ಆಂಬ್ರೇನ್‌ ಸಂಸ್ಥೆಯಿಂದ ಎರಡು ಹೊಸ ಇಯರ್‌ಬಡ್ಸ್‌ ಲಾಂಚ್‌!

|

ಆಂಬ್ರೇನ್‌ ಸಂಸ್ಥೆ ತನ್ನ ಗುಣಮಟ್ಟದ ಇಯರ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಮಾದರಿಯ ಇಯರ್‌ಫೋನ್‌ಗಳನ್ನ ಪರಿಚಯಿಸಿದೆ. ಸದ್ಯ ಇದೀಗ ಹೊಸ ಆಂಬ್ರೇನ್‌ ಡಾಟ್ಸ್ 38 ಮತ್ತು ಆಂಬ್ರೇನ್‌ ನಿಯೋಬಡ್ಸ್ 33 ಟ್ರೂಲಿ ವಾಯರ್‌ಲೆಸ್ ಸ್ಟಿರಿಯೊ ಇಯರ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಇಯರ್‌ಫೋನ್‌ಗಳು ಕ್ರಮವಾಗಿ 2,499 ರೂ. ಮತ್ತು 1,799, ರೂ. ಬೆಲೆಯನ್ನು ಹೊಂದಿದೆ. ಅಲ್ಲದೆ ಈ ಎರಡೂ ಇಯರ್‌ಫೋನ್‌ಗಳು IPX4 ವಾಟರ್ ರೆಸಿಸ್ಟೆನ್ಸ್ ರೇಟಿಂಗ್ ಹೊಂದಿವೆ.

ಆಂಬ್ರೇನ್‌

ಹೌದು, ಆಂಬ್ರೇನ್‌ ಸಂಸ್ಥೆ ಆಂಬ್ರೇನ್‌ ಡಾಟ್ಸ್‌ 38 ಮತ್ತು ಆಂಬ್ರೇನ್‌ ನಿಯೋಬಡ್ಸ್‌ 33 ವಾಯರ್‌ಲೆಸ್‌ ಇಯರ್‌ಬಡ್ಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇನ್ನು ಆಂಬ್ರೇನ್ ಡಾಟ್ಸ್ 38 ಮತ್ತು ನಿಯೋಬಡ್ಸ್ 33 ಎರಡೂ ಮ್ಯೂಸಿಕ್‌ ಮತ್ತು ಕರೆಗಳನ್ನು ನಿಯಂತ್ರಿಸಲು ಟಚ್‌-ಸೆನ್ಸಿಟಿವ್‌ ಏರಿಯಾಗಳನ್ನು ಹೊಂದಿವೆ. ಇದಲ್ಲದೆ ಆಂಬ್ರೇನ್ ಡಾಟ್ಸ್ 38 ಇಯರ್‌ಫೋನ್‌ ಸಿಂಗಲ್‌ ಚಾರ್ಜ್‌ನಲ್ಲಿ 4 ಗಂಟೆಗಳ ರನ್‌ಟೈಮ್‌ ಅನ್ನು ಹೊಂದಿದೆ. ಇನ್ನಳಿದಂತೆ ಈ ಇಯರ್‌ಫೋನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಂಬ್ರೇನ್ ಡಾಟ್ಸ್‌ 38 ಇಯರ್‌ಫೋನ್‌

ಆಂಬ್ರೇನ್ ಡಾಟ್ಸ್ 38 ಇಯರ್‌ಫೋನ್‌ ವಾಯರ್‌ ಲೆಸ್ ಕನೆಕ್ಟಿವಿಟಿಗಾಗಿ ಬ್ಲೂಟೂತ್ ವಿ 5.0 ಅನ್ನು ಹೊಂದಿದೆ. ಇನ್ನು ಈ ಇಯರ್‌ಫೋನ್‌ 10mm ಆಡಿಯೋ ಡೈನಾಮಿಕ್ ಡ್ರೈವರ್‌ಗಳನ್ನು ಹೊಂದಿದ್ದು, ಕರೆ ಮಾಡಲು ಇಂಟರ್‌ಬಿಲ್ಟ್‌ ಮೈಕ್ ಅನ್ನು ಹೊಂದಿವೆ. ಇದು ಮಲ್ಟಿಫಂಕ್ಷನಲ್ ಟಚ್ ಸೆನ್ಸಾರ್ ಅನ್ನು ಹೊಂದಿದ್ದು, ಮ್ಯೂಸಿಕ್‌ ಅನ್ನು ಕಂಟ್ರೋಲ್‌ ಮಾಡಲು, ಕರೆ ಮಾಡಲು ಮತ್ತು ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಆಕ್ಟಿವ್‌ ಮಾಡಲು ಬಳಸಬಹುದು. ಈ ಇಯರ್‌ಬಡ್ಸ್‌ಗಳು ಐಪಿಎಕ್ಸ್ 4 ವಾಟರ್ ರೆಸಿಸ್ಟೆನ್ಸ್ ರೇಟಿಂಗ್‌ನೊಂದಿಗೆ ಬರುತ್ತವೆ. ಇನ್ನು ಈ ಇಯರ್‌ಫೋನ್‌ ಪ್ರತಿ ಇಯರ್‌ಬಡ್‌ನಲ್ಲಿ 40mAh ಬ್ಯಾಟರಿಯನ್ನು ಅಳವಡಿಸಲಾಗಿದೆ ಮತ್ತು ಚಾರ್ಜಿಂಗ್‌ ಕೇಸ್ 300mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಆಂಬ್ರೇನ್‌ನ ಪ್ರಕಾರ, ಯುಎಸ್‌ಬಿ ಟೈಪ್-ಸಿ ಕೇಬಲ್ ಮೂಲಕ ಇಯರ್‌ಫೋನ್‌ಗಳನ್ನು 1.5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.ಅಲ್ಲದೆ ಈ ಇಯರ್‌ ಬಡ್ಸ್‌ 4 ಗಂಟೆಗಳ ರನ್‌ಟೈಮ್ ಅನ್ನು ಫುಲ್‌ ಚಾರ್ಜ್‌ನೊಂದಿಗೆ ಒದಗಿಸುತ್ತವೆ. ಚಾರ್ಜಿಂಗ್ ಕೇಸ್‌ನಲ್ಲಿ 16 ಗಂಟೆಗಳವರೆಗೆ ಬಾಳಿಕೆ ಬರಲಿದೆ ಎಂದು ಹೇಳಲಾಗಿದೆ.

