Subscribe to Gizbot

ಎಲ್ಲಾ ಅಡುಗೆ ಮಾಡುವ ಆಂಡ್ರಾಯ್ಡ್ ಮೈಕ್ರೋವೇವ್!

Posted By: Varun
ಎಲ್ಲಾ ಅಡುಗೆ ಮಾಡುವ ಆಂಡ್ರಾಯ್ಡ್ ಮೈಕ್ರೋವೇವ್!

ಗಂಡಂದಿರು ತಮ್ಮ ಹೆಂಡತಿಯರನ್ನು ಈ ಅಡುಗೆ ಮಾಡು, ಆ ಅಡುಗೆ ಮಾಡು ಎಂದು ಕಾಟ (?)ಕೊಡುವುದು ಸಾಮಾನ್ಯ. ಮನೆಯಲ್ಲಿರುವ ಹೆಂಡತಿ ಅಂದ್ರೆ ಕೇಳಿದ್ದೆಲ್ಲಾ ಮಾಡಿಕೊಡಬಹುದು. ಅವರೂ ಕೆಲಸ ಮಾಡೋ ಹಂಗೆ ಇದ್ರೆ ಪಾಪ ಸುಸ್ತಾಗಿ ಬರೋದ್ರಿಂದ ಮಾಡಿಕೊಡೋದು ಕಷ್ಟಸಾಧ್ಯ.

ಇಂಥ ಸಂಧರ್ಭದಲ್ಲಿ ಪ್ರತಿ ದಿನ ಹೋಟೆಲ್ ಗೆ ಹೋಗಿ ಊಟ ಮಾಡಕ್ಕೆ ಆಗುತ್ತಾ ಹೇಳಿ. ಪ್ರತಿ ದಿನ ಟಿವಿಲಿ ಹೈಜೀನ್ ಇಲ್ಲದ ಹೋಟೆಲುಗಳ ಬಗ್ಗೆ ತೋರಿಸಿ ಆಚೆ ಏನೂ ತಿನ್ನಕ್ಕೆ ಆಗದಿರುವ ಥರ ಭಯಪಡಿಸಿ ಇಟ್ಟಿದ್ದಾರೆ. ಹಾಗಾಗಿ ಗಂಡಂದಿರಿಗೆ ಒಂದೋ ತಾವೇ ಅಡುಗೆ ಮಾಡುವುದನ್ನು ಕಲಿತುಕೊಳ್ಳಬೇಕು ಇಲ್ಲಾ ಅಂದ್ರೆ ಅಡುಗೆ ಮಾಡುವವರನ್ನು ಕೆಲಸಕ್ಕೆ ಇಟ್ಟುಕೊಳ್ಳಬೇಕು.

ಮೊದಲನೆಯದಕ್ಕೆ ಹೆಂಡತಿ ಒಪ್ಕೊಂಡ್ರೂ ಎರಡನೆಯದಕ್ಕೆ ಜಗಳ ಮಾಡುವ ಸಾಧ್ಯತೆ ಹೆಚ್ಚು. ಈ ರೀತಿ ಅನುಭವ ಟೆಕ್ಕಿಗಳಿಗೆ ಜಾಸ್ತಿಯೇ ಆಗಿರುತ್ತೆ ಅನ್ಸುತ್ತೆ. ಹಾಗಾಗಿ ತಿರುವನಂತಪುರದ ಟೆಕ್ನೋಪಾರ್ಕ್ ನ 7 ಎಂಜಿನೀರ್ ಗಳು ಸೇರಿಕೊಂಡು ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್ ಮೈಕ್ರೊವೆವ್ ಒಂದನ್ನು ತಯಾರಿಸಿದ್ದಾರೆ.

"MAID" (microwave android integrated device) ಎಂದು ಹೆಸರಿಡಲಾಗಿರುವ ಈ ಆಂಡ್ರಾಯ್ಡ್ ಮೈಕ್ರೋವೇವ್ ಸುಮಾರು 52 ಸಾವಿರಕ್ಕೂ ಹೆಚ್ಚು ರೆಸಿಪಿಗಳನ್ನು ತಯಾರು ಮಾಡುವ ಸಾಮರ್ಥ್ಯ ಹೊಂದಿದೆಯಂತೆ. ಭಾರತದ ಮೊದಲ ಆಂಡ್ರಾಯ್ಡ್ ಆಧಾರಿತ ಮೈಕ್ರೊವೆವ್ ಆಗಿರುವ ಈ "ಮೇಡ್" ಅನ್ನು ಮಾತಿನ ಮೂಲಕ ನಿಯಂತ್ರಿಸಬಹುದಾಗಿದ್ದು ಒಮ್ಮೆ ಇದನ್ನು ಇಂಟರ್ನೆಟ್ ಗೆ ಕನೆಕ್ಟ್ ಮಾಡಿದರೆ ಆನ್ಲೈನ್ ನಿಂದಲೇ ರೆಸಿಪಿಗಳನ್ನು ಡೌನ್ಲೋಡ್ ಮಾಡಬಹುದಂತೆ.

ಸೆಕ್ಟರ್ ಕ್ಯೂಬ್ ಟೆಕ್ನಾಲಜೀಸ್ ಎಂಬ ಹೆಸರಿನ ಕಂಪನಿಯನ್ನು ಸ್ಥಾಪಿಸಿರುವ ಈ 7 ಟೆಕ್ಕಿಗಳು ಇದನ್ನು ಡಿಸಂಬರ್ ವೇಳೆಗೆ ಸುಮಾರು 8 ಸಾವಿರ ರೂಪಾಯಿಗೆ ಹೊರತರಲಿದ್ದಾರಂತೆ.

ಈ ಮೇಡ್ ಅನ್ನು ನೀವು ಖಂಡಿತಾ ಮನೆಗೆ ತೆಗೆದುಕೊಂಡು ಹೋದರೆ ಯಾವ ಹೆಂಡತಿಯೂ ಬೇಡ ಅನ್ನುವುದಿಲ್ಲ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot