6 ಯುಎಸ್ ಬಿ ಪೋರ್ಟ್ ಹೊಂದಿರುವ ವಾಲ್ ಚಾರ್ಜರ್ ನ್ನು ಬಿಡುಗಡೆಗೊಳಿಸಿದ ಅಂಕರ್
ಭಾರತದಲ್ಲಿ ತನ್ನ ವಸ್ತುಗಳ ಶ್ರೇಣಿಯನ್ನು ವಿಸ್ತರಿಸುತ್ತಿರುವ ತಂತ್ರಜ್ಞಾನ ಕಂಪೆನಿ ಅಂಕರ್ ಇದೀಗ ಹೊಸ ಗೋಡೆ ಚಾರ್ಜರ್ ನ್ನು ಬಿಡುಗಡೆಗೊಳಿಸಿದೆ. ಇದನ್ನು ಪವರ್ ಪೋರ್ಟ್ ವಾಲ್ ಚಾರ್ಜರ್ ಎಂದು ಕರೆಯಲಾಗಿದೆ. ಬೆಲೆ 3,499 ರುಪಾಯಿಗಳು ಮತ್ತು ಪ್ರಮುಖ ಇ-ಕಾಮರ್ಸ್ ಸೈಟ್ ಗಳಲ್ಲಿ ಮತ್ತು ಆಫ್ ಲೈನ್ ರೀಟೈಲ್ ಸ್ಟೋರ್ ಗಳಲ್ಲಿ ದೇಶದಾದ್ಯಂತ ಖರೀದಿಸುವುದಕ್ಕೆ ಗ್ರಾಹಕರಿಗೆ ಅವಕಾಶವಿರುತ್ತದೆ – ಬಿಳಿ ಮತ್ತು ಕಪ್ಪು ಬಣ್ಣಗಳ ಆವೃತ್ತಿಯಲ್ಲಿ ಲಭ್ಯವಿದ್ದು 18 ತಿಂಗಳ ವಾರೆಂಟಿಯನ್ನು ನೀಡಲಾಗುತ್ತದೆ.

6 ಯುಎಸ್ ಬಿ ಪೋರ್ಟ್ ಗಳು:
ಈ ವಾಲ್ ಚಾರ್ಜರ್ ನಲ್ಲಿ 6 ಯುಎಸ್ ಬಿ ಪೋರ್ಟ್ ಗಳಿದ್ದು ಮಲ್ಟಿ ಡಿವೈಸ್ ಗಳನ್ನು ಒಂದೇ ಸಮಯಕ್ಕೆ ಚಾರ್ಜ್ ಮಾಡುವುದಕ್ಕೆ ಅವಕಾಶ ನೀಡುತ್ತದೆ. ಈ ಡಿವೈಸ್ ನ ಔಟ್ ಪುಟ್ ಸಾಮರ್ಥ್ಯ 60 ವ್ಯಾಟ್ಸ್ ಆಗಿದೆ. ಫಾಸ್ಟ್ ಚಾರ್ಜಿಂಗ್ ಗೆ ಕೂಡ ಇದು ಬೆಂಬಲವನ್ನು ನೀಡುತ್ತದೆ.

ಸಾಮರ್ಥ್ಯ:
ಪವರ್ ಪೋರ್ಟ್ ವಾಲ್ ಚಾರ್ಜರ್ PowerIQ ಮತ್ತು ವೋಲ್ಟೇಜ್ ಬೂಸ್ಟ್ ತಂತ್ರಜ್ಞಾನವನ್ನು ಹೊಂದಿದೆ. ಈ ಎರಡೂ ತಂತ್ರಜ್ಞಾನಗಳಿಂದಾಗಿ ಅತೀ ವೇಗದ ಚಾರ್ಜಿಂಗ್ ಅಂದರೆ ಪ್ರತಿ ಪೋರ್ಟ್ ಗೆ 2.4amps ಅಥವಾ 12amps ಒಟ್ಟಾರೆ ವೇಗವನ್ನು ಇದು ಹೊಂದಿದೆ.