ಆಂಬ್ರೇನ್ ನಿಯೋಬಡ್ಸ್ 33

ಆಂಬ್ರೇನ್ ನಿಯೋಬಡ್ಸ್ 33

ಆಂಬ್ರೇನ್ ನಿಯೋಬಡ್ಸ್ 33 ಇಯರ್‌ಫೋನ್‌ಗಳು ಆಂಬ್ರೇನ್ ಡಾಟ್ಸ್ 38 ರ ವಿನ್ಯಾಸವನ್ನೇ ಹೊಂದಿವೆ. ಇವು ಬ್ಲೂಟೂತ್ ವಿ 5.0 ಮತ್ತು 10 ಎಂಎಂ ಡೈನಾಮಿಕ್ ಡ್ರೈವರ್ ಅನ್ನು ಸಹ ಹೊಂದಿವೆ. ಈ ಇಯರ್‌ಫೋನ್‌ಗಳು ಕರೆ ಮಾಡಲು ಇಂಟರ್‌ಬಿಲ್ಟ್‌ ಮೈಕ್ ಅನ್ನು ಹೊಂದಿವೆ. ಅಲ್ಲದೆ ಮ್ಯೂಸಿಕ್‌, ಕಾಲ್‌ ಮತ್ತು ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಸಕ್ರಿಯಗೊಳಿಸಲು ಬಳಸಬಹುದಾದ ಮಲ್ಟಿ ಫಂಕ್ಷನಲ್‌ ಟಚ್ ಸೆನ್ಸಾರ್ ಅನ್ನು ಹೊಂದಿದೆ. ಜೊತೆಗೆ ಆಂಬ್ರೇನ್ ಡಾಟ್ಸ್ 38 ರಂತೆಯೇ, ಆಂಬ್ರೇನ್ ನಿಯೋಬಡ್ಸ್ 33 ಸಹ ಐಪಿಎಕ್ಸ್ 4 ವಾಟರ್ ರೆಸಿಸ್ಟೆನ್ಸ್ ರೇಟಿಂಗ್‌ನೊಂದಿಗೆ ಬರುತ್ತದೆ. ಆಂಬ್ರೇನ್ ನಿಯೋಬಡ್ಸ್ 33 ಆಂಬ್ರೇನ್ ಡಾಟ್ಸ್ 38 ಗಿಂತ ಸಿಂಗಲ್‌ ಚಾರ್ಜ್‌ನಲ್ಲಿ 3.5 ಗಂಟೆಗಳವರೆಗೆ ಸ್ವಲ್ಪ ಕಡಿಮೆ ರನ್‌ಟೈಂ ಅನ್ನು ಒದಗಿಸುತ್ತದೆ. ಪ್ರತಿ ಇಯರ್‌ಬಡ್ 35mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ, ಮತ್ತು ಚಾರ್ಜಿಂಗ್‌ ಕೇಸ್‌ 300mAh ಬ್ಯಾಟರಿಯನ್ನು ಹೊಂದಿದ್ದು, ಯುಎಸ್‌ಬಿ ಟೈಪ್-ಸಿ ಕೇಬಲ್ ಮೂಲಕ ಇಯರ್‌ಫೋನ್‌ಗಳನ್ನು 1.5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಆಂಬ್ರೇನ್ ಡಾಟ್ಸ್ 38 ಇಯರ್‌ಫೋನ್‌ 2,499 ರೂ.ಬೆಲೆಯನ್ನು ಹೊಂದಿದೆ. ಆದಾಗ್ಯೂ ಆಂಬ್ರೇನ್‌ ಕಂಪೆನಿಯ ಆನ್‌ಲೈನ್‌ ಸ್ಟೋರ್‌ನಲ್ಲಿ 1,299 ರೂ ಬೆಲೆಯನ್ನು ಹೊಂದಿದೆ. ಇದು ಬಿಳಿ ಬಣ್ಣದ ಆಯ್ಕೆಯಲ್ಲಿ ಲಭ್ಯವಿದೆ. ಆಂಬ್ರೇನ್ ನಿಯೋಬಡ್ಸ್ 33 ಇದರ ಬೆಲೆ 1,799 ರೂ.ಆಗಿದೆ. ಆದರೆ ಅಂಬ್ರೇನ್‌ನ ಆನ್‌ಲೈನ್ ಸ್ಟೋರ್‌ನಲ್ಲಿ 1,199 ರೂ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ 899 ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಈ ಇಯರ್‌ಫೋನ್‌ಗಳನ್ನು ಕಪ್ಪು, ಇಂಡಿಗೊ ಬ್ಲೂ ಮತ್ತು ವೈಟ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ.

Best Mobiles in India

Read more about:
English summary
Ambrane Dots 38, NeoBuds 33 TWS Earphones With Voice Assistant Support Launched in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X