'ಬಿಟ್‌ಕಾಯಿನ್' ಮೇಲೆ ಆತಂಕದ ಕರಿಮೋಡ!!..ಖರೀದಿಸಿದವರಿಗೆ ಬಿಗ್ ಶಾಕ್!?

  ಅಸ್ತಿತ್ವದಲ್ಲೇ ಇಲ್ಲದ ಈ ಕರೆನ್ಸಿ ಬಿಟ್‌ಕಾಯಿನ್ ಒಂದರ ಬೆಲೆ 10,000 ಡಾಲರ್‌ನಷ್ಟು ಏರಿಕೆಯಾದ ನಂತರ ಬಿಟ್‌ಕಾಯಿನ್ ಮೇಲೆ ಆತಂಕ ಆವರಿಸಿಕೊಂಡಿದೆ.!! ಬಿಟ್‌ಕಾಯಿನ್ ಮೇಲೆ ಹೆಚ್ಚಿನ ನಿಗಾ ಇಡಲು ಅಮೆರಿಕ ಮುಂದಾಗಿದ್ದು, ಈ ಬಗ್ಗೆ ಶ್ವೇತಭವನದ ಪ್ರಕಟಣೆ ತಿಳಿಸಿದೆ.!!

  ಕಾನೂನುಬಾಹಿರ ಶಕ್ತಿಗಳು ಬಿಟ್‌ಕಾಯಿನ್ ಮೇಲೆ ಹಿಡಿತ ಸಾಧಿಸಿ ವಿಶ್ವದ ಹಣಕಾಸು ಭದ್ರತೆಗೆ ಅಪಾಯ ತರಬಹುದು ಎಂಬುದು ಅಮೆರಿಕ ಆತಂಕ ವ್ಯಕ್ತಿಪಡಿಸಿದ್ದು, ಅರ್ಥವ್ಯವಸ್ಥೆಗಳನ್ನು ಪಲ್ಲಟಗೊಳಿಸುವ ಮೊದಲು ಅಂತಾರಾಷ್ಟ್ರೀಯ ಸಮುದಾಯ ಒಟ್ಟು ಸೇರಿ ಇದರ ಮೇಲೆ ಹಿಡಿತ ಸಾಧಿಸಬೇಕು, ಇಲ್ಲವಾದರೆ ಅಪಾಯ ಕಾದಿದೆ' ಎಂದು ಅಮೆರಿಕ ಹೇಳಿದೆ.

  ಇನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ಅಧಿಕಾರಿಗಳು ಕೂಡ ಬಿಟ್‌ಕಾಯಿನ್ ವಿಚಾರದಲ್ಲಿ ಆತಂಕ ವ್ಯಕ್ತಪಡಿಸಿರುವುದು ಬಿಟ್‌ಕಾಯಿನ್ ಅಸ್ತಿತ್ವದ ಮೇಲೆ ಪ್ರಭಾವ ಬೀರಬಹುದು.! ಹಾಗಾದರೆ, ಏನಿದು ಬಿಟ್‌ಕಾಯಿನ್? ಭಾರತದಲ್ಲಿ ಬಿಟ್‌ಕಾಯಿನ್‌ಗೆ ಬೆಂಬಲ ಇದೆಯೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಕಂಪ್ಯೂಟರ್‌ ಪ್ರಪಂಚಕ್ಕೆ ಸೀಮಿತ!!

  ಅಂತರಜಾಲ ಲೋಕದಲ್ಲಿ ಬಳಕೆಗೆ ಬರುತ್ತಿರುವ ಗೂಚರಿಸದ ಹಣ ಈ ಬಿಟ್‌ಕಾಯಿನ್. ಭಾರತದಲ್ಲಿ ರೂಪಾಯಿ, ಅಮೆರಿಕದಲ್ಲಿ ಡಾಲರುಗಳೆಲ್ಲ ಇದ್ದ ಹಾಗೆ ಅಂತರಜಾಲದ ಹಣ ಬಿಟ್‌ಕಾಯಿನ್ ಅಂತರಜಾಲದಲ್ಲಿ ಚಲಾವಣೆಯಾಗುವ ಈ ಬಿಟ್‌ಕಾಯಿನ್ ಅಸ್ತಿತ್ವ ಕಂಪ್ಯೂಟರ್‌ ಪ್ರಪಂಚಕ್ಕೆ ಸೀಮಿತ.!!

  ಬಿಟ್‌ಕಾಯಿನ್ ಹುಟ್ಟಿದ್ದು ಹೇಗೆ?

