ಆಂಬ್ರೇನ್‌ ಕಂಪೆನಿಯಿಂದ ವೈಬ್‌ಬೀಟ್ಸ್ ಇಯರ್‌ಬಡ್ಸ್‌ ಬಿಡುಗಡೆ!

|

ಟೆಕ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳಂತೆ ಸ್ಮಾರ್ಟ್ ಇಯರ್‌ ಬಡ್ಸ್‌ಗಳಿಗೂ ಭಾರಿ ಭೇಡಿಕೆ ಇದ್ದು, ಇಯರ್‌ಬಡ್ಸ್‌ಗಳು ಬಾರಿ ಜನಪ್ರಿಯತೆಯನ್ನ ಗಳಿಸಿವೆ. ಈಗಾಗ್ಲೆ ಹಲವು ಕಂಪೆನಿಗಳ ಇಯರ್‌ ಬಡ್ಸ್‌ ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಬ್ರ್ಯಾಂಡ್‌ ಕಂಪೆನಿಗಳ ಇಯರ್ ಬಡ್ಸ್‌ಗಳನ್ನೇ ಗ್ರಾಹಕರು ಆಯ್ಕೆ ಮಾಡುತ್ತಾರೆ. ಇನ್ನು ಈಗಾಗ್ಲೆ ತನ್ನ ಆಕರ್ಷಕ ಫೀಚರ್ಸ್‌ಗಳನ್ನು ಹೊಂದಿರುವ ಇಯರ್‌ಬಡ್ಸ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿ ಸೈ ಎನಿಸಿಕೊಂಡಿರುವ ಆಂಬ್ರೇನ್‌ ಕಂಪೆನಿ ಇದೀಗ ಹೊಸ ಟ್ರೂ ವಾಯರ್‌ ಲೆಸ್‌ ಇಯರ್‌ಬಡ್ಸ್‌ ಅನ್ನ ಭಾರತದಲ್ಲಿ ಬಿಡುಗಡೆ ಮಾಡಿದೆ.

ಹೌದು

ಹೌದು, ಆಂಬ್ರೇನ್ ಕಂಪೆನಿ ತನ್ನ "ವೈಬ್‌ಬೀಟ್ಸ್" ಟ್ರೂ ವೈರ್‌ಲೆಸ್ ಇಯರ್‌ಬಡ್ಸ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಹೊಸ ಮಾದರಿಯ ಇಯರ್‌ ಬಡ್ಸ್‌ ಆಗಿದ್ದು, ಗೂಗಲ್ ಅಸಿಸ್ಟೆಂಟ್ ಮತ್ತು ಆಪಲ್‌ನ ಸಿರಿ ಅನ್ನು ಬೆಂಬಲಿಸಲಿದೆ. ಇದಲ್ಲದೆ ಆಂಬ್ರೇನ್‌ ಕಂಪೆನಿಯ ಈ ಹೊಸ ಇಯರ್‌ಬಡ್ಸ್‌ ಆಕ್ಟಿವ್ ನಾಯ್ಸ್‌ ಕ್ಯಾನ್ಸಲೇಶನ್‌(ANC), ಮತ್ತು ಆಪ್ಟಿಎಕ್ಸ್ ಆಡಿಯೋ ಟೆಕ್ನಾಲಜಿಯನ್ನು ಒಳಗೊಂಡಿದೆ.

ಆಂಬ್ರೇನ್

ಆಂಬ್ರೇನ್ ಕಂಪೆನಿಯ "ವೈಬ್‌ಬೀಟ್ಸ್" ಟ್ರೂ ವೈರ್‌ಲೆಸ್ ಇಯರ್‌ಬಡ್ಸ್ ಬ್ಲೂಟೂತ್ 5.0 ಅನ್ನು ಹೊಂದಿದ್ದು, 10 ಮೀಟರ್‌ವರೆಗಿನ ವೈರ್‌ಲೆಸ್ ರೇಂಜ್‌ ಅನ್ನು ಹೊಂದಿದೆ. ಇದು ಕ್ವಾಲ್ಕಾಮ್‌ನ ಸಿವಿಸಿ 8.0 ನಾಯ್ಸ್‌ ಕ್ಯಾನ್ಸಲೇಶನ್‌ ಟೆಕ್ನಾಲಜಿ ಪ್ರೊಸೆಸರ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇನ್ನು ಈ ವೈಬ್‌ಬೀಟ್ಸ್‌ನ ಪ್ರತಿ ಇಯರ್‌ಬಡ್‌ನಲ್ಲಿ ಅಲ್ಟ್ರಾ-ಕ್ಲಿಯರ್ ವೈರ್‌ಲೆಸ್ ಕಾಲಿಂಗ್‌ ಗಾಗಿ ಡ್ಯುಯಲ್ ಮೈಕ್ರೊಫೋನ್‌ಗಳನ್ನ ನೀಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಬಡ್ಸ್‌ಗಳು

