ಚೀನಾ ಆಪ್ಲಿಕೇಶನ್‌ ರಿಮೋವ್‌ ಮಾಡಿ ಅಭಿಯಾನಕ್ಕೆ ಭಾರಿ ಬೆಂಬಲ!

|

ಇತ್ತೀಚಿನ ದಿನಗಳಲ್ಲಿ ಚೀನಿ ವಸ್ತುಗಳ ಖರೀದಿಸಬೇಡಿ, ಬಹಿಷ್ಕಾರ ಹಾಕಿ ಅನ್ನೋ ಅಭಿಯಾನ ಭಾರತದಲ್ಲಿ ಜೋರಾಗಿಯೇ ನಡೆಯುತ್ತಿದೆ. ಸದ್ಯ ಭಾರತದಲ್ಲಿ ಚೀನಿ ಪ್ರಾಡಕ್ಟ್‌ಗಳಿಗೆ ಉತ್ತಮ ಮಾರುಕಟ್ಟೆಯಿದೆ. ಆದರೆ ಕೊರೋನಾ ಹಾವಳಿ ಶುರುವಾದ ನಂತರ ಚೀನಾದ ವಸ್ತುಗಳನ್ನ ಬಹಿಷ್ಕಾರ ಹಾಕಿ ಅನ್ನವ ಕೂಗು ಜೋರಾಗಿದೆ. ಇದರ ಪರಿಣಾಮ ಟೆಕ್‌ ವಲಯಕ್ಕೂ ತಟ್ಟಿದ್ದು, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇರುವ ಚೀನೀ ಆಪ್‌ಗಳನ್ನ ಆನ್‌ಇನ್‌ ಸ್ಟಾಲ್‌ ಮಾಡುವ ಅಭಿಯಾನ ಶುರುವಾಗಿದೆ.

ಹೌದು, ಚೈನೀಸ್ ಅಪ್ಲಿಕೇಶನ್‌ಗಳು ಸುರಕ್ಷಿತವಾಗಿಲ್ಲ ನೀವು ಅವುಗಳನ್ನ ಡಿಲೀಟ್‌ ಮಾಡಿ ಅನ್ನೊ ಅಭಿಯಾನ ಶುರುವಾಗಿದ್ದು. ಇದಕ್ಕಾಗಿ ಚೀನಿ ಆಪ್‌ಗಳನ್ನ ಹುಡುಕಿ ಒಂದೇ ಭಾರಿಗೆ ಆನ್‌ಇನ್‌ಸ್ಟಾಲ್‌ ಮಾಡಬಲ್ಲ ಆಪ್‌ ಒಂದನ್ನ ಪರಿಚಯಿಸಿಲಾಗಿದೆ. ಚೀನೀ ಆಪ್ಲಿಕೇಶನ್‌ಗಳನ್ನ ಡಿಲೀಟ್‌ ಮಾಡಲು ಬಯಸುವ ಚೀನೀ ಅಪ್ಲಿಕೇಶನ್‌ಗಳನ್ನು ಸ್ಕ್ಯಾನ್ ಮಾಡಬಹುದು ಮತ್ತು ಆಯ್ಕೆ ಮಾಡಿದರೆ ಸಾಕು ಒಮ್ಮೆಲೆ ಡಿಲೀಟ್‌ ಮಾಡುತ್ತದೆ. ಇದಕ್ಕಾಗಿಯೇ ರಿಮೋವ್‌ ಚೈನೀಶ್‌ ಅಪ್ಲಿಕೇಶನ್‌ ಆಪ್‌ ಅನ್ನು ಪರಿಚಯಿಸಲಾಗಿದೆ. ಇನ್ನು ಈ ಆಪ್‌ ವಿಶೇಷತೆ ಏನು, ಅನ್ನೊದನ್ನ ಈ ಲೇಖನಲ್ಲಿ ತಿಳಿಸಿಕೊಡ್ತಿವಿ ಓದಿರಿ.

