂ ಬೆಲೆಯನ್ನು ಹೊಂದಿದೆ. ಇದು ಅಮೆಜಾನ್.ಇನ್, ಫ್ಲಿಪ್‌ಕಾರ್ಟ್ ಮತ್ತು ಆಂಬ್ರೇನ್ ವೆಬ್‌ಸೈಟ್‌ನಲ್ಲಿ ಕಪ್ಪು ಬಣ್ಣದ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ. ಇದಲ್ಲದೆ ಈ ಪವರ್ ಬ್ಯಾಂಕ್ ನಿಮಗೆ 180-ದಿನಗಳ ವಾರಂಟಿಯೊಂದಿಗೆ ಲಭ್ಯವಾಗಲಿದೆ.


Click it and Unblock the Notifications