ಹಲವು ಭದ್ರತಾ ಕ್ರಮಗಳು:
ಪ್ರತಿ ಡಿವೈಸ್ ಗೂ ಕೂಡ ಆಪ್ಟಿಮೈಜ್ ಆಗಿರುವ ಚಾರ್ಜಿಂಗ್ ನ್ನು ನೀಡುತ್ತದೆ ಎಂದು ಕಂಪೆನಿ ತನ್ನ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದೆ. ಭದ್ರತಾ ದೃಷ್ಟಿಯಿಂದ ಹಲವು ರೀತಿಯ ಭದ್ರತಾ ವ್ಯವಸ್ಥೆಯನ್ನು ಇದು ಹೊಂದಿದ್ದು ಅದರಲ್ಲಿ ಪ್ರಮುಖವಾಗಿ ಉಲ್ಬಣ ರಕ್ಷಣೆ, ತಾಪಮಾನ ನಿಯಂತ್ರಣ ಮತ್ತು ನೂತನ ಸೇಫ್ಟಿ ಫೀಚರ್ ಗಳನ್ನು ಡಿವೈಸ್ ನ ಸುರಕ್ಷತೆಗಾಗಿ ಅಳವಡಿಸಲಾಗಿದ್ದು ಚಾರ್ಜಿಂಗ್ ನ ಸಮಯದಲ್ಲಿ ಅನಾಹುತಗಳು ಸಂಭವಿಸದೇ ಇರಲು ತೆಗೆದುಕೊಳ್ಳಬೇಕಾಗಿರುವ ಅನೇಕ ಜಾಗೃತಿ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ.

ಯುಎಲ್ ಸರ್ಟಿಫೈಡ್:
ಈ ಚಾರ್ಜರ್ ಯುಎಲ್ ಸರ್ಟಿಫೈಡ್ ಆಗಿದೆ ಮತ್ತು ಇಂಡಸ್ಟ್ರಿ ಗ್ರೇಡ್ ವಸ್ತುಗಳಿಂದ ಇದನ್ನು ನಿರ್ಮಿಸಲಾಗಿದೆ ಮತ್ತು ಪ್ರೀಮಿಯಂ ಸರ್ಕ್ಯೂಟ್ರಿಯನ್ನು ಕಂಪೆನಿ ಹೊಂದಿದೆ.

ಡ್ಯಾಷ್ ಕ್ಯಾಮ್ ಬಿಡುಗಡೆ:
ಇತ್ತೀಚೆಗೆ ಕಂಪೆನಿಯು ಎಂಟ್ರಿ ಲೆವೆಲ್ ನ ಡ್ಯಾಷ್ ಕ್ಯಾಮರಾವನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು ಅದನ್ನು Roav AO ಡ್ಯಾಷ್ ಕ್ಯಾಮ್ ಎಂದು ಹೆಸರಿಸಲಾಗಿದೆ. ಇದರ ಬೆಲೆ ರುಪಾಯಿ 5,490 ಮತ್ತು ಇದು 170 ಡಿಗ್ರಿ ವೈಡ್ ಆಂಗಲ್ ಲೆನ್ಸ್ ನ್ನು ಹೊಂದಿದೆ ಮತ್ತು ಕಾರಿನ ವಿಂಡ್ ಶೀಲ್ಡ್ ಗೆ ಅಟ್ಯಾಸ್ ಮಾಡಬಹುದಾಗಿದೆ.ಇದರ ಅಪರ್ಚರ್ f/1.4 ಜೊತೆಗೆ ಕ್ಲಿಯರ್ ನೈಟ್ ವಿಷನ್ ಮತ್ತು ವೈಡ್ ಆಂಗಲ್ ವ್ಯೂ ನ್ನು ಹೊಂದಿದೆ. ಕ್ಯಾಮರಾ ನಿರಂತರವಾಗಿ 5 ಲೇನ್ಸ್ ಟ್ರಾಫಿಕ್ಸ್ ನ್ನು ಕವರ್ ಮಾಡುವ ಕೆಪಾಸಿಟಿಯನ್ನು ಹೊಂದಿದೆ. ರೋವ್ ಡ್ಯಾಷ್ ಕ್ಯಾಮ್ ಆಪ್ ಮೂಲಕ ಕೂಡ ಡ್ಯಾಷ್ ಕ್ಯಾಮ್ ನ್ನು ಮ್ಯಾನೇಜ್ ಮಾಡಬಹುದಾಗಿದೆ. ಆಂಡ್ರಾಯ್ಡ್ ಓಎಶ್ ಡಿವೈಸ್ ಮತ್ತು ಐಓಎಸ್ ಎರಡೂ ಡಿವೈಸ್ ಗಳಿಗಾಗಿ ಈ ಆಪ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ನ ಆಪಲ್ ಸ್ಟೋರ್ ಗಳಲ್ಲಿ ಕ್ರಮವಾಗಿ ಲಭ್ಯವಿದೆ.


Click it and Unblock the Notifications