Home
ಸುದ್ದಿಜಾಲ

ಆಂಡ್ರಾಯ್ಡ್‌ 14 ಬೀಟಾ ಆವೃತ್ತಿ ಬಿಡುಗಡೆ ದಿನಾಂಕ ಬಹಿರಂಗ.. ಏನೆಲ್ಲಾ ಫೀಚರ್ಸ್‌ ನಿರೀಕ್ಷೆ?

ಗೂಗಲ್‌ನ ಬಹು ನಿರೀಕ್ಷಿತ ಆಂಡ್ರಾಯ್ಡ್‌ 14 ಬೀಟಾ ಆವೃತ್ತಿಯ ರೂಲ್‌ಔಟ್‌ಗೆ ದಿನಾಂಕ ನಿಗಧಿಯಾಗಿದೆ. ಇದೇ ಸೆಪ್ಟೆಂಬರ್ 25 ರಂದು ಆಂಡ್ರಾಯ್ಡ್‌ 14 ರ ಬೀಟಾ ಆವೃತ್ತಿ ಬಿಡುಗಡೆ ಆಗಲಿದೆ ಎನ್ನಲಾಗಿದೆ. ಇನ್ನು ಆಂಡ್ರಾಯ್ಡ್ 14 QPR1 ಬೀಟಾ 1 ಆವೃತ್ತಿಯನ್ನು ಪಿಕ್ಸೆಲ್ ಫೋನ್‌, ಟ್ಯಾಬ್ಲೆಟ್‌ಗಳು ಮತ್ತು ಫೋಲ್ಡಬಲ್‌ ಫೋನ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.

ಹೌದು, ಆಂಡ್ರಾಯ್ಡ್‌ 14 ಬೀಟಾ ವರ್ಷನ್‌ ರೂಲ್‌ಔಟ್‌ಗೆ ದಿನಗಣನೆ ಶುರುವಾಗಿದೆ. ಆಂಡ್ರಾಯ್ಡ್‌ 14 ಗಾಗಿ ಬೀಟಾ ಪ್ರೋಗ್ರಾಂನಲ್ಲಿರುವ ಬಳಕೆದಾರರು ಸ್ವಯಂಚಾಲಿತವಾಗಿ QPR1 ಬೀಟಾ 1 ಅನ್ನು ಪಡೆಯುತ್ತಾರೆ ಎಂದು ಕಂಪನಿ ದೃಢಪಡಿಸಿದೆ. ಇದಲ್ಲದೆ ಆಂಡ್ರಾಯ್ಡ್‌ QPR1 ಬೀಟಾ 1 ಅಪ್ಡೇಟ್‌ ಅನ್ನು ಬೆಂಬಲಿಸುವ ಡಿವೈಸ್‌ಗಳ ಪಟ್ಟಿಯನ್ನು ಕೂಡ ಬಹಿರಂಗಪಡಿಸಿದೆ. ಹಾಗಾದ್ರೆ ಆಂಡ್ರಾಯ್ಡ್‌ 14 QPR1 ಬೀಟಾ 1 ಅನ್ನು ಬೆಂಬಲಿಸುವ ಡಿವೈಸ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಂಡ್ರಾಯ್ಡ್‌ 14 ಬೀಟಾ ಆವೃತ್ತಿ ಬಿಡುಗಡೆ ದಿನಾಂಕ ಬಹಿರಂಗ..ಫೀಚರ್ಸ್‌ ನಿರೀಕ್ಷೆ?

