ಗೂಗಲ್‌ನಿಂದ ಅಧಿಕೃತವಾಗಿ ಆಂಡ್ರಾಯ್ಡ್ 12 ಓಎಸ್ ಬಿಡುಗಡೆ! ವಿಶೇಷತೆ ಏನು?
ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಬಹುನಿರೀಕ್ಷಿತ ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಮ್ ಅನ್ನು ಅನಾವರಣಗೊಳಿಸಿದೆ. ಗೂಗಲ್ ತನ್ನ ಪಿಕ್ಸೆಲ್ ಫಾಲ್ ಲಾಂಚ್ ಈವೆಂಟ್‌ನಲ್ಲಿ ಹೊಸ ಆಂಡ್ರಾಯ್ಡ್ ಓಎಸ್ ಅನ್ನು ಪರಿಚಯಿಸಿದೆ. ಇದು ಪಿಕ್ಸೆಲ್ 5 ಎ, ಪಿಕ್ಸೆಲ್ 5, ಪಿಕ್ಸೆಲ್ 4 ಎ, ಪಿಕ್ಸೆಲ್ 4, ಪಿಕ್ಸೆಲ್ 3 ಎ, ಪಿಕ್ಸೆಲ್ 3 ಎ ಎಕ್ಸ್‌ಎಲ್, ಪಿಕ್ಸೆಲ್ 3 ಸೇರಿದಂತೆ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳ ಸರಣಿಯಲ್ಲಿ ಆಂಡ್ರಾಯ್ಡ್ 12 ಲಭ್ಯವಿದೆ ಎಂದು ಗೂಗಲ್ ಹೇಳಿದೆ.

ಹೌದು, ಗೂಗಲ್ ತನ್ನ ಹೊಸ ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಂ ಅನ್ನು ಬಿಡುಗಡೆ ಮಾಡಿದೆ.ಗೂಗಲ್ ಸ್ಮಾರ್ಟ್‌ಫೋನ್ ಮಾತ್ರವಲ್ಲದೆ ಸ್ಯಾಮ್‌ಸಂಗ್ ಎಸ್ 21 ಸರಣಿ, ಒನ್‌ಪ್ಲಸ್ 9 ಸರಣಿ, ಮಿ ಅಲ್ಟ್ರಾ, ಸ್ಮಾರ್ಟ್‌ಫೋನ್‌ಗಳು ಕೂಡ ಆಂಡ್ರಾಯ್ಡ್ 12 ರೋಲ್ ಔಟ್ ಅನ್ನು ಖಚಿತಪಡಿಸಿವೆ. ಇನ್ನು ಆಂಡ್ರಾಯ್ಡ್ 12 ಓಎಸ್ ಪ್ರಸ್ತುತ ಇರುವ ಆಂಡ್ರಾಯ್ಡ್ 11 ಓಎಸ್ ಗಿಂತ ಸಾಕಷ್ಟು ಅಪ್‌ಡೇಟ್ ಫೀಚರ್ಸ್‌ಗಳನ್ನು ಒಳಗೊಂಡಿದೆ. ಹಾಗಾದ್ರೆ ಗೂಗಲ್ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳಲ್ಲಿ ಆಂಡ್ರಾಯ್ಡ್ 12 ಓಎಸ್ ಅನ್ನು ಪಡೆಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಂ ಸಾಕಷ್ಟು ಅಡ್ವಾನ್ಸ್ ಫೀಚರ್ಸ್‌ಗಳನ್ನು ಹೊಂದಿದೆ. ಕಳೆದ ಕೆಲವು ವರ್ಷಗಳಲ್ಲಿ ಬಂದ ಆಂಡ್ರಾಯ್ಡ್ ಓಎಸ್‌ಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಫೋನಿನ ವಿನ್ಯಾಸ ಮತ್ತು ವಿನ್ಯಾಸದಲ್ಲಿ ಆಕರ್ಷಕ ಬದಲಾವಣೆಗಳನ್ನು ಕಾಣಬಹುದು. ಬಳಕೆದಾರರು ತಮ್ಮ ಆದ್ಯತೆಗಳಿಗೆ ಅನುಗುಣವಾಗಿ ಕಸ್ಟಮ್ ಕಲರ್ ಪ್ಯಾಲೆಟ್ ಮತ್ತು ಹೊಸ ವಿಜೆಟ್‌ಗಳನ್ನು ಆಯ್ಕೆ ಮಾಡಲು ಅನುಮತಿಸುವ ಮೂಲಕ ಡಿವೈಸ್‌ನಲ್ಲಿ ವೈಯಕ್ತೀಕರಣವನ್ನು ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ. ಅಷ್ಟೇ ಅಲ್ಲ ಹೊಸ ಆಂಡ್ರಾಯ್ಡ್ ಆವೃತ್ತಿಯು ಹೊಸ ಬಳಕೆದಾರ ಅನುಭವವನ್ನು ನೀಡಲು ಫ್ಲೂಯಿಡ್ ಮೋಷನ್ ಮತ್ತು ಅನಿಮೇಷನ್‌ಗಳನ್ನು ಒಳಗೊಂಡಿದೆ.

