AMD ಸಂಸ್ಥೆಯಿಂದ ರೈಜೆನ್ 3 3300X ಮತ್ತು ರೈಜೆನ್ 3 3100 ಸಿಪಿಯು ಬಿಡುಗಡೆ!

|

ಟೆಕ್ನಾಲಜಿ ಮುಂದುವರೆದಂತೆ ಟೆಕ್‌ವಲಯದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತಿವೆ. ಈಗಾಗಲೇ ಮುಂದುವರೆದ ತಾಂತ್ರಿಕತೆಯ ಪರಿಣಾಮವಾಗಿ ಹಲವು ಹೊಸ ಮಾದರಿಯ ಸಿಪಿಯುಗಳು, ಹೊಸ ಇಂಟೆಲ್‌ ಕೋರ್‌, ಜೀಪೋರ್ಸ್‌ಗಳನ್ನ ಕಂಪೆನಿಗಳು ಬಿಡುಗಡೆಮಾಡುತ್ತಿವೆ. ಟೆಕ್ನಾಲಜಿ ಆಪ್ಡೇಟ್‌ ಆದಷ್ಟು ಟೆಕ್‌ ವಲಯ ಹೊಸತನದ ಸ್ಮಾರ್ಟ್‌ ಡಿವೈಸ್‌ಗಳನ್ನ ಪರಿಚಯಿಸುತ್ತಿದೆ. ಇನ್ನು ನಿಮಗೆಲ್ಲಾ ತಿಳಿದಿರುವಂತೆ ಗೇಮಿಂಗ್‌ ಸ್ಮಾರ್ಟ್‌ಫೋನ್‌ಗಳು ಹಾಗೂ ಗೇಮಿಂಗ್‌ ಲ್ಯಾಪ್‌ಟಾಪ್‌, ಕಂಪ್ಯೂಟರ್‌ಗಳ ದಾಹ ತಣಿಸುವುದಕ್ಕಾಗಿ ಹಲವು ಹೊಸ ಸಿಪಿಯುಗಳು ಎಂಟ್ರಿ ನಿಡಿದ್ದು, ಇದೀಗ AMD ರೈಜೆನ್ ತನ್ನ ಹೊಸ ಮಾದರಿಯ ಸಿಪಿಯುಗಳನ್ನ ಪರಿಚಯಿಸಿದೆ.

ಹೌದು

ಹೌದು, AMD ಕಂಪೆನಿ ತನ್ನ ಡೆಸ್ಕ್‌ಟಾಪ್‌ ರೈಜನ್‌ 3000 CPU ಗಳನ್ನ ಹೊಸ ಮಾದರಿಯಲ್ಲಿ ಬಿಡುಗಡೆ ಂಆಡಿದೆ. ಸದ್ಯ ಇದೀಗ AMD ಸಂಸ್ಥೆಯ ಹೊಸ ರೈಜೆನ್ 3 3300X ಮತ್ತು ರೈಜೆನ್ 3 3100 ಮಾದರಿಗಳನ್ನ ಪರಿಚಯಿಸಿದೆ. ಇದೀಗ AMD ಕಂಪೆನಿ ಪರಿಚಯಿಸಿರುವ ಹೊಸ ಸಪಿಯುಗಳ ಸಾಮರ್ಥ್ಯವೇನು, ಇದು ಹೇಗೆ ಗೇಮರ್‌ಗಳಿಗೆ ಉಪಯುಕ್ತವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಕಂಪೆನಿ

ಸದ್ಯ AMD ಕಂಪೆನಿ ರೈಜನ್‌ ತನ್ನ ಎಂಟ್ರಿ ಲೆವೆಲ್‌ ಗೇಮರ್‌, ಕಂಟೆಟ್‌ ಕ್ರಿಯೆಟರ್ಸ್‌, ಮತ್ತು ಕಚೇರಿ ಬಳಕೆದಾರರನ್ನ ಗುರಿಯಾಗಿರಿಸಿಕೊಂಡು ಈ ಸಿಪಿಯುಗಳನ್ನ ಬಿಡುಗಡೆ ಮಾಡಿದೆ. ಅಲ್ಲದೆ ಈ ಎರಡೂ ಸಿಪಿಯುಗಳು ಕೂಡ ಒಂದೇ 'zen' 2' ಚಿಪ್ಲೆಟ್ ಆರ್ಕಿಟೆಕ್ಚರ್ ಮತ್ತು 7nm ಉತ್ಪಾದನಾ ಪ್ರಕ್ರಿಯೆಯನ್ನು ಹೊಂದಿದೆ. ಜೊತೆಗೆ ರೈಜೆನ್ 5, ರೈಜೆನ್ 7, ಮತ್ತು ರೈಜೆನ್ 9-ಸರಣಿಯ ವಿನ್ಯಾಸಗಳನ್ನೇ ಈ ಸಿಪಿಯು ಕೂಡ ಒಳಗೊಂಡಿದೆ. ಇನ್ನು ಈ ಎರಡೂ ಸಿಪಿಯುಗಳು ಕ್ವಾಡ್-ಕೋರ್ ಮಾದರಿಗಳು ಮತ್ತು ಸಂಯೋಜಿತ ಗ್ರಾಫಿಕ್ಸ್ ಸಾಮರ್ಥ್ಯಗಳನ್ನು ಹೊಂದಿಲ್ಲ ಎಂದು ಹೇಳಲಾಗ್ತಿದೆ.

