Home
ಸುದ್ದಿಜಾಲ

ಆಂಡ್ರೊಯಿಡ್ ಒ ಅನ್ನು ಒಟ್‍ಮೀಲ್ ಕುಕಿ ಎಂದು ಕರೆಯಲಾಗಬಹುದು

ಗೂಗಲ್ ಧೃಡಪಡಿಸಿದೆ ಆಂಡ್ರೊಯಿಡ್ ಒ ಮುಂಬರುವ ಹೊಸ ವರ್ಷನ್ ಆಂಡ್ರೊಯಿಡ್ 8.0 ಎಂದು. ಆದರೆ ಅದರ ಹೆಸರು ಯಾವ ಸಿಹಿತಿಂಡಿಯದು ಎಂದು ಇನ್ನೂ ತಿಳಿದು ಬಂದಿಲ್ಲಾ. ಅಂದಾಜಿನ ಪ್ರಕಾರ ಒಟ್‍ಮೀಲ್ ಕುಕಿ ಇರಬಹುದು ಎನ್ನುತ್ತಿದ್ದಾರೆ.

By Prateeksha

ನಿರೀಕ್ಷಿಸಿದಂತೆ ಗೂಗಲ್ ಆಂಡ್ರೊಯಿಡ್ ಡೆವೆಲೊಪರ್ ಪ್ರಿವ್ಯು ನಲ್ಲಿ ಧೃಡಪಡಿಸಿದೆ ಆಂಡ್ರೊಯಿಡ್ ಒ ಮುಂಬರುವ ಆಂಡ್ರೊಯಿಡ್ 8.0 ಎಂದು. ಆದರೆ, ನಮಗೆ ಹೊಸ ಸಾಫ್ಟ್‍ವೇರ್ ಅಪ್‍ಡೇಟ್ ನ ಸಿಹಿತಿಂಡಿಯ ಹೆಸರು ಗೊತ್ತಿಲ್ಲಾ.

ಆಂಡ್ರೊಯಿಡ್ ಒ ಅನ್ನು ಒಟ್‍ಮೀಲ್ ಕುಕಿ ಎಂದು ಕರೆಯಲಾಗಬಹುದು

ಬಹಳಷ್ಟು ಜನರ ಲೆಕ್ಕಾಚಾರದ ಪ್ರಕಾರ ಆಂಡ್ರೊಯಿಡ್ ನಲ್ಲಿ ಒ ಎಂದರೆ ಒ ಒರಿಯೊ ಸ್ಯಾಂಡ್‍ವಿಚ್ ಕುಕಿಸ್ ಇರಬಹುದು ಎಂದು. ಸಾಮಾನ್ಯವಾಗಿ ಯಾರ ತಲೆಯಲ್ಲಾದರು ಈ ಯೋಚನೆ ಬರಬಹುದು. ನೆನಪಿರುವ ಹಾಗೆ ಗೂಗಲ್ ಆಂಡ್ರೊಯಿಡ್ 4.4 ಗೆ ಕಿಟ್‍ಕ್ಯಾಟ್ ಎಂದು ಹೆಸರಿಟ್ಟಿತು. ಆದರೆ, ಮೈಸ್ ಎನ್ನುವ ಪ್ರಕಾಶನ ಬೇರೊಂದು ಅಂದಾಜು ಮಾಡಿದೆ. ಹಲವಾರು ಆಧಾರಗಳ ಪ್ರಕಾರ ಇದು ಆಂಡ್ರೊಯಿಡ್ 8.0 ಸೊರ್ಸ್ ಕೋಡ್ ನಲ್ಲಿರುವ 'ಒಸ್-ಡೇವ್’ ಇರಬೇಕೆಂದು ಹೇಳುತ್ತಿದ್ದಾರೆ.