  2009ರಲ್ಲಿ ಈ ಬಿಟ್‌ಕಾಯಿನ್ ವ್ಯವಸ್ಥೆ ಪರಿಚಯವಾದದ್ದು, ಸಟೋಶಿ ನಕಾಮೋಟೋ ಎಂಬ ಹೆಸರಿನ ಅಜ್ಞಾತ ವ್ಯಕ್ತಿ ಬಿಟ್‌ಕಾಯಿನ್‌ ಸೃಷ್ಟಿಕರ್ತ ಎಂದು ಗುರುತಿಸಲಾಗುತ್ತದೆ. ಆದರೆ, ಬಿಟ್‌ಕಾಯಿನ್ ಸೃಷ್ಟಿಯ ಹಿಂದೆ ದೊಡ್ಡದೊಂದು ತಂಡವೇ ಇರುವ ಸಂಶಯ ಕೂಡ ಇದೆ.!!

  ಷೇರು ಮಾರುಕಟ್ಟೆ ಜೂಜು!!

  ಇತ್ತೀಚೆಗೆ ಒಂದು ಬಿಟ್‌ಕಾಯಿನ್‌ನ ಬೆಲೆ 10,000 ಡಾಲರ್‌ನಷ್ಟು ಏರಿರುವುದು ವಿಶ್ವದೆಲ್ಲೆಡೆ ಆತಂಕಕ್ಕೆ ಕಾರಣವಾಗಿದ್ದು, ಇದನ್ನು ಷೇರು ಮಾರುಕಟ್ಟೆ ಜೂಜು ಎಂದು ಕರೆಯುತ್ತಿದ್ದಾರೆ. ಕೇವಲ 4 ತಿಂಗಳಿನಲ್ಲಿ 6 ಲಕ್ಷ ಬೆಲೆ ಏರಿಕೆಯಾಗಿರುವುದು ಇದಕ್ಕೆ ಉದಾಹರಣೆಯಾಗಿದ್ದು, ಇಷ್ಟೆಲ್ಲ ದುಡ್ಡು ಯಾಕೆ ಸುರಿಯುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ.!!

  ವಹಿವಾಟು ಸ್ಥಗಿತಗೊಳಿಸಲು ಶಿಫಾರಸು!!

  ಬಿಟ್‌ಕಾಯಿನ್ ರೀತಿಯ ಕ್ರಿಪ್ಟೊ ಕರೆನ್ಸಿಗಳ ಬಳಕೆಯನ್ನು ದೇಶದಲ್ಲಿ ಹತ್ತಿಕ್ಕಬೇಕು ಮತ್ತು ಕ್ರಿಪ್ಟೊ ಕರೆನ್ಸಿ ಡೀಲರ್‌ಗಳ ವಹಿವಾಟನ್ನು ಸ್ಥಗಿತಗೊಳಿಸಬೇಕು ಎಂದು ಸಮಿತಿಯೊಂದು ಶಿಫಾರಸು ಮಾಡಿದೆ. ಕ್ರಿಪ್ಟೊ ಕರೆನ್ಸಿಗಳ ಬಳಕೆ ದಿನೇದಿನೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ.!!

  ಬಿಟ್‌ಕಾಯಿನ್ ಸುರಕ್ಷಿತವೇ?

  ಸದ್ಯ ಬಿಟ್‌ಕಾಯಿನ್‌ ಮೇಲೆ ಯಾವುದೇ ಸರಕಾರ ಅಥವಾ ಕೇಂದ್ರೀಯ ಪ್ರಾಧಿಕಾರದ ನಿಯಂತ್ರಣ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ವಿವಿಧ ಸರಕಾರಗಳು ಬಿಟ್‌ಕಾಯಿನ್‌ ಮೇಲೆ ನಿರ್ಬಂಧ ಹೇರಲು ಪ್ರಯತ್ನಿಸಬಹುದು ಎಂಬ ಊಹೆ ಇದೆ.ಬಿಟ್‌ಕಾಯಿನ್‌ ಮೌಲ್ಯದಲ್ಲಿ ಬಹಳ ಕ್ಷಿಪ್ರವಾಗಿ ಸಂಭವಿಸುವ ಏರಿಳಿತಗಳಿಂದ ಅವುಗಳ ಸ್ಥಿರತೆಯ ಬಗೆಗೂ ಅನುಮಾನ ಮೂಡಿದೆ.

  ಓದಿರಿ:2017ರ 'ಗೂಗಲ್ ಪ್ಲೇಸ್ಟೋರ್' ವರದಿ ರಿಲೀಸ್!!..ಭಾರತದಲ್ಲಿ ಅತಿಹೆಚ್ಚು ಡೌನ್‌ಲೋಡ್ ಆದ ಆಪ್‌ಗಳ ಲೀಸ್ಟ್!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  cryptocurrency bitcoin the biggest bubble in the world today.to know more visit to kannada.gizbot.com
  ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more