ನ.2 ರಂದು ಬೆಂಗಳೂರಿನಲ್ಲಿ ಆಂಡ್ರಾಯ್ಡ್‌ ಸಮ್ಮೇಳನ

Posted By: Vijeth
ನ.2 ರಂದು ಬೆಂಗಳೂರಿನಲ್ಲಿ ಆಂಡ್ರಾಯ್ಡ್‌ ಸಮ್ಮೇಳನ
ಹೈದ್ರಾಬಾದ್‌, ಅ.27: ತಂತ್ರಜ್ಞಾನ ಕ್ಷೇತ್ರದಲ್ಲಿನ ಸಮಸ್ಯೆಗಳ ಕುರಿತಾಗಿ ಚರ್ಚಿಸಲು ಉತ್ತಮ ಆನ್‌ಲೈನ್‌ ವೇದಿಕೆಯಾದಂತಹ ಹ್ಯಾಸ್‌ಗೀಕ್ಸ್‌ ಆಂಡ್ರಾಯ್ಡ್‌ ಕುರಿತಾದ ಎರಡನೇ ಡ್ರಾಯ್‌ಕಾನ್‌ ಸಮ್ಮೇಳನವನ್ನು ಬೆಂಗಳೂರಿನ ವೈಟ್‌ ಫೀಲ್ಡ್‌ ನಲ್ಲಿರುವ ಎಂಎಲ್‌ಆರ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ನವೆಂಬರ್‌ 2 ಹಾಗೂ 3 ರಂದು ಆಯೋಜಿಸಲಿದೆ.

ಆಂಡ್ರಾಯ್ಡ್‌ ಕುರಿತಾದ ಮೊದಲ ಡ್ರಾಯ್‌ಕಾನ್‌ ಸಮ್ಮೇಳವನ್ನೂ ಕೂಡ ಕಳೆದ ವರ್ಷ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿಯೇ ನಡೆಸಲಾಗಿತ್ತು. ಹಾಗೂ ಸಮ್ಮೇಳನದಲ್ಲಿ ಇಂಜಿನಿಯರ್‌ಗಳು, ಅಭಿವೃಧಿಕಾರರು, ವಿದ್ಯಾರ್ಥಿಗಳು, ನಿರ್ವಾಹಕರುಗಳು, ಸಿಟಿಓ, ಸಿಇಓ ಹಾಗೂ ವಿನ್ಯಾಸಕಾರರುಗಳನ್ನು ಆಂಡ್ರಾಯ್ಡ್‌ ತಂತ್ರಜ್ಞಾನದ ಕಡೆಗೆ ಆಕರ್ಷಿಸುವುದೇ ಸಂಘಟನಕಾರರ ಪ್ರಮುಖ ಉದ್ದೇಶವಾಗಿದೆ.

"ಡ್ರಾಯ್‌ಕಾನ್‌ 2012 ಸಮ್ಮೇಳನದಲ್ಲಿ ಪ್ರಸಕ್ತ ಆಂಡ್ರಾಯ್ಡ್‌ನಲ್ಲಿನ ಗೇಮಿಂಗ್‌, ಎನ್‌ಎಫ್‌ಸಿ, ಆರ್ಡೀನೋ, ಮಲ್ಟಿ-ಮಾಡಲ್‌ ಆಪ್ಸ್‌ ಹಾಗೂ ಆಪ್ಸ್‌ ವಿನ್ಯಾಸ ಗೊಳಿಸುವ ಸಂದರ್ಭದಲ್ಲಿ ತಲೆ ದೂರುವಂತಹ UX/UI ಸಮಸ್ಐಎಗಳ ಕುರಿತಾಗಿ ಕ್ಷೇತ್ರದ ಕುರಿತಾಗಿ ಚರ್ಚೆಗಳನ್ನು ನಡೆಸಲಾಗುವುದು" ಎಂದು ಹ್ಯಾಸ್‌ಗೀಕ್‌ನ ಖೈನಬ್‌ ಬಾವಾ ತಿಳಿಸಿದ್ದಾರೆ.

ಸಮ್ಮೇಳನದಲ್ಲಿ ಅಭಿವೃಧಿಕಾರರಿಗೆ ಆಂಡ್ರಾಯ್ಡ್‌ ಪ್ಲಾಟ್‌ಫಾರ್ಮ್‌ನ ಅನುಕೂಲಗಳ ಕುರಿತಾಗಿ ಚರ್ಚಿಸಲಾಗುವುದು ಅದರಲ್ಲಿಯೂ ಭಾರತೀಯ ಮೂಲದ ಅಭಿವೃಧಿಕಾರರಿಗೆ ಹೆಚ್ಚು ಒತ್ತು ನೀಡ ಲಾಗುವುದು. ಇದರಿಂದಾಗಿ ಸಮ್ಮೇಳನದಲ್ಲಿ ಭಾಗಿಯಾಗುವವರಿಗೆ HTML5, JavaScript ಹಾಗೂ ನೂತನ ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್ಸ್‌ಗಳ ಮೊಬೈಲ್‌ ತಂತ್ರಜ್ಞಾನವನ್ನು ಅರಿತುಕೊಳ್ಳಲು ಅನುಕೂಲವಾಗುತ್ತದೆ ಎಂದು ಪ್ರತಿನಿಧಿ ಯೋರ್ವರು ತಿಳಿಸಿದ್ದಾರೆ.

ಇದಲ್ಲದೆ ಭಾರತೀಯ ಮಾರುಕಟ್ಟೆಯ ಅನುಗುಣವಾಗಿ ಯಾವರೀತಿ ಆಪ್ಸ್‌ಗಳನ್ನು ಅಭಿವೃಧಿ ಪಡಿಸ ಬೇಕೆಂದೂ ಕೂಡ ಚರ್ಚಿಸಲಾಗುವುದು.

ಭಾರತಕ್ಕೆ ಐಪ್ಯಾಡ್‌ ಮಿನಿ ಬರಲಿದೆ!

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot