ಅಂಬ್ರೇನ್ ಕಂಪೆನಿಯ BT-83 ಪೋರ್ಟ್‌ಬಲ್‌ ಸ್ಪೀಕರ್‌ ಬಿಡುಗಡೆ!..ಬೆಲೆ 1,999ರೂ!

|

ಭಾರತದ ಎಲೆಕ್ಟ್ರಾನಿಕ್ಸ್‌ ಆಕ್ಸಿಸರೀಸ್‌ ಕಂಪೆನಿಗಳಲ್ಲಿ ಒಂದಾದ ಅಂಬ್ರೇನ್ ಈಗಾಗ್ಲೆ ಹಲವು ಮಾದರಿಯ ಎಲೆಕ್ಟ್ರಾನಿಕ್ ಪ್ರಾಡಕ್ಟ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಪವರ್‌ ಬ್ಯಾಂಕ್‌, ಹೆಡ್‌ಫೋನ್‌, ಚಾರ್ಜಿಂಗ್‌ ವಾಯರ್‌, ಯುಎಸ್‌ಬಿ, ಹೀಗೆ ಹಲವು ಮಾದರಿಯ ಮೊಬೈಲ್‌ ಆಕ್ಸಿಸರೀಸ್‌ಗಳನ್ನ ಸಹ ಪರಿಚಯಿಸುವ ಮೂಲಕ ಸೈ ಎನಿಸಿಕೊಂಡಿದೆ. ಅಷ್ಟೇ ಯಾಕೆ ವೈವಿಧ್ಯ ಮಾದರಿಯ ಸ್ಪೀಕರ್‌ಗಳನ್ನ ಸಹ ಪರಿಚಯಿಸಿರುವ ಅಂಬ್ರೇನ್ ಇದೀಗ ತನ್ನ ಹೊಸ ಆವೃತ್ತಿಯ ಸ್ಪೀಕರ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಹೌದು

ಹೌದು, ದೇಶಿ ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಮೂಲಕವೇ ಸಂಚಲನ ಸೃಷ್ಟಿಸಿರುವ ಅಂಬ್ರೇನ್ ಕಂಪೆನಿ ತನ್ನ ಹೊಸ BT-83 ಪೋರ್ಟ್‌ಬಲ್‌ ಸ್ಪೀಕರ್‌ ಅನ್ನು ಲಾಂಚ್‌ ಮಾಡಿದೆ. ಈ ಸ್ಪೀಕರ್‌ನ ಹೊರ ಮೇಲ್ಮೈ ಬಹಳ ಒರಾಟದ ವಿನ್ಯಾಸವನ್ನ ಹೊಂದಿದ್ದು, IPX6 ಪ್ರೊಟೆಕ್ಷನ್‌ ಅನ್ನು ಹೊಂದಿದೆ. ಜೊತೆಗೆ ಈ ಸ್ಪೀಕರ್‌ನಲ್ಲಿ ಉತ್ತಮ ಸೌಂಡ್‌ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಇದಲ್ಲದೆ ಈ ಸ್ಪೀಕರ್‌ ಮೇಲೆ ಒಂದು ವರ್ಷದ ವಾರೆಂಟಿಯನ್ನ ನೀಡಲಾಗಿದ್ದು, 1,999ರೂ,ಗಳಿಗೆ ಲಭ್ಯವಾಗಲಿದೆ.

ಸ್ಪೀಕರ್‌

ಈ ಸ್ಪೀಕರ್‌ ಸಿಲಿಂಡರ್‌ ಆಕೃತಿಯನ್ನ ಹೊಂದಿದ್ದು, ಹೊರ ಮೇಲ್ಮೈ ಒರಾಟದ ವಿನ್ಯಾಸವನ್ನ ಒಳಗೊಂಡಿದೆ. ಇದು ಜೋಲಿ ಮಾದರಿಯನ್ನ ಹೊಂದಿದ್ದು ಸುಲಭವಾಗಿ ಕ್ಯಾರಿ ಮಾಡಲು ಸಾಧ್ಯವಾಗಲಿದೆ. ಅಲ್ಲದೆ ಈ ಸ್ಪೀಕರ್‌ ಗ್ರೀಲ್‌ಗಳು ಒರಾಟದ ರಚನೆಯನ್ನ ಹೊಂದಿರುವುದರಿಂದ ಉತ್ತಮ ಬಾಳಿಕೆ ಬರಲಿದೆ. ಜೊತೆಗೆ ಈ ಬ್ಲೂಟೂತ್‌ ಸ್ಪೀಕರ್‌ IPX6 ಪ್ರೊಟೆಕ್ಷನ್‌ ಹೊಂದಿದ್ದು, ಇದು ವಾಟರ್‌ ಪ್ರೂಪ್‌ ಹಾಗೂ ಧೂಳು ನಿರೋಧಕ ಗುಣವನ್ನ ಹೊಂದಿದೆ.