ಈ ಇಯರ್‌ ಬಡ್ಸ್‌ಗಳು ಆಕ್ಟಿವ್‌ ನಾಯ್ಸ್‌ ಕ್ಯಾನ್ಸೆಲೇಶನ್‌ ಟೆಕ್ನಾಲಜಿಯನ್ನ ಹೊಂದಿರುವುದರಿಂದ ಕಿವಿಗೆ ಹಿತಕರವಾದ ಅನುಭವ ನೀಡುತ್ತದೆ. ಇದನ್ನ ಧರಿಸಿಕೊಂಡು ಸುಗಮವಾದ ಸಂಗೀತವನ್ನ ಕೇಳಬಹುದಾಗಿದ್ದು. ಬಳಕೆದಾರರ ಕಿವಿಗೆ ಅನುಗುಣವಾಗಿ ಹೊಂದಿಕೊಳ್ಳುತ್ತದೆ. ಇನ್ನು ಇದರಲ್ಲಿ ಟಚ್‌ ಕಂಟ್ರೋಲ್‌ ನೀಡಿರುವುದರಿಂದ ಬಳಕೆ ಮಾಡಲು ಉತ್ತಮವಾಗಿದೆ. ಅಷ್ಟೇ ಅಲ್ಲ ಈ ಇಯರ್‌ ಬಡ್ಸ್‌ಗಳಿಂದ ಕರೆ ಮಾಡುವ ಹಾಗೂ ಪ್ಲೇ ಬ್ಯಾಕ್‌ ಮ್ಯೂಸಿಕ್‌ ಕೇಳಲು ಉತ್ತಮ ಎನಿಸುತ್ತದೆ.

ಇನ್ನು

ಇನ್ನು ಆಂಬ್ರೇನ್‌ ಕಂಪೆನಿಯ ಈ ಟ್ರೂಲಿ ವೈರ್‌ಲೆಸ್‌ ಇಯರ್‌ಬಡ್ಸ್‌ ಟಚ್‌ ಸೆನ್ಸಾರ್‌ ಅನ್ನು ಹೊಂದಿದ್ದು, ಈ ಇಯರ್‌ಬಡ್‌ನಲ್ಲಿ ಮಲ್ಟಿಫಂಕ್ಷನ್ ಟಚ್ ಬಟನ್ ನೀಡಲಾಗಿದೆ. ಇದರಿಂದ ಟ್ರ್ಯಾಕ್‌ಗಳನ್ನು ಬದಲಾಯಿಸುವ ಹಾಗೂ ವಾಯ್ಸ್‌ ಆಸಿಸ್ಟೆಂಟ್‌ ಅನ್ನು ಆಕ್ಟಿವ್‌ ಮಾಡುವ ಕಾರ್ಯವನ್ನ ಮಾಡಬಹುದಾಗಿದೆ. ಅಲ್ಲದೆ ಆಂಬ್ರೇನ್ ಇಯರ್‌ಬಡ್‌ ಐಪಿಎಕ್ಸ್ 4 ರೇಟ್ ಹೊಂದಿದ್ದು, ವಾಟರ್‌ ಪ್ರೂಪ್‌ ಹಾಗೂ ಬೆವರು ನಿರೋಧಕವಾಗಿದೆ.

ಗಂಟೆಗಳ

ಒಂದೇ ಚಾರ್ಜ್‌ನಲ್ಲಿ 5 ಗಂಟೆಗಳ ಪ್ಲೇಬ್ಯಾಕ್‌ ಬ್ಯಾಟರಿ ಪ್ಯಾಕ್‌ಆಪ್‌ ಅನ್ನು ನೀಡಲಿದೆ. ಅಲ್ಲದೆ ಒಂದು ಭಾರಿ ಸಂಪೂರ್ಣ ಚಾರ್ಜ್ ಮಾಡಿದ ನಂತರ 30 ಗಂಟೆಗಳ ಬ್ಯಾಟರಿ ಅವಧಿಯನ್ನು ಇದರಿಂದ ಪಡೆಯಬಹುದು ಎಂದು ಹೇಳಲಾಗ್ತಿದೆ. ಇನ್ನು ಆಂಬ್ರೇನ್ "ವೈಬ್‌ಬೀಟ್ಸ್" ಇಯರ್‌ಬಡ್‌ಗಳ ಬೆಲೆ ಭಾರತದಲ್ಲಿ 2,999 ರೂ ಆಗಿದ್ದು, ಆನ್‌ಲೈನ್ ಮತ್ತು ಆಫ್‌ಲೈನ್ ಮಳಿಗೆಗಳ ಮೂಲಕ ಖರೀದಿಗೆ ಲಭ್ಯವಿದೆ.

Best Mobiles in India

Read more about:
English summary
The Ambrane "VibeBeats" earbuds are priced at Rs 2,999 in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X