ಇದೇ 24 ರಿಂದ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್..! ಭಾರೀ ಡಿಸ್ಕೌಂಟ್‌..!

|

ಅಮೇಜಾನ್ ಅಕ್ಟೋಬರ್ 10 ರಿಂದ ಅಕ್ಟೋಬರ್ 15 ರ ವರೆಗೆ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಡೆಸಿತ್ತು. ಆನ್ ಲೈನ್ ಸೇಲ್ ನಲ್ಲಿ ಈ ಸೇಲ್ ರೆಕಾರ್ಡ್ ಕೂಡ ಸೃಷ್ಟಿ ಮಾಡಿದೆ.ಇದೀಗ ಮತ್ತೊಂದು ಸೇಲ್ ನ್ನು ನಡೆಸಲು ಅಮೇಜಾನ್ ಸಿದ್ಧತೆ ನಡೆಸಿದೆ. ಹೌದು ದೀಪಾವಳಿ ಹಬ್ಬದ ಪ್ರಯುಕ್ತ ಅಕ್ಟೋಬರ್ 24 ರಿಂದ ಅಕ್ಟೋಬರ್ 28 ರ ವರೆಗೆ ಮತ್ತೊಮ್ಮೆ ಫೆಸ್ಟಿವಲ್ ಸೇಲ್ ನ್ನು ಅಮೇಜಾನ್ ನಡೆಸುತ್ತಿದೆ.

ಇದೇ 24 ರಿಂದ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್..! ಭಾರೀ ಡಿಸ್ಕೌಂಟ್‌..!

ಎರಡನೇ ಫೆಸ್ಟೀವ್ ಸೀಸನ್ ಸೇಲ್ ನಲ್ಲಿ ಆಕರ್ಷಣೀಯ ರಿಯಾಯಿತಿಗಳು, ಕ್ಯಾಷ್ ಬ್ಯಾಕ್ ಗಳು, ಆಫರ್ ಗಳು ಮತ್ತು ನೋ ಕಾಸ್ಟ್ ಇಎಂಐ ಪಾವತಿ ಆಯ್ಕೆಯನ್ನು ಈ ಬಾರಿಯೂ ಕೂಡ ನೀಡುತ್ತಿದೆ. ಫ್ಲಿಪ್ ಕಾರ್ಟ್ ಮತ್ತೊಮ್ಮೆ ಫೆಸ್ಟೀವ್ ಧಮಾಕಾ ಸೇಲ್ ನಡೆಸುತ್ತದೆ ಎಂದು ಪ್ರಕಟಣೆ ನೀಡಿದ ಕೂಡಲೇ ಅಮೇಜಾನ್ ಕೂಡ ತನ್ನ ಎರಡನೇ ಫೆಸ್ಟೀವ್ ಸೀಸನ್ ಸೇಲ್ ದಿನಾಂಕವನ್ನು ಪ್ರಕಟಿಸಿದೆ ಮತ್ತು ಇದು ಅಕ್ಟೋಬರ್ 24 ರ 11.59pm ನಿಂದ ಅಕ್ಟೋಬರ್ 28 ರ ವರೆಗೆ ನಡೆಯಲಿದೆ ಎಂದು ತಿಳಿಸಿದೆ.

ಇದೇ 24 ರಿಂದ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್..! ಭಾರೀ ಡಿಸ್ಕೌಂಟ್‌..!

ಅಮೇಜಾನ್ ಗ್ರೇಟ್ ಇಂಡಿಯನ್ ಸೇಲ್ ನ ಆಫರ್ ಗಳು:

ಮುಂದಿನ ಅಮೇಜಾನ್ ಸೇಲ್ ನಲ್ಲಿ ಸ್ಮಾರ್ಟ್ ಫೋನ್ ಗಳು, ಟಿವಿಗಳು, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ದೊಡ್ಡ ದೊಡ್ಡ ಅಪ್ಲಯನ್ಸಸ್ ಗಳು ಭಾರೀ ರಿಯಾಯಿತಿಯಲ್ಲಿ ಲಭ್ಯವಾಗಲಿದೆ.ರೆಡ್ಮಿ 6ಎ ಫ್ಲ್ಯಾಶ್ ಸೇಲ್ 12pm ಗೆ ಪ್ರತಿ ದಿನ ಈ ಸೇಲ್ ನಲ್ಲಿ ನಡೆಯಲಿದೆ. ಫೈಯರ್ ಟಿವಿ ಸ್ಟಿಕ್, ಮತ್ತು 3rd ಜನರೇಷನ್ನಿನ ಈಕೋ ಸ್ಪೀಕರ್ ಗಳು ಈ ಸೇಲ್ ನಲ್ಲಿ ರಿಯಾಯಿತಿ ಬೆಲೆಯಲ್ಲಿ ಲಭ್ಯವಾಗಲಿದೆ.