ಆಂಡ್ರಾಯ್ಡ್‌ 14 QPR1 ಬೀಟಾ 1 ಬಿಡುಗಡೆ ಯಾವಾಗ?
ಆಂಡ್ರಾಯ್ಡ್‌ 14 ಆಧಾರಿತ OxygenOS 14 ಅಪ್‌ಡೇಟ್‌ಗಾಗಿ ರೋಲ್‌ಔಟ್ ಟೈಮ್‌ಲೈನ್ ಪ್ರಕಟವಾಗಿದೆ. ಅದರಂತೆ ಇದೇ ಸೆಪ್ಟೆಂಬರ್ 25 ರಂದು ಒಪನ್‌ ಬೀಟಾ ಅಪ್‌ಡೇಟ್‌ಗಾಗಿ ಜಾಗತಿಕ ರೋಲ್‌ಔಟ್ ಪ್ರಾರಂಭವಾಗಲಿದೆ. ಬೀಟಾ ವರ್ಷನ್‌ನಲ್ಲಿ ಬರುವ QPR ಗಳು ತುಲನಾತ್ಮಕವಾಗಿ ಸ್ಥಿರವಾಗಿರುತ್ತವೆ. ಇವುಗಳು ಡೆವಲಪರ್ ಪೂರ್ವವೀಕ್ಷಣೆಗಳ ಬದಲಿಗೆ ಬೀಟಾ ಆವೃತ್ತಿಗಳಾಗಿ ಪ್ರಾರಂಭಿಸುತ್ತವೆ. ಈಗಾಗಲೇ ಆಂಡ್ರಾಯ್ಡ್‌ 14 ಗಾಗಿ ಬೀಟಾ ಪ್ರೋಗ್ರಾಂನಲ್ಲಿರುವ ಬಳಕೆದಾರರು ಸ್ವಯಂಚಾಲಿತವಾಗಿ QPR1 ಬೀಟಾ 1 ಅನ್ನು ಪಡೆಯಲಿದ್ದಾರೆ.

ಆಂಡ್ರಾಯ್ಡ್‌ 14 QPR1 ಬೀಟಾ 1 ಅನ್ನು ಯಾವೆಲ್ಲಾ ಡಿವೈಸ್‌ ಬೆಂಬಲಿಸಲಿವೆ?
ಆಂಡ್ರಾಯ್ಡ್‌ 14 QPR1 ಬೀಟಾ 1 ಅಪ್ಡೇಟ್‌ ಅನ್ನು ಗೂಗಲ್‌ ಪಿಕ್ಸೆಲ್‌ 5a, ಪಿಕ್ಸೆಲ್‌ 6, ಪಿಕ್ಸೆಲ್‌ 6 ಪ್ರೊ, ಪಿಕ್ಸೆಲ್‌ 6a, ಪಿಕ್ಸೆಲ್‌ ಅನ್ನು ಒಳಗೊಂಡಿರುತ್ತದೆ. ಇದಲ್ಲದೆ ಗೂಗಲ್‌ ಪಿಕ್ಸೆಲ್‌ 7, ಪಿಕ್ಸೆಲ್‌ 7 ಪ್ರೊ, ಪಿಕ್ಸೆಲ್‌ 7a, ಪಿಕ್ಸೆಲ್‌ ಟ್ಯಾಬ್ಲೆಟ್‌, ಮತ್ತು ಪಿಕ್ಸೆಲ್‌ ಫೋಲ್ಡ್‌ ಹಾಗೆಯೇ ಆಂಡ್ರಾಯ್ಡ್‌ ಎಮ್ಯುಲೇಟರ್ ಬೆಂಬಲಿಸಲಿವೆ. ಇನ್ನು ಗೂಗಲ್‌ ಪಿಕ್ಸೆಲ್‌ 4a 5G ಮತ್ತು 5 ಡಿವೈಸ್‌ಗಳು QPR1 ಅನ್ನು ಪಡೆಯುವುದಿಲ್ಲ. ಆಂಡ್ರಾಯ್ಡ್ 14 ರ ಸ್ಥಿರ ಆವೃತ್ತಿಯು ಈ ಫೋನ್‌ಗಳಿಗೆ ಕೊನೆಯ ಅಪ್ಡೇಟ್‌ ಆಗಿರಲಿದೆ ಎಂದು ವರದಿಯಾಗಿದೆ.