ಆಂಡ್ರಾಯ್ಡ್ 12 ರಲ್ಲಿ ಗೂಗಲ್ ಗೌಪ್ಯತಾ ಡ್ಯಾಶ್‌ಬೋರ್ಡ್ ವೈಶಿಷ್ಟ್ಯವನ್ನು ಕೂಡ ಸೇರಿಸಿದ್ದು, ಅದು ಯಾವಾಗ, ಎಷ್ಟು ಸಮಯದವರೆಗೆ, ಮೊಬೈಲ್ ಡೇಟಾ, ಸ್ಥಳ, ಇಂಟರ್ನೆಟ್ ಇತ್ಯಾದಿಗಳನ್ನು ಯಾವ ಆಪ್ ಬಳಸುತ್ತದೆ ಸೇರಿದಂತೆ ಎಲ್ಲದರ ಖಾತೆಯನ್ನು ಉಳಿಸಿಕೊಳ್ಳುತ್ತದೆ. ಇದಲ್ಲದೆ ಕೋರ್ ಸಿಸ್ಟಮ್ ಸೇವೆಗಳಿಗೆ ಅಗತ್ಯವಿರುವ ಸಿಪಿಯು ಸಮಯವನ್ನು 22% ಕಡಿಮೆ ಮಾಡಲಿದೆ. ಇದಕ್ಕಾಗಿ ಸಿಸ್ಟಮ್ ಸರ್ವರ್‌ನಿಂದ ದೊಡ್ಡ ಕೋರ್‌ಗಳ ಬಳಕೆಯನ್ನು 15% ಕಡಿತಗೊಳಿಸಲು ಇದು ಆಧಾರವಾಗಿರುವ ಸುಧಾರಣೆಗಳನ್ನು ಒಳಗೊಂಡಿದೆ. ಆಂಡ್ರಾಯ್ಡ್ 12 ಫೈಲ್ ಗಾತ್ರಕ್ಕೆ ಚಿತ್ರದ ಗುಣಮಟ್ಟವನ್ನು ಸುಧಾರಿಸಲು AV1 ಇಮೇಜ್ ಫೈಲ್ ಫಾರ್ಮ್ಯಾಟ್ (AVIF) ಅನ್ನು ಬೆಂಬಲಿಸಲಿದ್ದು, ವೀಡಿಯೊಗಳ ಗುಣಮಟ್ಟವನ್ನು ಸುಧಾರಿಸಲು ಹೊಂದಾಣಿಕೆಯ ಮೀಡಿಯಾ ಟ್ರಾನ್ಸ್‌ಕೋಡಿಂಗ್ ಫೀಚರ್ಸ್ ಅನ್ನು ಪಡೆದುಕೊಂಡಿದೆ.

ಗೂಗಲ್ ಪಿಕ್ಸೆಲ್ ಸ್ಮಾರ್ಟ್‌ಫೋನ್‌ನಲ್ಲಿ ಆಂಡ್ರಾಯ್ಡ್ 12 ಅಪ್ಡೇಟ್ ಮಾಡುವುದು ಹೇಗೆ?
ಹಂತ:1 ಹೊಸ OS ಅನ್ನು ಇನ್‌ಸ್ಟಾಲ್ ಮಾಡುವ ಮೊದಲು ನಿಮ್ಮ ಡೇಟಾವನ್ನು ಬ್ಯಾಕಪ್ ಮಾಡಿ
ಹಂತ:2 ನಿಮ್ಮ ಪಿಕ್ಸೆಲ್ ಸ್ಮಾರ್ಟ್‌ಫೋನ್‌ನಲ್ಲಿ ಸೆಟ್ಟಿಂಗ್ಸ್ ಓಪನ್ ಮಾಡಿ
ಹಂತ:3 ಇದರಲ್ಲಿ ಸಿಸ್ಟಂ ಅನ್ನು ಟ್ಯಾಪ್ ಮಾಡಿ
ಹಂತ:4 ಅಡ್ವಾನ್ಸ್ಡ್ ಮೇಲೆ ಕ್ಲಿಕ್ ಮಾಡಿ
ಹಂತ:5 ಸಿಸ್ಟಮ್ ಅಪ್‌ಡೇಟ್‌ಗೆ ಹೋಗಿ
ನಿಮ್ಮ ಪಿಕ್ಸೆಲ್ ಸ್ಮಾರ್ಟ್‌ಫೋನ್‌ನಲ್ಲಿ ನೀವು ಈಗಾಗಲೇ ಆಂಡ್ರಾಯ್ಡ್ 12 ಬೀಟಾ ವರ್ಷನ್‌ನಲ್ಲಿ ಪ್ರವೇಶವನ್ನು ಹೊಂದಿದ್ದರೆ ಮತ್ತು ಅಪ್‌ಡೇಟ್ ಆಗಲು ಸಮಯ ತೆಗೆದುಕೊಳ್ಳುತ್ತದೆ. ನೀವು ಅದನ್ನು ಸೈಡ್‌ಲೋಡ್ ಮಾಡಬಹುದು.