ಕಿಂಡಲ್ ಇ-ಬುಕ್ ಆರಂಭಿಕ ಬೆಲೆ 19 ರುಪಾಯಿಗೆ ಮತ್ತು ಕಿಂಡಲ್ ಅನಿಯಮಿತ ಚಂದಾದಾರಿಕೆಯು 1,499 ರುಪಾಯಿ ಬೆಲೆಗೆ ಲಭ್ಯವಾಗುತ್ತದೆ. ಅಲೆಕ್ಸಾ ಪವರ್ಡ್ ಡಿವೈಸ್ ಗಳು 70 ಶೇಕಡಾ ರಿಯಾಯಿತಿ ಬೆಲೆಯಲ್ಲಿ ಲಭ್ಯವಾಗುತ್ತದೆ.ಈ ಸೇಲ್ ನಲ್ಲಿ ಅಲೆಕ್ಸಾ ಬೆಂಬಲಿತ ಹೊಸ ಸ್ಪೀಕರ್ ಗಳು ಮತ್ತು ಹೆಡ್ ಫೋನ್ ಗಳು ಲಭ್ಯವಾಗುತ್ತದೆ ಮತ್ತು ಟಿವಿ ಖರೀದಿಸುವವರಿಗೆ ಶೇಕಡಾ 60 ರ ರಿಯಾಯಿತಿ ಬೆಲೆ ಲಭ್ಯವಾಗುತ್ತದೆ. ಫ್ಯಾಷನ್, ಮನೆ ಮತ್ತು ಅಡುಗೆ ಮನೆ ಮತ್ತು ಇನ್ನೂ ಹಲವಾರು ವಿಭಿನ್ನ ಕೆಟಗರಿಯ ವಸ್ತುಗಳು ರಿಯಾಯಿತಿ ಬೆಲೆಯಲ್ಲಿ ಲಭ್ಯವಾಗುತ್ತದೆ.

ಇದೇ 24 ರಿಂದ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್..! ಭಾರೀ ಡಿಸ್ಕೌಂಟ್‌..!

ಪಾರ್ಟ್ನರ್ ಆಫರ್ಸ್ :

ಅಮೇಜಾನ್ ನೀಡುವ ರಿಯಾಯಿತಿಯನ್ನು ಹೊರತು ಪಡಿಸಿ ಇತರೆ ಬ್ಯಾಂಕ್ ಗಳು ಮತ್ತು ವ್ಯಾಲೆಟ್ ಗಳ ಜೊತೆಗೂ ಕೂಡ ಕೈಜೋಡಿಸಲಾಗಿದ್ದು ಹೆಚ್ಚುವರಿ ರಿಯಾಯಿತಿಗಳು ಲಭ್ಯವಾಗುತ್ತದೆ.ಐಸಿಐಸಿಐ ಬ್ಯಾಂಕ್ ಮತ್ತು ಸಿಟಿಬ್ಯಾಂಕಿನ ಕ್ರೆಡಿಟ್ ಕಾರ್ಡ್ ಬಳಸುವವರಿಗೆ 10 ಶೇಕಡಾ ರಿಯಾಯಿತಿ ಲಭ್ಯವಾಗುತ್ತದೆ. ಯಾರು ಅಮೇಜಾನ್ ಪೇ ಬ್ಯಾಲೆನ್ಸ್ ಗೆ 5,000 ರುಪಾಯಿಯನ್ನು ಕ್ರೆಡಿಟ್ ಮಾಡುತ್ತಾರೋ ಅವರಿಗೆ 250 ರುಪಾಯಿಯ ಕ್ಯಾಷ್ ಬ್ಯಾಕ್ ಲಭ್ಯವಾಗುತ್ತದೆ.

ಕೆಲವು ಆಯ್ದ ಬ್ಯಾಂಕ್ ಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸುವವರಿಗೆ ಮತ್ತು ಬಜಾಜ್ ಫಿನ್ಸರ್ವ್ ಇಎಂಐ ಕಾರ್ಡ್ ಬಳಸುವವರಿಗೆ ನೋ ಕಾಸ್ಟ್ ಇಎಂಐ ಆಯ್ಕೆಯನ್ನು ನೀಡಲಾಗುತ್ತದೆ.ಫ್ರೆಶ್ ಮೆನು, ಮೇಕ್ ಮೈ ಟ್ರಿಪ್, ಸ್ವಿಗ್ಗಿ ಮತ್ತು ಈಸಿಡಿನ್ನರ್ ಆಪ್ ಬಳಸುವವರಿಗೆ ಮತ್ತು ಆನ್ ಲೈನ್ ಪಾವತಿ ಮಾಡುವವರಿಗೆ 2,000 ರುಪಾಯಿವರೆಗಿನ ಕ್ಯಾಷ್ ಬ್ಯಾಕ್ ಸೌಲಭ್ಯವಿದೆ.

Best Mobiles in India

English summary
Another Amazon Great Indian Festival sale starts on October 24. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X