ಆಂಡ್ರಾಯ್ಡ್‌ 14 QPR1 ಬೀಟಾ 1 ಫೀಚರ್ಸ್‌ ಏನಿದೆ?
ಆಂಡ್ರಾಯ್ಡ್‌ 14 QPR1 ಬೀಟಾ 1 ವರ್ಷನ್‌ ಅಪ್ಲಿಕೇಶನ್‌ಗಳಿಗೆ OEMಗಳು ಅತಿಕ್ರಮಣಗಳನ್ನು (overrides ) ಅನ್ವಯಿಸುತ್ತವೆ. ಬಳಕೆದಾರರ ಅತಿಕ್ರಮಣ (overrides ) ಎಂಬ ಹೊಸ ಫೀಚರ್ಸ್‌ ಅನ್ನು ಪರಿಚಯಿಸುತ್ತದೆ. ಇದು ಡಿವೈಸ್‌ ಸೆಟ್ಟಿಂಗ್ಸ್‌ ಮೂಲಕ ಅಪ್ಲಿಕೇಶನ್‌ಗಳಿಗೆ overrides ಅನ್ವಯಿಸಲು ಬಳಕೆದಾರರನ್ನು ಸಕ್ರಿಯಗೊಳಿಸಲಿದೆ. ಇದಲ್ಲದೆ ಬಳಕೆದಾರರಿಗೆ ಅಪ್ಲಿಕೇಶನ್‌ಗಳ ಆಕಾರ ಅನುಪಾತವನ್ನು ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಜೊತೆಗೆ ಪಿಕ್ಸೆಲ್‌ ಫೋನ್‌ಗಳಲ್ಲಿ "ರಿಪೇರ್‌ ಮೋಡ್" ಅನ್ನು ಸೇರಿಸಿದೆ. ಇದರೊಂದಿಗೆ ಪಿಕ್ಸೆಲ್ ಲಾಂಚರ್, ಸರ್ಚಿಂಗ್‌ ಆದ್ಯತೆಗಳು ಮತ್ತು ಬ್ಯಾಟರಿ ಸೈಕಲ್ ಕೌಂಟ್ಸ್‌ಗಳನ್ನು ತೋರಿಸುವ ಬ್ಯಾಟರಿ ಇನ್‌ಫರ್‌ಮೇಶನ್‌ ಸೆಟ್ಟಿಂಗ್ಸ್‌ ಅನ್ನು ಹೊಂದಿದೆ.

ಒನ್‌ಪ್ಲಸ್ 11 ಮತ್ತು ನಾರ್ಡ್‌ 2T ಬಳಕೆದಾರರಿಗೆ ಸಿಗಲಿದೆ ಆರಂಭಿಕ ಪ್ರವೇಶ
ಇನ್ನು ಈಗಾಗಲೇ ಒನ್‌ಪ್ಲಸ್‌ ಕಂಪೆನಿ ಆಂಡ್ರಾಯ್ಡ್‌ 14 ಬೀಟಾ ವರ್ಷನ್‌ ಅಪ್ಡೇಟ್‌ ಅನ್ನು ಹೊರತಂದಿದೆ. ಭಾರತ ಮತ್ತು ಉತ್ತರ ಅಮೇರಿಕಾದಲ್ಲಿರುವ OnePlus 11 ಬಳಕೆದಾರರಿಗೆ OxygenOS 14 ಓಪನ್ ಬೀಟಾ 1 ಅನ್ನು ಹೊರತಂದಿದೆ. ಹೆಚ್ಚುವರಿಯಾಗಿ, OnePlus Nord 2T ಯ ಭಾರತೀಯ ರೂಪಾಂತರದ ಬಳಕೆದಾರರಿಗೆ OxygenOS 14 ಕ್ಲೋಸ್ಡ್ ಬೀಟಾ ಟೆಸ್ಟಿಂಗ್ ಪ್ರೋಗ್ರಾಂಗೆ ಅಪ್ಲೈ ಮಾಡಲು ಅವಕಾಶವನ್ನು ನೀಡಲಾಗಿದೆ.

Best Mobiles in India

English summary
Android 14 beta update rollout timeline revealed: Here's Check full list of eligible phones
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+