Home
ಸುದ್ದಿಜಾಲ

ಈ ಪವರ್‌ ಬ್ಯಾಂಕ್‌ ಖರೀದಿಸಿದವರಿಗೆ ಸಿಗಲಿದೆ ಕಾಶ್ಮೀರ ಪ್ರವಾಸದ ಆಫರ್‌!

ಆಂಬ್ರೇನ್‌ ಪವರ್‌ ಬ್ಯಾಂಕ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ತನ್ನ ಪವರ್‌ಫುಲ್‌ ದಕ್ಷತೆಯ ಕಾರಣಕ್ಕಾಗಿ ಆಂಬ್ರೇನ್‌ ಪವರ್‌ ಬ್ಯಾಂಕ್‌ಗಳು ಸಖತ್‌ ಸೌಂಡ್‌ ಮಾಡುತ್ತಿವೆ. ಅದರ ಮುಂದುವರೆದ ಭಾಗವೆಂಬಂತೆ ಇದೀಗ ಹೊಸ ಆಂಬ್ರೇನ್‌ ಪೋರ್ಸ್‌ 10K ಪವರ್ ಬ್ಯಾಂಕ್ ಅನ್ನು ಬಿಡುಗಡೆ ಮಾಡಿದೆ.

ಹೌದು, ಆಂಬ್ರೇನ್‌ ಪೋರ್ಸ್‌ 10K ಪವರ್ ಬ್ಯಾಂಕ್ ಮಾರುಕಟ್ಟೆಗೆ ಎಂಟ್ರಿ ನಿಡಿದೆ. ಇದು ಪ್ರಯಾಣಿಕರಿಗೆ, ಪ್ರವಾಸ ಹೋಗುವವರಿಗೆ ಸೂಕ್ತವಾಗಿದೆ. ಇದು ನಿಮ್ಮ ಪ್ರಯಾಣದಲ್ಲಿರುವಾಗ ವಿದ್ಯುತ್ ಅಗತ್ಯಗಳಿಗಾಗಿ ಕಾಂಪ್ಯಾಕ್ಟ್ ವಿನ್ಯಾಸದೊಂದಿಗೆ ಬರಲಿದೆ. ಇನ್ನು ಈ ಪವರ್‌ಬ್ಯಾಂಕ್‌ 10000mAh ಸಾಮರ್ಥ್ಯದ ಬ್ಯಾಟರಿ ಮತ್ತು ಬೂಸ್ಟೆಡ್‌ ಸ್ಪೀಡ್‌ ಟೆಕ್ನಾಲಜಿಯೊಂದಿಗೆ ಬರಲಿದೆ. ಹಾಗಾದ್ರೆ ಈ ಪವರ್‌ ಬ್ಯಾಂಕ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಈ ಪವರ್‌ ಬ್ಯಾಂಕ್‌ ಖರೀದಿಸಿದವರಿಗೆ ಸಿಗಲಿದೆ ಕಾಶ್ಮೀರ ಪ್ರವಾಸದ ಆಫರ್‌!

ಆಂಬ್ರೇನ್‌ ಪೋರ್ಸ್‌ 10K ಪವರ್ ಬ್ಯಾಂಕ್ ರಗಡ್‌ ಲುಕ್‌ ಡಿಸೈನ್‌ ಹೊಂದಿದೆ. ಇದು ಪ್ರವಾಸಿ ಸ್ನೇಹಿ ಬಾಡಿ ವಿನ್ಯಾಸವನ್ನು ಹೊಂದಿದ್ದು WARP ಮತ್ತು DASH-ಬೆಂಬಲಿತ ಸ್ಮಾರ್ಟ್‌ಫೋನ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ. ಇದು ಆಪ್ಟಿಮೈಸ್ಡ್ ಚಾರ್ಜಿಂಗ್ ಅನ್ನು ನೀಡಲಿದ್ದು, ಡ್ಯುಯಲ್-ಔಟ್‌ಪುಟ್ ಫಂಕ್ಷನ್‌ ಹೊಂದಿದೆ. ಇನ್ನು ಪವರ್‌ ಬ್ಯಾಕ್‌ USB-A ಮೂಲಕ 22.5W ಮತ್ತು ಟೈಪ್-C ಪೋರ್ಟ್‌ಗಳ ಮೂಲಕ 20W ಔಟ್‌ಪುಟ್‌ ಒದಗಿಸಲಿದೆ. ಜೊತೆಗೆ 20W ಇನ್‌ಪುಟ್‌ನೊಂದಿಗೆ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಇನ್ನು ಈ ಪವರ್‌ ಬ್ಯಾಂಕ್‌ 10000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಬೂಸ್ಟೆಡ್‌ ಸ್ಪೀಡ್‌ ಟೆಕ್ನಾಲಜಿಯನ್ನು ಒಳಗೊಂಡಿದೆ. ಇದು ಐಫೋನ್ ಬಳಕೆದಾರರಿಗೆ ವೇಗವಾಗಿ 55% ಚಾರ್ಜ್ ಅನ್ನು ಖಚಿತಪಡಿಸುತ್ತದೆ. ಇದರ ಸುಧಾರಿತ ಚಿಪ್‌ಸೆಟ್ ಪ್ರೊಟೆಕ್ಷನ್‌ ಮತ್ತು ಬುದ್ಧಿವಂತ ಶಕ್ತಿ ನಿರ್ವಹಣೆಯು ಸುರಕ್ಷಿತ ಮತ್ತು ಸ್ಥಿರವಾದ ಚಾರ್ಜಿಂಗ್ ಅನುಭವವನ್ನು ನೀಡಲಿದೆ. ಇನ್ನು ಈ ಡಿವೈಸ್‌ ಮೇಡ್‌ ಇನ್‌ ಇಂಡಿಯಾ ಆಗಿದ್ದು, ಬಿಐಎಸ್ ಪ್ರಮಾಣೀಕರಿಸಲಾಗಿದೆ.

