ಆಂಡ್ರಾಯ್ಡ್‌ ಕೀ.ಲೈಮ್‌ ಓಎಸ್‌ ಫೋಟೋ ಲೀಕ್‌

Posted By:

ಜಿಂಜರ್‌ಬ್ರಿಡ್‌,ಐಸ್‌ಕ್ರೀಂ ಸ್ಯಾಂಡ್‌ವಿಚ್‌, ಜೆಲ್ಲಿಬೀನ್‌ ಫ್ಲೇವರ್‌ಗಳನ್ನು ಉಣಿಸಿದ ಗೂಗಲ್‌ ಸದ್ಯದಲ್ಲೇ ಕೀ ಲೈಮ್‌ ಆಂಡ್ರಾಯ್ಡ್‌ ಮೊಬೈಲ್‌ ಆಪರೇಟಿಂಗ್‌ ಸಿಸ್ಟಂನ್ನು ಬಿಡುಗಡೆ ಮಾಡಲಿದೆ. ಈ ಸಂಬಂಧ ಕೀ ಲೈಮ್‌ ಆಪರೇಟಿಂಗ್ ಸಿಸ್ಟಂ ಹೊಂದಿರುವ ಡಿಸೈನ್‌ನ ಫೋಟೋ ಲೀಕ್‌ ಆಗಿವೆ.
ಜಿನೇಶ್‌ ಎನ್ನುವವರು ಈ ಡಿಸೈನ್‌ ರೂಪಿಸಿದ್ದು ಅವರೇ ಈ ಫೋಟೋವನ್ನು ತಮ್ಮ ಗೂಗಲ್‌ ಪ್ಲಸ್‌ಅಕೌಂಟ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಆದರೆ ಈ ಆಪರೇಟಿಂಗ್‌ ಸಿಸ್ಟಂನ್ನು ಗೂಗಲ್‌ ಯಾವಾಗ ಬಿಡುಗಡೆ ಮಾಡಲಿದೆ ಎನ್ನುವರ ಬಗ್ಗೆ ಅಧಿಕೃತವಾಗಿ ತಿಳಿಸಿದ್ದರೂ ಇದೇ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲಿದೆ ಎನ್ನುವ ಮಾಹಿತಿಗಳು ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಗೂಗಲ್‌ ಮೊದಲ ಎರಡು ಆಂಡ್ರಾಯ್ಡ್‌ಗಳಿಗೆ ಯಾವುದೇ ಹೆಸರನ್ನು ಇಟ್ಟಿರಲಿಲ್ಲ. ನಂತರ ಬಂದ ಎಲ್ಲಾಆಪರೇಟಿಂಗ್‌ ಸಿಸ್ಟಂಗಳಿಗೆ ಚಾಕಲೇಟ್‌ ಫ್ಲೇವರ್‌ಗಳನ್ನು ಇರಿಸಿದೆ. ಇಲ್ಲಿಯವರೆಗೆ ಎಂಟು ಚಾಕಲೇಟ್‌ ಫ್ಲೇವರ್‌ಗಳ ಓಎಸ್‌ನ್ನು ಬಿಡುಗಡೆ ಮಾಡಿದೆ. ಕ್ರಮವಾಗಿ ಕಪ್‌ಕೇಕ್, ಡೋನಟ್, ಎಕ್ಲೇರ್, ಫ್ರೋಯೋ, ಜಿಂಜರ್‌ಬ್ರೆಡ್, ಹನಿಕಾಂಬ್, ಐಸ್‌ಕ್ರೀಮ್ ಸ್ಯಾಂಡ್‌ವಿಚ್ ಹಾಗೂ ಜೆಲ್ಲಿಬೀನ್ ಪ್ಲೇವರ್‌ಗಳನ್ನು ಉಣಿಸಿದೆ. ಅಷ್ಟೇ ಅಲ್ಲದೇ ಇಂಗ್ಲಿಷ್‌ ವರ್ಣ‌ಮಾಲೆಯ ಅಕ್ಷರಗಳ ಅನುಸರವಾಗಿ ತನ್ನ ಆಪರೇಟಿಂಗ್‌ ಸಿಸ್ಟಂಗಳ ಹೆಸರನ್ನು ಇರಿಸಿಕೊಂಡು ಬಂದಿದ್ದು, ಈಗ 'ಕೆ' ಅಕ್ಷರದಿಂದ ಆರಂಭವಾಗುವ ಕೀ ಲೈಮ್‌ ಆಪರೇಟಿಂಗ್‌ ಸಿಸ್ಟಂನ್ನು ಬಿಡುಗಡೆ ಮಾಡಲಿದೆ. ಹೀಗಾಗಿ ಜಿನೇಶ್‌ ಲೀಕ್ ಅಪ್‌ಲೋಡ್ ಮಾಡಿರುವ ಕೀ ಲೈಮ್‌ ಓಎಸ್‌ ಡಿಸೈನ್‌ ಫೋಟೋಗಳು ಇಲ್ಲಿವೆ ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲಾಕ್‌ ಸ್ಕ್ರೀನ್‌

ಲಾಕ್‌ ಸ್ಕ್ರೀನ್‌

ಆಂಡ್ರಾಯ್ಡ್‌ ಕೀ.ಲೈಮ್‌ ಓಎಸ್‌ ಫೋಟೋ ಲೀಕ್‌

ಹೋಮ್‌ಸ್ಕ್ರೀನ್

ಹೋಮ್‌ಸ್ಕ್ರೀನ್

ಆಂಡ್ರಾಯ್ಡ್‌ ಕೀ.ಲೈಮ್‌ ಓಎಸ್‌ ಫೋಟೋ ಲೀಕ್‌

Music Widget

Music Widget

ಆಂಡ್ರಾಯ್ಡ್‌ ಕೀ.ಲೈಮ್‌ ಓಎಸ್‌ ಫೋಟೋ ಲೀಕ್‌

Open Play Music Widget

Open Play Music Widget

ಆಂಡ್ರಾಯ್ಡ್‌ ಕೀ.ಲೈಮ್‌ ಓಎಸ್‌ ಫೋಟೋ ಲೀಕ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot