ಶಾಕಿಂಗ್ ಸುದ್ದಿ: ಚಾರ್ಜ್‌ಗೆ ಹಾಕಿದ್ದ ಫೋನಿನಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ಸಾವು..!

|

ಮೊಬೈಲ್ ಅನ್ನು ಚಾರ್ಜ್‌ಗೆ ಹಾಕಿದ ಸಂದರ್ಭದಲ್ಲಿ ಮಾತನಾಡಬೇಡಿ ಎನ್ನುವ ವಿಚಾರವನ್ನು ಹಲವು ಬಾರಿ ನಾವೇ ತಿಳಿಸಿದ್ದವೆ, ಇದರಿಂದ ನಿಮ್ಮ ಪ್ರಾಣಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ ಎಂದರು ನೀವು ನಂಬಿರದಿದ್ದರೇ ನಿಮಗಾಗಿಯೇ ಇಲ್ಲೊಂದು ಸುದ್ದಿ ಇದೆ. ಪಕ್ಕದ ಆಂಧ್ರದಲ್ಲಿ ವ್ಯಕ್ತಿಯೊಬ್ಬರು ಮೊಬೈಲ್ ಫೋನ್ ಅನ್ನು ಚಾರ್ಜ್‌ಗೆ ಹಾಕಿಕೊಂಡು ಮಾತನಾಡುತ್ತಿದ್ದ ಸಂದರ್ಭದಲ್ಲಿಯೇ ಕರೆಂಟ್ ಪಾಸ್ ಆಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಚಾರ್ಜ್‌ಗೆ ಹಾಕಿದ್ದ ಫೋನಿನಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ಸಾವು..!

31 ವರ್ಷದ ಮಸ್ತಾನ್ ರೆಡ್ಡಿ ಎನ್ನುವವರು ಚಾರ್ಜ್‌ಗೆ ಹಾಕಿಯೇ ಮೊಬೈಲ್‌ನಲ್ಲಿ ಮಾತನಾಡಲು ಹೋಗಿ ಸ್ಥಳದಲ್ಲಿಯೇ ಸಾವನ್ನಪ್ಪಿದವರಾಗಿದ್ದಾರೆ. ಫೋನಿನ ಬ್ಯಾಟರಿಯಿಂದ ಕರೆಂಟ್ ಪಾಸ್ ಆದ ಕಾರಣದಿಂದಲೇ ಮಸ್ತಾನ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಘಟನೆಗೆ ಕಾರಣವಾದ ಪೋನ್ ಯಾವುದು ಎನ್ನುವುದರ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟು ಕೊಟ್ಟಿಲ್ಲ. ಅಲ್ಲದೆ ಮೊಬೈಲ್ ಅನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಮಾತನಾಡುವ ಸಂದರ್ಭದಲ್ಲಿ ಚಾರ್ಜ್:

ಮಾತನಾಡುವ ಸಂದರ್ಭದಲ್ಲಿ ಚಾರ್ಜ್:

ಮಸ್ತಾನ್ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ತಮ್ಮ ಫೋನ್ ಅನ್ನು ಚಾರ್ಜ್ ಹಾಕಿಕೊಂಡು ನೆಲದ ಮೇಲೆ ಮಲಗಿಯೇ ಫೋನಿನಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್ ನಿಂದ ಶಾಕ್ ಹೊಡೆದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಚೀನಾ ಮೂಲದ ಫೋನ್:

ಚೀನಾ ಮೂಲದ ಫೋನ್:

ಮಸ್ತಾನ್ ರೆಡ್ಡಿ ಚೀನಾ ಮೂಲದ ಫೋನ್ ಅನ್ನು ಬಳಕೆ ಮಾಡುತ್ತಿದ್ದರೂ ಎನ್ನುವುದು ಪ್ರಾಥಮಿಕವಾಗಿ ತಿಳಿದುಬಂದಿದೆ. ಈ ಕುರಿತು ಪೊಲೀಸರು ಸೆಕ್ಷನ್ 174 ಅಡಿಯಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ತನಿಖೆಯನ್ನು ಮುಂದುವರೆಸಿದ್ದಾರೆ.