ಸಿಪಿಯುಗಳು

ಇನ್ನು ಈ ಸಿಪಿಯುಗಳು ಈ ಹಿಂದಿನ ತಲೆಮಾರುಗಳು ಹೊಂದಿರದ ಮಲ್ಟಿ-ಥ್ರೆಡ್ಡಿಂಗ್ ಬಳಕೆಗೆ ಸುಧಾರಿತ ಬಹುಕಾರ್ಯಕ ಕಾರ್ಯಕ್ಷಮತೆಯನ್ನ ಒಳಗೊಂಡಿರಲಿದೆ ಎಂದು AMD ಹೇಳಿಕೊಂಡಿದೆ. ಇನ್ನು ಇಂಟೆಲ್‌ನ ಸಮಾನ ಬೆಲೆಯ ಕೊಡುಗೆಗಳಿಗೆ ಹೋಲಿಸಿದರೆ ಗೇಮಿಂಗ್‌ನಲ್ಲಿ 20% ಮತ್ತು ಸಬ್ಜೆಕ್ಟ್‌ ಕ್ರಿಯೆಟ್‌ನಲ್ಲಿ 75% ಸುಧಾರಣೆಗಳನ್ನು ಮಾಡಲಾಗಿದೆ ಎಂದು ಕಂಪನಿ ಹೇಳಿದೆ. ಇದಲ್ಲದೆ ರೈಜೆನ್ 3 3300X ಹೆಚ್ಚು ಶಕ್ತಿಶಾಲಿಯಾಗಿದ್ದು, ಕ್ರಮವಾಗಿ 3.8GHz ಮತ್ತು 4.3GHz ವೇಗ ಮತ್ತು ವರ್ಧಕ ವೇಗವನ್ನು ಹೊಂದಿದೆ.

ರೈಜೆನ್

ಅಲ್ಲದೆ ರೈಜೆನ್ 3 3100 ಕ್ರಮವಾಗಿ 3.6GHz ಮತ್ತು 3.9GHz ವೇಗವನ್ನು ಹೆಚ್ಚಿಸುತ್ತದೆ. ಇನ್ನು ಈ ಎರಡೂ ಮಾದರಿಗಳು 18MB ಸಂಗ್ರಹ ಮೆಮೊರಿಯನ್ನು ಹೊಂದಿವೆ. ಜೊತೆಗೆ ಈ ಸಿಪಿಯುಗಳು 65W ಟಿಡಿಪಿಗಳಿಗೆ ರೇಟ್ ಮಾಡಲಾಗಿದೆ. ಇನ್ನು ಈ ಸಿಪಿಯುಗಳು ಕೂಡ AM4 CPU ಸಾಕೆಟ್ ಅನ್ನು ಬೆಂಬಲಿಸುತ್ತಲೇ ಇದೆ, ಆದರೂ ಮದರ್ಬೋರ್ಡ್ ಚಿಪ್‌ಸೆಟ್ ಹೊಂದಾಣಿಕೆ ಹೊಸ ಮಾದರಿಗಳಿಗೆ ಸೀಮಿತವಾಗಿರಬಹುದು. ಇನ್ನು ಈ ಹೊಸ ರೈಜೆನ್ 3 3300 ಎಕ್ಸ್ ಮತ್ತು ರೈಜೆನ್ 3 3100 ಸಿಪಿಯುಗಳು ಮೇ ತಿಂಗಳಲ್ಲಿ ಮಾರಾಟವಾಗುವ ನಿರೀಕ್ಷೆಯಿದೆ. ಇನ್ನು ರೈಜೆನ್ 3 3100 ಬೆಲೆ $ 99 ( ಸುಮಾರು 7,600 ರೂ.) ಮತ್ತು ರೈಜೆನ್ 3 3300 ಎಕ್ಸ್ ಬೆಲೆ $ 120 (ಅಂದಾಜು 9,200 ರೂ.) ಬೆಲೆಯನ್ನ ಹೊಂದಿರಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

Best Mobiles in India

English summary
The latest budget AMD Ryzen offerings promise more threads at lower prices.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X