ಈ ಜಾಲತಾಣದ ಪ್ರಕಾರ ಆಂಡ್ರೊಯಿಡ್ ನ 'ಒಸಿ’ ಎಂದರೆ 'ಒಟ್‍ಮೀಲ್ ಕುಕಿ’. ಹೌದು, ನೀವು ಕೇಳಿದ್ದು ನಿಜ. ಎಲ್ಲಾ ನೋಡಿದರೆ ಇದು ನಿಜ ಎನಿಸುತ್ತದೆ ಏಕೆಂದರೆ ಗೂಗಲ್ ಐ/ಒ ದಲ್ಲಿ ತೋರಿಸಿದ ಹಲವಾರು ಸ್ಲೈಡ್ಸ್ ನಲ್ಲಿ 'ಒಟ್‍ಮೀಲ್ ಕುಕಿ’ ಹೆಸರು ಪ್ರಸ್ತಾಪಿಸಲಾಗಿದೆ.

ಉತ್ತರಕ್ಕಾಗಿ ಅಗಸ್ಟ್ ನಲ್ಲಿ ಬಿಡುಗಡೆ ಆಗಲಿರುವ ಸಾಫ್ಟ್‍ವೇರ್ ನ ಫೈನಲ್ ವರ್ಷನ್ ತನಕ ಕಾದು ನೋಡುವುದು ಉಚಿತ

ಹಿಂದಿನದನ್ನು ನೋಡಿದರೆ, ಆಂಡ್ರೊಯಿಡ್ ನೌಗಟ್ ಕಳೆದ ವರ್ಷ ಸುಮಾರು ಅದೇ ಸಮಯದಲ್ಲಿ ಬಿಡುಗಡೆ ಗೊಂಡಿತ್ತು. ನಿಮಗೆ ನೆನಪಿದ್ದರೆ, ಗೂಗಲ್ ಪಿಕ್ಸೆಲ್ ಆಂಡ್ರೊಯಿಡ್ 7.1 ನೊಂದಿಗೆ ಬಂದಿತ್ತು. ಹೀಗಾಗಿ ಗೂಗಲ್ ಪಿಕ್ಸೆಲ್ 2 ಆಂಡ್ರೊಯಿಡ್ ಒ 8.1 ಮೇಲೆ ನಡೆಯಬಹುದೆಂಬ ಯೋಚನೆ ಇದೆ.

ಆಂಡ್ರೊಯಿಡ್ ಎಲ್ ನ ಹಾಗೆ ದೊಡ್ಡ ಪ್ರಮಾಣದಲ್ಲಿ ಅಲ್ಲದಿದ್ದರೂ ಆಂಡ್ರೊಯಿಡ್ ಒ ಸಾಕಷ್ಟು ಮಟ್ಟಿಗೆ ದೊಡ್ಡ ಅಪ್‍ಡೇಟ್ ಹೊಂದಿರಬಹುದು ಎನ್ನಲಾಗಿದೆ. ಈ ಹೊಸ ವರ್ಷನ್ ಹೆಚ್ಚು ಪ್ರಯೊಜನ ಹೊಂದಿದೆ. ಇದರಲ್ಲಿ ಪಿಕ್ಚರ್ ಇನ್ ಪಿಕ್ಚರ್, ನೊಟಿಫಿಕೇಷನ್ ಡೊಟ್ಸ್, ಗೂಗಲ್‍ನಿಂದ ಆಟೊಫಿಲ್ ಮತ್ತು ಸ್ಮಾರ್ಟ್ ಟೆಕ್ಸ್ಟ್ ಸೆಲೆಕ್ಷನ್ ನಂತಹ ಫೀಚರ್ ಗಳಿವೆ.

ಇದರ ಜೊತೆಗೆ , ಆಂಡ್ರೊಯಿಡ್ ಒ ಟೆನ್ಸರ್‍ಫ್ಲೊ ಲೈಟ್ ಟೆಕ್, ಸುರಕ್ಷತೆಗೆ ಸಂಬಂಧಿತ ಸುಧಾರಣೆ, ಹೊಸ ಡೆವಲೊಪರ್ ಟೂಲ್ ಮತ್ತು ಹೊಸ ಪ್ರೊಗ್ರಾಮಿಂಗ್ ಭಾಷೆ ಯೊಂದಿಗೆ ಬರಲಿದೆ.

Best Mobiles in India

English summary
Android O could be called Oatmeal Cookie instead of Oreo Sandwich Cookie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+