ರಿಮೋವ್‌ ಚೈನೀಶ್‌ ಅಪ್ಲಿಕೇಶನ್‌

ಸದ್ಯ ರಿಮೋವ್‌ ಚೈನೀಶ್‌ ಅಪ್ಲಿಕೇಶನ್‌ ಪರಿಚಯಿಸಲಾದ ದಿನದಿಂದ ಇಲ್ಲಿಯವರೆಗೆ ಅಂದರೆ ಕಳೆದ ಎರಡು ವಾರಗಳಲ್ಲಿ ಈಗ 10 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳಿವೆ. ಸದ್ಯದ ಮಟ್ಟಿಗೆ 4.8 ರೇಟಿಂಗ್ ಹೊಂದಿರುವ ಈ ಆಪ್‌ ಭಾರತದಲ್ಲಿ ಅತಿ ಹೆಚ್ಚು ಡೌನ್‌ಲೋಡ್ ಮಾಡಲಾದ ಆಪ್‌ ಆಗಿದೆ. ಹಾಗೇ ನೋಡಿದರೆ ಈ ಆಪ್‌ ಡ್ರ್ಯಾಗನ್‌ನ ಐಕಾನ್ ಮತ್ತು ಅದರ ಹಿಂದೆ ಎರಡು ಬ್ರೂಮ್‌ಗಳನ್ನು ಹೊಂದಿರುವ ಅಪ್ಲಿಕೇಶನ್, ಆಗಿದ್ದು ಎಲ್ಲಾ "ಚೈನೀಸ್ ಅಪ್ಲಿಕೇಶನ್‌ಗಳನ್ನು ಒಂದೇ ಕ್ಲಿಕ್‌ನಲ್ಲಿ ಗುರುತಿಸಲಿದೆ. ಅಲ್ಲದೆ ಒಂದೇ ಭಾರಿಗೆ ಅನ್‌ ಇನ್‌ಸ್ಟಾಲ್‌ ಮಾಡಲಿದೆ.

ಡ್ರ್ಯಾಗನ್

ಇನ್ನು ಕೋವಿಡ್ -19 ಯಾವಾಗ ಇಡೀ ಜಗತ್ತನ್ನೇ ಕಾಡಾಲಾರಂಬಿಸಿತ್ತೋ ಅಂದಿನಿಂದಲೇ ವಿಶ್ವದಲ್ಲಿಯೇ ಡ್ರ್ಯಾಗನ್‌ ರಾಷ್ಟ್ರದ ಮೇಲೆ ಸಹಜವಾಗಿಯೇ ಕೋಪವಿದೆ. ಇದೇ ಕೋಪ ಇದೀಗ ಭಾರತೀಯರಲ್ಲಿ ಇನ್ನಷ್ಟು ಅಸಮಧಾನವನ್ನ ಸೃಷ್ಟಿಸಿದ್ದು, ಚೈನಿಶ್‌ ಪ್ರಾಡಕ್ಟ್‌ ಹಾಗೂ ಚೈನೀಶ್‌ ಆಪ್‌ಗಳನ್ನ ಡಿಲೀಟ್‌ ಮಾಡುವುದಕ್ಕೆ ಪ್ರೇರೆಪಿಸಿದೆ. ಇನ್ನು ಭಾರತದಲ್ಲಿ ಸದ್ಯಕ್ಕೆ ಭಾರತೀಯ ಅಪ್ಲಿಕೇಶನ್‌ಗಳಲ್ಲಿ ಹೆಚ್ಚಿನ ಆಸಕ್ತಿ ಹೆಚ್ಚುತ್ತಿರುವುದು ಕಂಡು ಬಂದಿದೆ. ಅಂದರೆ ಭಾರತೀಯರು ಹೆಚ್ಚಿನ ಪ್ರಮಾಣದಲ್ಲಿ ಭಾರತೀಯ ಮೂಲದ ಆಪ್‌ಗಳು ಯಾವುವು ಅನನ್ಒದನ್ನ ಗೂಗಲ್‌ ನಲ್ಲಿ ಸರ್ಚ್‌ ಮಾಡಿದ್ದಾರೆ. ಆದರಲ್ಲೂ ಮೇ ಮೊದಲ ವಾರದಲ್ಲಿ 31 ರಿಂದ ಮೂರನೇ ವಾರದಲ್ಲಿ 100 ಕ್ಕೆ ಹೆಚ್ಚಿಸಿದೆ.