ಈ ಪವರ್‌ ಬ್ಯಾಂಕ್‌ ಖರೀದಿಸಿದವರಿಗೆ ಸಿಗಲಿದೆ ಕಾಶ್ಮೀರ ಪ್ರವಾಸದ ಆಫರ್‌!

ಬೆಲೆ ಮತ್ತು ಲಭ್ಯತೆ
ಆಂಬ್ರೇನ್ ಫೋರ್ಸ್ 10K ಪವರ್ ಬ್ಯಾಂಕ್ ಭಾರತದಲ್ಲಿ 1,299ರೂ ಬೆಲೆಯನ್ನು ಹೊಂದಿದೆ. ಇದನ್ನು ನೀವು ಅಮೆಜಾನ್‌.ಇನ್‌ ಮತ್ತು ಆಂಬ್ರೇನ್‌ನ ವೆಬ್‌ಸೈಟ್‌ನಲ್ಲಿ ಖರೀದಿಸಬಹುದಾಗಿದೆ. ಇದು ಮಿಲಿಟರಿ ಗ್ರೀನ್ ಮತ್ತು ಆರೆಂಜ್ ಕಲರ್‌ ಆಯ್ಕೆಗಳಲ್ಲಿ ದೊರೆಯಲಿದ್ದು, 180-ದಿನಗಳ ವಾರಂಟಿಯೊಂದಿಗೆ ಬರುತ್ತದೆ.

ಪವರ್‌ ಬ್ಯಾಂಕ್‌ ಖರೀದಿಸಿದರೆ ಕಾಶ್ಮೀರ ಟ್ರಿಪ್‌ ಉಚಿತ
ಇನ್ನು ಲಾಂಚ್‌ ಆಫರ್‌ನಲ್ಲಿ ಅಂಬ್ರೇನ್‌ನ ವೆಬ್‌ಸೈಟ್‌ನಿಂದ ಖರೀದಿಸಿದರೆ, ಕಾಶ್ಮೀರಕ್ಕೆ ಇಬ್ಬರಿಗೆ 5-ರಾತ್ರಿ ಮತ್ತು 6-ದಿನಗಳ ಪ್ರವಾಸವನ್ನು ಗೆಲ್ಲುವ ಅವಕಾಶವಿದೆ. ಈ ಅವಕಾಶವು ಡಿಸೆಂಬರ್ 31, 2023 ರವರೆಗೆ ಲಭ್ಯವಾಗಲಿದೆ.

ಈ ಪವರ್‌ ಬ್ಯಾಂಕ್‌ ಖರೀದಿಸಿದವರಿಗೆ ಸಿಗಲಿದೆ ಕಾಶ್ಮೀರ ಪ್ರವಾಸದ ಆಫರ್‌!

ಇನ್ನು ಆಂಬ್ರೇನ್‌ ಕಂಪೆನಿ ಇದೇ ವರ್ಷ ಆಂಬ್ರೇನ್ 40,000mAh ಸಾಮರ್ಥ್ಯದ ಸ್ಟೈಲೋ ಬೂಸ್ಟ್ ಪವರ್‌ಬ್ಯಾಂಕ್ ಬಿಡುಗಡೆ ಮಾಡಿತ್ತು. ಈ ಪವರ್‌ ಬ್ಯಾಂಕ್‌ 65W ಅಲ್ಟ್ರಾ ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದ್ದು, ಲ್ಯಾಪ್‌ಟಾಪ್‌ಗಳನ್ನು ಚಾರ್ಜ್ ಮಾಡಲು ಇದು ಬಹಳ ಅನುಕೂಲ ಸೌಲಭ್ಯ ನೀಡಲಿದೆ. ಇದರೊಂದಿಗೆ ಸ್ಮಾರ್ಟ್‌ಫೋನ್‌ ಹಾಗೂ ಇನ್ನಿತರೆ ಸ್ಮಾರ್ಟ್‌ ಡಿವೈಸ್‌ಗಳನ್ನೂ ಸಹ ಬೇಕಾದಾಗ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಇನ್ನು ಚಾರ್ಜಿಂಗ್ ವಿಷಯಕ್ಕೆ ಬಂದರೆ 65W PD ಫಾಸ್ಟ್-ಚಾರ್ಜಿಂಗ್ ಔಟ್‌ಪುಟ್ ಮತ್ತು 20W QC 3.0 ಔಟ್‌ಪುಟ್ ಅನ್ನು ಇದು ಬೆಂಬಲಿಸಲಿದ್ದು, 65W ಔಟ್‌ಪುಟ್‌ನೊಂದಿಗೆ ಟೈಪ್-ಸಿ ಪೋರ್ಟ್‌ಗಳನ್ನು ಪಡೆದುಕೊಂಡಿದೆ. ಇದರ ಶಕ್ತಿಯನ್ನು ಉದಾಹರಣೆ ಸಹಿತ ಹೇಳುವುದಾದರೆ ಕೇವಲ 2 ಗಂಟೆ 20 ನಿಮಿಷಗಳಲ್ಲಿ ಮ್ಯಾಕ್‌ಬುಕ್ ಪ್ರೊ ಅನ್ನು 0% ರಿಂದ 100% ವರೆಗೆ ಚಾರ್ಜ್ ಮಾಡಬಹುದಾದ ಶಕ್ತಿ ಈ ಡಿವೈಸ್‌ಗೆ ಇದೆ.

Best Mobiles in India

English summary
Ambrane Force 10K Powerbank with rugged body launched
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+