ಅಕ್ಕ-ಪಕ್ಕದವರಿಂದ ಮಾಹಿತಿ:

ಅಕ್ಕ-ಪಕ್ಕದವರಿಂದ ಮಾಹಿತಿ:

ಮಸ್ತಾನ್ ರೆಡ್ಡಿ ಮನೆಯಲ್ಲಿ ಒಬ್ಬರೆ ಇದ್ದರು ಎನ್ನಲಾಗಿದ್ದು, ಬ್ಲಾಸ್ಟ್ ಆದ ಸಂದರ್ಭದಲ್ಲಿ ಮನೆಯಿಂದ ಹೊಗೆ ಮತ್ತು ಸುಟ್ಟ ವಾಸನೆ ಬಂದಿದೆ ಎಂದು ಅಕ್ಕ-ಪಕ್ಕದ ನಿವಾಸಿಗಳು ಮಾಹಿತಿಯನ್ನು ನೀಡಿದ್ದಾರೆ.

ಮೂರು ದಿನದ ಹಿಂದೆ:

ಮೂರು ದಿನದ ಹಿಂದೆ:

ಆಂಧ್ರದ ಕರ್ನೂರು ಜಿಲ್ಲೆಯಲ್ಲಿ ಮೂರು ದಿನದ ಹಿಂದೆ ನಡೆದ ಒಂದು ಘಟನೆಯಲ್ಲಿ 10 ವರ್ಷದ ಬಾಲಕನೊರ್ವ ಸ್ಮಾರ್ಟ್‌ಫೋನ್ ಬ್ಲಾಸ್ಸ್ ನಿಂದಾಗಿ ತನ್ನ ಕೈ ಬೆರಳುಗಳನ್ನು ಕಳೆದುಕೊಂಡಿದ್ದ ಬಗ್ಗೆ ವರದಿಯಾಗಿದೆ. ಇದಕ್ಕಾಗಿ ಮಕ್ಕಳ ಕೈಗೆ ಸ್ಮಾರ್ಟ್‌ಫೋನ್ ಅನ್ನು ನೀಡಬೇಡಿ ಎನ್ನಬಹುದಾಗಿದೆ.

ಕೈ ಬೆರೆಳುಗಳು:

ಕೈ ಬೆರೆಳುಗಳು:

ಬಾಲಕ ಸ್ಮಾರ್ಟ್‌ಫೋನ್ ಹಾಡು ಕೇಳುತ್ತಿದ್ದ ವೇಳೆಯಲ್ಲಿ ಅದು ಬ್ಲಾಸ್ಟ್ ಆಗಿದ್ದು, ಇದರಿಂದಾಗಿ ಆತನ ಕೈನ ಮೂರು ಬೆರಳುಗಳು ಛಿದ್ರಗೊಂಡಿವೆ. ಬಾಲಕನಿಗೆ ಸದ್ಯ ಆಸ್ಪತ್ರೆಯೊಂದರಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಕುರಿತು ಬಾಲಕನೇ ಮಾಹಿತಿಯನ್ನು ನೀಡಿದ್ದಾನೆ ಎನ್ನಲಾಗಿದೆ.

ಮೊಬೈಲ್‌ ಬಳಕೆಯಲ್ಲಿ ಎಚ್ಚರ:

ಮೊಬೈಲ್‌ ಬಳಕೆಯಲ್ಲಿ ಎಚ್ಚರ:

ಇಂದಿನ ದಿನದಲ್ಲಿ ಹಲವು ಸ್ಮಾರ್ಟ್‌ಫೋನ್ ಗಳು ಬ್ಲಾಸ್ಟ್ ಆದ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿದೆ. ಈ ಹಿನ್ನಲೆಯಲ್ಲಿ ನಿಮ್ಮ ಮಕ್ಕಳು ಇಲ್ಲವೇ ನೀವೇ ಸ್ಮಾರ್ಟ್‌ಫೋನ್ ಅನ್ನು ಎಚ್ಚರಿಕೆಯಿಂದ ಬಳಸಿ, ಚಾರ್ಜ್‌ಗೆ ಹಾಕಿ ಫೋನ್ ಅನ್ನು ಎಂದಿಗೂ ಬಳಸಬೇಡಿ.

Best Mobiles in India

English summary
Andhra man answers phone kept on charge, dies of electrocution. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X