ನೆಕ್ಸಸ್ 4 ಮತ್ತು 5 ಪಡೆಯಲಿದೆ ಲಾಲಿಪಪ್ ನವೀಕರಣ
ಗೂಗಲ್ ಆಂಡ್ರಾಯ್ಡ್ 5.0.1 ಲಾಲಿಪಪ್ ನವೀಕರಣವನ್ನು ತನ್ನ ನೆಕ್ಸಸ್ 4 ಮತ್ತು ನೆಕ್ಸಸ್ 5 ಫೋನ್‌ಗೆ ಬಿಡುಗಡೆ ಮಾಡುತ್ತಿದೆ. ನೆಕ್ಸಸ್ 4 ಗಾಗಿ ಒಟಿಎ ಅಪ್‌ಡೇಟ್ 16,7 ಎಮ್‌ಬಿ ಎಂದು ತೀರ್ಮಾನಿಸಲಾಗಿದ್ದು, ನೆಕ್ಸಸ್ 5 ನವೀಕರಣವು 13.3 ಎಮ್‌ಬಿ ಎಂಬುದು ಮಾಹಿತಿಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ: ಹೊಸ ವರ್ಷಕ್ಕಾಗಿ ಮೈಕ್ರೋಮ್ಯಾಕ್ಸ್ ಮೇಲೆ ಭರ್ಜರಿ ದರಕಡಿತ
ಆಂಡ್ರಾಯ್ಡ್ 5.0.1 ಲಾಲಿಪಪ್ ಈಗಾಗಲೇ ಬಳಕೆದಾರರು ನಮೂದಿಸಿರುವ ಕೆಲವೊಂದ ದೋಷಗಳನ್ನು ಸರಿಪಡಿಸಿಕೊಂಡು ಅನಾವರಣಗೊಂಡಿದ್ದು, ಸಾಫ್ಟ್‌ವೇರ್‌ಗೆ ಮಾಡಿರುವ ಅಪ್‌ಗ್ರೇಡ್ ನೆಕ್ಸಸ್ 4 ಮತ್ತು ನೆಕ್ಸಸ್ 5 ನ ಕಾರ್ಯಕ್ಷಮತೆಯನ್ನು ಸುಧಾರಿಸಲಿದ್ದು ಫೋನ್‌ನಲ್ಲಿರುವ ದೋಷಗಳನ್ನು ನಿವಾರಿಸಲಿದೆ. ವೈಫೈ ಮೂಲಕ ಈ ಹೊಸ ನವೀಕರಣವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದ್ದು ಮೊಬೈಲ್ ನೆಟ್‌ವರ್ಕ್ ಮೂಲಕ ಲಾಲಿಪಪ್‌ಗೆ ಅಪ್‌ಗ್ರೇಡ್ ಮಾಡಿಕೊಳ್ಳುವುದು ಹೆಚ್ಚುವರಿ ದರಗಳನ್ನು ವಿಧಿಸಬಹುದು ಎಂದು ಒಟಿಎ ನವೀಕರಣ ವಿವರಣೆ ತಿಳಿಸಿದೆ.


Click it and Unblock the Notifications