ಟಾಪ್ 10 ಟ್ರೆಂಡಿಂಗ್

ಇನ್ನು ಭಾರತದ ಟಾಪ್ 10 ಟ್ರೆಂಡಿಂಗ್ ಕಮ್ಯೂನಿಕೇಶನ್‌ ಅಪ್ಲಿಕೇಶನ್‌ಗಳಲ್ಲಿ ಎರಡು ಭಾರತ ನಿರ್ಮಿತ ಸಂಪರ್ಕವನ್ನು ಹೊಂದಿವೆ. ಅದರಲ್ಲಿ ‘ಇಂಡಿಯನ್ ಮೆಸೆಂಜರ್' ಆಪ್ಲಿಕೇಶನ್‌ ಕೂಡ ಒಮದಾಗಿದೆ. ಸುಮಾರು ಒಂದು ವರ್ಷದಿಂದ ಸುಪ್ತವಾಗಿದ್ದ ಇಂಡಿಯನ್‌ ಮೆಸೆಂಜರ್‌ ಆಪ್ಲಿಕೇಶನ್‌ ಇದೀಗ ಟ್ರೆಂಡಿಂಗ್‌ನಲ್ಲಿ 8 ನೇ ಸ್ಥಾನಕ್ಕೇರಿದೆ. ಅಲ್ಲದೆ 4.4 ರೇಟಿಂಗ್‌ ಅನ್ನು ಪಡೆದುಕೊಂಡಿದೆ. ಇದಲ್ಲದೆ 10 ಲಕ್ಷಕ್ಕೂ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾಗಿದೆ. ಇದಲ್ಲದೆ ಡೇಟಾ ಸುರಕ್ಷತೆ, ರಾಷ್ಟ್ರೀಯ ಪ್ರಾಬಲ್ಯ ದೃಷ್ಟಿಯಿಂದ ಚೀನಾ ಆಪ್ಲಿಕೇಶನ್‌ ಸರಿಯಿಲ್ಲ ಎಂಬ ವಾದ ಜಾಸ್ತಿಯಾಗಿದೆ. ಚೀನಿ ಆಪ್‌ಗಳಿಂದ ಭಾರತಿಐರ ಡೇಟಾ ಕದಿಯಲಾಗುತ್ತಿದೆ ಅನ್ನೊ ವರದಿ ಕೂಡ ಸದ್ದು ಮಾಡ್ತಿದೆ. ಇದೆಲ್ಲದರ ದೃಷ್ಟಿಯಿಂದ ಭಾರತೀಯರು ಚೀನಿ ಆಪ್ಲಿಕೇಶನ್‌ ತೆಗೆಯಿರಿ ಅಭಿಯಾನಕ್ಕೆ ಬೆಂಬಲ ವ್ಯಕ್ತವಾಗಿದೆ.

ಮಾರುಕಟ್ಟೆ

ಇನ್ನು ಚೀನಾ ತನ್ನ ಉತ್ಪನ್ನಗಳ ಮಾರಾಟಕ್ಕೆ ಭಾರತದಲ್ಲಿ ದೊಡ್ಡ ಮಾರುಕಟ್ಟೆ ಹೊಂದಿದ್ದು, ಚೀನಿ ವಸ್ತುಗಳನ್ನ ಬಹಿಷ್ಕಾರ ಮಾಡಿದರೆ ಚೀನಾ ದಾರ್ಥಿಕತೆಗೆ ಹೊಡೆತ ಬೀಳಲಿದೆ ಎಂದು ಹೇಳಲಾಗ್ತಿದೆ. ಚೀನಾ ಭಾರತದಲ್ಲಿಯೇ ಬಹಳಷ್ಟು ಹಣವನ್ನು ಗಳಿಸುತ್ತದೆ ಮತ್ತು ಅದೇ ಹಣವನ್ನು ಭಾರತ ವಿರೋಧಿ ಚಟುವಟಿಕೆಯಲ್ಲಿ ಬಳಸುತ್ತದೆ. ಇದೇ ಕಾರಣಕ್ಕೆ ಜೈಪುರ ಮೂಲದ ಒನ್‌ಟಚ್ ಆಪ್ ಲ್ಯಾಬ್ಸ್‌ನ ಸಹ-ಸಂಸ್ಥಾಪಕ, ರಿಮೋವ್‌ ಚೀನಿ ಆಪ್ಸ್‌ ಅಪ್ಲಿಕೇಶನ್‌ ಪ್ರಾರಂಭಿಸಿದ್ದಾರೆ. ಇನ್ನು ಯುಎಸ್ ಮೂಲದ ಆಪ್ ಅನಾಲಿಟಿಕ್ಸ್ ಪ್ಲಾಟ್‌ಫಾರ್ಮ್ ಆಪ್ಟೊಪಿಯಾ ಪ್ರಕಾರ, ಶನಿವಾರ, ‘ಮಿಟ್ರಾನ್' ಭಾರತದಲ್ಲಿ ಹೆಚ್ಚು ಡೌನ್‌ಲೋಡ್ ಮಾಡಲಾದ ಆಂಡ್ರಾಯ್ಡ್ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿದೆ. ಆದರೆ ಕಳೆದ ತಿಂಗಳಲ್ಲಿ 70 ಲಕ್ಷ ಬಾರಿ ಡೌನ್‌ಲೋಡ್ ಮಾಡಿಕೊಂಡಿರುವ ಮತ್ತು ಪ್ರತಿದಿನ 2,20,950 ಜನರು ಬಳಸುತ್ತಿರುವ ಈ ಅಪ್ಲಿಕೇಶನ್ ಪಾಕಿಸ್ತಾನದಿಂದ ರಿಬ್ರಾಂಡ್ ಮಾಡಲಾದ ಅಪ್ಲಿಕೇಶನ್ ಆಗಿರಬಹುದು ಎನ್ನುವ ಶಂಕೆಯು ಕೂಡ ಇದೆ.

Most Read Articles
Best Mobiles in India

English summary
The app, with the icon of a dragon and two brooms crossed behind it, offers to identify all “Chinese apps” in one click and uninstall them.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X