ಆಂಡ್ರಾಯ್ಡ್ 12 ಅನ್ನು ಸೈಡ್‌ಲೋಡ್ ಮಾಡುವುದು ಹೇಗೆ?
ಹಂತ:1 ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ OTA ಫೈಲ್ ಅನ್ನು ಡೌನ್ಲೋಡ್ ಮಾಡಿ
ಹಂತ:2 ನಿಮ್ಮ ಪಿಕ್ಸೆಲ್ ಡಿವೈಸ್ ಅನ್ನು ರಿಕವರಿ ಮೋಡ್‌ಗೆ ಬೂಟ್ ಮಾಡಿ
ಹಂತ:3 ಎಡಿಬಿ ಸೈಡ್‌ಲೋಡ್‌ಗೆ ನ್ಯಾವಿಗೇಟ್ ಮಾಡಿ
ಹಂತ:4 ಹ್ಯಾಂಡ್‌ಸೆಟ್ ಅನ್ನು ಎಡಿಬಿ ಟೂಲ್‌ಗಳನ್ನು ಅಳವಡಿಸಿರುವ ಕಂಪ್ಯೂಟರ್‌ಗೆ ಕನೆಕ್ಟ್ ಮಾಡಿ
ಹಂತ:5 ಸೈಡ್‌ಲೋಡ್ ಕಮಾಂಡ್ ಅನ್ನು ಎಂಟರ್ ಮಾಡಿ
ಹಂತ:6 ನಂತ ನಿಮ್ಮ ಫೋನ್ ಅನ್ನು ರೀಬೂಟ್ ಮಾಡಿ
ಹೀಗೆ ಮಾಡುವ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆಂಡ್ರಾಯ್ಡ್ 12 ಅನ್ನು ಸೈಡ್‌ಲೋಡ್ ಮಾಡಬಹುದಾಗಿದೆ.

ಗೂಗಲ್ ತನ್ನ ಹೊಸ ಓಎಸ್ ಅನ್ನು ಪರಿಚಯಿಸುವ ಮೂಲಕ ಒಟ್ಟಾರೆ ಅನುಭವವನ್ನು ಹೆಚ್ಚು ಅನುಕೂಲಕರವಾಗಿ ಮಾಡಿದೆ. ಬೆಟರ್ ಟುಗೆದರ್ ಮೂಲಕ, ಗೂಗಲ್ ಸ್ಮಾರ್ಟ್ ಫೋನ್ ಅನ್ನು ಕೇವಲ ಕರೆ ಅಥವಾ ಇಂಟರ್ ನೆಟ್ ಗೆ ಸೀಮಿತಗೊಳಿಸದೆ ಮೊಬೈಲ್ ಫೋನ್ ಅನ್ನು ಇತರ ಸಾಧನಗಳೊಂದಿಗೆ ಬಳಸಲು ಒತ್ತು ನೀಡಿದೆ. ಮಲ್ಟಿ-ಡಿವೈಸ್ ಸಂಪರ್ಕವು ಲ್ಯಾಪ್‌ಟಾಪ್‌ಗಳು, ಟಿವಿಗಳೊಂದಿಗೆ ಸ್ಮಾರ್ಟ್‌ಫೋನ್‌ಗಳನ್ನು ಸಂಪರ್ಕಿಸಲು ಸುಲಭ ಮತ್ತು ಅನುಕೂಲಕರವಾಗಿಸುತ್ತದೆ.


Click it and Unblock the Notifications








