ಸಂಸ್ಥೆಯ ಮುಖ್ಯಸ್ಥನನ್ನೇ ಗುರುತಿಸಲಿಲ್ಲವಂತೆ 'ಐಫೋನ್ X' ಫೇಸ್‌ಲಾಕ್!!

ಫೇಸ್‌ಲಾಕ್ ಆಯ್ಕೆಯಲ್ಲಿನ ಡವಟ್ಟಿನಿಂದ ಆಪಲ್ ಮುಜುಗರಕ್ಕೆ ಒಳಗಾಗಿದೆ.!!

|

ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿದ್ದ ಐಫೋನ್ X ಲಾಂಚ್ ವೇಳೆ ಆಪಲ್ ಕಂಪೆನಿಗೆ ಮುಜುಗರವಾಗುವಂತಹ ಒಂದು ಕೆಲಸವಾಗಿದೆ.!! ಹೌದು, ಐಫೋನ್ X ನಲ್ಲಿ ಹೊಸದಾಗಿ ಅಳವಡಿಸಿರುವ ಫೇಸ್‌ಲಾಕ್ ಆಯ್ಕೆಯಲ್ಲಿನ ಡವಟ್ಟಿನಿಂದ ಆಪಲ್ ಮುಜುಗರಕ್ಕೆ ಒಳಗಾಗಿದೆ.!!

ಆಪಲ್ ಕಂಪನಿಯ ಉಪಾಧ್ಯಕ್ಷ ಗ್ರೇಗ್ ಫೆಡರಯ್ ಅವರು ಐಫೋನ್ ಎಕ್ಸ್ ಪರಿಚಯಿಸುವಾಗ ಅನ್‌ಲಾಕ್ ಮಾಡಲು ತಮ್ಮ ಮುಖವನ್ನು ತೋರಿಸಿದ್ದಾರೆ. ಆದರೆ ಮುಖ ತೋರಿಸಿ ಫೋನ್ ಅನ್‌ಲಾಕ್ ಮಾಡುವ ಮೊದಲ ಪ್ರಯತ್ನದಲ್ಲಿ ಐಫೋನ್ ಎಕ್ಸ್ ತಮ್ಮದೇ ಕಂಪನಿಯ ಮುಖ್ಯಸ್ಥನನ್ನು ಗುರುತಿಸಲು ವಿಫಲವಾಗಿತ್ತು ಎನ್ನಲಾಗಿದೆ.!

ಸಂಸ್ಥೆಯ ಮುಖ್ಯಸ್ಥನನ್ನೇ ಗುರುತಿಸಲಿಲ್ಲವಂತೆ 'ಐಫೋನ್ X' ಫೇಸ್‌ಲಾಕ್!!

ಪ್ರಸ್ತುತ ವಿಶ್ವ ತಂತ್ರಜ್ಞಾನ ದಿಗ್ಗಜನಾಗಿ ಮೆರೆಯುತ್ತಿರುವ ಆಪಲ್ ಕಂಪೆನಿ ಎಂದರೆ ಎಲ್ಲರಿಗೂ 100% ರಷ್ಟು ಭರವಸೆ ಇರುತ್ತದೆ.! ಆದರೆ, ಈ ಸಣ್ಣ ಘಟನೆಯಿಂದ ವಿಶ್ವದ ಟೆಕ್‌ ಲೋಕದಲ್ಲಿ ಆಪಲ್ ಕೊಂಚ ಮುಜುಗರಕ್ಕೆ ಒಳಗಾಗಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.!!

ಸಂಸ್ಥೆಯ ಮುಖ್ಯಸ್ಥನನ್ನೇ ಗುರುತಿಸಲಿಲ್ಲವಂತೆ 'ಐಫೋನ್ X' ಫೇಸ್‌ಲಾಕ್!!

ನಂಬರ್ ಒನ್ ಟೆಕ್ ಕಂಪೆನಿಯಾಗಿ ಉಳಿಯಲು ಯಾವಾಗಲೂ ಪ್ರತಿಶತ ನೂರರಷ್ಟು ನಿಖರವಾದ ತಂತ್ರಜ್ಞಾನ ಅಭಿವೃಧ್ದಿಯಾಗಬೇಕು. ಇನ್ನು ತಾನೇ ಅಭಿವೃಧ್ದಿಪಡಿಸಿದ ಫೀಚರ್‌ಗಳನ್ನು ಒಂದು ಕಂಪೆನಿ ನಿಖರವಾಗಿ ಬಳಕೆ ಮಾಡದಿದ್ದರೆ ಹೇಗೆ ಎಂದು ಅಂತರಾಷ್ಟ್ರಿಯ ಟೆಕ್ ತಜ್ಞರು ಪ್ರಶ್ನಿಸಿದ್ದಾರೆ.!!

ಓದಿರಿ: 3500 ಹಳೆ ಫೋನ್‌ಗಳನ್ನು ಸಂಗ್ರಹಿದ್ದಾನೆ ಈತ!..ಆದರೆ ಒಂದೂ ಸ್ಮಾರ್ಟ್‌ಫೋನ್ ಇಲ್ಲ!!

Best Mobiles in India

English summary
The tech world is talking about Apple’s 10th anniversary phone.to know more visi to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X