ಅಂಬ್ರೇನ್‌

ಇನ್ನು ಅಂಬ್ರೇನ್‌ ಕಂಪೆನಿಯ ಈ ಬ್ಲೂಟೂತ್‌ ಸ್ಪೀಕರ್‌ ಟ್ರೂ ವಾಯರ್‌ಲೆಸ್‌ ಸ್ಟೆರಿಯೋ ಟೆಕ್ನಾಲಜಿಯನ್ನ ಹೊಂದಿದೆ. ಅಲ್ಲದೆ ಉತ್ತಮ ಆಡಿಯೋ ಡ್ರೈವರ್‌ಗಳನ್ನ ಒಳಗೊಂಡಿದ್ದು, ಮೂರು ಹಂತದ ಹೈ ಬಾಸ್‌ ಕ್ಲಾರಿಟಿಯನ್ನ ಬಳಕೆದಾರರಿಗೆ ನೀಡಲಿದೆ. ಜೊತೆಗೆ 10W ಆಡಿಯೋ ಔಟ್‌ಪುಟ್‌ ಅನ್ನು ಒದಗಿಸಲಿದೆ. ಇದಲ್ಲದೆ ಈ ಸ್ಪೀಕರ್‌‌ 2,200mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, 7ಗಂಟೆಗಳ ಅವಧಿಯ ಬ್ಯಾಟರಿ ಬಾಳಿಕೆಯನ್ನ ನೀಡಲಿದೆ.

ಅಲ್ಲದೆ

ಅಲ್ಲದೆ ಈ ಸ್ಪೀಕರ್‌ ಬ್ಲೂಟೂತ್‌ ಬೆಂಬಲವನ್ನು ಹೊಂದಿರುವುದರಿಂದ ಹ್ಯಾಡ್ಸ್‌ ಫ್ರೀ ಕಾಲಿಂಗ್‌ ಸೌಲಭ್ಯವನ್ನು ಸಹ ಬೆಂಬಲಿಸಲಿದೆ. ಇನ್ನು ಈ ಸ್ಪೀಕರ್‌ 10m ನಷ್ಟು ವಾಯರ್‌ಲೆಸ್‌ ರೇಂಜ್‌ ಅನ್ನು ಒಳಗೊಂಡಿದೆ. ಇನ್ನು ಕನೆಕ್ಟಿಟಿವಿಟಿ ಆಯ್ಕೆಗಳಲ್ಲಿ AUX ಇನ್‌ಪುಟ್‌, ಮೆಮೊರಿ ಕಾರ್ಡ್‌ ಮತ್ತು ಬ್ಲೂಟೂತ್‌ ಅನ್ನು ಬೆಂಬಲಿಸಲಿದೆ. ಇನ್ನು ಈ ಸ್ಪೀಕರ್‌ನ ಬೆಲೆ 1,999ರೂ ಆಗಿದ್ದು. ದೇಶದ ಪ್ರಮುಖ ರಿಟೇಲ್‌ ಮಳಿಗೆಗಳು ಹಾಗೂ ಇ-ಕಾಮರ್ಸ್‌ ತಾಣಗಳಲ್ಲಿ ಖರೀದಿಸಬಹುದಾಗಿದೆ. ಅಲ್ಲದೆ ಈ ಸ್ಪೀಕರ್‌ ಬ್ಲ್ಯಾಕ್‌ ಮತ್ತು ಟೀಲ್‌ ಬ್ಲೂ ಕಲರ್‌ ಆಯ್ಕೆಯಲ್ಲಿ ಲಭ್ಯವಾಗಲಿದೆ.

Most Read Articles
Best Mobiles in India

English summary
The Ambrane BT-83 speaker is priced at Rs 1,999. The company says this speaker comes with a rugged design and is IPX6 protection.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X