ಹಾಗೆ ಸುಮ್ಮನೆ, ಸೋನು ನಿಗಮ್ ಗೆ Wish ಮಾಡಿ

By Varun
|
ಹಾಗೆ ಸುಮ್ಮನೆ, ಸೋನು ನಿಗಮ್ ಗೆ Wish ಮಾಡಿ

"ಮಾಯವಾಗಿದೆ ಮನಸು ಹಾಗೆ ಸುಮ್ಮನೆ

ಗಾಯವ ಮಾಡಿದೆ ಕನಸು ಹಾಗೆ ಸುಮ್ಮನೆ

ಮೋಹದಲ್ಲಿ ಬೀಳುವ, ಮಧುರವಾದ ಭಾವನೆ

ಈಗ ತಾನೇ ಬಂದಿದೆ ನೀಡದೆ ಸೂಚನೆ"

ಸೋನು ನಿಗಮ್ ಹಾಡಿದ ಈ ಸಾಲುಗಳನ್ನ ಕೇಳ್ತಾ ಇದ್ದರೆ ನಮ್ಮ ಮನಸ್ಸು ಹಾಗೆ ಮಾಯವಾಗದೆ ಇರದು. ಅದು ಸೋನು ನಿಗಮ್ ನಗೋಲ್ಡನ್ ವಾಯ್ಸ್ ನ ಮಹಿಮೆಯೋ, ದೈವದತ್ತವಾದ ಕಂಠವೋ ಅಥವಾ ಆಟ ಫೀಲ್ ಮಾಡಿಕೊಂಡು ಹಾಡುವ ಬಗೆಯೇ ಅಂಥಹುದೋ ಗೊತ್ತಿಲ್ಲ. ಆದ್ರೆ ಕೇವಲ ಹಿಂದಿಯಷ್ಟೇ ಅಲ್ಲದೆ ನಮ್ಮ ಕನ್ನಡ ಭಾಷೆಯಲ್ಲೂ ಅದೇ ರೀತಿ ಭಾವುಕತೆ ಇಟ್ಟುಕೊಂಡು ಹಾಡುವ ಕೆಲವೇ ಹಾಡುಗಾರರಲ್ಲಿ ಸೋನು ನಿಗಮ್ ಕೂಡ ಒಬ್ಬರು.

ಅಂತಹ ಮೋಡಿಗಾರ ಸೋನು ನಿಗಮ್ ಇವತ್ತು ತಮ್ಮ 39ನೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು, ಈ ಸಂಧರ್ಭದಲ್ಲಿ ಅವರ ವೆಬ್ಸೈಟ್ ನ ಪರಿಚಯ ಮಾಡಿಕೊಡುತ್ತಿದೆ ಕನ್ನಡ ಗಿಜ್ಬಾಟ್.

ವೆಬ್ಸೈಟ್ ನ ಟೈಪ್ ಮಾಡಿದೊಡನೆ ನಿಮಗೆ ಅವರ ವ್ಯಕ್ತಿ ಪರಿಚಯ ಮಾಡಿಕೊಡುವ ತಮ್ಮದೇ ಆದ Quote - "Your tomorrow has no right to complain about your today, as long as your today gives you a bliss, unknown and incomprehensible to both your yesterday, and tomorrow!" ಕಣ್ಣಿಗೆ ಬೀಳುತ್ತದೆ.

ಹಾಗೆ ಕಣ್ಣು ಹಾಯಿಸಿದರೆ ಅವರ ಬಗೆಗಿನ ವಿವರಗಳು, ಇದುವರೆಗೂ ಹಾಡಿರುವ ಚಿತ್ರಗಳ, ಆಲ್ಬಮ್ ಗಳ ವಿವರವೂ ಲಭ್ಯವಿದೆ. ಇದಷ್ಟೇ ಅಲ್ಲದೆ ಅವರ ವೆಬ್ಸೈಟ್ ನಲ್ಲಿ ಸಂಗೀತ ಕಲಿಯುವವರಿಗೊಸ್ಕರ ಟಿಪ್ಸ್ ಕೂಡ ಕೊಟ್ಟಿದ್ದಾರೆ ಸೋನು.

ನೀವು ಸೋನು ನಿಗಮ್ ಅನ್ನ ಇಷ್ಟಪಡುತ್ತೀರಾದರೆ http://www.sonuniigaam.in ಅನ್ನು ಭೇಟಿ ಮಾಡಿ ವಿಶ್ ಮಾಡಿ, contact us ಮೂಲಕ.

ಹ್ಯಾಪಿ ಬರ್ತ್ ಡೇ ಸೋನು ನಿಗಮ್.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X